ಕಾಲೇಜಿನಲ್ಲಿ ಓದುವಾಗಲೇ ವಿವಾಹವಾಗಿ ತಾಯಿಯಾಗುವ ಜೀವನದ ಅನುಭವ ಪಡೆದ ಮಹಿಳೆ ಏಕಾಂಗಿಯಾಗಿಯೇ ವ್ಯಾಪಾರ ಸಾಮ್ರಾಜ್ಯ ಕಟ್ಟುವವರೆಗೆ ಬೆಳೆದು ನಿಂತಿದ್ದಾರೆ. ಇವರು ಬೇರೆ ಯಾರೂ ಅಲ್ಲ, ಗಾರ್ಮೆಂಟ್ ಡಿಸೈನರ್ ನೀಲಮ್ ಮೋಹನ್.
ಶಿಕ್ಷಣ ಪಡೆಯುತ್ತಿರುವಾಗಲೇ ವಿವಾಹವಾದ ನೀಲಮ್ 10-15 ವರ್ಷದೊಳಗೆ ಗಂಡನಿಂದ ಪ್ರತ್ಯೇಕವಾದರು. ಆದರೆ ತನ್ನ ಜೀವನದ ಗುರಿಯನ್ನು ತಲುಪುದೇ ಮುಖ್ಯ ಎಂದುಕೊಂಡು ದುಡಿದು ಈಗ ಮೂರು ಸಾವಿರಕ್ಕೂ ಅಧಿಕ ಮಂದಿಗೆ ಉದ್ಯೋಗ ನೀಡುವಷ್ಟು ದೊಡ್ಡ ಸಂಸ್ಥೆಯನ್ನೇ ಕಟ್ಟಿಕೊಂಡಿದ್ದಾರೆ.
1993 ರಲ್ಲಿ ನಾಲ್ಕು ಟೈಲರ್‌ಗಳೊಂದಿಗೆ ಸೇರಿ ಅತ್ಯುತ್ತಮ ಗಾರ್ಮೆಂಟ್ ಡಿಸೈನ್‌ಗಳನ್ನು ತಯಾರಿ ಮಾಡುವ ವ್ಯಾಪಾರ ಆರಂಭ ಮಾಡಿದ ನೀಲಮ್ ಮೋಹನ್ ಈಗ ಗ್ನೋಲಿಯಾ ಮಾರ್ಟ್ನಿಕ್ ಕ್ಲೋಥಿಂಗ್ ಪ್ರೈವೇಟ್ ಲಿಮಿಟೆಡ್ ಎಂಬ ದೊಡ್ಡ ಗಾರ್ಮೆಟ್ ಸಂಸ್ಥೆಯನ್ನೇ ಬೆಳೆಸಿದ್ದಾರೆ.
ಇದು ಮೂರು ಸಾವಿರ ಜನರಿಗೆ ಉದ್ಯೋಗವನ್ನು ನೀಡಿದೆ. ಸುಮಾರು 130 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದೆ. ಯಾರಿಕೆ ನೀಲಮ್ ಮೋಹನ್, ವ್ಯಾಪಾರವನ್ನು ಹೇಗೆ ವಿಸ್ತರಣೆ ಮಾಡಿಕೊಂಡರು?, 3000 ರೂಪಾಯಿ ಸಂಬಳ ಪಡೆಯುತ್ತಿದ್ದವರು ಈಗ 130 ಕೋಟಿ ರೂಪಾಯಿ ಸಂಪತ್ತಿನ ಒಡತಿಯಾಗಿದ್ದು ಹೇಗೆ, ನೀಲಮ್ ಮೋಹನ್ ವ್ಯಕ್ತಿಚಿತ್ರ ಇಲ್ಲಿದೆ ಮುಂದೆ ಓದಿ...
ಕಾಲೇಜು ಕಲಿಯುತ್ತಿದ್ದಾಗಲೇ ವಿವಾಹ
ಹಿಂದೂ ವಿಶ್ವವಿದ್ಯಾನಿಲಯದಲ್ಲಿ ನೀಲಮ್ ಮೋಹನ್ ಬಿಎ ಪದವಿಯನ್ನು ಪಡೆದಿದ್ದಾರೆ. ಬಿಎ ಪದವಿ ಪಡೆಯುತ್ತಿರುವಾಗ ಮೂರನೇ ವರ್ಷದಲ್ಲಿಯೇ ವಿವಾಹವಾಗಿದ್ದಾರೆ. ತನ್ನ 21 ನೇ ವಯಸ್ಸಿನಲ್ಲಿ ಐಐಟಿ-ಎಂಬಿಎ ವೃತ್ತಿಪರ ಅಮಿತ್ ಮೋಹನ್‌ರನ್ನು ವಿವಾಹವಾಗಿದ್ದಾರೆ. 1977ರಲ್ಲಿ ವಿವಾಹವಾಗಿದ್ದು, 1991ರಲ್ಲಿ ಪತಿಯಿಂದ ಬೇರ್ಪಟ್ಟಿದ್ದಾರೆ. ಆ ಸಂದರ್ಭದಲ್ಲಿ ಜೀವನದಲ್ಲಿ ಸಾಕಷ್ಟು ಕಷ್ಟ ಕಂಡಿದ್ದಾರೆ. ಕೆಲವು ಭಿನ್ನಾಭಿಪ್ರಾಯದಿಂದ ತನ್ನ ಸ್ವಂತ ಉದ್ಯಮವನ್ನೇ ನಿಲ್ಲಿಸಬೇಕಾಯಿತು. ಆ ಬಳಿಕ ಮಾರ್ಟ್ನಿಕ್ ಕ್ಲೋಥಿಂಗ್ ಪ್ರೈವೇಟ್ ಲಿಮಿಟೆಡ್ ಎಂಬ ದೊಡ್ಡ ಸಂಸ್ಥೆಯನ್ನೇ ಕಟ್ಟಿ ಬೆಳೆಸಿದ್ದಾರೆ.
ತಿಂಗಳಿಗೆ ಮೂರು ಸಾವಿರ ಸಂಬಳ ಪಡೆಯುತ್ತಿದ್ದ ನೀಲಮ್
ಪ್ರಸ್ತುತ 62 ವರ್ಷ ಪ್ರಾಯದ ನೀಲಮ್ ತನ್ನ ಪತಿಯೊಂದಿಗೆ ದೆಹಲಿಗೆ ಹೋದಾಗ, ತನ್ನ ಮೊದಲ ನೆರೆ ಮನೆಯವರು ಡಿಸೈನರ್ ಆಗಿದ್ದರು ಎಂದು ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. "ನಾನು ಯುಪಿ ಎಕ್ಸ್‌ಪೋರ್ಟ್ ಕಾರ್ಪೋರೇಷನ್‌ಗಾಗಿ ಪುರುಷರ ಉಡುಪಿಗೆ ಕೆಲವು ವಿನ್ಯಾಸವನ್ನು ಮಾಡಿದ್ದೇನೆ. ಅದರ ಪ್ರಚಾರ ಕೂಡಾ ಮಾಡಲಾಗುತ್ತಿತ್ತು. ನನಗೆ ಈ ಡಿಸೈನಿಂಗ್ ಕಾರ್ಯಕ್ಕೆ ಮೂರು ಸಾವಿರ ರೂಪಾಯಿ ಪಾವತಿ ಮಾಡಲಾಗುತ್ತಿತ್ತು," ಎಂದು ನೀಲಮ್ ತಿಳಿಸಿದ್ದಾರೆ.
ಜರ್ಮನ್ ಕ್ಲೈಂಟ್ ಸ್ಟೀಲ್ಮನ್‌ರಿಂದ ಮೆಚ್ಚುಗೆ
1977 ರಲ್ಲಿ ನರೈನಾದಲ್ಲಿ ಕಾನಿ ಫ್ಯಾಶನ್ಸ್ ಸಂಸ್ಥೆಗಾಗಿ ಕಾರ್ಯನಿರ್ವಹಣೆಯನ್ನು ನೀಲಮ್ ಆರಂಭ ಮಾಡಿದರು. ಆಗ ಅವರಿಗೆ 22 ವರ್ಷ ವಯಸ್ಸಾಗಿತ್ತು. 1978 ರಲ್ಲಿ, ತಾನು ಬಸರಿಯಾದ ಕಾರಣದಿಂದಾಗಿ ಬಸ್‌ನಲ್ಲಿ ಪ್ರಯಾಣ ಮಾಡಲು ಸಾಧ್ಯವಾಗದೆ ಕೆಲಸ ಬಿಡಬೇಕಾಯಿತು. ಆದರೆ ಆ ಸಂಸ್ಥೆಯ ಅಧ್ಯಕ್ಷರು ನೀಲಮ್ ಒಂಬತ್ತು ತಿಂಗಳ ಬಸರಿಯಾಗುವರೆಗೂ ಪಿಕ್‌ಅಪ್ ಹಾಗೂ ಡ್ರಾಪ್‌ಗಾಗಿ ಕಾರನ್ನು ಕಳುಹಿಸುತ್ತಿದ್ದರು. ನೀಲಮ್ ವಿನ್ಯಾಸವನ್ನು ಜರ್ಮನ್ ಕ್ಲೈಂಟ್ ಸ್ಟೀಲ್ಮನ್, ಆಸ್ಟ್ರೇಲಿಯಾದ ಖರೀದಿದಾರ ಆಲಿಸ್ ಮತ್ತು ಇತರರು ಮೆಚ್ಚಿದ್ದಾರೆ.
ಕಂಪನಿಯನ್ನು ತೊರೆದ ನೀಲಮ್
ಆಸ್ಟ್ರೇಲಿಯಾದ ಖರೀದಿದಾರ ಆಲಿಸ್ ಅವರ 50,000 ರೂಪಾಯಿ ಅಡ್ವಾನ್ಸ್ ಹಣದಿಂದ ಸ್ನೇಹಿತ ಹರ್ಮಿಂದರ್ ಸಲ್ಧಿ ಜೊತೆ ಸೇರಿ ನೀಲಮ್ ಶೀಘ್ರದಲ್ಲೇ ತಮ್ಮ ಸ್ವಂತ ಉದ್ಯಮವನ್ನು ಪ್ರಾರಂಭಿಸಿದರು. 1983 ರಲ್ಲಿ ಅವರು ಮತ್ತು ಮಾಜಿ ಸಹೋದ್ಯೋಗಿ ಸುಶೀಲ್ ಕುಮಾರ್ ಜೊತೆಯಾಗಿ ಪೇರಾ ಹೌಸ್ ಪ್ರೈವೇಟ್ ಲಿಮಿಟೆಡ್ ಅನ್ನು ಪ್ರಾರಂಭಿಸಿದರು. ಮೊದಲ ವರ್ಷದ ವಹಿವಾಟು 15 ಲಕ್ಷ ರೂಪಾಯಿದ್ದು ಆಗಿತ್ತು. ಪ್ರತಿ ವರ್ಷವೂ ಇದು ದ್ವಿಗುಣವಾಗುತ್ತಾ ಹೋಯಿತು. ಆದರೆ 1991 ರಲ್ಲಿ ತನ್ನ ಪತಿಯಿಂದ ದೂರವಾದ ಬಳಿಕ ಹಲವಾರು ಸಮಸ್ಯೆಗಳು ಎದುರಾಯಿತು. 1992 ರಲ್ಲಿ, ಹರ್ಮಿಂದರ್ ಮತ್ತು ಸುಶೀಲ್ ಅವರೊಂದಿಗಿನ ಭಿನ್ನಾಭಿಪ್ರಾಯದ ಕಾರಣದಿಂದಾಗಿ ಕಂಪನಿಯ ಸುಮಾರು ರೂಪಾಯಿ 3 ಕೋಟಿಯ ಷೇರುಗಳನ್ನು ಮಾರಾಟ ಮಾಡುವ ಮೂಲಕ ಕಂಪನಿಯನ್ನು ತೊರೆದರು.
ಮ್ಯಾಗ್ನೋಲಿಯಾ ಬ್ಲಾಸಮ್ ಪ್ರಾರಂಭಿಸಿದ ನೀಲಮ್
1993, ನೀಲಮ್ ನಾಲ್ಕು ಟೈಲರ್‌ಗಳು ಮತ್ತು ಬೆರಳೆಣಿಕೆಯಷ್ಟು ಇತರ ಉದ್ಯೋಗಿಗಳೊಂದಿಗೆ ಮ್ಯಾಗ್ನೋಲಿಯಾ ಬ್ಲಾಸಮ್ ಅನ್ನು ಪ್ರಾರಂಭಿಸಿದರು. 1992ರಲ್ಲಿ ಪಂಚಶೀಲ್ ಪಾರ್ಕ್‌ನಲ್ಲಿ ರೂಪಾಯಿ 1 ಕೋಟಿ 40 ಲಕ್ಷ ಮೌಲ್ಯದ ಮನೆಯನ್ನು ಖರೀದಿಸಿ, ಅದನ್ನು ದಿನವಿಡೀ ದುಡಿಯುವ, ಅಲ್ಲೇ ಊಟ ಮಾಡುವ ಅಲ್ಲಿಯೇ ನಿದ್ದೆ ಮಾಡುವ ಕಾರ್ಖಾನೆಯನ್ನಾಗಿ ಮಾರ್ಪಡು ಮಾಡಿದರು. ಮತ್ತೆ, 2002 ರಲ್ಲಿ, ಈ ಸಂಸ್ಥೆಯು ನಷ್ಟವನ್ನು ಕಂಡಿತು. 2002 ರ ಹೊತ್ತಿಗೆ ದಿವಾಳಿತನಕ್ಕೆ ಸಮೀಪವಾದರು. ಆದರೆ ಈ ಸಂದರ್ಭದಲ್ಲಿ ಅವರ ಸ್ನೇಹಿತ, ರಫ್ತುದಾರ ನೀಲಮ್ ಸಹಾಯಕ್ಕೆ ಬಂದಿದ್ದಾರೆ. ಸಂಸ್ಥೆ ಕೆಲಸವನ್ನು ಹೊರಗುತ್ತಿಗೆ ನೀಡಲು ಆರಂಭಿಸಿದರು.
ತಾಯಿಯ ಕೈಜೋಡಿಸಿದ ಪುತ್ರ
ಒಂದು ವರ್ಷದೊಳಗೆ, ಆಕೆಯ ಮಗ ಸಿದ್ಧಾರ್ಥ್ ಯುಎಸ್‌ನಿಂದ ವಾಪಾಸ್ ಬಂದಾಗ ತನ್ನ ತಾಯಿ 3 ಗಂಟೆಯವರೆಗೆ ಕೆಲಸ ಮಾಡುತ್ತಿದ್ದುದನ್ನು ನೋಡಿ, ತಾಯಿಯ ಸಹಾಯಕ್ಕೆ ಮುಂದಾದರು. ಹೊಸ ಕೌಶಲ್ಯ ಮತ್ತು ಆಧುನಿಕ ದೃಷ್ಟಿಕೋನದೊಂದಿಗೆ ಕಳೆದ ಒಂದು ದಶಕದಲ್ಲಿ ರೂಪಾಯಿ 30 ಕೋಟಿಯ ಸಂಸ್ಥೆಯನ್ನು ರೂಪಾಯಿ 130 ಕೋಟಿ ಸಂಪತ್ತಿನಷ್ಟು ದೊಡ್ಡ ಉದ್ಯಮವನ್ನಾಗಿಸಿದರು. ಪ್ರಸ್ತುತ, ಸಿದ್ಧಾರ್ಥ್ ಮತ್ತು ಅವರ ಪತ್ನಿ ಪಲ್ಲವಿ ಮ್ಯಾಗ್ನೋಲಿಯಾ ಮಾರ್ಟ್ನಿಕ್ ಕ್ಲೋಥಿಂಗ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ನಿರ್ದೇಶಕರಾಗಿದ್ದಾರೆ. ಕಛೇರಿಯು ನೋಯ್ಡಾದಲ್ಲಿ ಇನ್ನೊಂದು ಕಾರ್ಖಾನೆ ಆರಂಭಕ್ಕೆ ಮುಂದಾಗಿದೆ. ನೀಲಮ್ 2009 ರಿಂದ ಪಂಚವಟಿ ಎಂಬ ಹಿರಿಯ ನಾಗರಿಕರ ಆಶ್ರಮವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಸ್ಥಳದಲ್ಲಿ ವೃದ್ಧರಿಗೆ ಅತ್ಯಾಧುನಿಕ ಸೌಲಭ್ಯ ಒದಗಿಸುತ್ತದೆ.


Click it and Unblock the Notifications