ದೇಶದ ಅತೀ ದೊಡ್ಡ ಉದ್ಯಮಿಗಳ ಪೈಕಿ ಮುಕೇಶ್ ಅಂಬಾನಿ ಕೂಡಾ ಒಬ್ಬರಾಗಿದ್ದಾರೆ. ದೇಶದ ಅತೀ ದೊಡ್ಡ ಶ್ರೀಮಂತ ವ್ಯಕ್ತಿ ಕೂಡಾ ಹೌದು. ಮುಕೇಶ್ ಅಂಬಾನಿಯ ಪತ್ನಿ ದೇಶದಲ್ಲಿ ಅತೀ ಸುಂದರವಾಗಿ ಮಹಿಳಾ ಉದ್ಯಮಿ ಆಗಿದ್ದಾರೆ. ನೀತಾ ಅಂಬಾನಿ ಮುಂಬೈ ಇಂಡಿಯನ್ಸ್ ತಂಡವನ್ನು ನಿರ್ವಹಣೆ ಮಾಡುತ್ತಾರೆ. ಹಾಗೆಯೇ ಜನಸೇವೆ ಮಾಡುವ ಮೂಲಕವೂ ಹೆಸರುವಾಸಿಯಾಗಿದ್ದಾರೆ. ಆದರೆ ಇವರ ಮೇಕಪ್ ಆರ್ಟಿಸ್ಟ್ ವೇತನ ಕೇಳಿದ್ರೆ ನೀವು ಬೆಚ್ಚಿ ಬೀಳಬಹುದು.
ನೀತಾ ಅಂಬಾನಿ ಎಷ್ಟು ಸುಂದರವಾಗಿದ್ದಾರೋ ಹಾಗೆಯೇ ಅವರಿಗೆ ಮೂವರು ಸ್ಟೈಲಿಶ್ ಮಕ್ಕಳು ಇದ್ದಾರೆ, ಹಾಗೆಯೇ ಇಬ್ಬರು ಸೊಸೆಯಂದಿರನ್ನು ಹೊಂದಿದ್ದಾರೆ. ನೀತಾ ಅಂಬಾನಿಗೆ ಪ್ರಸ್ತುತ 59 ವರ್ಷವಾಗಿದ್ದರೂ ಕೂಡಾ ಇಂದಿಗೂ ತನ್ನ ಸೌದರ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ. ಹಾಗೆಯೇ ಎಲ್ಲ ಚಟುವಟಿಕೆಯಲ್ಲಿ ಭಾಗಿಯಾಗುತ್ತಾರೆ. ಕುಟುಂಬ ಹಾಗೂ ಬೇರೆ ಯಾವುದೇ ಬ್ಯುಜಿನೆಟ್ ಪಾರ್ಟಿಗಳಿಗೆ ನೀತಾ ಅಂಬಾನಿ ಸುಂದರವಾಗಿ ತಯಾರಾಗುತ್ತಾರೆ.

ನೀತಾ ಅಂಬಾನಿಯ ಈ ಸುಂದರ ಲುಕ್ ಹಿಂದೆ ನೀತಾ ಅಂಬಾನಿಯವರ ಮೇಕಪ್ ಆರ್ಟಿಸ್ಟ್ ಮಿಕ್ಕಿ ಕಾಂಟ್ರಾಕ್ಟರ್ ಇದ್ದಾರೆ. ಇನ್ನು ನೀತಾ ಅಂಬಾನಿಯ ಮಗಳು ಇಶಾ ಅಂಬಾನಿ ಹಾಗೂ ಸೊಸೆ ಶ್ಲೋಕ ಅಂಬಾನಿ ಕೂಡಾ ಮಿಕ್ಕಿ ಕಾಂಟ್ರಾಕ್ಟರ್ ಬಳಿಯೇ ಮೇಕಪ್ ಮಾಡಿಸಿಕೊಳ್ಳುತ್ತಾರೆ. ಅಷ್ಟಕ್ಕೂ ಈ ಫೇಮಸ್ ಮೇಕಪ್ ಆರ್ಟಿಸ್ಟ್ ಮಿಕ್ಕಿ ಕಾಂಟ್ರಾಕ್ಟರ್ ವೇತನ ಕೇಳಿದ್ರೆ ನೀವು ಬೆರಗಾಗುವುದು ಖಂಡಿತ.
ನೀತಾ ಅಂಬಾನಿ ಮೇಕಪ್ ಆರ್ಟಿಸ್ಟ್ ವೇತನ
ಮಿಕ್ಕಿ ಕಾಂಟ್ರಾಕ್ಟರ್ ಸೆಲೆಬ್ರೆಟಿಗಳ ಮೇಕಪ್ ಆರ್ಟಿಸ್ಟ್ ಆಗಿದ್ದಾರೆ. ಹಮ್ ಆಪ್ಕೆ ಹೇ ಕೌನ್, ದಿಲ್ ತೊ ಪಾಗಲ್ ಹೇ, ಕುಚ್ ಕುಚ್ ಹೋತಾ ಹೇ, ಕಬಿ ಖುಷಿ ಕಬಿ ಗಮ್, ಕಲ್ ಹೊ ನಾ ಹೊ, ಮೊಹಾಬತೆ, ಮೈ ನೇಮ್ ಇಸ್ ಖಾನ್, ಕಾರ್ತಿಕ್ ಕಾಲಿಂಗ್ ಕಾರ್ತಿಕ್, ಡಾನ್, ವೀರೆ ದಿ ವೆಡ್ಡಿಂಗ್, ಗುಡ್ ನ್ಯೂಸ್, ಇಂಗ್ಲೀಷ್ ಮೀಡಿಯಂ ಮೊದಲಾದ ಸಿನಿಮಾಗಳಲ್ಲಿ ಮಿಕ್ಕಿ ಕಾಂಟ್ರಾಕ್ಟರ್ ಮೇಕಪ್ ಆರ್ಟಿಸ್ಟ್ ಆಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
ಮಿಕ್ಕಿ ಕಾಂಟ್ರಾಕ್ಟರ್ ಗ್ರಾಹಕರ ಪಟ್ಟಿಯಲ್ಲಿ ಕರೀನಾ ಕಪೂರ್, ದೀಪಿಕಾ ಪಡುಕೋಣೆ, ಐಶ್ವರ್ಯಾ ರೈ, ಅನುಷ್ಕಾ ಶರ್ಮಾ ಹೆಸರು ಕೂಡಾ ಇದೆ. ಮಿಕ್ಕಿ ನೀತಾ ಅಂಬಾನಿಯ ವೈಯಕ್ತಿಕ ಮೇಕಪ್ ಆರ್ಟಿಸ್ಟ್ ಆಗಿದ್ದಾರೆ. ಅಷ್ಟಕ್ಕೂ ಎಲ್ಲರೂ ಮಿಕ್ಕಿ ಸೇವೆಯನ್ನು ಪಡೆಯಲು ಸಾಧ್ಯವಾಗದು. ಯಾಕೆಂದರೆ ಪ್ರತಿ ದಿನಕ್ಕೆ ಓರ್ವ ವ್ಯಕ್ತಿಗೆ 75000 ರೂಪಾಯಿಯಿಂದ 1 ಲಕ್ಷ ರೂಪಾಯಿವರೆಗೆ ಶುಲ್ಕವನ್ನು ಮಿಕ್ಕಿ ವಿಧಿಸುತ್ತಾರೆ. ಸಿಇಒಗಳಿಗಿಂತ ಅಧಿಕ ವೇತನವನ್ನು ಪಡೆಯುತ್ತಾರೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಚಿನ್ನದ ಬೆಲೆ ಇಂದು ಏರಿಕೆ? ಖರೀದಿಸುವ ಮುನ್ನ ಇದನ್ನು ನೋಡಿ



Click it and Unblock the Notifications