30 ನೇ ವಯಸ್ಸಿನಲ್ಲಿ ಕೆಲಸ ತೊರೆದು, 100 ಕೋಟಿ ವಹಿವಾಟಿನ ಕಂಪನಿ ಆರಂಭಿಸಿದ ಅಹಾನಾ!

ತಮ್ಮ ಸ್ವಂತ ಉದ್ಯಮ- ವ್ಯಾಪಾರ ಆರಂಭಿಸಬೇಕು ಎನ್ನುವುದು ಬಹಳಷ್ಟು ಜನರ ಕನಸಾಗಿರುತ್ತದೆ. ಉದ್ಯಮ ಆರಂಭಿಸುವುದು ಬಹಳಷ್ಟು ಸವಾಲಿನ ಕೆಲಸವಾಗಿದೆ. ಈ ಎಲ್ಲಾ ಸವಾಲನ್ನು ಎದುರಿಸಿ ಅನೇಕರು ತಮ್ಮ ವ್ಯವಹಾರವನ್ನು ನಿರ್ಮಿಸಲು ಪ್ರಯತ್ನಿಸುತ್ತಾರೆ, ಆದರೆ ಅಲ್ಲಿ ಎಲ್ಲರೂ ಯಶಸ್ವಿಯಾಗುವುದಿಲ್ಲ.

ಹೀಗೆ ಉದ್ಯಮದಲ್ಲಿ ಅನೇಕ ರಿಸ್ಕ್‌ಗಳಿದ್ದರೂ, ಬಹಳಷ್ಟು ಯುವಜನತೆ ತಮ್ಮ ಅತ್ಯುತ್ತಮ ವೇತನದ ಕೆಲಸವನ್ನು ತೊರೆದು, ಆ ಬಳಿಕ ಯಶಸ್ವಿ ಕಂಪನಿಗಳನ್ನು ನಿರ್ಮಿಸಿದ ಹಲವಾರು ಉದಾಹರಣೆಗಳಿವೆ. ಅಂತಹ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ ಅಹಾನಾ ಗೌತಮ್. ಇವರು ತಮ್ಮ 30 ನೇ ವಯಸ್ಸಿನಲ್ಲಿ ತಮ್ಮ ಸ್ವಂತ ಉದ್ಯಮ ಆರಂಭಿಸಬೇಕು ಎಂದು ಕನಸು ಕಂಡು ಕೆಲಸಕ್ಕೆ ರಾಜೀನಾಮೆ ಕೊಟ್ಟು ಹೊರಬಂದರು.

 ಕೆಲಸ ತೊರೆದು, 100 ಕೋಟಿ ವಹಿವಾಟಿನ ಕಂಪನಿ ಆರಂಭಿಸಿದರು!

ಆ ಬಳಿಕ ಆರೋಗ್ಯಕರ ತಿಂಡಿಗಳನ್ನು "ಓಪನ್ ಸಿಕ್ರೇಟ್" ತಯಾರಿಸುವ ಸ್ಟಾರ್ಟ್ ಆಪ್ ಆರಂಭಿಸಿದರು. ಈ ಕಂಪನಿಯು 100 ಕೋಟಿ ರೂಪಾಯಿ ವಹಿವಾಟು ನಡೆಸುವಷ್ಟು ಬೆಳೆದುನಿಂತಿದೆ. ಅಹಾನಾ ಅಮೆರಿಕಾದಲ್ಲಿ ಒಳ್ಳೆಯ ವೇತನ ಪಡೆಯುವ ಕೆಲಸದಲ್ಲಿದ್ದರು. ಆದರೆ ಸ್ವಂತ ಉದ್ಯಮ ಆರಂಭಿಸಬೇಕು ಎನ್ನುವ ಕನಸಿನಲ್ಲಿ ಕೆಲಸ ತೊರೆದು ನೇರ ಭಾರತದ ವಿಮಾನ ಹತ್ತಿದರು. ಕಂಪನಿಯನ್ನು ಪ್ರಾರಂಭಿಸಲು ಆರಂಭಿಕ ಬಂಡವಾಳದ ಅಗತ್ಯವಿತ್ತು. ಇದನ್ನು ಅಹಾನಾ ತಮ್ಮ ತಾಯಿ ಬಳಿ ಪಡೆದುಕೊಂಡು ಉದ್ಯಮವನ್ನು ಆರಂಭಿಸಿದರು.

ಅಹಾನಾ ರಾಜಸ್ಥಾನದ ಭರತ್‌ಪುರದವರು. ಇವರು ಐಐಟಿ ಬಾಂಬೆಯಲ್ಲಿ ಕೆಮಿಕಲ್ ಎಂಜಿನಿಯರಿಂಗ್ ನಲ್ಲಿ ಪದವಿ ಪಡೆದಿದ್ದಾರೆ. ಅಹಾನಾ 2014-2016ರಲ್ಲಿ ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಎಂಬಿಎ ಮಾಡಿದ್ದಾರೆ. ಅಹಾನಾ ಗೋದ್ರೇಜ್ ಟೈಸನ್ ಫುಡ್ಸ್ ಲಿಮಿಟೆಡ್‌ನಲ್ಲಿ ಸ್ವತಂತ್ರ ಮಂಡಳಿ ನಿರ್ದೇಶಕರಾಗಿದ್ದಾರೆ.

2019 ರಲ್ಲಿ "ಓಪನ್ ಸೀಕ್ರೆಟ್" ಅನ್ನು ಪ್ರಾರಂಭಿಸಿದ್ದು,ಆರೋಗ್ಯಕರ ತಿಂಡಿಗಳನ್ನು ಒದಗಿಸುವ ಕಂಪನಿಯನ್ನು ನಡೆಸುತ್ತಿದ್ದಾರೆ. ಅಹಾನಾ, ಅತಿ ಹೆಚ್ಚು ತೂಕ ಹೊಂದಿದ್ದು, ಅಮೇರಿಕಾದಲ್ಲಿರುವಾಗ ಹೋಲ್ ಫುಡ್ಸ್ ಅಂಗಡಿಗೆ ಭೇಟಿ ನೀಡಿದ ನಂತರ ಆರೋಗ್ಯಕರ ಆಹಾರದ ಪ್ರಾಮುಖ್ಯತೆಯನ್ನು ಅವರು ಅರಿತುಕೊಂಡಿದ್ದರು.

ತನ್ನ ಸ್ಟಾರ್ಟ್‌ಅಪ್‌ ಅನ್ನು ಆರಂಭಿಸುವ ಮೊದಲು, ಅವರು ಜನರಲ್ ಮಿಲ್ಸ್‌ನಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದರು. ಇದಾದ ನಂತರ 4 ವರ್ಷಗಳ ಕಾಲ ಪ್ರಾಕ್ಟರ್ ಮತ್ತು ಗ್ಯಾಂಬಲ್ (P&G) ಜೊತೆಗೆ ಕೆಲಸ ಮಾಡಿದರು. ಭಾರತವನ್ನು ಅನ್-ಜಂಕ್ ಅಂದರೆ ಸಂಸ್ಕರಿಸಿದ ಸಕ್ಕರೆ, ಮೈದಾ, ಕೃತಕ ಬಣ್ಣಗಳು ಮತ್ತು ಸುವಾಸನೆಗಳಿಂದ ತುಂಬಿರುವ ಭಾರತದ ತಿಂಡಿ, ಜಂಕ್ ಫುಡ್‌ಗಳಿಂದ ದೂರವಿಡುವ ಉದ್ದೇಶ ಹೊಂದಿರುವ ಅವರು ಇದೇ ಕಾರಣಕ್ಕೆ "ಓಪನ್ ಸೀಕ್ರೆಟ್" ಆರಂಭಿಸಿದ್ದು, ನಟ್ಟಿ ಕುಕೀಸ್ ಅವರ ಟ್ರೇಡ್ ಮಾರ್ಕ್ ಉತ್ಪನ್ನವಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+