ಉದ್ಯಮಿಗಳು, ಇಂಜಿನಿಯರ್‌ಗಳು, ವ್ಯಾಪಾರಸ್ಥರು ಮತ್ತು ಇತರರು ತಮ್ಮ ಸಂಪತ್ತನ್ನು ಹೆಚ್ಚಿಸಲು ದೀರ್ಘ ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಮತ್ತಷ್ಟು ಶ್ರೀಮಂತರಾಗಲು ಬಯಸುತ್ತಾರೆ ಆದರೆ ಎಲ್ಲರ ಹೆಸರುಗಳು ವಿಶ್ವದ ಅಗರ್ಭ ಶ್ರೀಮಂತರ ಪಟ್ಟಿಯಲ್ಲಿ ಸೇರ್ಪಡೆಯಾಗುವುದಿಲ್ಲ. ಉದ್ಯಮ, ಸಿರಿವಂತಿಕೆ ಹೆಚ್ಚಿಸುವ ತವಕದಲ್ಲಿ ಯೌವನ ಕಳೆದುಹೋಗಿರುತ್ತದೆ.
ಹೀಗಿರುವಾಗ ಫೋರ್ಬ್ಸ್ ಪಟ್ಟಿಯಲ್ಲಿ ಶ್ರೀಮಂತರ ಹೆಸರನ್ನು ಉಲ್ಲೇಖವಾಗುವುದು ಗಮನಾರ್ಹವಾಗಿದ್ದು, ಅದರಲ್ಲೂ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಅದರ ಪಟ್ಟಿಗೆ ಸೇರಿಸುವುದು ಖಂಡಿತವಾಗಿಯೂ ಅದು ಅಸಮಾನ್ಯ ಸಾಧನೆಯಾಗಿದೆ.

ಇತ್ತೀಚೆಗೆ ಫೋರ್ಬ್ಸ್ ತಮ್ಮ ಬಿಲಿಯನೇರ್‌ಗಳ ಪಟ್ಟಿಯನ್ನು ಪ್ರಕಟಿಸಿದ್ದು ಈ ಪೈಕಿ ಎಲ್ಲರ ಗಮನ ಸೆಳೆದ ಏಕೈಕ ವ್ಯಕ್ತಿ ಕ್ಲೆಮೆಂಟ್ ಡೆಲ್ ವೆಚಿಯೋ. ಈತನ ವಯಸ್ಸು ಕೇವಲ 19 ವರ್ಷ. ಎಳೆವಯಸ್ಸಿನಲ್ಲಿಯೇ 4 ಶತಕೋಟಿ ಡಾಲರ್ ನಿವ್ವಳ ಮೌಲ್ಯ ಹೊಂದಿರುವ ಸಿರಿವಂತನಾಗಿದ್ದಾನೆ.
ವಿಶ್ವದ ಅತಿದೊಡ್ಡ ಕನ್ನಡಕ ಕಂಪನಿಯಾದ ಎಸ್ಸಿಲೋರ್ ಲುಕ್ಸೊಟಿಕಾದ ಮಾಜಿ ಅಧ್ಯಕ್ಷರಾಗಿದ್ದ ಬಿಲಿಯನೇರ್ ಇಟಾಲಿಯನ್ ಲಿಯೊನಾರ್ಡೊ ಡೆಲ್ ವೆಚಿಯೊ ಅವರು ಕ್ಲೆಮೆಂಟೆ ಅವರ ತಂದೆಯಾಗಿದ್ದಾರೆ. ಲಿಯಾನಾರ್ಡೊ, ಕಳೆದ ವರ್ಷ ಜೂನ್‌ನಲ್ಲಿ 87ನೇ ವಯಸ್ಸಿನಲ್ಲಿ ನಿಧನರಾದರು.
ಅವರ ನಿಧನದ ನಂತರ ಅವರ ಪತ್ನಿ ಮತ್ತು ಆರು ಮಕ್ಕಳು ಅವರ 25.5 ಬಿಲಿಯನ್ ಸಂಪತ್ತನ್ನು ಪಡೆದರು, ಅವರಲ್ಲಿ ಕ್ಲೆಮೆಂಟೆ ಕೂಡಾ ಒಬ್ಬರಾಗಿದ್ದಾರೆ. ಈ ಮೂಲಕ ಅವರು 2022ರಲ್ಲಿ ಇತಿಹಾಸದಲ್ಲಿ ಅತ್ಯಂತ ಕಿರಿಯ ಬಿಲಿಯನೇರ್ ಆಗಿ ಗುರುತಿಸಿಕೊಂಡರು.
ಕ್ಲೆಮೆಂಟ್ ಡೆಲ್ ವೆಚಿಯೋ ಯಾರು?
ಫೋರ್ಬ್ಸ್‌ನ ಪಟ್ಟಿಯಲ್ಲಿರುವ ಅತ್ಯಂತ ಕಿರಿಯ ಬಿಲಿಯನೇರ್ ಅಂದ್ರೆ ಕ್ಲೆಮೆಂಟೆ ಡೆಲ್ ವೆಚಿಯೊ. ಕ್ಲೆಮೆಂಟ್ ಡೆಲ್ ವೆಚಿಯೊ ಅವರು ಹದಿನೆಂಟು ವರ್ಷದವನಾಗಿರುವಾಗಲೇ ಬಿಲಿಯನೇರ್ ಆಗಿದ್ದರು. ಅವರು ಲಕ್ಸೆಂಬರ್ಗ್ ಮೂಲದ ಹೋಲ್ಡಿಂಗ್ ಕಂಪನಿ ಡೆಲ್ಫಿನ್‌ನಲ್ಲಿ ಶೇಕಡ 12.5 ಪಾಲನ್ನು ಪಡೆದುಕೊಂಡಿದ್ದು, ಅದು ಅವರ ತಂದೆಯ ಒಡೆತನದಲ್ಲಿತ್ತು.
ಗಣನೀಯ ಪ್ರಮಾಣದ ಆಸ್ತಿಯನ್ನು ಪಡೆದಿದ್ದರೂ, ಕ್ಲೆಮೆಂಟ್ ಡೆಲ್ ವೆಚಿಯೊ ತನ್ನ ಅಧ್ಯಯನ ಮತ್ತು ಹವ್ಯಾಸಗಳಿಗೆ ಮೀಸಲಾಗಿದ್ದನೆಂದು ಹೇಳಲಾಗುತ್ತದೆ. ಕಾಲೇಜಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅಧ್ಯಯನ ಮಾಡಲು ಮತ್ತು ಈ ಕ್ಷೇತ್ರಗಳಲ್ಲಿ ವೃತ್ತಿಜೀವನವನ್ನು ಮುಂದುವರಿಸುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದರು.
ಇಟಲಿಯಲ್ಲಿ ಮಿಲನ್‌ನಲ್ಲಿರುವ ಅಪಾರ್ಟ್‌ಮೆಂಟ್ ಮತ್ತು ಲೇಕ್ ಕೊಮೊ ಬಳಿಯ ವಿಲ್ಲಾದಂತಹ ಹಲವಾರು ದುಬಾರಿ ಆಸ್ತಿಗಳನ್ನು ಕ್ಲೆಮೆಂಟೆ ಡೆಲ್ ವೆಚಿಯೊ ಇಟಲಿಯಾದ್ಯಂತ ಹೊಂದಿದ್ದಾರೆ. ರೇ-ಬಾನ್ ಮತ್ತು ಸನ್‌ಗ್ಲಾಸ್ ಹಟ್‌ನಂತಹ ಪ್ರಸಿದ್ಧ ಬ್ರಾಂಡ್‌ಗಳ ಖರೀದಿಯನ್ನು ಒಳಗೊಂಡಿರುವ ಲಿಯೊನಾರ್ಡೊ ತನ್ನ ತಂದೆಯ ವ್ಯವಹಾರಗಳಲ್ಲೂ ನೇರವಾಗಿ ಎಲ್ಲೂ ತೊಡಗಿಸಿಕೊಂಡಿಲ್ಲ.
ಕ್ಲೆಮೆಂಟ್ ಡೆಲ್ ವೆಚಿಯೊ ಅವರ ಕುಟುಂಬ
ಕ್ಲೆಮೆಂಟ್ ಅವರ ಹಿರಿಯ ಸಹೋದರ ಕ್ಲೌಡಿಯೊ ಅವರ ಒಡಹುಟ್ಟಿದವರಲ್ಲಿ ಅತ್ಯಂತ ಪ್ರಸಿದ್ಧರಾಗಿದ್ದಾರೆ.1982 ರಲ್ಲಿ ಅವರ ತಂದೆ 25 ವರ್ಷದ ಸಹೋದರ ಕ್ಲೌಡಿಯೊ ನನ್ನು ಅಮೇರಿಕಾಕ್ಕೆ ಕಳುಹಿಸಿದ್ದರು. ಅಲ್ಲಿ ಹದಿನೈದು ವರ್ಷಗಳ ಅವಧಿಯವರೆಗೆ, ಕ್ಲೌಡಿಯೊ ಲುಕ್ಸೊಟಿಕಾದ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡಿದರು. 1995 ರಲ್ಲಿ 1.4 ಶತಕೋಟಿ ಡಾಲರ್ ಲೆನ್ಸ್‌ಕ್ರಾಫ್ಟರ್ಸ್ (LensCrafters) ನಂತಹ ಗಮನಾರ್ಹ ಖರೀದಿ ಮಾಡಿದರು.
2001 ರಲ್ಲಿ ಬ್ರೂಕ್ಸ್ ಬ್ರದರ್ಸ್ ಅನ್ನು ಸ್ವಾಧೀನಪಡಿಸಿಕೊಳ್ಳಲು 225 ಮಿಲಿಯನ್ ಡಾಲರ್ ಪಾವತಿಸಿದ ನಂತರ, ಕ್ಲೌಡಿಯೊ ಅವರ ಕಂಪನಿಯು ತೀವ್ರವಾಗಿ ಹಣಕಾಸಿನ ತೊಂದರೆಗಳನ್ನು ಎದುರಿಸಿ 2020ರ ಜುಲೈನಲ್ಲಿ ದಿವಾಳಿತನವನ್ನು ಘೋಷಿಸಿತು.
ಕ್ಲೆಮೆಟ್ ಅವರ ಎರಡನೇ ಹಿರಿಯ ಸಹೋದರ ಲಿಯೊನಾರ್ಡೊ ಮಾರಿಯಾ ಅವರು ಲುಕ್ಸೊಟಿಕಾದ ಇಟಾಲಿಯನ್ ರಿಟೇಲ್ ವಿಭಾಗದ ಮುಖ್ಯಸ್ಥರಾಗಿದ್ದು ಕುಟುಂಬ ವ್ಯವಹಾರದಲ್ಲಿ ಸಕ್ರಿಯರಾಗಿ ಕೆಲಸ ಮಾಡುತ್ತಿದ್ದಾರೆ. ಡೆಲ್ ವೆಚಿಯೊ ಅವರ ಅಜ್ಜ ಮಿಲನ್‌ನಲ್ಲಿ ತರಕಾರಿ ಮಾರಾಟಗಾರರಾಗಿದ್ದು, ಕ್ಲೆಮೆಂಟ್ ಅವರು ಹುಟ್ಟುವ ಮೊದಲು ನಿಧನರಾಗಿದ್ದರು.


Click it and Unblock the Notifications