ಭಾರತದ ಪ್ರಮುಖ ತೈಲ ಮತ್ತು ಅನಿಲ ಕಂಪನಿಯಾದ ಸನ್ ಪೆಟ್ರೋಕೆಮಿಕಲ್ಸ್‌ನ ನಿರ್ದೇಶಕರಾಗಿರುವ ಕರಿಷ್ಮಾ ಶಾಂಘ್ವಿ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ವಿಚಾರವಾಗಿ ಸನ್ ಫಾರ್ಮಾದಲ್ಲಿ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಕರಿಷ್ಮಾ ಅವರು ಸನ್ ಫಾರ್ಮಾಸ್ಯುಟಿಕಲ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಸಂಸ್ಥಾಪಕ ದಿಲೀಪ್ ಶಾಂಘ್ವಿ ಅವರ ಸೊಸೆಯಾಗಿದ್ದಾರೆ.
ಅವರು ಫೋರ್ಬ್ಸ್ ಪ್ರಕಾರ 1,58,110 ಕೋಟಿ ರೂಪಾಯಿಗಳ ರಿಯಲ್ ಟೈಮ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ದಿಲೀಪ್ ಅವರು ಭಾರತದ ಎರಡನೇ ಶ್ರೀಮಂತ ಫಾರ್ಮಾ ಬಿಲಿಯನೇರ್ ಆಗಿದ್ದಾರೆ. ಸನ್ ಫಾರ್ಮಾ ಬಗ್ಗೆ ನೋಡೋದಾದ್ರೆ ಇದು ನವೆಂಬರ್ 6 ರ ವೇಳೆ 2,76,000 ಕೋಟಿ ರೂಪಾಯಿ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ.

ಕರಿಷ್ಮಾ ಅವರು ಸಿಎಸ್ಆರ್ ವಿಚಾರವಾಗಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಶಾಂತಿಲಾಲ್ ಶಾಂಘ್ವಿ ಫೌಂಡೇಶನ್‌ನೊಂದಿಗೆ ಜೊತೆ ಸೇರಿ ಕೆಲಸ ಮಾಡುತ್ತಿದ್ದಾರೆ. ಅವರು ಮುಂಬೈನಲ್ಲಿ ಶಿಖಾ ಅಕಾಡೆಮಿ ಎಂಬ ಅಂತರರಾಷ್ಟ್ರೀಯ ಶಾಲೆಯ ಸಂಸ್ಥಾಪಕಿ ಮತ್ತು ನಿರ್ದೇಶಕಿಯೂ ಆಗಿದ್ದಾರೆ. ಶಿಖಾ ಅಕಾಡೆಮಿ ಇದು ಕಡಿಮೆ ಆದಾಯದ ಹೊಂದಿರುವ ಕುಟುಂಬದ ಬಡ ಮಕ್ಕಳಿಗೆ ತನ್ನ ಸೇವೆಯನ್ನು ನೀಡುತ್ತದೆ.
ಕರಿಷ್ಮಾ ಅವರು ಸನ್ ಫಾರ್ಮಾದ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಅಲೋಕ್ ಶಾಂಘ್ವಿ ಅವರನ್ನು ವಿವಾಹವಾಗಿದ್ದಾರೆ. ಅವರು ಈ ಹಿಂದೆ ಕೆಲ ಕಾಲ ದಸ್ರಾ ಸಂಸ್ಥೆಗಾಗಿಯೂ ಕೆಲಸ ಮಾಡಿದ್ದರು. ಕರಿಷ್ಮಾ ಅವರು ಅಶೋಕ ವಿಶ್ವವಿದ್ಯಾಲಯದಬೋರ್ಡ್ ಆಫ್ ಟ್ರಸ್ಟಿಗಳು ಮತ್ತು ಆಡಳಿತ ಮಂಡಳಿಯ ಸದಸ್ಯರಾಗಿದ್ದಾರೆ.
ಅವರು ವಾರ್ಟನ್ ಸ್ಕೂಲ್‌ನಿಂದ ಅರ್ಥಶಾಸ್ತ್ರದಲ್ಲಿ ಬಿಎಸ್‌ನೊಂದಿಗೆ ಮ್ಯಾನೇಜ್‌ಮೆಂಟ್ ಮತ್ತು ಟೆಕ್ನಾಲಜಿಯಲ್ಲಿ ಜೆರೋಮ್ ಫಿಶರ್ ಪ್ರೋಗ್ರಾಂನಿಂದ ಪದವಿ ಪಡೆದುಕೊಂಡಿದ್ದಾರೆ. ಕರಿಷ್ಮಾ ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ಹಳೆಯ ವಿದ್ಯಾರ್ಥಿಯಾಗಿದ್ದು, ಅಲ್ಲಿ ದಿ ಮೈನರ್ ಇನ್ ಸೌತ್ ಏಶಿಯನ್ ಸ್ಟಡೀಸ್ ನಲ್ಲಿ ಅವರು ಬಯೋಇಂಜಿನಿಯರಿಂಗ್ ಮತ್ತು ಬಯೋ ಟೆಕ್ನಾಲಜಿಯಲ್ಲಿ ಬಿಎಎಸ್ ಮತ್ತು ಎಂಎಸ್ ಮಾಡಿದ್ದಾರೆ. ಮಾತ್ರವಲ್ಲದೇ ಹಾರ್ವರ್ಡ್ ಗ್ರಾಜುಯೇಟ್ ಸ್ಕೂಲ್ ಆಫ್ ಎಜುಕೇಶನ್‌ನಿಂದ ಮಾಸ್ಟರ್'ಸ್ ಇನ್ ಎಜುಕೇಶನ್ (Ed.M.) ಪದವಿ ಪಡೆದುಕೊಂಡಿದ್ದಾರೆ.


Click it and Unblock the Notifications