ಭಾರತೀಯ ಕ್ರಿಕೆಟರ್‌ಗಳ ಪೈಕಿ ಎಂಎಸ್ ಧೋನಿ ಅವರು 1040 ಕೋಟಿ ರೂಪಾಯಿಗಳ ಆಸ್ತಿಯೊಂದಿಗೆ ಅತೀ ಶ್ರೀಮಂತ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಅವರ ಸಂಪತ್ತು ಕೇವಲ ಕ್ರಿಕೆಟ್ ವೃತ್ತಿಯಿಂದ ಮಾತ್ರ ಜಾಸ್ತಿಯಾಗುತ್ತಿಲ್ಲ. ಜತೆಗೆ ಬೇರೆ ಬೇರೆ ಬಿಸಿನೆಸ್ ಹಾಗೂ ಹೂಡಿಕೆಗಳಿಂದಾಗಿ ಅವರು ಅಪಾರ ಆಸ್ತಿ ಗಳಿಸುತ್ತಿದ್ದಾರೆ.
ಎಂಎಸ್ ಧೋನಿ ಅವರು ಸ್ವಂತ ಬಟ್ಟೆ ಬ್ರಾಂಡ್, ಸ್ಪೋರ್ಟ್ಸ್ ಕಂಪನಿ ಹಾಗೂ ಟಾಪ್ ಬ್ರಾಂಡ್ಸ್‌ಗಳ ಜತೆಗೂ ಹಲವಾರು ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ. ಅಲ್ಲದೆ, ಚೆನ್ನೈ ಸೂಪರ್ ಕಿಂಗ್ಸ್ ನಾಯಕನಾಗಿಯೂ ಹಲವಾರು ಸಣ್ಣ ಮಟ್ಟದ ಹೂಡಿಕೆಗಳನ್ನು ಹೊಂದುವ ಮೂಲಕ ಹೆಚ್ಚಿನ ಆದಾಯವನ್ನು ಪಡೆಯುತ್ತಿದ್ದಾರೆ.

ಕೇವಲ ಸ್ಪೋರ್ಟ್ಸ್ ಕಂಪನಿ ಮಾತ್ರವಲ್ಲ, ಜತೆಗೆ ಎಂಎಸ್ ಧೋನಿ ಅವರು ರಾಂಚಿಯಲ್ಲಿ ಸ್ವಂತ ಹೋಟೆಲ್ ಹೊಂದಿದ್ದಾರೆ. ಈ ನಡುವೆ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಹಾಗೂ ಚಾಕೊಲೇಟ್ ಬ್ರಾಂಡ್‌ನ್ನು ಹೊಂದಿದ್ದಾರೆ. ಹೀಗಿರುವಾಗ, ಸಿಎಸ್‌ಕೆ ಕ್ಯಾಪ್ಟನ್ ಆಗಿರುವ ಧೋನಿ ಅವರ ಹೆಚ್ಚು ಗೊತ್ತಿಲ್ಲದ ವ್ಯಾಪಾರ - ವಹಿವಾಟುಗಳ ಬಗೆಗಿನ ಮಾಹಿತಿ ಇಲ್ಲಿದೆ, ಮುಂದೆ ಓದಿ....
ರಾಂಚಿಯಲ್ಲಿ ಹೋಟೆಲ್
ಎಂಎಸ್ ಧೋನಿ ಅವರು ಕೆಲವು ವರ್ಷಗಳ ಹಿಂದೆ ರಾಂಚಿಯಲ್ಲಿ ಮಾಹಿ ರೆಸಿಡೆನ್ಸಿ ಹೆಸರಿನಲ್ಲಿ ಮಧ್ಯಮ ದರ್ಜೆ ಹೋಟೆಲ್ ಅನ್ನು ಸ್ಥಾಪಿಸಿದ್ದಾರೆ. ಈ ಹೋಟೆಲ್ Airbnb, Oyo ಮತ್ತು ಮೇಕ್ ಮೈ ಟ್ರಿಪ್‌ನಂತಹ ಆಪ್‌ಗಳಲ್ಲಿ ಲಭ್ಯವಿದೆ. ಇದು ಅವರ ಹೆಸರಿನ ಚೈನ್ ಹೊರತಾದ ಏಕೈಕ ಹೋಟೆಲ್ ಆಗಿದೆ.
ಬೆಂಗಳೂರಿನಲ್ಲಿ ಧೋನಿ ಸ್ಕೂಲ್
ಸಿಎಸ್‌ಕೆ ನಾಯಕನಾಗಿರುವ ಧೋನಿ ಅವರು ಬೆಂಗಳೂರಿನಲ್ಲಿ ಎಂಎಸ್ ಧೋನಿ ಗ್ಲೋಬಲ್ ಸ್ಕೂಲ್ ಹೆಸರಿನ ಶಾಲೆಯನ್ನು ಹೊಂದಿದ್ದಾರೆ. ಇದು ಸಿಬಿಎಸ್‌ಇ ಪಠ್ಯಕ್ರಮದ ಇಂಗ್ಲಿಷ್ ಮಾಧ್ಯಮ ಶಾಲೆಯಾಗಿದೆ. ಎಂಎಸ್ ಧೋನಿ ಶಾಲೆಯು ಸತ್ಯ ನಾಡೆಲ್ಲಾ ಅವರ ಮೈಕ್ರೋಸಾಫ್ಟ್ ಜತೆ ಒಪ್ಪಂದ ಮಾಡಿಕೊಂಡಿದ್ದು, ಆ ಮೂಲಕ ವಿದ್ಯಾರ್ಥಿಗಳಿಗೆ ಪರಿಣತ ಹಾಗೂ ವೈವಿಧ್ಯಮ ಕೋರ್ಸ್‌ಗಳನ್ನು ನೀಡುತ್ತಿವೆ.
ಎಂಎಸ್ ಧೋನಿ ಡ್ರಿಂಗ್ಸ್, ಚಾಕೊಲೇಟ್
ಎಂಎಸ್ ಧೋನಿ ಅವರು ಕೇವಲ ಕ್ರೀಡೆ ಹಾಗೂ ವಸ್ತ್ರಗಳ ಉದ್ಯಮದಲ್ಲಿ ಮಾತ್ರ ತೊಡಗಿಸಿಕೊಂಡಿಲ್ಲ. ಜತೆಗೆ ಅವರು 7Ink Brews ಹೆಸರಿನ ಫುಡ್ ಹಾಗೂ ಪಾನೀಯ ಬ್ರಾಂಡ್‌ನಲ್ಲಿ ಹೆಚ್ಚಿನ ಪ್ರಮಾಣದ ಹೂಡಿಕೆಯನ್ನು ಮಾಡಿದ್ದಾರೆ. ಧೋನಿಯ ಹೆಲಿಕಾಫ್ಟರ್ ಶಾಟ್‌ನಿಂದ ಪ್ರೇರಣೆಗೊಂಡು ಚಾಕೊಲೇಟ್ ಕಾಪ್ಟರ್ 7 ಹೆಸರಿನಲ್ಲಿ ಸ್ಥಾಪನೆಗೊಂಡ ಚಾಕೊಲೇಟ್ ಕಂಪನಿಯಲ್ಲಿಯೂ ಧೋನಿ ಅವರು ಬಂಡವಾಳ ಹೂಡಿಕೆ ಮಾಡಿದ್ದಾರೆ.
ಎಂಎಸ್ ಧೋನಿ ಅವರ ಜಿಮ್
ಎಂಎಸ್ ಧೋನಿ ಅವರು ಸ್ಪೋರ್ಟ್ಸ್‌ಫಿಟ್ ಎಂಬ ಪ್ರಮುಖ ಜಿಮ್ ಚೈನ್ ಅನ್ನು ಕೂಡ ಹೊಂದಿದ್ದು, ದೇಶದೆಲ್ಲೆಡೆ 200 ಕಡೆ ಕಾರ್ಯನಿರ್ವಹಿಸುತ್ತಿವೆ. ಈ ಜಿಮ್‌ಗಳು ಸ್ಪೋರ್ಟ್ಸ್ ಉಡುಪು ಕಂಪನಿ ಸೆವೆನ್ ಹಾಗೂ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಕಂಪನಿಯಾದ ರಿತಿ ಸ್ಪೋರ್ಟ್ಸ್ ಗ್ರೂಪ್ ಜತೆಗೆ ಕೈಜೋಡಿಸಿವೆ.


Click it and Unblock the Notifications