ಪ್ರಸ್ತುತ ಎಲ್ಲರ ಚಿತ್ತ 2023ರ ವಿಶ್ವಸುಂದರಿ ಸ್ಪರ್ಧೆಯ ಮೇಲಿದೆ. 71ನೇ ವಿಶ್ವಸುಂದರಿ ಸ್ಪರ್ಧೆಯು ಶನಿವಾರ ನಡೆಯಲಿದ್ದು, ವಿಶ್ವಸುಂದರಿ ಎನಿಸಿಕೊಂಡವರಿಗೆ ಈ ಹಿಂದಿನ 70ನೇ ವಿಶ್ವಸುಂದರಿ ಸ್ಪರ್ಧೆಯಲ್ಲಿ ವಿಜೇತೆಯಾದ ಭಾರತದ ಹರ್ನಾಜ್ ಸಂಧು ಕೀರಿಟವನ್ನು ಮುಡಿಗೇರಿಸಲಿದ್ದಾರೆ. ಈ ಸ್ಪರ್ಧೆಯಲ್ಲಿ ಈ ಬಾರಿ ಕರ್ನಾಟಕದ ಮಂಗಳೂರು ಮೂಲದ ದಿವಿತಾ ರೈ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಈ ಬಾರಿ ಒಟ್ಟು 84 ಸ್ಪರ್ಧಿಗಳಿದ್ದು, ಹಲವಾರು ಹಂತಗಳಲ್ಲಿ ಸ್ಪರ್ಧೆ ನಡೆಯಲಿದೆ. ಯುಎಸ್‌ಎನಲ್ಲಿ ಈ ಸ್ಪರ್ಧೆಯ ವಿಜೇತರಿಗೆ ನಗದು ಬಹುಮಾನ ಹಾಗೂ ವಿಶ್ವಸುಂದರಿ ಕಿರೀಟಿಯನ್ನು ನೀಡಲಾಗುತ್ತದೆ. ಈ ಬಾರಿಯೂ ಭಾರತದ ಪ್ರತಿನಿಧಿ ವಿಶ್ವಸುಂದರಿ ಎನಿಸಿಕೊಳ್ಳುತ್ತಾರಾ ಎಂಬ ಕಾತುರ ಭಾರತಿಯರಲ್ಲಿದೆ. ಅಷ್ಟಕ್ಕೂ ಈ ವಿಶ್ವ ಸುಂದರಿ ಪಟ್ಟಕ್ಕೇರಿದರೆ ಐಷಾರಾಮಿ ಜೀವನಕ್ಕೆ ದಾರಿ ಎನ್ನಬಹುದು.
ಜನಪ್ರಿಯತೆ ಜೊತೆಗೆ, ಉತ್ತಮ ಜೀವನವನ್ನು ನಡೆಸಲು ದಾರಿಯಾಗಲಿದೆ. ಈ ಒಂದು ಪ್ರಶಸ್ತಿಯು ವಿಜೇತರ ಜೀವನವನ್ನೇ ಬದಲಾವಣೆ ಮಾಡಲಿದೆ. ಈ ಬಾರಿ ಸುಮಾರು 500 ಮಿಲಿಯನ್ ಜನರು ಸ್ಪರ್ಧೆಯನ್ನು ನೋಡಲು ಆಗಮಿಸುವ ಸಾಧ್ಯತೆಯಿದೆ. ಈ 70 ವರ್ಷದ ಹಳೆಯ ಈ ಸ್ಪರ್ಧೆಯ ವಾರ್ಷಿಕ ಬಜೆಟ್ 100 ಮಿಲಿಯನ್ ಯುಎಸ್ ಡಾಲರ್ ಆಗಿದೆ. ಹಾಗಾದರೆ ವಿಶ್ವ ಸುಂದರಿಗೆ ಲಭಿಸುವ ನಗದು ಬಹುಮಾನವೆಷ್ಟು?, ಏನೆಲ್ಲ ಪ್ರಯೋಜನ ಲಭ್ಯವಿದೆ ಎಂದು ತಿಳಿಯೋಣ ಮುಂದೆ ಓದಿ...
ವಿಶ್ವಸುಂದರಿಗೆ ಲಭ್ಯವಾಗುವ ಪ್ರಯೋಜನಗಳೇನು?
ವಿಶ್ವಸುಂದರಿಗೆ ಲಭ್ಯವಾಗುವ ನಗದು ಬಹುಮಾನವು ವರ್ಷದಿಂದ ವರ್ಷಕ್ಕೆ ಬದಲಾವಣೆಯಾಗುತ್ತಾ ಸಾಗುತ್ತದೆ. ಇತ್ತೀಚಿನ ವಿಶ್ವಸುಂದರಿ ವಿಜೇತೆಗೆ 250,000 ಯುಎಸ್ ಡಾಲರ್ ಲಭ್ಯವಾಗಿದೆ. ಅಷ್ಟು ಮಾತ್ರವಲ್ಲದೆ ಯುಎಸ್‌ಎಯಲ್ಲಿ ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ವರ್ಷಪೂರ್ತಿ ಉಳಿದುಕೊಳ್ಳುವ ಅವಕಾಶವನ್ನು ಪಡೆಯುತ್ತಾರೆ. ಹಾಗೆಯೇ ವಿಶ್ವಸುಂದರಿ ಎಂಬ ಪಟ್ಟ ಪಡೆದವರು, ದಿನಸಿ, ಅಡುಗೆ, ಬಟ್ಟೆ, ಆಭರಣ, ಸಾರಿಗೆ ಮೊದಲಾದವುಗಳ ಬಗ್ಗೆ ಯಾವುದೇ ತಲೆಬಿಸಿ ಮಾಡಬೇಕಾಗಿಲ್ಲ. ಮಿಸ್ ಯೂನಿವರ್ಸ್ ಸಂಸ್ಥೆಯು ನೀಡುವ ಖಾಸಗಿ ವಿಮಾನದಲ್ಲಿಯೇ ಓಡಾಟ ನಡೆಸಬೇಕಾಗುತ್ತದೆ. ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮಾಡಲಾಗುವ ಪ್ರತಿ ಪ್ರಯಾಣದಲ್ಲಿ ಹೊಟೇಲ್, ಆಹಾರ, ಛಾಯಾಚಿತ್ರಣ ಉಚಿತವಾಗಿ ಲಭ್ಯವಾಗಲಿದೆ.
ವಿಶ್ವಸುಂದರಿ ತಮ್ಮ ಸ್ನೇಹಿತರೊಂದಿಗೆ ಕಾಲಕಳೆಯಬಹುದೇ?
ವಿಶ್ವಸುಂದರಿಯಾದ ಕಾರಣ ಹಲವಾರು ಕಾರ್ಯಕ್ರಮದಲ್ಲಿ ಆಕೆ ಭಾಗಿಯಾಗಬೇಕಾಗುತ್ತದೆ. ಫ್ಯಾಷನ್ ಶೋಗಳಲ್ಲಿಯೂ ಭಾಗಿಯಾಗಬೇಕಾಗುತ್ತದೆ. ಆದ್ದರಿಂದಾಗಿ ವಿಶ್ವಸುಂದರಿಯಾದವರ ಜೀವನವು ಅತೀ ಬ್ಯುಜಿ ಜೀವನ ಎಂದರೆ ತಪ್ಪಾಗಲಾರದು. ವಿಶ್ವಸುಂದರಿಯರು ಅವಾರ್ಡ್ ಪಾರ್ಟಿಗಳಂತಹ ಪಾರ್ಟಿಗಳಲ್ಲಿ ಭಾಗಿಯಾಗಬಹುದು. ಸಿನಿಮಾ ನೋಡಬಹುದು, ಬೇರೆ ಮನರಂಜನೆಯಲ್ಲಿ ಭಾಗಿಯಾಗಬಹುದು.
ವಿಶ್ವಸುಂದರಿಯ ಕಿರೀಟ ಹೇಗಿದೆ?
ಕಳೆದ 70 ವರ್ಷದಲ್ಲಿ 9 ಬಾರಿ ಕಿರೀಟದ ವಿನ್ಯಾಸ ಹಾಗೂ ನಗದು ಬಹುಮಾನ ಬದಲಾವಣೆಯಾಗುತ್ತಾ ಬಂದಿದೆ. 2022ರಲ್ಲಿ ಅನ್ನೆ ಜಾಕ್ಕಪಾಂಗ್ ಸಂಸ್ಥೆಯನ್ನು ಖರೀದಿ ಮಾಡಿವ ಬಳಿಕ, ಮೌಅವದ್ ಜ್ಯುವೆಲ್ಲರಿಯ ಒಪ್ಪಂದ ಪರಿಷ್ಕರಿಸಲಾಗಿದೆ. ಹೊಸ ಕಿರೀಟದ ವಿನ್ಯಾಸ ಬದಲಾವಣೆ ಮಾಡಲಾಗಿದೆ. ಹೊಸ ಕಿರೀಟದಲ್ಲಿ 110 ಕ್ಯಾರೆಟ್‌ನ ನೀಲಿ ಹರಳುಗಳು ಇದೆ, 48 ಕ್ಯಾರೆಟ್‌ನ ಬಿಳಿ ವಜ್ರಗಳಿದೆ, 45.15 ಕ್ಯಾರೆಟ್‌ನ ರೋಯಲ್ ಬ್ಲ್ಯೂ ಹರಳುಗಳಿದೆ. ಈ ಕಿರೀಟದ ಮೌಲ್ಯ ಸರಿಸುಮಾರು 5.75 ಮಿಲಿಯನ್ ಡಾಲರ್ ಆಗಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?



Click it and Unblock the Notifications