ಫ್ಲಿಪ್ ಕಾರ್ಟ್ ಆಪ್ ಬಳಸಿ, ಖಾಸಗಿ ದ್ವಿಚಕ್ರ ವಾಹನ ಹಾಗೂ ಕಾರುಗಳಿಗೆ ಬಜಾಜ್ ಅಲೈಯಂಜ್ ಇನ್ಷೂರೆನ್ಸ್ ಪಾಲಿಸಿಗಳನ್ನು ಈಗ ಖರೀದಿ ಮಾಡಬಹುದು. ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಲಾಗಿದೆ. ಆನ್ ಲೈನ್ ನಲ್ಲಿ ಸುಲಭವಾಗಿ ಇನ್ಷೂರೆನ್ಸ್ ಖರೀದಿ ಮಾಡುವ ಜತೆಗೆ ಶೀಘ್ರವಾಗಿ ಕ್ಲೇಮ್ ನೆರವು ದೊರೆಯುತ್ತದೆ.
ಇನ್ನು ರಸ್ತೆ ಬದಿ ನೆರವು (ರೋಡ್ ಸೈಡ್ ಅಸಿಸ್ಟೆನ್ಸ್), ಕ್ಲೇಮ್ ತೀರುವಳಿಗೆ ಸ್ವಯಂ ಸಮೀಕ್ಶ್ಗೆ, ನೋ ಕ್ಲೇಮ್ ಬೋನಸ್ ವರ್ಗಾವಣೆ (NCB) ಹಾಗೂ ಶೂನ್ಯ ಸವಕಳಿ (ಡಿಪ್ರಿಸಿಯೇಷನ್) ಕವರ್ ಕೂಡ ಇದೆ.

ಫ್ಲಿಪ್ ಕಾರ್ಟ್ ಅಪ್ಲಿಕೇಷನ್ ಬಳಸಿ ಮೋಟಾರ್ ಇನ್ಷೂರೆನ್ಸ್ ಖರೀದಿ ಮಾಡುವುದು ಹೇಗೆ?
* ಮೊದಲಿಗೆ ಫ್ಲಿಪ್ ಕಾರ್ಟ್ ಅಪ್ಲಿಕೇಷನ್ ಡೌನ್ ಲೋಡ್ ಮಾಡಿ, ಮೊಬೈಲ್ ಸಂಖ್ಯೆಯೊಂದಿಗೆ ಲಾಗ್ ಇನ್ ಆಗಬೇಕು. ಆ ನಂತರ ಹೋಮ್ ಬಟನ್ ಒತ್ತಬೇಕು.
* ಇನ್ಷೂರೆನ್ಸ್ ಎಂದಿರುವ ಟ್ಯಾಬ್ ಮೇಲೆ ಕ್ಲಿಕ್ ಮಾಡಿ, ಮುಂದಿನ ಹಂತಕ್ಕೆ ಹೋಗಬೇಕು.
* ಅಲ್ಲಿಂದ ಹೊಸ ಸ್ಕ್ರೀನ್ ಬರುತ್ತದೆ. ವಿವಿಧ ಇನ್ಷೂರೆನ್ಸ್ ಕಂಪೆನಿಗಳಿಂದ ಇರುವ, ವಿವಿಧ ಬಗೆಯ ಇನ್ಷೂರೆನ್ಸ್ ಕಾಣಿಸುತ್ತದೆ. ಅಲ್ಲಿ ಟೂ ವ್ಹೀಲರ್ ಅಥವಾ ಫೋರ್ ವ್ಹೀಲರ್, ಯಾವುದರ ಇನ್ಷೂರೆನ್ಸ್ ಮಾಡಿಸಬೇಕೋ ಅದನ್ನು ಕ್ಲಿಕ್ ಮಾಡಬೇಕು.
* ಯಾವ ಬಗೆಯ ಇನ್ಷೂರೆನ್ಸ್ ಎಂಬುದರ ಮೇಲೆ ಕ್ಲಿಕ್ ಮಾಡಿದ ನಂತರ, ಪಾಲಿಸಿ ಖರೀದಿಗಾಗಿ ಬಜಾಜ್ ಅಲೈಯಂಜ್ ಪೋರ್ಟಲ್ ಗೆ ತೆರಳುತ್ತದೆ. ಅಲ್ಲಿ ಮಾಹಿತಿಗಳನ್ನು ತುಂಬಿ, ಡಿಜಿಟಲ್ ಮೋಟಾರ್ ಇನ್ಷೂರೆನ್ಸ್ ಪಾಲಿಸಿ ಖರೀದಿ ಮಾಡಬಹುದು.


Click it and Unblock the Notifications