ಜನರು ಯಾವುದೇ ವಸ್ತುವನ್ನು ಖರೀದಿ ಮಾಡಿದರೂ ಅದಕ್ಕೆ ಸ್ಟೋರ್ ಮಾಲೀಕರಿಂದ ಬಿಲ್‌ಗಳನ್ನು ಖರೀದಿ ಮಾಡುವುದನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಮುಂದಾಗಿದೆ. ಕೇಂದ್ರ ಸರ್ಕಾರವು ಸೆಪ್ಟೆಂಬರ್ 1 ರಂದು ಮೇರಾ ಬಿಲ್ ಮೇರಾ ಅಧಿಕಾರ್ ಯೋಜನೆಯನ್ನು ಪ್ರಾರಂಭಿಸಿದೆ. ಜನರು ಬಿಲ್‌ಗಳನ್ನು ಪಡೆಯಲು ಪ್ರೋತ್ಸಾಹಿಸಲು ಈ ಯೋಜನೆಯನ್ನು ಜಾರಿ ಮಾಡಲಾಗಿದೆ.
ಈ ಯೋಜನೆಯನ್ನು ಅಸ್ಸಾಂ, ಗುಜರಾತ್, ಮತ್ತು ಹರಿಯಾಣ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ಪುದುಚೇರಿ, ದಮನ್ ಮತ್ತು ದಿಯು ಮತ್ತು ದಾದ್ರಾ ನಗರ ಹವೇಲಿಗಳಲ್ಲಿ ಪ್ರಾಯೋಗಿಕ ಯೋಜನೆಯಾಗಿ ಪರಿಚಯಿಸಲಾಗಿದೆ. ಈ ಯೋಜನೆಯ ಬಗ್ಗೆ ಮಾಹಿತಿ ಇಲ್ಲಿದೆ ಮುಂದೆ ಓದಿ...

"ಮೇರಾ ಬಿಲ್ ಮೇರಾ ಅಧಿಕಾರ್ ಯೋಜನೆಯು ಸೆಪ್ಟೆಂಬರ್ 1, 2023 ರಂದು 12.00 ಗಂಟೆಗೆ ಸರಿಯಾಗಿ ಆರಂಭವಾಗುತ್ತದೆ. ಈಗಾಗಲೇ ಪ್ರಾಯೋಗಿಕ ಯೋಜನೆಯಲ್ಲಿ ಗ್ರಾಹಕರು ಸಕ್ರಿಯವಾಗಿ ಭಾಗವಹಿಸಿದ್ದಾರೆ. ಅಪ್ಲಿಕೇಶನ್ ಅನ್ನು 1.51 ಲಕ್ಷಕ್ಕೂ ಹೆಚ್ಚು ಜನರು ಡೌನ್‌ಲೋಡ್ ಮಾಡಿಕೊಂಡಿದ್ದಾರೆ," ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಗ್ರಾಹಕರಿಗೆ ಪ್ರಯೋಜನಗಳು
ಈ ಯೋಜನೆಯಡಿಯಲ್ಲಿ ಗ್ರಾಹಕರು ಒಂದು ಕೋಟಿ ರೂಪಾಯಿಗಳವರೆಗಿನ ಅತ್ಯಾಕರ್ಷಕ ಬಹುಮಾನಗಳಿಗೆ ಅರ್ಹರಾಗಿರುತ್ತಾರೆ. ಬಹುಮಾನಕ್ಕೆ ಅರ್ಹರಾಗಲು, ಗ್ರಾಹಕರು ತಮ್ಮ ಬಿಲ್‌ಗಳನ್ನು ಮೇರಾ ಬಿಲ್ ಮೇರಾ ಅಧಿಕಾರ್ ಅಪ್ಲಿಕೇಶನ್‌ಗೆ ಅಪ್‌ಲೋಡ್ ಮಾಡಬೇಕು. ಗ್ರಾಹಕರು merabill.gst.gov.in ವೆಬ್ ಪೋರ್ಟಲ್‌ಗೆ ಬಿಲ್‌ಗಳನ್ನು ಅಪ್‌ಲೋಡ್ ಮಾಡಬಹುದು.
ಹೇಗೆ ಭಾಗಿಯಾಗುವುದು ತಿಳಿಯಿರಿ
ಹಂತ 1: https://web.merabill.gst.gov.in/login ಮೇರಾ ಬಿಲ್ ಮೇರಾ ಅಧಿಕಾರ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಅಥವಾ ನಿಮ್ಮ ಫೋನ್‌ನಲ್ಲಿರುವ ಅಪ್ಲಿಕೇಶನ್ ಮೂಲಕ ಲಾಗ್ ಇನ್ ಆಗಬಹುದು.
ಹಂತ 2: ನಿಮ್ಮ 10-ಅಂಕಿಯ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
ಹಂತ 3: ಹೆಸರು, ಮೊಬೈಲ್ ಸಂಖ್ಯೆ ಮತ್ತು ರಾಜ್ಯದಂತಹ ಮೂಲ ಮಾಹಿತಿ ವಿವರಗಳನ್ನು ಭರ್ತಿ ಮಾಡಿ. accept terms and conditions ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
ಹಂತ 4: ಮುಂದುವರಿಯಲು, ನಿಮ್ಮ ಜಿಎಸ್‌ಟಿ ಬಿಲ್ ಅನ್ನು ಅಪ್‌ಲೋಡ್ ಮಾಡಿ.
ಹಂತ 5: ವೆಬ್‌ಸೈಟ್/ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಿದ ಇನ್‌ವಾಯ್ಸ್ ನಂಬರ್, ಜಿಎಸ್‌ಟಿಇನ್, ಪಾವತಿಸಿದ ಮೊತ್ತ, ತೆರಿಗೆ ಮೊತ್ತ ಹೊಂದಿರಬೇಕು.
ಹಂತ 6: ಪ್ರಕ್ರಿಯೆಯು ಮುಗಿದ ನಂತರ, submit ಕ್ಲಿಕ್ ಮಾಡಿ. https://twitter.com/cbic_india/status/1696865368118362291?s=20
ನನ್ನ ಬಿಲ್ ನನ್ನ ಹಕ್ಕು ಯೋಜನೆ: ವಿವರ ಇಲ್ಲಿದೆ
ಲಕ್ಕಿಡ್ರಾನಲ್ಲಿ ನೀವು ಪಾತ್ರವಾಗಬೇಕಾದರೆ ಒಬ್ಬ ವ್ಯಕ್ತಿಯು ತಿಂಗಳಿಗೆ ಗರಿಷ್ಠ 25 ಇನ್‌ವಾಯ್ಸ್‌ಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ. ಪ್ರತಿ ತಿಂಗಳು ಸರ್ಕಾರ 800 ಜನರನ್ನು ಆಯ್ಕೆ ಮಾಡಲಿದ್ದು, ಅವರಿಗೆ 10,000 ರೂಪಾಯಿಗಳನ್ನು ಪ್ರೋತ್ಸಾಹ ಧನವಾಗಿ ನೀಡಲಾಗುತ್ತದೆ. ಇದಲ್ಲದೆ, ಇಬ್ಬರು ಬಂಪರ್ ಡ್ರಾದಲ್ಲಿ ಒಂದು ಕೋಟಿ ರೂಪಾಯಿ ಗೆಲ್ಲಬಹುದಾಗಿದೆ. ಈ ಪ್ರಾಯೋಗಿಕ ಕಾರ್ಯಕ್ರಮವು ಒಂದು ವರ್ಷದವರೆಗೆ ಜಾರಿಯಲ್ಲಿರುತ್ತದೆ.
ಮೇರಾ ಬಿಲ್ ಮೇರಾ ಅಧಿಕಾರ್ ಅನ್ನು ಪ್ರಸ್ತುತ iOS ಮತ್ತು Android ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರವೇಶಿಸಬಹುದಾಗಿದೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ನೋಂದಾಯಿತ ಪೂರೈಕೆದಾರರು ಗ್ರಾಹಕರಿಗೆ ಸಲ್ಲಿಸಿದ ಎಲ್ಲಾ ಇನ್‌ವಾಯ್ಸ್‌ಗಳು ಮೇರಾ ಬಿಲ್ ಮೇರಾ ಅಧಿಕಾರ್ ಉಪಕ್ರಮಕ್ಕೆ ಅರ್ಹವಾಗಿರುತ್ತವೆ.


Click it and Unblock the Notifications