ಅಮೀರ ಶಾ ಇಂದು ಭಾರತದ ಅತಿ ದೊಡ್ಡ ಹೆಲ್ತ್‌ಕೇರ್ ಕಂಪನಿಯ ಹಿಂದಿರುವ ಶಕ್ತಿಯಾಗಿದ್ದಾರೆ. ಮೆಟ್ರೊಪೊಲಿಸ್ ಹೆಲ್ತ್‌ಕೇರ್ ಲಿಮಿಟೆಡ್‌ನ ಪ್ರವರ್ತಕರು ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿರುವ ಅಮೀರ ಅತಿ ಚಿಕ್ಕ ವಯಸ್ಸಿನಲ್ಲಿ ಉದ್ಯಮಿಯಾಗಿ ಹೊರಹೊಮ್ಮಿದ್ದರು. ಇವರ ಕಂಪನಿಯೂ ಭಾರತ, ದಕ್ಷಿಣ ಏಷ್ಯಾ ಮತ್ತು ಆಫ್ರಿಕಾದಾದ್ಯಂತ ಡಯಾಗ್ನೋಸ್ಟಿಕ್ ಸೆಂಟರ್ (ರೋಗಶಾಸ್ತ್ರ ಪ್ರಯೋಗಾಲ) ಯಗಳನ್ನು ಹೊಂದಿದೆ.
ಇವರ ಈ ಪ್ರಯಾಣವು ಆರಂಭವಾಗಿದ್ದು, 21 ವರ್ಷ ವಯಸ್ಸಿನಲ್ಲಿ. ಅಮೇರಿಕಾದಲ್ಲಿ ಫೈನ್ಯಾನ್ಶಿಯಲ್ ದೈತ್ಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅವರು, ಭಾರತಕ್ಕೆ ಮರಳಲೆಂದು ಅತ್ಯುತ್ತಮ ವೇತನದ ತಮ್ಮ ಹುದ್ದೆಯನ್ನು ತ್ಯಜಿಸಲು ನಿರ್ಧರಿಸಿದರು.

ವೈದ್ಯರ ಕುಟುಂಬದ ಹಿನ್ನಲೆಯಿಂದ ಬಂದ ಅಮೀರ ಅವರು ವೈದ್ಯಕೀಯ ವೃತ್ತಿಪರರಲ್ಲ. ಆದರೆ ಅವರಲ್ಲಿದ್ದ ಉದ್ಯಮದ ಕುರಿತಾದ ಇದ್ದ ಕುಶಾಗ್ರಮತಿ ಬುದ್ದಿಯಿಂದ ತಮ್ಮ ತಂದೆಯ ಸಿಂಗಲ್ ಪಾತ್ ಲ್ಯಾಬ್ ಅನ್ನು 8500 ಕೋಟಿ ರೂಪಾಯಿ ಕಂಪನಿಯಾಗಿ ಪರಿವರ್ತಿಸಿದರು.
ಮುಂಬೈ ಪ್ರಧಾನ ಕಛೇರಿ ಹೊಂದಿರುವ ಕಂಪನಿಯು ಏಳು ದೇಶಗಳಲ್ಲಿ ಕಾರ್ಯಾಚರಣೆಗಳನ್ನು ಹೊಂದಿರುವ ಪ್ರಮುಖ ಡಯಾಗ್ನೋಸ್ಟಿಕ್ ಸೆಂಟರ್ ಗಳ ಸರಪಳಿಯಾಗಿ ಬೆಳೆದುನಿಂತಿದೆ. ಅಮೀರ ತನ್ನ ವೃತ್ತಿಪರ ವೃತ್ತಿಜೀವನವನ್ನು ಅಮೇರಿಕಾದಲ್ಲಿ ಹಣಕಾಸು ದೈತ್ಯ ಗೋಲ್ಡ್‌ಮನ್ ಸ್ಯಾಚ್ಸ್ ನೊಂದಿಗೆ ಪ್ರಾರಂಭಿಸಿದರು.
ಅಮೀರ ಶಾ ಮುಂಬೈನ ಎಚ್. ಆರ್. ಕಾಲೇಜ್ ಆಫ್ ಕಾಮರ್ಸ್ ಅಂಡ್ ಎಕನಾಮಿಕ್ಸ್ ಜೂನಿಯರ್ ಕಾಲೇಜಿನಲ್ಲಿ ವಾಣಿಜ್ಯ ವಿಷಯದಲ್ಲಿ ಅಧ್ಯಯನ ಮಾಡಿದರು. ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಪ್ರಯಾಣಿಸಿ ಆಸ್ಟಿನ್‌ನ ಟೆಕ್ಸಾಸ್ ವಿಶ್ವವಿದ್ಯಾಲಯದಿಂದ ಫೈನಾನ್ಸ್ ನಲ್ಲಿ ಪದವಿ ಪಡೆದರು.
ಅಮೇರಿಕಾದಲ್ಲಿ ತಾವು ನಿರ್ವಹಿಸುತ್ತಿದ್ದ ಹಣಕಾಸು ಕಾರ್ಯನಿರ್ವಾಹಕ ಕೆಲಸದ ಬಗ್ಗೆ ಅತೃಪ್ತಿ ಹೊಂದಿದ್ದ ಅವರು 2001 ಕುಟುಂಬದ ಅದೃಷ್ಟವನ್ನು ಬದಲಾಯಿಸಲು ಮನೆಗೆ ಹಿಂತಿರುಗಿ ತನ್ನ ತಂದೆಯ ವ್ಯವಹಾರವನ್ನು ವಹಿಸಿಕೊಂಡರು.
ಇವರ ತಂದೆ ರೋಗಶಾಸ್ತ್ರಜ್ಞರಾದ ಡಾ| ಸುಶೀಲ್ ಶಾ ಮತ್ತು ತಾಯಿ ಡಾ| ದುರು ಶಾ ಸ್ತ್ರೀರೋಗ ತಜ್ಞೆಯಾಗಿದ್ದು, ಸಹೋದರಿ ಅಪರ್ಣಾ ಶಾ ತಳಿವಿಜ್ಞಾನಿ (geneticist) ಆಗಿದ್ದಾರೆ. ವೈದ್ಯಕೀಯ ಹಿನ್ನಲೆಯಿಂದ ಬಂದರೂ ಅಮೀರ ಅವರು ಬೇರೆಯೇ ಮಾರ್ಗವನ್ನು ಆರಿಸಿ ಫೈನ್ಯಾನ್ಸ್ ಆಂಡ್ ಮ್ಯಾನೇಜ್‌ಮೆಂಟ್‌ನಲ್ಲಿ ವೃತ್ತಿಪರರಾದರು.
ತಂದೆಯ ಡಯಾಗ್ನೋಸ್ಟಿಕ್ ಸೆಂಟರ್ ದಕ್ಷಿಣ ಮುಂಬೈನಲ್ಲಿ ಬೃಹತ್ ಲ್ಯಾಬ್ ಆಗಿದ್ದರೂ, ಲ್ಯಾಬ್‌ನಲ್ಲಿ ಹಲವಾರು ಸಮಸ್ಯೆಗಳಿವೆ ಎಂದು ಅರ್ಥಮಾಡಿಕೊಂಡರು. ಎಲ್ಲವೂ ಮ್ಯಾನುವಲ್ ಮೂಲಕ ಕೆಲಸ ಆಗುತ್ತಿತ್ತು. ಲ್ಯಾಬ್‌ನಲ್ಲಿ ಇಮೇಲ್, ಕಂಪ್ಯೂಟರ್ ಇಂತಹ ಯಾವುದೇ ಸೌಲಭ್ಯಗಳಿರಲಿಲ್ಲ. ತಕ್ಷಣ ಲ್ಯಾಬ್‌ನಲ್ಲಿ ಟೆಕ್ನಾಲಜಿಯನ್ನು ಬಳಕೆಗೆ ತಂದು ತಂದೆಯ ವ್ಯವಹಾರವನ್ನು ಕ್ಷಿಪ್ರವಾಗಿ ವಿಸ್ತರಿಸಿದರು.
ಕಂಪನಿ ಬೆಳೆಯತೊಡಗಿದಾಗ, 2006ರಲ್ಲಿಅವರು ತಮ್ಮ ಮೊದಲ ಬಾಹ್ಯ ಫಂಡಿಂಗ್ ಪಡೆದುಕೊಂಡರು. ಆದರೆ ಅಮೀರ 2015 ರಲ್ಲಿ 600 ಕೋಟಿ ರೂಪಾಯಿಗಳ ವೈಯಕ್ತಿಕ ಸಾಲಪಡೆಯುವ ಮೂಲಕ ರಿಸ್ಕ್ ಕೂಡಾ ತೆಗೆದುಕೊಂಡರು. ಅವರ ಕಂಪನಿಯಲ್ಲಿ ಖಾಸಗಿ ಹೂಡಿಕೆದಾರರು ಹೊಂದಿರುವ ಪಾಲನ್ನು ಖರೀದಿಸಲು ಅವರು ಈ ಬೃಹತ್ ಆರ್ಥಿಕ ಸಾಲದ ಹೊರೆಯನ್ನು ತೆಗೆದುಕೊಂಡರು.
ಖಾಸಗಿ ಹೂಡಿಕೆದಾರರಿಗೆ ಲಾಭಂಶದೊಂದಿಗೆ ಅವರ ಮೊತ್ತ ಹಿಂತಿರುಗಿಸಿದರು. ಹುರುನ್‌ನ ಮಹಿಳಾ ಶ್ರೀಮಂತರ ಪಟ್ಟಿ 2022 ರ ಪ್ರಕಾರ, ಅಮೀರಾ 5,950 ಕೋಟಿ ರೂಪಾಯಿ ಸಂಪತ್ತನ್ನು ಹೊಂದಿರುವ ದೇಶದ ಅತ್ಯಂತ ಶ್ರೀಮಂತರಲ್ಲಿ ಒಬ್ಬರಾಗಿ ಗುರುತಿಸಲ್ಪಟ್ಟಿದ್ದಾರೆ.


Click it and Unblock the Notifications