ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ವೈರಸ್ ವಿರುದ್ಧ ಹೋರಾಟ ಮಾಡಲು ಜಗತ್ತಿಗೆ ಸಹಾಯ ಮಾಡಿದ ಎಂಆರ್‌ಎನ್‌ಎ ಸಂಶೋಧನೆಯ ಇಬ್ಬರು ಪ್ರವರ್ತಕರಿಗೆ ಸೋಮವಾರ ವೈದ್ಯಕೀಯ ಅಥವಾ ಶರೀರಶಾಸ್ತ್ರದ ವಿಭಾಗದಲ್ಲಿ 2023 ರ ನೊಬೆಲ್ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಎಂಆರ್ ಎನ್ಎ ಕೋವಿಡ್ ಲಸಿಕೆಯ ಆವಿಷ್ಕಾರಕ್ಕೆ ಈ ಕ್ಯಾಟಲಿನ್ ಕಾರಿಕ್ ಮತ್ತು ಡ್ರೂ ವೈಸ್‌ಮನ್ ಗೆ ನೀಡಲಾಗುತ್ತಿದೆ.
1901 ರಿಂದ, ನೊಬೆಲ್ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಆವಿಷ್ಕಾರಕ ಆಲ್ಫ್ರೆಡ್ ನೊಬೆಲ್ ಆಶಯಗಳಿಗೆ ಅನುಗುಣವಾಗಿ ಜಗತ್ತಿನ ಪ್ರಗತಿಗೆ ಕಾರಣವಾದ ಕಾರ್ಯಕ್ಕಾಗಿ ನೊಬೆಲ್ ಪ್ರಶಸ್ತಿಗಳನ್ನು ಸಾಧನೆ ಮಾಡಿದ ಜನರು ಮತ್ತು ಸಂಸ್ಥೆಗಳಿಗೆ ನೀಡಲಾಗುತ್ತದೆ. ಈ ವರ್ಷದ ಬಹುಮಾನಗಳ ವಿಜೇತರನ್ನು ಸೋಮವಾರ, ಅಕ್ಟೋಬರ್ 2 ರಿಂದ ಅಕ್ಟೋಬರ್ 9 ರವರೆಗೆ ಪ್ರತಿದಿನ ಪ್ರಕಟಿಸಲಾಗುತ್ತದೆ.

ನೊಬೆಲ್ ಪ್ರಶಸ್ತಿ ಮೊತ್ತವೆಷ್ಟು ಗೊತ್ತಾ?
ಈ ವರ್ಷದ ನೊಬೆಲ್ ಪ್ರಶಸ್ತಿಗಳ ವಿಜೇತರು ಹೆಚ್ಚುವರಿ 1 ಮಿಲಿಯನ್ ಕ್ರೌನ್‌ಗಳನ್ನು (ಕರೆನ್ಸಿ) ಪಡೆಯುತ್ತಾರೆ. ಒಟ್ಟಾಗಿ 11 ಮಿಲಿಯನ್ ಸ್ವೀಡಿಷ್ ಕ್ರೌನ್ ಲಭ್ಯವಾಗುತ್ತದೆ. ಅಂದರೆ ಸರಿಸುಮಾರು 986,000 ಡಾಲರ್ ಮೊತ್ತವನ್ನು ನೊಬೆಲ್ ಪ್ರಶಸ್ತಿ ವಿಜೇತರು ಈ ವರ್ಷ (2023) ಪಡೆಯುತ್ತಾರೆ.
ಪ್ರಶಸ್ತಿಗಳನ್ನು ನಿರ್ವಹಿಸುವ ನೊಬೆಲ್ ಫೌಂಡೇಶನ್ ಈ ಬಗ್ಗೆ ಸೆಪ್ಟೆಂಬರ್ 15ರಂದು ಮಾಹಿತಿ ನೀಡಿದೆ. ಇತ್ತೀಚಿನ ವರ್ಷಗಳಲ್ಲಿ ಬಹುಮಾನದ ಹಣವನ್ನು ಏರಿಕೆ, ಇಳಿಕೆ ಮಾಡಲಾಗುತ್ತಿದೆ. ಫೌಂಡೇಶನ್‌ನ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಮೊತ್ತವನ್ನು ಬದಲಾವಣೆ ಮಾಡಲಾಗುತ್ತದೆ ಎಂದು ಪ್ರಶಸ್ತಿ ನೀಡುವವರು ಹೇಳಿದ್ದಾರೆ.
2012 ರಲ್ಲಿ, ಫೌಂಡೇಶನ್ ತನ್ನ ಆರ್ಥಿಕ ಸ್ಥಿತಿಯನ್ನು ನೋಡಿಕೊಂಡು ಬಹುಮಾನದ ಮೊತ್ತವನ್ನು 10 ಮಿಲಿಯನ್ ಕ್ರೌನ್‌ನಿಂದ 8 ಮಿಲಿಯನ್ ಕ್ರೌನ್‌ಗೆ ಇಳಿಕೆ ಮಾಡಲಾಗಿದೆ. ಬಹುಮಾನದ ಮೊತ್ತವನ್ನು 2017 ರಲ್ಲಿ 9 ಮಿಲಿಯನ್ ಕ್ರೌನ್‌ಗೆ ಹೆಚ್ಚಿಸಲಾಗಿದೆ. 2020 ರಲ್ಲಿ 10 ಮಿಲಿಯನ್ ಕ್ರೌನ್‌ಗೆ ಹೆಚ್ಚಿಸಲಾಗಿದೆ. 2012 ಕ್ಕಿಂತ ಮೊದಲು ನೊಬೆಲ್ ಪ್ರಶಸ್ತಿ ಮೊತ್ತ 10 ಮಿಲಿಯನ್ ಕ್ರೌನ್ ಆಗಿತ್ತು.
ಕಳೆದ ದಶಕದಲ್ಲಿ, ಸ್ವೀಡಿಷ್ ಕ್ರೌನ್ ಯೂರೋ ವಿರುದ್ಧ ಅದರ ಮೌಲ್ಯದ ಸುಮಾರು ಶೇಕಡ 30 ರಷ್ಟು ಕಳೆದುಕೊಂಡಿದೆ. ಅಂದರೆ ಬಹುಮಾನದ ಮೌಲ್ಯದಲ್ಲಿನ ಇತ್ತೀಚಿನ ಹೆಚ್ಚಳವು ಸ್ವೀಡನ್‌ನ ಹೊರಗಿನ ವಿಜೇತರಿಗೆ ಅಧಿಕ ಮೌಲ್ಯವನ್ನು ನೀಡುವುದಿಲ್ಲ.
1901 ರಲ್ಲಿ ಮೊದಲ ಬಾರಿಗೆ ವಿಜ್ಞಾನ, ಸಾಹಿತ್ಯ ಮತ್ತು ಶಾಂತಿ ಸಾಧನೆಗೆ ನೊಬೆಲ್ ಪ್ರಶಸ್ತಿ ನೀಡಲಾಗಿದೆ. 2013 ರಲ್ಲಿ ಈ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿ ಸ್ವೀಡಿಷ್ ಕರೆನ್ಸಿ ಮೊತ್ತವನ್ನು 8 ಮಿಲಿಯನ್ ಕ್ರೌನ್‌ಗಳಿಗೆ ಕಡಿಮೆ ಮಾಡಲಾಗಿದ್ದರೂ ಕೂಡಾ ಡಾಲರ್‌ಗೆ ಬದಲಾವಣೆ ಮಾಡಿದಾಗ ಸುಮಾರು 1.2 ಮಿಲಿಯನ್ ಡಾಲರ್ ಮೌಲ್ಯದ ಪ್ರಶಸ್ತಿ ಮೊತ್ತ ಲಭ್ಯವಾಗಿದೆ.


Click it and Unblock the Notifications