ದುಡ್ಡು ಮಾಡಬೇಕು ಎನ್ನುವುದು ಎಲ್ಲರ ಕಸನಾಗಿರುತ್ತೆ. ಆದರೆ ಎಲ್ಲರಿಗೂ ಸಂಪತ್ತು ಗಳಿಕೆಯು ಸಾಧ್ಯವಾಗುವುದಿಲ್ಲ. ಬಹುಪಾಲು ಹಣವು ಕೆಲವರ ಬಳಿಯೇ ಶೇಖರಣೆಗೊಂಡಿರುತ್ತೆ. ಹಣ ಮಾಡುವವರು ಮಾಡುತ್ತಲೇ ಇರುತ್ತಾರೆ. ಕೆಲವರು ಏನೇ ಪ್ರಯತ್ನಿಸದಿದ್ರೂ ಹಣ ಮಾಡುತ್ತಲೇ ಇರುತ್ತಾರೆ ಎಂದು ನೀವು ಕೇಳಿರಬಹುದು.
ಸಂಪತ್ತನ್ನು ಆಕರ್ಷಿಸುವುದು ಅಷ್ಟು ಸುಲಭದ ಮಾತಲ್ಲ. ಆದರೆ ಹಣ ಆಕರ್ಷಣೆಯ ವಿಧಾನಗಳನ್ನು ಸರಿಯಾಗಿ ತಿಳಿದುಕೊಂಡವರು ಕೋಟ್ಯಾಧಿಪತಿಗಳಾಗಿದ್ದಾರೆ. ಬಹುತೇಕ ಕೋಟ್ಯಾಧಿಪತಿಗಳು ಹಣ ಗಳಿಕೆಯ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಆದರೆ ಇವರ ಸಂಪತ್ತಿನ ಆಕರ್ಷಣೆಯ ವಿಧಾನಗಳನ್ನು ಜೀವನದಲ್ಲಿ ರೂಢಿಸಿಕೊಂಡರೆ ಹಣ ಸಂಪಾದಿಸಬಹುದು. ಹಾಗಿದ್ದರೆ ಸಂಪತ್ತು ಗಳಿಕೆಗೆ ಕೋಟ್ಯಾಧಿಪತಿಗಳು ಬಾಯಿ ಬಿಡದ 7 ರಹಸ್ಯ ಕ್ರಮಗಳು ಯಾವುವು ಎಂಬುದು ಈ ಕೆಳಗಿದೆ ಓದಿ
1. ಸ್ಪಷ್ಟ ಉದ್ದೇಶವನ್ನು ಹೊಂದಿರಿ
ನಿಮಗೆ ಬೇಕಾದುದನ್ನು ನಿರ್ಧರಿಸುವಾಗ ನೀವು ಹೆಚ್ಚು ನಿರ್ದಿಷ್ಟವಾಗಿರುತ್ತೀರಿ. ಇದರಿಂದ ನೀವು ಅಂದುಕೊಂಡದ್ದನ್ನು ಆಕರ್ಷಿಸಲು ಸುಲಭವಾಗುತ್ತದೆ. ಹೀಗಾಗಿ ನಿಮ್ಮ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂದುಕೊಂಡಿದ್ದರೆ ಅದಕ್ಕೆ ಒಂದು ಸ್ಪಷ್ಟ ಉದ್ದೇಶವಿರಲಿ. ನೀವು ಎಷ್ಟು ಹಣ ಮಾಡಬೇಕು ಹಾಗೂ ಅದರ ಹಿಂದಿನ ಉದ್ದೇಶ ಏನು ಎಂಬು ಸ್ಪಷ್ಟವಾಗಿರಲಿ.
2. ನೀವು ಹೊಂದಿರುವ ಹಣದ ಬಗ್ಗೆ ಗೌರವವಿರಲಿ
ನೀವು ಕಳೆದುಕೊಂಡಿರುವ ಬಗ್ಗೆ ಯೋಚಿಸುವ ಬದಲು ನೀವ ಈಗ ಹೊಂದಿರುವ ಸಂಪತ್ತನ್ನು ಹೇಗೆ ಬೆಳೆಸುವುದು ಎಂಬುದರ ಕುರಿತು ನಿಮ್ಮ ಗಮನವನ್ನು ಕೇಂದ್ರೀಕರಿಸಿ. ನಿಮ್ಮ ಬಳಿಕ ಕಮ್ಮಿ ಹಣವಿದೆ ಅದರಿಂದ ಏನು ಸಾಧ್ಯ ಎಂದು ಅಗೌರವ ಬೇಡ. ಬದಲಾಗಿ ನಿಮ್ಮ ಹಣ ಅಥವಾ ಸಂಪತ್ತಿನ ಕುರಿತು ಗೌರವವಿರಲಿ. ಈ ಕೃತಜ್ಞತೆಯು ಹೆಚ್ಚಿನ ಸಮೃದ್ಧಿಗೆ ದಾರಿ ಎಂಬುದನ್ನು ನೆನಪಿಡಿ.
3. ನಿಮ್ಮ ಕೊರತೆಯ ಮನಸ್ಸನ್ನು ಬದಲಾಯಿಸಿ
ನೀವು ಪ್ರತಿ ಬಾರಿಯು ಹಣವನ್ನು ಪಾವತಿಸುವಾಗ ಮತ್ತು ಹಣವನ್ನು ಪಡೆಯುವಾಗ ಅದರ ಶಕ್ತಿಯ ಬಗ್ಗೆ ನಿಮಗೆ ಅರಿವಿರಲಿ. ಏಕೆಂದರೆ ಹಣದ ಶಕ್ತಿಯ ಬಗ್ಗೆ ಪ್ರಜ್ಞಾಪೂರ್ವಕವಾಗಿ ತಿಳಿದಿರಲಿ. ಉದಾಹರಣೆಗೆ ನೀವು ಯಾವುದಾದರೂ ಒಂದು ಬಿಲ್ ಪಾವತಿಸುತ್ತಿದ್ದೀರಿ ಎಂದು ಅಂದುಕೊಳ್ಳೋಣ, ಮುಂದಿನ ಬಾರಿ ಮತ್ತೆ ನೀವೆ ಬಿಲ್ ಪಾವತಿಸಬೇಕಾಗಿ ಬಂದಾಗ ನಿಮ್ಮ ಕೊರತೆಯ ಮನಸ್ಸನ್ನು ಬದಲಾಯಿಸಿ. ಈ ಸಮಯದಲ್ಲಿ ನಿಮಗೆ ಕಿರಿಕಿರಿ ಅಥವಾ ಕೋಪ ಬರಬಹುದು. ಆದರೆ ಇದರ ಬಗ್ಗೆ ನಿಮಗೆ ಹೆಚ್ಚು ಗೌರವವಿರಲಿ ನಾನು ಮತ್ತೊಮ್ಮೆ ಹಣವನ್ನು ಪಾವತಿ ಮಾಡುತ್ತಿದ್ದೇನೆ ಎಂಬ ಮನಸ್ಸಿರಲಿ.
4. ಬೇರೆಯವರೊಂದಿಗೆ ಹೋಲಿಕೆ ಮಾಡಿಕೊಳ್ಳುವುದನ್ನು ನಿಲ್ಲಿಸಿ
ಬೇರೆಯವರೊಂದಿಗೆ ನಿಮ್ಮನ್ನು ನೀವು ಹೋಲಿಕೆ ಮಾಡಿಕೊಳ್ಳುವುದು ನಿಮ್ಮ ಸಮಯ ಮತ್ತು ಶಕ್ತಿಯನ್ನು ವ್ಯಯ ಮಾಡಿದಂತೆ. ಪ್ರತಿಯೊಬ್ಬರು ಅವರದ್ದೇ ಆದ ವಿಭಿನ್ನ ಹಾದಿಯಲ್ಲಿ ನಡೆಯುತ್ತಿರುತ್ತಾರೆ ಎಂಬುದನ್ನು ಎಂದಿಗೂ ಮರೆಯದಿರಿ ಹಾಗೂ ಹೋಲಿಕೆ ಮಾಡಿಕೊಳ್ಳದಿರಿ.
ನಿಮ್ಮನ್ನು ಬೇರೆಯವರಿಗೆ ಹೋಲಿಸಿಕೊಳ್ಳುವ ಬದಲು ನಿಮಗೆ ನೀವೆ ಸ್ಪರ್ಧೆಯನ್ನೊಡ್ಡುವ ಮೂಲಕ ನಿಮ್ಮನ್ನೇ ಮತ್ತಷ್ಟು ಉತ್ತಮಗೊಳಿಸಿ.
5. ನಿಮ್ಮ ಬಳಿಯಲ್ಲಿರುವ ಸಂಪತ್ತನ್ನು ಪರಿಣಾಮಕಾರಿ ಬಳಸುವುದು ಹೇಗೆ ಎಂದು ತಿಳಿದುಕೊಳ್ಳಿ
ನಿಮ್ಮ ಬಳಿಯಿರುವ ಹಣವನ್ನು ಪರಿಣಾಮಕಾರಿ ಬಳಸಲು ಸಾಧ್ಯವಾಗುತ್ತಿಲ್ಲ ಎಂದರೆ ನೀವು ಹೆಚ್ಚು ಹಣ ಮಾಡಲು ಸಾಧ್ಯವಿಲ್ಲ. ಹೀಗಾಗಿ ಈ ವಿಚಾರದ ಬಗ್ಗೆ ಹೆಚ್ಚು ಪ್ರಜ್ಞಾವಂತರಾಗಿ ವರ್ತಿಸಿ. ನಿಮ್ಮ ಹಣವನ್ನು ಜವಾಬ್ದಾರಿಯುತ ಬಳಕೆಗೆ ಒತ್ತು ನೀಡಿದರೆ ನೀವು ಮತ್ತಷ್ಟು ಹಣ ಮಾಡಲು ಸಾಧ್ಯವಾಗುತ್ತದೆ.
6. ಹಣದೊಂದಿಗಿನ ನಿಮ್ಮ ಸಂಬಂಧವನ್ನು ಉತ್ತಮವಾಗಿರಿಸಿ
ನೀವು ಯಾರಿಗಾದರೂ ಗೌರವ ಮತ್ತು ಪ್ರೀತಿಯನ್ನು ನೀಡುತ್ತಿದ್ದೀರಾ ಎಂದರೆ ಆ ಸಂಬಂಧವು ಉತ್ತಮವಾಗಿರುತ್ತದೆ ಇದು ಹಣಕ್ಕೂ ಹೊರತಾಗಿಲ್ಲ. ನಿಮ್ನ ಕಠಿಣ ಪರಿಶ್ರಮ ಪ್ರತಿಫಲವು ಹಣವೇ ಆಗಿದ್ದರೇ ಹಣದ ಕುರಿತಾಗಿ ನಿಮ್ಮ ಯೋಚನೆಗಳನ್ನು ಏಕೆ ಬದಲಿಸಿಕೊಳ್ಳಬಾರದು?
7. ಸೀಮಿತಗೊಳಿಸುವ ನಂಬಿಕೆಯಿಂದ ಹೊರಬನ್ನಿ
ನಿಮ್ಮ ಕನಸುಗಳನ್ನು ಸೀಮಿತಗೊಳಿಸುವ ನಂಬಿಕೆಯಿಂದ ಮೊದಲು ಹೊರಬಂದತೆ ಯಾವುದೇ ಕನಸನ್ನು ಬೆನ್ನಟ್ಟಲು ಸಾಧ್ಯ. ಉದಾಹರಣೆಗೆ ನೀವು ಒಳ್ಳೆಯ ಬಂಗಲೆಯನ್ನು ಕಟ್ಟಬೇಕು ಎಂದು ಕನಸು ಕಂಡರೆ ಅದನ್ನು ಸಾಕಾರಗೊಳಿಸಲು ನೀವು ಕನಸನ್ನು ಬೆನ್ನತ್ತಬೇಕು. ನಿಮ್ಮ ಉಪಪ್ರಜ್ಞೆಯು ಅದರತ್ತ ತೆರಳಲು ನಿಮ್ಮನ್ನು ಪ್ರೋತ್ಸಾಹಿಸುತ್ತಿರುತ್ತದೆ. ಆದರೆ ನೀವು ಆ ಕನಸು ನನಸಾಗಿಸಲು ನನಗೆಲ್ಲಿ ಸಾಧ್ಯ ಎಂದು ಸೀಮಿತಗೊಂಡರೆ ಎಂದಿಗೂ ಗುರಿ ಮುಟ್ಟಲು ಸಾಧ್ಯವಿಲ್ಲ.
ಹೀಗಾಗಿ ನೀವು ವಿಶ್ವದಲ್ಲಿಯೇ ಎಲ್ಲಾ ಸಂತೋಷ, ಸಮೃಧ್ಧಿ ಮತ್ತು ಪ್ರೀತಿಗೆ ಅರ್ಹರು ಎಂದು ನಿಮ್ಮನ್ನು ನೀವು ನಂಬುವುದು ಬಹಳ ಮುಖ್ಯವಾಗಿದೆ.
More From GoodReturns

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಆರ್ಬಿಐ ನಿರ್ಧಾರದ ಮುನ್ನ ನಿಮ್ಮ ಹಣ ಸುರಕ್ಷಿತವೇ?

ಚಿನ್ನದ ಬೆಲೆ ಏರಿಕೆ: ನಿಮ್ಮ ಹೂಡಿಕೆ ಸುರಕ್ಷಿತವಾಗಿಡಲು ಈ ತಂತ್ರ ಬಳಸಿ

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?



Click it and Unblock the Notifications