ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ಕೆಲವು ದಿನಗಳ ಹಿಂದೆ ಅಹಮದಾಬಾದ್‌ನಲ್ಲಿ ಬಹಳ ಸಂಭ್ರಮದಿಂದ ನಡೆಯುತ್ತಿದೆ. ಪಾಕಿಸ್ತಾನದ ವಿರುದ್ಧ ಭಾರತದ ಐತಿಹಾಸಿಕ ಗೆಲುವಿನ ನಂತರ ಭಾರತದಲ್ಲಿ ವಿಶ್ವಕಪ್ 2023 ರ ಉತ್ಸಾಹವು ಅಧಿಕವಾಗಿದೆ. ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳು ತಮ್ಮ ಮೊಬೈಲ್‌ನಲ್ಲಿ ವಿಶ್ವಕಪ್‌ನ ಲೈವ್ ಪಂದ್ಯಗಳನ್ನು ವೀಕ್ಷಿಸುತ್ತಿದ್ದಾರೆ.
ಇದು ದೇಶದ ಉನ್ನತ ಟೆಲಿಕಾಂ ಆಪರೇಟರ್‌ಗಳ ಮೊಬೈಲ್ ಡೇಟಾ ಬಳಕೆಯಲ್ಲಿ ಭಾರಿ ಜಿಗಿತಕ್ಕೆ ಕಾರಣವಾಗಿದೆ. ಡಿಸೆಂಬರ್ ತ್ರೈಮಾಸಿಕದಲ್ಲಿ ಮುಕೇಶ್ ಅಂಬಾನಿಯವರ ರಿಲಯನ್ಸ್ ಜಿಯೋ ಮತ್ತು ಸುನಿಲ್ ಮಿತ್ತಲ್‌ರ ಭಾರ್ತಿ ಏರ್‌ಟೆಲ್ ಮೊಬೈಲ್ ಡೇಟಾ ಬಳಕೆಯ ಮಟ್ಟದಲ್ಲಿ ಸುಮಾರು ಶೇಕಡ 6 ಬೆಳವಣಿಗೆ ಕಂಡು ಬಂದಿದೆ ಎಂದು ವಿಶ್ಲೇಷಕರು ಮತ್ತು ಉದ್ಯಮದ ಅಧಿಕಾರಿಗಳು ಅಂದಾಜಿಸಿದ್ದಾರೆ.

5ಜಿ ಸೇವೆಗಳನ್ನು ಬಳಸುತ್ತಿರುವ ಕ್ರಿಕೆಟ್ ಅಭಿಮಾನಿಗಳಲ್ಲಿ ಪ್ರಬಲ ಡಿಜಿಟಲ್ ವೀಕ್ಷಕರನ್ನು ನಾವು ಈಗ ಕಾಣಬಹುದಾಗಿದೆ. 5ಜಿ ಸೇವೆಗಳ ಕೊರತೆಯಿಂದಾಗಿ, ವೊಡಾಫೋನ್ ಐಡಿಯಾದ ಮೊಬೈಲ್ ಡೇಟಾ ಬಳಕೆಯ ಬೆಳವಣಿಗೆಯು ವಿಶ್ವಕಪ್‌ನ ಸಮಯದಲ್ಲಿಯೂ ಕಡಿಮೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಟೆಲಿಕಾಂ ಕಂಪನಿಗಳ ಕಾರ್ಯನಿರ್ವಾಹಕರು ಮೊಬೈಲ್ ಡೇಟಾ ಬಳಕೆಯಲ್ಲಿ ಹೆಚ್ಚಳವನ್ನು ನಿರೀಕ್ಷಿಸುತ್ತಿದ್ದಾರೆ. ವಿಶ್ವಕಪ್‌ನಿಂದಾಗಿ, ಜನರು ತಮ್ಮ ಸಿಮ್‌ಗಳನ್ನು 4ಜಿಯಿಂದ 5ಜಿಗೆ, 2ಜಿಯಿಂದ 4ಜಿಗೆ ಅಪ್‌ಡೇಟ್ ಮಾಡುವ ಪ್ರಮಾಣ ಅಧಿಕವಾಗುವ ಸಾಧ್ಯತೆಯಿದೆ. ಡಿಸ್ನಿ-ಹಾಟ್‌ಸ್ಟಾರ್ ಉಚಿತ ಕ್ರಿಕೆಟ್ ಪಂದ್ಯಗಳನ್ನು ಲೈವ್ ಸ್ಟ್ರೀಮಿಂಗ್ ಆಗಿದೆ. ಇದರಿಂದಾಗಿ ಡೇಟಾ ಬಳಕೆ ಪ್ರಮಾಣ ಅಧಿಕವಾಗುವ ನಿರೀಕ್ಷೆಯಿದೆ.
"ಐಸಿಸಿ ವಿಶ್ವಕಪ್ ಕ್ರಿಕೆಟ್ ಪಂದ್ಯಗಳ ಡಿಜಿಟಲ್ ವೀಕ್ಷಕರ ಹೆಚ್ಚಳ ಮತ್ತು ವೇಗವಾಗಿ ಬೆಳೆಯುತ್ತಿರುವ 5ಜಿ ಬಳಕೆಯಿಂದಾಗಿ ಹಣಕಾಸು ವರ್ಷ 2024ರ ಮೂರನೇ ತ್ರೈಮಾಸಿಕದಲ್ಲಿ ಜಿಯೋ ಮತ್ತು ಏರ್‌ಟೆಲ್ ಮೊಬೈಲ್ ಡೇಟಾ ಬಳಕೆಯ ಮಟ್ಟ ಮೀರುವ ಸಾಧ್ಯತೆಯಿದೆ," ಎಂದು ಅನಾಲಿಸಿಸ್ ಮೇಸನ್‌ನ ಮುಖ್ಯಸ್ಥ (ಭಾರತ ಮತ್ತು ಮಧ್ಯಪ್ರಾಚ್ಯ) ರೋಹನ್ ಧಮಿಜಾ ತಿಳಿಸಿದರು.
ವೇಗವಾಗಿ ಬೆಳೆಯುತ್ತಿರುವ 5ಜಿ ಬಳಕೆಯಿಂದಾಗಿ ಮೊದಲ ತ್ರೈಮಾಸಿಕದಲ್ಲಿ ಪ್ರತಿ ಚಂದಾದಾರರಿಗೆ ಸರಾಸರಿ ಮಾಸಿಕ ಡೇಟಾ ಬಳಕೆಯಲ್ಲಿ ಜಿಯೋ ಮತ್ತು ಏರ್‌ಟೆಲ್ ಕ್ರಮವಾಗಿ ಶೇಕಡ 8 ಮತ್ತು ಶೇಕಡ 4.2 ರಷ್ಟು ಬೆಳವಣಿಗೆಯನ್ನು ಕಂಡಿದೆ.
ಹೆಚ್ಚಿನ ಫೀಚರ್ ಫೋನ್ ಬಳಕೆದಾರರು ಸ್ಮಾರ್ಟ್‌ಫೋನ್‌ಗಳಲ್ಲಿ ಐಪಿಎಲ್ ಅನ್ನು ಲೈವ್ ಆಗಿ ವೀಕ್ಷಿಸಲು ಹೆಚ್ಚಿನ ಬೆಲೆಯ 4ಜಿ ಪ್ಯಾಕ್‌ಗಳನ್ನು ಹಾಕಬಹುದು. ಜೂನ್ ತ್ರೈಮಾಸಿಕದಲ್ಲಿ ಡೇಟಾ ಬಳಕೆಯಲ್ಲಿ ಶೇಕಡ 3.82 ರಷ್ಟು ಬೆಳವಣಿಗೆಯನ್ನು ವೊಡಾಫೋನ್ ಕಂಡಿದೆ.


Click it and Unblock the Notifications