ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ, ಭಾರತದ ಅತೀ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿರುವ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಗ್ರಾಮೀಣ ಪ್ರದೇಶಗಳು ಮತ್ತು ಸಣ್ಣ ಪಟ್ಟಣಗಳ ಎಲ್ಲ ವ್ಯಾಪಾರವನ್ನು ತನ್ನ ಹತೋಟಿಗೆ ತೆಗೆದುಕೊಳ್ಳಲು ಮುಂದಾಗಿದೆ.
ಮುಕೇಶ್ ಅಂಬಾನಿಯವರ ರಿಲಯನ್ಸ್ ರಿಟೇಲ್ ಸಣ್ಣ ನಗರಗಳು ಮತ್ತು ಪಟ್ಟಣಗಳಲ್ಲಿ ಫ್ಯಾಶನ್ ವರ್ಲ್ಡ್ ಬೈ ಟ್ರೆಂಡ್ಸ್ ಬ್ಯಾನರ್ ಅಡಿಯಲ್ಲಿ 500 ಉಡುಪುಗಳ ರಿಟೇಲ್ ಮಳಿಗೆಯನ್ನು ಈಗಾಗಲೇ ತೆರೆಯಲು ಸಿದ್ಧವಾಗಿದೆ. ಈಗ ಬೀದಿ ಬೀದಿಯಲ್ಲಿಯೂ ತನ್ನ ವ್ಯಾಪಾರವನ್ನು ನಡೆಸಲು ಮುಂದಾಗಿದೆ.

ದೇಶದ ಅತಿದೊಡ್ಡ ರಿಟೇಲ್ ಕಂಪನಿಯು ಮೊದಲ ಬಾರಿಗೆ ಸ್ಟೋರ್ ಅಥವಾ ಅಂಗಡಿಯನ್ನು ಆರಂಭಿಸಲಿದೆ. ಕಂಪನಿಯು ಫ್ರಾಂಚೈಸ್ ಮಾದರಿಯ ಮೂಲಕ ವಿಸ್ತರಿಸಲಿದೆ. ವಿ-ಮಾರ್ಟ್ ರಿಟೇಲ್‌ನಂತಹ ಕಂಪನಿಗಳೊಂದಿಗೆ ಇದು ನೇರ ಸ್ಪರ್ಧೆಯನ್ನು ಮಾಡಲಿದೆ.
Gautam Adani: ಅಂಬಾನಿಯನ್ನು ಹಿಂದಿಕ್ಕಿ ಮತ್ತೆ ದೇಶದ ಶ್ರೀಮಂತರಾಗುತ್ತಾರಾ ಅದಾನಿ?
ಪ್ರಸ್ತುತ, ರಿಲಯನ್ಸ್ ಸಿಲಿಗುರಿ, ಧುಲೆ ಮತ್ತು ಔರಂಗಾಬಾದ್‌ನಂತಹ ನಗರಗಳಲ್ಲಿ ಐದು ಫ್ಯಾಶನ್ ವರ್ಲ್ಡ್ ಬೈ ಟ್ರೆಂಡ್ಸ್ ಮಳಿಗೆಗಳನ್ನು ತೆರೆದಿದೆ. ರಿಲಯನ್ಸ್ ಸಣ್ಣ ಪಟ್ಟಣಗಳಲ್ಲಿ ಸುಮಾರು 2,600 ಟ್ರೆಂಡ್ಸ್ ಸ್ಟೋರ್‌ಗಳನ್ನು ತೆರೆದಿದೆ. ಆದರೆ ಫ್ಯಾಶನ್ ವರ್ಲ್ಡ್ ಬೈ ಟ್ರೆಂಡ್ಸ್ ಸ್ಟೋರ್‌ಗಳು ಅವುಗಳಿಂದ ಸಂಪೂರ್ಣವಾಗಿ ಭಿನ್ನವಾಗಿರುತ್ತವೆ.
ರಿಲಯನ್ಸ್ ಈ ತಿಂಗಳು ಅಂತಹ 20 ಮಳಿಗೆಗಳನ್ನು ಮತ್ತು ಮುಂದಿನ ವರ್ಷ 100 ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಿದೆ. ಟ್ರೆಂಡ್‌ಗಳು ಅಂಗಡಿಗಳನ್ನು ಹೊಂದಿರದ ನಗರಗಳಲ್ಲಿ ಈ ಮಳಿಗೆಗಳನ್ನು ಸಾಮಾನ್ಯವಾಗಿ ತೆರೆಯಲಾಗುತ್ತದೆ. ಕೆಲವು ನಗರಗಳಲ್ಲಿ ಒಂದಕ್ಕಿಂತ ಹೆಚ್ಚು ಅಂಗಡಿಗಳನ್ನು ತೆರೆಯಬಹುದು. ಈ ಮಳಿಗೆಗಳು 5000 ಚದರ ಅಡಿ ಇದೆ. ಆದರೆ ಟ್ರೆಂಡ್‌ಗಳ ಪ್ರದೇಶವು 8,000 ರಿಂದ 24,000 ಚದರ ಅಡಿಗಳವರೆಗೆ ಇರುತ್ತದೆ.
ರಿಲಯನ್ಸ್ ರಿಟೇಲ್ ದೇಶದ ಅತಿ ದೊಡ್ಡ ಉಡುಪು ರಿಟೇಲ್ ವ್ಯಾಪಾರಿಯಾಗಿದೆ. ಇದು ಬಹು ಬ್ರಾಂಡ್‌ಗಳಲ್ಲಿ 4,000 ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದೆ. ಟ್ರೆಂಡ್ಸ್ ಬ್ರ್ಯಾಂಡ್ ದೇಶದ ಅತಿದೊಡ್ಡ ಫ್ಯಾಷನ್ ರಿಟೇಲ್ ಚೇನ್ ಆಗಿದೆ. ಹೊಸ ಸ್ಟೋರ್ ಅನ್ನು ಪ್ರಮುಖವಾಗಿ ಫ್ರಾಂಚೈಸ್ ರೀತಿಯಲ್ಲಿ ವಿಸ್ತರಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉಳಿದ ಅಂಗಡಿಗಳ ಗತಿಯೇನು?
ಈಗಾಗಲೇ ಹಲವಾರು ಮಾರ್ಟ್‌ಗಳು ತಲೆ ಎತ್ತಿದೆ. ಇದರಿಂದಾಗಿ ಸಣ್ಣ ಪುಟ್ಟ ದಿನಸಿ ಅಂಗಡಿಗಳಿಗೆ ಏಟು ಬೀಳುತ್ತಿದೆ. ಹೀಗಿರುವಾಗ ಮುಕೇಶ್ ಅಂಬಾನಿ ದೇಶದ ಎಲ್ಲ ಬೀದಿ ಬೀದಿಗಳಲ್ಲಿ ತನ್ನದೇ ಆದ ಸ್ಟೋರ್ ಅನ್ನು ತೆರೆದರೆ ಉಳಿದ ವ್ಯಾಪಾರಿಗಳ ಗತಿಯೇನು ಎಂದು ವ್ಯಾಪಾರಿಯೊಬ್ಬರು ಹೇಳಿದ್ದಾರೆ.


Click it and Unblock the Notifications