ಫ್ರಾನ್ಸ್‌ನ ಫ್ರಾಂಕೋಯಿಸ್ ಬೆಟನ್‌ಕೋರ್ಟ್ ಮೇಯರ್ಸ್ ಅವರು 100 ಬಿಲಿಯನ್ ಡಾಲರ್ ಸಂಪತ್ತು ಗಳಿಸಿದ ವಿಶ್ವದ ಪ್ರಮುಖ ಮಹಿಳೆಯಾಗಿ ಗುರುತಿಸಿಕೊಂಡಿದ್ದಾರೆ. ಆ ಮೂಲಕ, ಫ್ರಾನ್ಸ್ ಫ್ಯಾಷನ್ ಹಾಗೂ ಸೌಂದರ್ಯವರ್ಧಕ ಉದ್ಯಮದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲುವನ್ನು ಸಾಧಿಸಿದೆ.
ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಫ್ರಾಂಕೋಯಿಸ್ ಅವರ ಸಂಪತ್ತು ಗುರುವಾರ 100.1 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ. ಇದರ ಪರಿಣಾಮ, ಅವರ ಅಜ್ಜ ಸ್ಥಾಪಿಸಿರುವ ಸೌಂದರ್ಯ ಉತ್ಪನ್ನಗಳ ಬಹುದೊಡ್ಡ ಸಾಮ್ರಾಜ್ಯವಾದ L'Oreal SA ಕಂಪನಿಯ ಷೇರುಗಳು ಭಾರೀ ಏರಿಕೆ ಕಂಡಿದೆ.

ಅಷ್ಟೇಅಲ್ಲ, 1998ರಿಂದೀಚೆಗೆ ಷೇರು ಮಾರುಕಟ್ಟೆಯಲ್ಲಿ ಅತ್ಯುತ್ತಮ ಪ್ರದರ್ಶನದ ವರ್ಷವಾಗಿ ಕಂಪನಿ ಗುರುತಿಸಿಕೊಂಡಿದೆ. ಇದರ ನಡುವೆಯೂ ಬೆಟನ್‌ಕೋರ್ಟ್ ಮೇಯರ್ಸ್ ಅವರ ಸಂಪತ್ತು ತಮ್ಮ ಫ್ರೆಂಚ್ ಸಹೋದ್ಯೋಗಿ ಬರ್ನಾರ್ಡ್ ಅರ್ನಾಲ್ಟ್‌ಗಿಂತ ಕಡಿಮೆಯಿದೆ.
ಬರ್ನಾರ್ಡ್ LVMH Moet ಹೆನ್ನೆಸ್ಸಿ ಲೂಯಿ ವಿಟಾನ್ ಎಸ್‌ಇ ಸೃಷ್ಟಿಕರ್ತರಾಗಿದ್ದು, ಪ್ರಸ್ತುತ 179 ಶತಕೋಟಿ ಡಾಲರ್‌ನೊಂದಿಗೆ ವಿಶ್ವದ ಎರಡನೇ ಶ್ರೀಮಂತರ ಪಟ್ಟಿಯಲ್ಲಿದ್ದಾರೆ. ಆದರೆ, ಭಾರತದ ಶ್ರೀಮಂತರಾದ ಮುಕೇಶ್ ಅಂಬಾನಿ, ರತನ್ ಟಾಟಾ ಹಾಗೂ ಗೌತಮ್ ಅದಾನಿ ಅವರಿಂತ ಹೆಚ್ಚು ಸಿರಿವಂತಿಕೆಯನ್ನು ಹೊಂದಿದ್ದಾರೆ.
ಬೆಟನ್‌ಕೋರ್ಟ್ ಮೇಯರ್ಸ್ ಯಾರು?
ಬೆಟೆನ್‌ಕೋರ್ಟ್ ಮೇಯರ್ಸ್(70) ಅವರು 241 ಬಿಲಿಯನ್ ಪೌಂಡ್ (268 ಬಿಲಿಯನ್ ಡಾಲರ್) ಹೊಂದಿರುವ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ L'Oreal ಮಾಲೀಕರಾಗಿದ್ದಾರೆ. ಅವರು ಜಗತ್ತಿನ 12ನೇ ಶ್ರೀಮಂತ ವ್ಯಕ್ತಿಯಾಗಿದ್ದು, ಮೆಕ್ಸಿಕೊದ ಕಾರ್ಲೋಸ್ ಸ್ಲಿಮ್ ಅವರಗಿಂತ ನಂತರದ ಸ್ಥಾನದಲ್ಲಿದ್ದಾರೆ.
ಮೇಯರ್ಸ್ ಅವರು ಆಡಳಿತ ನಿರ್ದೇಶಕರ ಮಂಡಳಿಯಲ್ಲಿ ಉಪಾಧ್ಯಕ್ಷರಾಗಿದ್ದಾರೆ. ಅವರ ಮಕ್ಕಳಾಸದ ಜೀನ್ ವಿಕ್ಟರ್ ಹಾಗೂ ನಿಕೋಲಸ್ ಮೇಯರ್ಸ್ ಅವರು ಸಿನಿಮಾ ನಿರ್ಮಾಪಕರಾಗಿದ್ದಾರೆ.
ಬೆಟೆನ್‌ಕೋರ್ಟ್ ಮೇಯರ್ಸ್ ಅವರು ಹೋಲ್ಡಿಂಗ್ ಕಂಪನಿಯಾದ Tethysನ ಅಧ್ಯಕ್ಷರಾಗಿದ್ದಾರೆ. ಸೊಸೆಯಾದ ಜೀನ್ ಪೇರಿ ಮೇಯರ್ಸ್ ಅವರು ಸಿಇಒ ಆಗಿದ್ದಾರೆ.
ಈ ಸೌದರ್ಯ ವರ್ಧಕ ಕಂಪನಿಯನ್ನು 1909ರಲ್ಲಿ ಬೆಟೆನ್‌ಕೋರ್ಟ್ ಮೇಯರ್ಸ್ ಅವರ ಅಜ್ಜ, ರಸಾಯನಶಾಸ್ತ್ರಜ್ಞರಾದ ಯುಜೀನ್ ಶುಲ್ಲರ್ ಅವರು ಕೂದಲಿನ ಬಣ್ಣವನ್ನು ತಯಾರಿಸುವುದಕ್ಕಾಗಿ ಸ್ಥಾಪಿಸಿದ್ದರು. ಬಹಳ ಸುಧೀರ್ಘ ಅವಧಿವರೆಗೆ ಕಂಪನಿಯನ್ನು ಕುಟುಂಬದ ಹೊರಗಿನ ಅಧಿಕಾರಿಗಳು ನಡೆಸುತ್ತಿದ್ದರು.
ಮೇಯರ್ಸ್ ಅವರು ಬಹುಏಕ ಬಿಲಿಯನೇರ್‌ಗಳು ಇಷ್ಟಪಡುವ ಗ್ಲಾಮರರ್ಸ್ ಆಗಿರುವ ಬದುಕಿನಿಂದ ದೂರ ಉಳಿದುಕೊಂಡಿದ್ದಾರೆ. ಅವರು ತಮ್ಮ ಬಿಡುವಿನ ವೇಳೆಯಲ್ಲಿ ಓದು ಕಡೆ ಗಮನಹರಿಸುತ್ತಿದ್ದು, ಎರಡು ಪುಸ್ತಕ ಬರೆದಿದ್ದು, ಐದು ಸಂಪುಟಗಳ ಬೈಬಲ್ ಅಧ್ಯಯನವನ್ನು ಮಾಡಿದ್ದಾರೆ. ಅಲ್ಲದೆ ಮೇಯರ್ಸ್ ಅವರು ಪಿಯೋನಾ ನುಡಿಸುವುದರಲ್ಲಿಯೂ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ.


Click it and Unblock the Notifications