ಬಹು ನಿರೀಕ್ಷಿತ ಇನ್‌ಪ್ಲಸ್ ಓಪನ್ ಫೋಲ್ಡಬಲ್ ಫೋನ್‌ನ ಏಕೈಕ ರಿಟೇಲ್ ವ್ಯಾಪಾರಿಯು ರಿಲಯನ್ಸ್ ಡಿಜಿಟಲ್ ಆಗಿದೆ. ಇಂದಿನಿಂದ, ಗ್ರಾಹಕರು ಹತ್ತಿರದ ಯಾವುದೇ ರಿಲಯನ್ಸ್ ಡಿಜಿಟಲ್ ಸ್ಟೋರ್‌ನಲ್ಲಿ ಈ ಸ್ಮಾರ್ಟ್‌ಫೋನ್ ಅನ್ನು ಮೊದಲೇ ಬುಕ್ ಮಾಡಿಕೊಳ್ಳಬಹುದು. ಈ ಒನ್‌ಪ್ಲಸ್‌ನ ಅತೀ ದುಬಾರಿ ಫೋನ್ ಬೆಲೆಯು 1,39,999 ರೂಪಾಯಿ ಆಗಿದೆ.
ನಿನ್ನೆಯಿಂದ (ಅಕ್ಟೋಬರ್ 20), ಗ್ರಾಹಕರು ಹತ್ತಿರದ ಯಾವುದೇ ರಿಲಯನ್ಸ್ ಡಿಜಿಟಲ್ ಸ್ಟೋರ್‌ನಲ್ಲಿ ಈ ಫೋಲ್ಡಬಲ್ ಫೋನ್ ಅನ್ನು ಮುಂಚಿತವಾಗಿಯೇ ಬುಕ್ ಮಾಡಿಕೊಳ್ಳಬಹುದು. ಒನ್‌ಪ್ಲಸ್‌ನ ಈ ದುಬಾರಿ ಫೋನ್‌ನ ಬೆಲೆಯು 1,39,999 ರೂಪಾಯಿ ಆಗಿದ್ದರೂ ಕೂಡಾ ಅಗ್ಗದ ದರದಲ್ಲಿ ಫೋನ್ ಲಭ್ಯವಾಗಲಿದೆ.

ಎಷ್ಟು ಅಗ್ಗದಲ್ಲಿ ಲಭ್ಯವಾಗಲಿದೆ?
ಗ್ರಾಹಕರು ಮುಂಚಿತವಾಗಿಯೇ ಈ ಫೋನ್ ಅನ್ನು ಬುಕ್ ಮಾಡಿದರೆ 8000 ರೂಪಾಯಿವರೆಗೆ ಎಕ್ಸ್‌ಚೇಂಜ್ ಬೋನಸ್‌ಗಳನ್ನು ಪಡೆಯಬಹುದು. ಐಸಿಐಸಿಐ ಬ್ಯಾಂಕ್ ಕಾರ್ಡ್ ಮತ್ತು ಒನ್ ಕಾರ್ಡ್‌ನಲ್ಲಿ ಪಾವತಿ ಮಾಡಿ ಈ ಫೋನ್ ಬುಕ್ ಮಾಡುವುದಾದರೆ ಸುಮಾರು 5000 ರೂಪಾಯಿವರೆಗೆ ರಿಯಾಯಿತಿ ಲಭಿಸುತ್ತದೆ. ಅಷ್ಟು ಮಾತ್ರವಲ್ಲದೆ ಒನ್‌ಪ್ಲಸ್ ಬಡ್ಸ್ ಪ್ರೋ 2 ಮತ್ತು ಸುರಕ್ಷಿತಾ ವಿಮೆ ಕೂಡಾ ಲಭ್ಯವಾಗಲಿದೆ.
ಅಕ್ಟೋಬರ್ 27, 2023 ರಂದು, ಮಾರಾಟವು ಅಧಿಕೃತವಾಗಿ ಪ್ರಾರಂಭವಾಗುತ್ತದೆ. ರಿಲಯನ್ಸ್ ಡಿಜಿಟಲ್ ಸಿಇಒ ಬ್ರಿಯಾನ್ ಬೇಡ್, "ಒನ್‌ಪ್ಲಸ್‌ನ ವಿಶೇಷವಾದ ಒನ್‌ಪ್ಲಸ್ ಓಪನ್ ಸ್ಮಾರ್ಟ್‌ಫೋನ್ ಬಿಡುಗಡೆಗಾಗಿ ನಾವು ಪಾಲುದಾರರಾಗಲು ಸಂತಸಪಡುತ್ತೇವೆ," ಎಂದು ಹೇಳಿದ್ದಾರೆ. "ಈ ಲಾಂಚ್‌ನೊಂದಿಗೆ ನಾವು ಭಾರತದಲ್ಲಿ ನಮ್ಮ ಗ್ರಾಹಕರಿಗೆ ನೂತನ ತಂತ್ರಜ್ಞಾನ ಪರಿಚಯಿಸುವ ಭರವಸೆಯನ್ನು ನಿಜವಾಗಿಯೂ ಮುಂದುವರಿಸುತ್ತೇವೆ," ಎಂದು ತಿಳಿಸಿದರು.
ಈ ಅಪ್‌ಡೇಟೆಡ್ ಒನ್‌ಪ್ಲಸ್ ಓಪನ್ ಫೋನ್ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಫೋಲ್ಡಬಲ್ ಡಿಸ್‌ಪ್ಲೇಯ ವಿನ್ಯಾಸ ಹೊಂದಿದೆ. ಬಳಕೆದಾರರಿಗೆ ಟ್ಯಾಬ್ಲೆಟ್ ಮತ್ತು ಫೋನ್ ಮೋಡ್‌ಗಳ ನಡುವೆ ಪರಿವರ್ತನೆಯನ್ನು ಸುಲಭಗೊಳಿಸುತ್ತದೆ. ಸ್ಮಾರ್ಟ್‌ಫೋನ್ 512 ಜಿಬಿ ಸ್ಟೋರೆಜ್ ಅನ್ನು ಹೊಂದಿದೆ. 12 ಜಿಬಿ RAM ಇದೆ. ಹೊಸದಾದ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ ಪ್ರೊಸೆಸರ್ ಹೊಂದಿದೆ. ವಾಟರ್‌ಡ್ರಾಪ್ ಹಿಂಜ್ ಇದೆ.
600 ಕ್ಕೂ ಹೆಚ್ಚು ರಿಲಯನ್ಸ್ ಡಿಜಿಟಲ್ ಸ್ಟೋರ್‌ಗಳು ಮತ್ತು 1800 ಮೈ ಜಿಯೋ ಸ್ಟೋರ್‌ಗಳು 800 ಕ್ಕೂ ಹೆಚ್ಚು ನಗರಗಳಲ್ಲಿ ಇದೆ. ರಿಲಯನ್ಸ್ ಡಿಜಿಟಲ್ ಭಾರತದ ಅತಿದೊಡ್ಡ ಎಲೆಕ್ಟ್ರಾನಿಕ್ಸ್ ರಿಟೇಲ್ ವ್ಯಾಪಾರ ಸಂಸ್ಥೆಯಾಗಿದ್ದು, ರಾಷ್ಟ್ರವ್ಯಾಪಿ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ.


Click it and Unblock the Notifications