ಭಾರತದಲ್ಲಿ ಹಲವಾರು ಬಿಲಿಯನೇರ್ ವ್ಯಾಪಾರಿಗಳು ಇದ್ದಾರೆ. ಭಾರತದಲ್ಲಿ ಯಶಸ್ವಿಯಾದ ಉದ್ಯಮವನ್ನು ನಡೆಸುತ್ತಿರುವ ಬಿಲಿಯನೇರ್‌ಗಳ ಪೈಕಿ ಕೆಲವರು ಮಾತ್ರ ಐಐಟಿ ಮತ್ತು ಐಐಎಂನ ಹಳೆಯ ವಿದ್ಯಾರ್ಥಿಗಳು ಆಗಿದ್ದಾರೆ. ಹಲವಾರು ಮಂದಿ ಯಾವುದೇ ಪದವಿ ಇಲ್ಲದೆಯೇ ಉದ್ಯಮ ನಡೆಸುತ್ತಿದ್ದಾರೆ. ಈ ಉದ್ಯಮಿಗಳು ದೇವಾಲಯ, ಮೊದಲಾದವುಗಳಿಗೆ ದೇಣಿಗೆಯನ್ನು ನೀಡುತ್ತಾರೆ. ಆದರೆ ಇಂದು ತಾನು ಕಲಿತ ಕಾಲೇಜಿಗೆ 315 ಕೋಟಿ ರೂಪಾಯಿ ದೇಣಿಗೆ ನೀಡಿದ ವ್ಯಕ್ತಿಯ ಬಗ್ಗೆ ತಿಳಿಸುತ್ತೇವೆ.
ಹೌದು, ಇನ್ಫೋಸಿಸ್‌ನ ಸಹ ಸಂಸ್ಥಾಪಕ, ಚೇರ್‌ಮನ್ ಆದ ನಂದನ್ ನಿಲೇಕಣಿ ಸುಮಾರು 315 ಕೋಟಿ ರೂಪಾಯಿಯನ್ನು ತಾನು ಯಶಸ್ವಿ ಉದ್ಯಮಿಯಾಗಲು ಕಾರಣವಾದ ತಾನ ವಿದ್ಯಾಭ್ಯಾಸ ಮಾಡಿದ ಕಾಲೇಜಿಗೆ ದೇಣಿಗೆಯಾಗಿ ನೀಡಿದ್ದಾರೆ. 68 ವರ್ಷದ ನಂದನ್ ನಿಲೇಕಣಿ ಈ ಭಾರೀ ಪ್ರಮಾಣದ ಮೊತ್ತವನ್ನು ತಾನು ಕಲಿತ ಕಾಲೇಜ್ ಆದ ಐಐಟಿ ಬಾಂಬೆಗೆ ದೇಣಿಗೆಯಾಗಿ ನೀಡಿದ್ದಾರೆ.

ಈ ಹಿಂದೆಯೂ ಐಐಟಿ ಬಾಂಬೆಗೆ ನಂದನ್ ನಿಲೇಕಣಿ ಸುಮಾರು 85 ಕೋಟಿ ರೂಪಾಯಿ ಮೊತ್ತವನ್ನು ದೇಣಿಗೆಯಾಗಿ ನೀಡಿದ್ದಾರೆ. ಈ ಎರಡು ಬಾರಿ ನೀಡಿದ ದೇಣಿಗೆಯನ್ನು ನಾವು ಲೆಕ್ಕ ಹಾಕಿದಾಗ ಈವರೆಗೆ ಈ ಪ್ರತಿಷ್ಠಿತ ಇಂಜಿನಿಯರಿಂಗ್ ಸಂಸ್ಥೆಗೆ ಇನ್ಫೋಸಿಸ್‌ನ ಸಹ ಸಂಸ್ಥಾಪಕ ನಂದನ್ ನಿಲೇಕಣಿ 400 ಕೋಟಿ ರೂಪಾಯಿ ದೇಣಿಗೆ ನೀಡಿದಂತೆ ಆಗುತ್ತದೆ. ಈ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿ ನಂದನ್ ನೀಡಿದ ದೇಣಿಗೆ ಕಾಲೇಜಿಗೆ ಅತೀ ದೊಡ್ಡ ಕೊಡುಗೆಯಾಗಿದೆ.
ನಂದನ್ ನಿಲೇಕಣಿ ಯಾರು, ಆದಾಯವೆಷ್ಟಿದೆ ತಿಳಿಯೋಣ
ನಂದನ್ ನಿಲೇಕಣಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಬಾಂಬೆ ಸೇರ್ಪಡೆಯಾಗಿದ್ದಾರೆ. ಎಲೆಕ್ಟ್ರಾನಿಕ್ ಇಂಜಿನಿಯರಿಂಗ್‌ನಲ್ಲಿ ನಂದನ್ ನಿಲೇಕಣಿ ಬ್ಯಾಚುಲರ್ ಡಿಗ್ರಿಯನ್ನು ಮಾಡಿದ್ದಾರೆ. ಈ ಪ್ರತಿಷ್ಠಿತ ಸಂಸ್ಥೆಯೊಂದಿಗಿನ ತನ್ನ 50 ವರ್ಷಗಳ ಬಾಂಧವ್ಯದ ಗುರುತಾಗಿ ತಾನು ಹೊಸದಾಗಿ ಮತ್ತೆ ದೇಣಿಗೆಯನ್ನು ನೀಡುತ್ತಿರುವುದಾಗಿ ನಂದನ್ ನಿಲೇಕಣಿ ತಿಳಿಸಿದ್ದಾರೆ.
ಫೋರ್ಬ್ಸ್ ಪ್ರಕಾರ ಜೂನ್ 20, 2023ರವರೆಗಿನ ಲೆಕ್ಕಾಚಾರದಲ್ಲಿ ನಂದನ್ ನಿಲೇಕಣಿ ನಿವ್ವಳ ಆದಾಯವು 21,320 ಕೋಟಿ ರೂಪಾಯಿ ಆಗಿದೆ. ಹಾಗೆಯೇ ನಂದನ್ ನಿಲೇಕಣಿ ಸುಮಾರು 5.39 ಲಕ್ಷ ಕೋಟಿ ರೂಪಾಯಿ ಮಾರುಕಟ್ಟೆ ಮೌಲ್ಯವನ್ನು ಹೊಂದಿರುವ ಸಂಸ್ಥೆಯಾದ ಇನ್ಫೋಸಿಸ್‌ನ ನಾನಾ-ಎಕ್ಸಿಕ್ಯೂಟಿವ್ ಚೇರ್‌ಮನ್ ಆಗಿದ್ದಾರೆ. ಇನ್ಫೋಸಿಸ್ ಸಂಸ್ಥೆಯನ್ನು 2009ರಲ್ಲಿ ತೊರೆದ ನಂದನ್ ನಿಲೇಕಣಿ ಮತ್ತೆ 2017ರಲ್ಲಿ ಇನ್ಫೋಸಿಸ್‌ಗೆ ಸೇರಿದ್ದಾರೆ. ಆಧಾರ್ ಕಾರ್ಡ್ ಸಂಬಂಧಿತ ಇನ್ಫೋಸಿಸ್‌ನ ಕಾರ್ಯಗಳಲ್ಲಿ ನಂದನ್ ನಿಲೇಕಣಿ ಕೊಡುಗೆ ಮಹತ್ತರವಾಗಿದೆ.
ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಗಳಲ್ಲಿ ಜಾಗತಿಕ ನಾಯಕರಾಗಲು ಮತ್ತು ರಾಷ್ಟ್ರ ನಿರ್ಮಾಣಕ್ಕೆ ಗಣನೀಯ ಕೊಡುಗೆ ನೀಡುವ ಐಐಟಿ-ಬಿಯ ದೃಷ್ಟಿಕೋನಕ್ಕೆ ಈ ಈ ದೇಣಿಗೆ ಆಧಾರವಾಗಿ ಇರಲಿದೆ ಎಂದು ತಾನು ದೇಣಿಗೆ ನೀಡಿರುವ ಬಗ್ಗೆ ನಂದನ್ ನಿಲೇಕಣಿ ಪ್ರತಿಕ್ರಿಯೆ ನೀಡಿದ್ದಾರೆ. ಸಂಸ್ಥೆ ಹಾಗೂ ನಿಲೇಕಣಿ ಜಂಟಿ ಹೇಳಿಕೆಯಲ್ಲಿ ಮಂಗಳವಾರ ತಿಳಿಸಿದ್ದಾರೆ.
"ಈ ಪ್ರತಿಷ್ಠಿತ ಸಂಸ್ಥೆಯೊಂದಿಗಿನ ನನ್ನ ನಂಟಿಗೆ 50 ವರ್ಷಗಳು ಆಗಿದೆ. ಈ ನಂಟಿನ ಭಾಗವಾಗಿ ನಾನು ದೇಣಿಗೆಯನ್ನು ನೀಡಿದ್ದೇನೆ. ಸಂಸ್ಥೆಯ ಭವಿಷ್ಯಕ್ಕಾಗಿ ದೇಣಿಗೆ ನೀಡಿರುವುದು ನನಗೆ ಸಂತಸ ತಂದಿದೆ. ಇದು ಹಣಕಾಸು ಕೊಡುಗೆಗಿಂತ ಅತೀ ಹೆಚ್ಚಿನದ್ದು. ನನಗೆ ವಿದ್ಯಾಭ್ಯಾಸ ನೀಡಿದ ಸಂಸ್ಥೆಗೆ ನಾನು ನೀಡುವ ಗೌರವ ಇದಾಗಿದೆ. ನಮ್ಮ ಭವಿಷ್ಯಕ್ಕಾಗಿ ಓರ್ವ ವಿದ್ಯಾರ್ಥಿಯಾಗಿ ನನ್ನ ಬದ್ಧತೆ ಇದಾಗಿದೆ," ಎಂದು ಹೇಳಿದ್ದಾರೆ.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಬಾಂಬೆಯಲ್ಲಿ ವಿದ್ಯಾಭ್ಯಾಸ ಮಾಡಿದ ಬಳಿಕ ಕಳೆದ ಐವತ್ತು ವರ್ಷಗಳ ಅವಧಿಯಲ್ಲಿ ನಂದನ್ ನಿಲೇಕಣಿ ಸಂಸ್ಥೆಯೊಂದಿಗೆ ಉತ್ತಮ ಹಾಗೂ ನಿಕಟ ಬಾಂಧವ್ಯವನ್ನು ಹೊಂದಿದ್ದಾರೆ. 1999ರಿಂದ ಐಐಟಿ ಬಾಂಬೆಯ ಹೆರಿಟೇಜ್ ಫೌಂಡೇಷನ್‌ನಲ್ಲಿ ಸದಸ್ಯರಾಗಿದ್ದಾರೆ.


Click it and Unblock the Notifications