ವಿಶ್ವದ ಅತೀ ಶ್ರೀಮಂತ ಕುಟುಂಬಗಳ ಪಟ್ಟಿಯಲ್ಲಿ ಅಂಬಾನಿ ಕುಟುಂಬ ಕೂಡಾ ಒಂದಾಗಿದೆ. ಮುಕೇಶ್ ಅಂಬಾನಿ, ನೀತಾ ಅಂಬಾನಿ, ಆಕಾಶ್ ಅಂಬಾನಿ, ಇಶಾ ಅಂಬಾನಿ, ಅನಂತ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾರನ್ನು ಸೇರಿದ ಈ ಕುಟುಂಬವು ಐಷಾರಾಮಿ ಜೀವನ ಶೈಲಿಗೂ ಹೆಸರುವಾಸಿಯಾಗಿದೆ.
ಕುಟುಂಬದ ಸದಸ್ಯರಿಗೆ ಉಡುಗೊರೆ ನೀಡುವ ವಿಚಾರಕ್ಕೆ ಬಂದಾಗ ಅಂಬಾನಿ ಕುಟುಂಬವು ಅತೀ ದುಬಾರಿ ಉಡುಗೊರೆ ನೀಡುವುದರಲ್ಲೇ ಹೆಚ್ಚು ಸುದ್ದಿಯಾಗುತ್ತಾ ಬಂದಿದೆ. 2019 ರಲ್ಲಿ, ನೀತಾ ಅಂಬಾನಿ ತನ್ನ ಸೊಸೆ ಶ್ಲೋಕಾ ಮೆಹ್ತಾಗೆ ವಿಶ್ವದ ಅತ್ಯಂತ ದುಬಾರಿ ನೆಕ್ಲೇಸ್‌ಗಳಲ್ಲಿ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ. 'ಮೌವಾದ್ ಎಲ್ ಇನ್‌ಕಂಪರೇಬಲ್' ಎಂದು ಕರೆಯಲಾಗುವ ಈ ನೆಕ್ಲೇಸ್ ಬೆಲೆ 451 ಕೋಟಿ ರೂಪಾಯಿ ಆಗಿದೆ.

ಇನ್ನೊಂದೆಡೆ ಮುಕೇಶ್ ಅಂಬಾನಿ ನೀತಾ ಅಂಬಾನಿಯ 44 ನೇ ಹುಟ್ಟುಹಬ್ಬಕ್ಕೆ 240 ಕೋಟಿ ರೂಪಾಯಿಗಳ ಎ319 ಐಷಾರಾಮಿ ಜೆಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಲೇಖನದಲ್ಲಿ ಅಂಬಾನಿ ಕುಟುಂಬವು ವಿವಿಧ ಕುಟುಂಬ ಸದಸ್ಯರಿಗೆ ಹಲವಾರು ವರ್ಷಗಳಿಂದ ನೀಡುತ್ತಾ ಬಂದಿರುವ ಉಡುಗೊರೆಗಳ ಬಗ್ಗೆ ನಾವಿಲ್ಲಿ ವಿವರಿಸಿದ್ದೇವೆ, ಮುಂದೆ ಓದಿ...
ಸೊಸೆಗೆ ನೀತಾ ಅಂಬಾನಿ ನೀಡಿದ ಉಡುಗೊರೆ
2019 ರಲ್ಲಿ ಶ್ಲೋಕಾ ಮೆಹ್ತಾ ಆಕಾಶ್ ಅಂಬಾನಿಯನ್ನು ಮದುವೆಯಾದಾಗ, ನೀತಾ ಅಂಬಾನಿ ತನ್ನ ಸೊಸೆ ಶ್ಲೋಕಾ ಮೆಹ್ತಾಗೆ ವಿಶ್ವದ ಅತ್ಯಂತ ದುಬಾರಿ ನೆಕ್ಲೇಸ್‌ಗಳಲ್ಲಿ ಒಂದಾದ ಮೌವಾಡ್ ಎಲ್'ಇನ್‌ಕಂಪ್ಯಾಬಲ್ ನೀಡಿದ್ದಾರೆ. ಇದು 91 ವಜ್ರಗಳನ್ನು ಹೊಂದಿರುವ 451 ಕೋಟಿ ರೂಪಾಯಿಯ ನೆಕ್ಲೇಸ್ ಇದಾಗಿದೆ.
ನೆಕ್ಲೇಸ್ ಅದ್ಭುತವಾದ 407.48 ಕ್ಯಾರೆಟ್ ಹಳದಿ ವಜ್ರವನ್ನು ಹೊಂದಿದೆ. 229.52 ಕ್ಯಾರೆಟ್ ಬಿಳಿ ವಜ್ರವನ್ನು ನೆಕ್ಲೇಸ್ ಹೊಂದಿದೆ. 18 ಕಾರಟ್ ಗುಲಾಬಿ ಚಿನ್ನದ ಕವಲುಗಳು ಇದೆ. 2022 ರಲ್ಲಿ, ನೆಕ್ಲೇಸ್ ಅನ್ನು ಸೋಥೆಬೈಸ್‌ನಲ್ಲಿ ಪ್ರದರ್ಶನ ಮಾಡಲಾಗಿದೆ. ಅಂದಿನಿಂದ ಮಾರುಕಟ್ಟೆಯಿಂದ ಹೊರಗುಳಿದಿದೆ.
ನೀತಾ ಅಂಬಾನಿಗೆ ಖಾಸಗಿ ಜೆಟ್ ಉಡುಗೊರೆ ನೀಡಿದ ಮುಕೇಶ್
2007 ರಲ್ಲಿ, ತನ್ನ ಪತ್ನಿ ನೀತಾ ಅಂಬಾನಿಯ 44 ನೇ ಹುಟ್ಟುಹಬ್ಬದಂದು, ರಿಲಯನ್ಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಏರ್‌ಬಸ್ (ಎ319) ಐಷಾರಾಮಿ ಖಾಸಗಿ ಜೆಟ್ ಅನ್ನು ಉಡುಗೊರೆಯಾಗಿ ನೀಡಿದರು. ಖಾಸಗಿ ಜೆಟ್ ಖರೀದಿಗೆ ಮುಕೇಶ್ ಅಂಬಾನಿ 240 ಕೋಟಿ ರೂಪಾಯಿಯನ್ನು ಪಾವತಿಸಿದ್ದಾರೆ.
ನೀತಾ ಅಂಬಾನಿಗೆ ರೋಲ್ಸ್ ರಾಯ್ಸ್ ಕಲಿನನ್ ಉಡುಗೊರೆ
ಮುಕೇಶ್ ಅಂಬಾನಿ ಇತ್ತೀಚೆಗೆ ನೀತಾ ಅಂಬಾನಿಗೆ 10 ಕೋಟಿ ರೂಪಾಯಿಗಳ ರೋಲ್ಸ್ ರಾಯ್ಸ್ ಕಲಿನನ್ ಬ್ಲಾಕ್ ಬ್ಯಾಡ್ಜ್ ಎಸ್‌ಯುವಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಕಾರ್ಟೊಕ್ ವರದಿಯ ಪ್ರಕಾರ, ದೀಪಾವಳಿಗೆ ಮುಂಚಿತವಾಗಿ ಮುಕೇಶ್ ಅಂಬಾನಿ ತನ್ನ ಪತ್ನಿ ನೀತಾ ಅಂಬಾನಿಗೆ 10 ಕೋಟಿ ರೂಪಾಯಿಗಳ ಎಸ್‌ಯುವಿ ಯನ್ನು ಉಡುಗೊರೆಯಾಗಿ ನೀಡಿದ್ದಾರೆ. ನೀತಾ ಅಂಬಾನಿಯವರ ಹೊಸ ರೋಲ್ಸ್ ರಾಯ್ಸ್ ಈಗ ಭಾರತದ ಅತ್ಯಂತ ದುಬಾರಿ ಕಾರು ಉಡುಗೊರೆಯಾಗಿದೆ.
ನಿಶ್ಚಿತಾರ್ಥದಂದು ಅನಂತ್ ಅಂಬಾನಿಗೆ ಉಡುಗೊರೆ
ಜನವರಿ 19, 2023 ರಂದು, ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ತಮ್ಮ ದೀರ್ಘಕಾಲದ ಗೆಳತಿ ರಾಧಿಕಾ ಮರ್ಚೆಂಟ್‌ರನ್ನು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮುಂಬೈನಲ್ಲಿರುವ ಅವರ ಮನೆ 'ಆಂಟಿಲಿಯಾ'ದಲ್ಲಿ ನಿಕಟ ಸ್ನೇಹಿತರು ಮತ್ತು ಕುಟುಂಬದ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು.
ಆಕಾಶ್ ಅಂಬಾನಿಗೆ 13,218,876 ರೂಪಾಯಿ ಮೌಲ್ಯದ 18K ಪ್ಯಾಂಥೆರೆ ಡಿ ಕಾರ್ಟಿಯರ್ ಬ್ರೂಚ್ ಅನ್ನು ಉಡುಗೊರೆಯಾಗಿ ನೀಡಿದರು. ಮತ್ತೊಂದೆಡೆ, ಮುಕೇಶ್ ಅಂಬಾನಿ ಅವರು ತಮ್ಮ ಕಿರಿಯ ಮಗನಿಗೆ ಬೆಂಟ್ಲಿ ಕಾಂಟಿನೆಂಟಲ್ ಜಿಟಿಸಿ ಸ್ಪೀಡ್ ಅನ್ನು ಉಡುಗೊರೆಯಾಗಿ ನೀಡಿದರು. ಈ ಐಷಾರಾಮಿ ಕಾರಿನ ಬೆಲೆ 4.5 ಕೋಟಿ ರೂಪಾಯಿ ಎಂದು ವರದಿಗಳು ತಿಳಿಸಿವೆ.


Click it and Unblock the Notifications