ಜಗತ್ತಿನಾದ್ಯಂತ ಮಂಗಳಮುಖಿಯರು ತಮ್ಮ ತಮ್ಮ ಸಮುದಾಯವನ್ನು ಕಾನೂನುಬದ್ಧಗೊಳಿಸುವ ನಿಟ್ಟಿನಲ್ಲಿ ಸಾಕಷ್ಟು ಹೋರಾಟವನ್ನು ಮಾಡಿದ್ದಾರೆ, ಹಾಗೆಯೇ ಹೋರಾಟವನ್ನು ಮುಂದುವರಿಸುತ್ತಾ ಬಂದಿದ್ದಾರೆ. ಪ್ರಸ್ತುತ ನಿಧಾನವಾಗಿ ತೃತೀಯಲಿಂಗಿಯರು ಸಮಾಜದಲ್ಲಿ ತಮ್ಮದೇ ಛಾಪನ್ನು ಮೂಡಿಸುತ್ತಿದ್ದಾರೆ. ಆ ಪೈಕಿ ವಿಶ್ವದ ಶ್ರೀಮಂತ ತೃತೀಯಲಿಂಗಿ ಜೆನ್ನಿಫರ್ ಪ್ರಿಟ್ಜ್ಕರ್ ಕೂಡಾ ಒಬ್ಬರಾಗಿದ್ದಾರೆ.
ಜೆನ್ನಿಫರ್ ಪ್ರಿಟ್ಜ್ಕರ್ ವಿಶ್ವದಲ್ಲಿರುವ ಏಕೈಕ ತೃತೀಯಲಿಂಗಿ ಬಿಲಿಯನೇರ್ ಆಗಿದ್ದಾರೆ. ಹಾಗೆಯೇ ವಿಶ್ವದ ಶ್ರೀಮಂತ ಬಿಲಿಯನೇರ್ ವ್ಯಕ್ತಿಯಾಗಿದ್ದಾರೆ. ಜೆನ್ನಿಫರ್ ಪ್ರಿಟ್ಜ್ಕರ್ ಬಿಲಿಯಬ್ ಡಾಲರ್ ನಿವ್ವಳ ಮೌಲ್ಯವನ್ನು ತನ್ನದೇ ಆದ ಕಠಿಣ ಪರಿಶ್ರಮದಿಂದ ಗಳಿಸಿದ್ದಾರೆ. ಹಾಗೆಯೇ ಜೆನ್ನಿಫರ್ ಪ್ರಿಟ್ಜ್ಕರ್‌ರ ಅತ್ಯಂತ ಶ್ರೀಮಂತ ಕುಟುಂಬವು ಐಷಾರಾಮಿ ಹೋಟೆಲ್ ಆದ ಹಯಾತ್ ಹೋಟೆಲ್ಸ್ ಅನ್ನು ನಡೆಸುತ್ತಿದೆ.
ಜೆನ್ನಿಫರ್ ಪ್ರಿಟ್ಜ್ಕರ್ ಮತ್ತು ಕುಟುಂಬದ ನಿವ್ವಳ ಮೌಲ್ಯ
ಜೆನ್ನಿಫರ್ ಪ್ರಿಟ್ಜ್ಕರ್, ಪ್ರಿಟ್ಜ್ಕರ್ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಇದು ಯುನೈಟೆಡ್ ಸ್ಟೇಟ್ಸ್‌ನ ಶ್ರೀಮಂತ ಕುಟುಂಬಗಳಲ್ಲಿ ಒಂದಾಗಿದೆ. ಫೋರ್ಬ್ಸ್ ಪ್ರಕಾರ, ಕುಟುಂಬದ 11 ಬಿಲಿಯನೇರ್ ಉತ್ತರಾಧಿಕಾರಿಗಳಲ್ಲಿ ಜೆನ್ನಿಫರ್ ಪ್ರಿಟ್ಜ್ಕರ್ ಕೂಡ ಒಬ್ಬರಾಗಿದ್ದಾರೆ. ಪ್ರಿಟ್ಜ್ಕರ್ ಕುಟುಂಬವು 36.9 ಬಿಲಿಯನ್ ಯುಎಸ್ ಡಾಲರ್‌ಗೂ ಹೆಚ್ಚಿನ ನಿವ್ವಳ ಮೌಲ್ಯವನ್ನು ಹೊಂದಿದೆ, ಭಾರತದ ರೂಪಾಯಿಯಲ್ಲಿ ನಾವು ನೋಡಿದಾಗ ಪ್ರಿಟ್ಜ್ಕರ್ ಕುಟುಂಬದ ನಿವ್ವಳ ಮೌಲ್ಯವು 3.06 ಲಕ್ಷ ಕೋಟಿ ರೂಪಾಯಿ ಆಗಿದೆ.
ಇದಲ್ಲದೆ, ವಿಶ್ವದ ಅತ್ಯಂತ ಶ್ರೀಮಂತ ತೃತೀಯಲಿಂಗಿ ಎನಿಸಿಕೊಂಡಿರುವ ಜೆನ್ನಿಫರ್ ಪ್ರಿಟ್ಜ್ಕರ್ ಕೇವಲ 1.9 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ, ಅಂದರೆ 15,800 ಕೋಟಿ ರೂಪಾಯಿ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. 99,000 ಕೋಟಿ ರೂಪಾಯಿ ಆದಾಯವನ್ನು ಹೊಂದಿರುವ ಹಯಾತ್ ಹೋಟೆಲ್ ಹೊಂದಿರುವ ಪ್ರಿಟ್ಜ್ಕರ್ ಕುಟುಂಬದ ಸಂಪತ್ತಿನ ವಾರಸುದಾರರೂ ಕೂಡಾ ಆಗಿದ್ದಾರೆ.
73 ವರ್ಷದ ತೃತೀಯಲಿಂಗಿ ಬಿಲಿಯನೇರ್ ಕೇವಲ ಅತಿ ಶ್ರೀಮಂತ ಕುಟುಂಬದಿಂದ ಬಂದವರಲ್ಲ, ಆದರೆ ಸೇನೆಯ ಪಶುವೈದ್ಯ ಕೂಡಾ ಆಗಿದ್ದಾರೆ. ಪ್ರಿಟ್ಜ್ಕರ್ 1974 ರಲ್ಲಿ 23 ನೇ ವಯಸ್ಸಿನಲ್ಲಿ ಯುಎಸ್ ಮಿಲಿಟರಿಗೆ ಸೇರಿದರು. ಜೇಮ್ಸ್ ಪ್ರಿಟ್ಜ್ಕರ್ ಆಗಿ ಜೆನ್ನಿಫರ್ ಜನಿಸಿದರು. 25 ವರ್ಷಗಳ ಕಾಲ ಯುಎಸ್ ಸೈನ್ಯದಲ್ಲಿ ಲೆಫ್ಟಿನೆಂಟ್ ಆಗಿದ್ದವರು ಪ್ರಸ್ತುತ ನಿವೃತ್ತರಾಗಿದ್ದಾರೆ.
ಐಷಾರಾಮಿ ಹಯಾಟ್ ಹೊಟೇಲ್‌ನಲ್ಲಿನ ಪಾಲನ್ನು ತನ್ನ ಕುಟುಂಬದಿಂದ ಪಡೆದಿರುವ ಜೆನ್ನಿಫರ್ ಪ್ರಿಟ್ಜ್ಕರ್ ಖಾಸಗಿ ಸಂಪತ್ತು ನಿರ್ವಹಣಾ ಸಂಸ್ಥೆ ತವಾನಿ ಎಂಟರ್‌ಪ್ರೈಸಸ್‌ನ ಸಂಸ್ಥಾಪಕ ಮತ್ತು ಸಿಇಒ ಕೂಡ ಆಗಿದ್ದಾರೆ. 2013 ರಲ್ಲಿ ತೃತೀಯಲಿಂಗಿಯಾಗಿ ಬದಲಾದ ಜೆನ್ನಿಫರ್ ಬಿಲಿಯನೇರ್ ಆಗಿರುವ ಏಕೈಕ ತೃತೀಯಲಿಂಗಿ ವ್ಯಕ್ತಿಯಾಗಿದ್ದಾರೆ.
ಜೆನ್ನಿಫರ್ ಪ್ರಿಟ್ಜ್ಕರ್ 1.9 ಬಿಲಿಯನ್ ಯುಎಸ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದು, ತನ್ನ ಬಹಳಷ್ಟು ಹಣವನ್ನು ತೃತೀಯಲಿಂಗಿಗಳ ಉನ್ನತಿಗಾಗಿ ಬಳಸುತ್ತಿದ್ದಾರೆ. ಆಕೆಯ ಬೃಹತ್ ಕುಟುಂಬದ ಸಂಪತ್ತು ಹಯಾಟ್ ಹೋಟೆಲ್ಸ್, ತಂಬಾಕು ಕಂಪನಿ, ವಿಮಾನಯಾನ ಮತ್ತು ಹಲವಾರು ಇತರ ಹೂಡಿಕೆ ಉದ್ಯಮಗಳಿಂದ ಬರುತ್ತದೆ.


Click it and Unblock the Notifications
