For Quick Alerts
ALLOW NOTIFICATIONS  
For Daily Alerts

100 ರುಪಾಯಿಯಿಂದ ಹೂಡಿಕೆ ಆರಂಭಿಸಬಹುದಾದ ಎಸ್ ಐಪಿ ಅನುಕೂಲಗಳೇನು?

|

ಹೂಡಿಕೆ ವಿಚಾರ ಮನಸ್ಸಿಗೆ ಬಂದ ಮೇಲೆ ಅದನ್ನು ಮುಂದಕ್ಕೆ ಹಾಕುವುದು ಸರಿಯಲ್ಲ. ನಿರ್ಧಾರ ಮಾಡಿದ್ದೀರಿ ಅಂತಾದಲ್ಲಿ ಸಿಸ್ಟಮ್ಯಾಟಿಕ್ ಇನ್ವೆಸ್ಟ್ ಮೆಂಟ್ ಪ್ಲ್ಯಾನ್ (SIP) ಮೂಲಕ 100 ರುಪಾಯಿಯಿಂದ ಹೂಡಿಕೆ ಶುರು ಮಾಡಬಹುದು.

 

ಹಲವು ಮ್ಯೂಚುವಲ್ ಫಂಡ್ ಹೌಸ್ ಗಳು- ಐಸಿಐಸಿಐ ಪ್ರುಡೆನ್ಷಿಯಲ್ ಮ್ಯೂಚುವಲ್ ಫಂಡ್, ಕ್ವಾಂಟಮ್ ಮ್ಯೂಚುವಲ್ ಫಂಡ್, ನಿಪ್ಪಾನ್ ಇಂಡಿಯಾ ಮ್ಯೂಚುವಲ್ ಫಂಡ್, ಪ್ರಿನ್ಸಿಪಾಲ್ ಮ್ಯೂಚುವಲ್ ಫಂಡ್, ಆದಿತ್ಯ ಬಿರ್ಲಾ ಸನ್ ಲೈಫ್ ಮ್ಯೂಚುವಲ್ ಫಂಡ್, ಯುಟಿಐ, ಐಡಿಎಫ್ ಸಿ ಮ್ಯೂಚುವಲ್ ಫಂಡ್ ಅತ್ಯಂತ ಕಡಿಮೆ ಮೊತ್ತವಾದ 100 ರುಪಾಯಿಯಿಂದ ಹೂಡಿಕೆ ಶುರು ಮಾಡಲು ಅವಕಾಶ ಒದಗಿಸುತ್ತವೆ.

ಇಷ್ಟು ಕಡಿಮೆ ಮೊತ್ತದ ಎಸ್ ಐಪಿಯು ಹೊಸ ಹೂಡಿಕೆದಾರರಿಗೆ ಅಥವಾ ಸಣ್ಣ ಪಟ್ಟಣದ ಹೂಡಿಕೆದಾರರಿಗೆ, ವಿದ್ಯಾರ್ಥಿಗಳು, ಹೆಚ್ಚು ಹೂಡಿಕೆ ಮಾಡುವುದಕ್ಕೆ ತಕ್ಷಣಕ್ಕೆ ಆದಾಯದ ಕೊರತೆ ಇರುವವರು ಹಾಗೂ ಕೊರೊನಾ ಕಾರಣಕ್ಕೆ ಆದಾಯ ನಷ್ಟವನ್ನು ಎದುರಿಸುತ್ತಿರುವವರು ಇಷ್ಟು ಮೊತ್ತದ ಹೂಡಿಕೆ ಮಾಡಬಹುದು.

ಯಾವ ಸಾಲ ಮುಂಚಿತವಾಗಿ ತೀರಿಸಬೇಕು? ಇಲ್ಲಿದೆ ಉದಾಹರಣೆ ಸಹಿತ ಲೆಕ್ಕಾಚಾರಯಾವ ಸಾಲ ಮುಂಚಿತವಾಗಿ ತೀರಿಸಬೇಕು? ಇಲ್ಲಿದೆ ಉದಾಹರಣೆ ಸಹಿತ ಲೆಕ್ಕಾಚಾರ

ಒಂದು ಸಲ ಹೆಚ್ಚಿಗೆ ಹೂಡಿಕೆ ಮಾಡುವುದಕ್ಕೆ ಸಾಧ್ಯವಾದಲ್ಲಿ ಸಿಸ್ಟಮ್ಯಾಟಿಕ್ ಇನ್ವೆಸ್ಟ್ ಮೆಂಟ್ ಪ್ಲ್ಯಾನ್ ಮೊತ್ತವನ್ನು ಹೆಚ್ಚಿಸಬಹುದು ಅಥವಾ ಹೊಸ ಎಸ್ ಐಪಿ ಶುರು ಮಾಡಬಹುದು. ಬಹುತೇಕ ಮ್ಯೂಚುವಲ್ ಫಂಡ್ ಗಳಲ್ಲಿ ಆರಂಭಿಕ ಕನಿಷ್ಠ ಹೂಡಿಕೆ ಮೊತ್ತವೇ 500 ರುಪಾಯಿಯಿಂದ ಶುರುವಾಗುತ್ತದೆ.

ಕೈಗೆಟಕುವ, ಸಲೀಸಾದ ಹೂಡಿಕೆ

ಕೈಗೆಟಕುವ, ಸಲೀಸಾದ ಹೂಡಿಕೆ

ಎಸ್ ಐಪಿ ಮೂಲಕ ಹೂಡಿಕೆ ಮಾಡುವುದನ್ನು ಏಕೆ ಪ್ರೋತ್ಸಾಹಿಸಲಾಗುತ್ತದೆ ಅಂದರೆ, ಅದು ಕೈಗೆಟುಕುವಂತೆ ಇರುತ್ತದೆ ಮತ್ತು ಸಲೀಸಾಗಿ ಅರ್ಥ ಆಗುತ್ತದೆ. ಇನ್ನು ಯಾವುದೇ ರೀತಿಯ ಆದಾಯ ಇರುವವರಿಗೂ ಹೊಂದುತ್ತದೆ. ಅಕ್ಟೋಬರ್ ನಲ್ಲಿ ಸಿಸ್ಟಮ್ಯಾಟಿಕ್ ಇನ್ವೆಸ್ಟ್ ಮೆಂಟ್ ಪ್ಲ್ಯಾನ್ ಮೂಲಕ ಅಕ್ಟೋಬರ್ ನಲ್ಲಿ 7800 ಕೋಟಿ ರುಪಾಯಿ ಸಂಗ್ರಹಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ 5% ಕಡಿಮೆಯಾಗಿದೆ. ಎಸ್ ಐಪಿ ಆರಂಭಿಸಬೇಕು ಎಂದು, ಒಂದು ಗುರಿ ಹಾಕಿಕೊಂಡು ಶುರು ಮಾಡಿದರಷ್ಟೇ ಸಾಲದು. ದೀರ್ಘ ಕಾಲದವರೆಗೂ ಎಸ್ ಐಪಿಯಲ್ಲಿ ಹೂಡಿಕೆ ಮಾಡಿದರಷ್ಟೇ ಪ್ರಯೋಜನಕ್ಕೆ ಬರುತ್ತದೆ. ಅಲ್ಪಾವಧಿ ಏರಿಳಿತಗಳಲ್ಲೂ ಹೂಡಿಕೆ ಮುಂದುವರಿಸಬೇಕು. ಆಮ್ಫಿ ದತ್ತಾಂಶಗಳ ಪ್ರಕಾರ, ಎರಡು ವರ್ಷಗಳ ಸರಾಸರಿ ಅವಧಿಗೆ ಎಸ್ ಐಪಿ ಮೂಲಕ ಹೂಡಿಕೆ ಮಾಡುವುದು ಸಾಲುವುದಿಲ್ಲ.

ಯಾವ ತಿಂಗಳಲ್ಲಿ ಎಷ್ಟು ಎಸ್ ಐಪಿಯಲ್ಲಿ ಹೂಡಿಕೆ?

ಯಾವ ತಿಂಗಳಲ್ಲಿ ಎಷ್ಟು ಎಸ್ ಐಪಿಯಲ್ಲಿ ಹೂಡಿಕೆ?

ಆಮ್ಫಿ ದತ್ತಾಂಶಗಳ ಪ್ರಕಾರ, ಮಾರ್ಕೆಟ್ ಮೇಲೇರುವಾಗ ಎಸ್ ಐಪಿ ಹೂಡಿಕೆ ಹೆಚ್ಚಿಸಿರುವುದು ಕಂಡುಬರುತ್ತದೆ. ಆದರೆ ಯಾವಾಗ ಷೇರು ಮಾರ್ಕೆಟ್ ನಲ್ಲಿ ವಿಪರೀತ ಏರಿಕೆ ಕಾಣಲು ಆರಂಭಿಸುತ್ತದೋ ಆಗ ತಿಂಗಳ ಎಸ್ ಐಪಿ ಕಡಿಮೆ ಆಗಿದೆ. ಮಾರ್ಚ್ ತಿಂಗಳಲ್ಲಿ ಎಸ್ ಐಪಿ 8641 ಕೋಟಿ ರುಪಾಯಿ ಇತ್ತು. ಆದರೆ ನಂತರ ಲಾಕ್ ಡೌನ್ ನಿಂದ ಒತ್ತಡ ಕಂಡುಬಂದಾಗ ಏಪ್ರಿಲ್ ನಲ್ಲಿ 8376 ಕೋಟಿಗೆ ಇಳಿಯಿತು. ಮೇ ತಿಂಗಳಲ್ಲಿ 8123 ಕೋಟಿ, ಜೂನ್ 7917 ಕೋಟಿ, ಜುಲೈ 7831 ಕೋಟಿ, ಆಗಸ್ಟ್ 7792 ಕೋಟಿ ಹಾಗೂ ಸೆಪ್ಟೆಂಬರ್ ನಲ್ಲಿ 7788 ಕೋಟಿ ಮುಟ್ಟಿತು.

ಷೇರು ಮಾರುಕಟ್ಟೆಯಲ್ಲಿ ಏರಿಳಿತ ಅಂತ ಹೂಡಿಕೆ ನಿಲ್ಲಿಸಬಾರದು
 

ಷೇರು ಮಾರುಕಟ್ಟೆಯಲ್ಲಿ ಏರಿಳಿತ ಅಂತ ಹೂಡಿಕೆ ನಿಲ್ಲಿಸಬಾರದು

ಎಸ್ ಐಪಿಯಲ್ಲಿ ಹೂಡಿಕೆ ಮಾಡುವಾಗ ನಿರಂತರವಾಗಿ ಹಣ ಹಾಕುತ್ತಾ ಸಾಗಬೇಕು. ವಿಳಂಬ ಮಾಡುವುದೋ ಅಥವಾ ನಿಲ್ಲಿಸುವುದರಿಂದಲೋ ಅವಕಾಶ ಕಳೆದುಕೊಂಡಂತೆ ಆಗುತ್ತದೆ. ಕಳೆದ ಹತ್ತು ತಿಂಗಳಲ್ಲಿ ಫೆಬ್ರವರಿ ಹಾಗೂ ನವೆಂಬರ್ ಮಧ್ಯೆ ರಿಟರ್ನ್ಸ್ ಲೆಕ್ಕ ಹಾಕಲಾಗಿದೆ. ಲಾರ್ಜ್ ಕ್ಯಾಪ್ ಇಂಡೆಕ್ಸ್ ಫಂಡ್ ನಲ್ಲಿ ಹತ್ತು ತಿಂಗಳಲ್ಲಿ ವಾರ್ಷಿಕ ರಿಟರ್ನ್ಸ್ 57.69% ಆಗಿದೆ. ಇನ್ನು ಇದೇ ಅವಧಿಯಲ್ಲಿ ಮಿಡ್ ಕ್ಯಾಪ್ ಫಂಡ್ ನಲ್ಲಿ 51% ವಾರ್ಷಿಕ ಗಳಿಕೆ ಆಗಿದೆ. ಆದ್ದರಿಂದ ಷೇರು ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಏರಿಳಿತ ಇದೆ ಎಂದು ಹೂಡಿಕೆ ನಿಲ್ಲಿಸುವುದು ಒಳ್ಳೆ ಆಲೋಚನೆ ಅಲ್ಲ.

100 ರುಪಾಯಿ ಎಸ್ ಐಪಿ ಸಾಲಲ್ಲ

100 ರುಪಾಯಿ ಎಸ್ ಐಪಿ ಸಾಲಲ್ಲ

ಮ್ಯೂಚುವಲ್ ಫಂಡ್ ಮೂಲಕ 100 ರುಪಾಯಿ ಹೂಡಿಕೆ ಆರಂಭಿಸಬಹುದು ಎಂಬುದೇನೋ ನಿಜ. ಆದರೆ ಬಹುತೇಕ ಮಂದಿ ಹೂಡಿಕೆದಾರರಿಗೆ ಈ ಮೊತ್ತ ಸಾಕಾಗುವುದಿಲ್ಲ. ಇವತ್ತಿಗೆ ಹಾಕಿಕೊಂಡ ಗುರಿಗೆ ಎಷ್ಟು ಮೊತ್ತ ಬೇಕೋ ಅಷ್ಟನ್ನು ಮಾತ್ರ ಲೆಕ್ಕ ಹಾಕಿಕೊಳ್ಳಬಾರದು. ಅದಕ್ಕಿಂತ ಸ್ವಲ್ಪ ಹೆಚ್ಚಿನ ಶ್ರಮ ಹಾಕಿದರೂ ಭವಿಷ್ಯಕ್ಕೆ ಒಳ್ಳೆ ರಿಟರ್ನ್ಸ್ ಸಿಗುತ್ತದೆ.

English summary

Mutual Funds SIP Investments Can Start From 100 Rupees; Know How It Benefits You?

Mutual Funds SIP investments can start from 100 rupees. Know how it benefits you and also what are the funds which allows you to invest 100 rupees.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X