ಕಳೆದ ಕೆಲವು ವರ್ಷಗಳಿಂದಭಾರತದಲ್ಲಿ ನಾವು ರಿಯಲ್ ಎಸ್ಟೇಟ್ ಇಂಡಸ್ಟ್ರಿಯು ಬೆಳವಣಿಗೆ ಕಾಣುತ್ತಿದೆ. ಜನರು ಪ್ರತ್ಯೇಕ ಮನೆಗಳಿಗಿಂತ ಒಂದು ಅಪಾರ್ಟ್‌ಮೆಂಟ್‌ನಲ್ಲಿರುವ ಮನೆಯಲ್ಲಿ ವಾಸವಾಗುವುದು ಸಾಮಾನ್ಯವಾಗುತ್ತಿದೆ. ಇಂತಹ ಉತ್ತಮ ಸ್ಥಳಗಳಲ್ಲಿ ಅಪಾರ್ಟ್‌ಮೆಂಟ್‌ಗಳ ಬಾಡಿಗೆಯು ಒಂದು ಲಕ್ಷ ರೂಪಾಯಿಯೂ ಕೂಡಾ ಆಗಿರಬಹುದು. ಆದರೆ ಈ ಪೈಕಿ ಒಂದು ಐಷಾರಾಮಿ 1ಬಿಎಚ್‌ಕೆಯ ಬಾಡಿಗೆ ಎಷ್ಟಿದೆ ಎಂದು ತಿಳಿದರೆ ನೀವು ಬೆರಗಾಗುವುದು ಖಂಡಿತ.
ನಾವು ಒಂದು ದೊಡ್ಡ ಅಪಾರ್ಟ್‌ಮೆಂಟ್‌ಗೆ ಒಂದು ಲಕ್ಷ ಬಾಡಿಗೆ ಇರುವುದನ್ನು ನೋಡಿರಬಹುದು. ಆದರೆ ಮುಂಬೈನಲ್ಲಿರುವ ಈ ಅದ್ದೂರಿ, ವಿಸ್ತಾರವಾದ 1ಬಿಎಚ್‌ಕೆಗೆ ಅತೀ ಹೆಚ್ಚು ಬಾಡಿಗೆ ಇದೆ. ಅಷ್ಟಕ್ಕೂ ಇದನ್ನು 1ಬಿಎಚ್‌ಕೆ ಎನ್ನುವುದಕ್ಕಿಂತ ಇದು ಮುಂಬೈನಲ್ಲಿರುವ ಒಂದು ಬೆಡ್ ರೂಮ್ ಹೊಂದಿರುವ ಫ್ಲಾಟ್ ಎಂದರೆ ತಪ್ಪಾಗಲಾರದು ಎಂದು ವರದಿಗಳು ಹೇಳುತ್ತದೆ. ಈ ಭಾರತದ ದುಬಾರಿ 1ಬಿಎಚ್‌ಕೆ ಬಾಡಿಗೆ, ಇತರೆ ವಿವರ ಇಲ್ಲಿದೆ ಮುಂದೆ ಓದಿ...

ಭಾರತದ ದುಬಾರಿ 1ಬಿಎಚ್‌ಕೆ ಬಗ್ಗೆ ತಿಳಿಯಿರಿ
ಸೌತ್ ಬಾಂಬೆಯ ಕಾರ್ಮೈಕಲ್ ರಸ್ತೆಯಲ್ಲಿ ಈ ಫ್ಲಾಟ್ ಇದೆ. ಇದು ಭಾರತದ ಅತ್ಯಂತ ದುಬಾರಿ ಬೀದಿಗಳಲ್ಲಿ ಒಂದಾಗಿದೆ. ಇಲ್ಲಿ ಇರುವ ಬಹುತೇಕ ಎಲ್ಲ ಮನೆಗಳ ಬಾಡಿಗೆ ಅತೀ ದುಬಾರಿಯಾಗಿರುತ್ತದೆ. ಪ್ರಮುಖವಾಗಿ ಈ ಕಾರ್ಮೈಕಲ್ ರಸ್ತೆಯಲ್ಲಿ ಉನ್ನತ ರಾಜಕಾರಣಿಗಳು ಮತ್ತು ಕೆಲವು ಶ್ರೀಮಂತ ಉದ್ಯಮಿಗಳು ವಾಸವಾಗಿದ್ದಾರೆ.
ವರದಿಯೊಂದ ಪ್ರಕಾರ ಈ ನಿರ್ದಿಷ್ಟ 1ಬಿಎಚ್‌ಕೆಯ ಬಾಡಿಗೆದಾರರು ಕುಶ್ ಭಯಾನಿ ಎಂಬ ವಾಸ್ತುಶಿಲ್ಪಿ ಮತ್ತು ಟೆಕ್ ಉದ್ಯಮಿಯಾಗಿದ್ದಾರೆ. ಕುಶ್ ಭಯಾನಿ ಓಪನ್‌ಹಾಸ್‌ನ ಸಹ-ಸಂಸ್ಥಾಪಕರಾಗಿದ್ದಾರೆ. ಓಪನ್‌ಹಾಸ್ "ಮುಂದಿನ ಪೀಳಿಗೆಯ ಆಸ್ತಿ ಸಾಮಾಜಿಕ ವಾಣಿಜ್ಯ ವೇದಿಕೆ" ಎಂದು ಗುರುತಿಸಲ್ಪಟ್ಟಿದೆ. ಅಷ್ಟಕ್ಕೂ ಈ ಫ್ಲಾಟ್ ಸಾಮಾನ್ಯವೇನಲ್ಲ.
ಈ ಫ್ಲಾಟ್ ಸಾಮಾನ್ಯವಾಗಿ ಹೇಗೆ 1ಬಿಎಚ್‌ಕೆ ಇರುತ್ತದೆಯೋ ಆ ರೀತಿ ಇರುವ ಫ್ಲಾಟ್ ಏನೆಲ್ಲ. ಇದು ಸುಮಾರು 700 ಸ್ಕ್ವೇರ್ ಫೀಟ್‌ಗಳಷ್ಟು ದೊಡ್ಡದಾಗಿದೆ. ನೀವು ಮುಂಬೈನಲ್ಲಿ ಪಡೆಯಬಹುದಾದ ಸರಾಸರಿ ಗಾತ್ರದ ಫ್ಲಾಟ್‌ಗಳಿಗಿಂತ ಸುಮಾರು ಎರಡು ಪಟ್ಟು ದೊಡ್ಡ, ವಿಸ್ತಾರವಾದ ಫ್ಲಾಟ್ ಇದಾಗಿದೆ. ಇದರಲ್ಲಿ ಎತ್ತರದ ಛಾವಣಿಗಳು ಇದೆ. ನಾವು ಮುಂಬೈನಲ್ಲಿ ಇತ್ತೀಚಿನ ದಿನಗಳಲ್ಲಿ ಎತ್ತರವಾದ ಛಾವಣಿ ಉಲ್ಲ ಮನೆಯನ್ನು ಖರೀದಿ ಮಾಡುವುದು ಕಷ್ಟವಾಗಿದೆ ಎಂಬುವುದು ಗಮನಾರ್ಹ.
ಈ ಸ್ಥಳವು ಸುಮಾರು ಶತಕದಷ್ಟು ಹಳೆಯದಾಗಿದೆ. ಕೈಯಲ್ಲೇ ಪೇಂಟ್ ಮಾಡಿದಂತಹ ಸುಂದರವಾದ ಟೈಲ್‌ಗಳು ಈ ಫ್ಲಾಟ್‌ನಲ್ಲಿದೆ. ಅದು ಕೂಡಾ ಸುಮಾರು 100 ವರ್ಷ ಹಳೆಯ ಟೈಲ್‌ಗಳು ಇದಾಗಿದೆ ಎಂಬ ಮಾಹಿತಿಯು ಲಭ್ಯವಾಗಿದೆ. ಈ ಪ್ರದೇಶದಲ್ಲಿ ಸಾಕಷ್ಟು ಹಸಿರು ಪ್ರದೇಶ (greenery) ಇದೆ. ಹಾಗೆಯೇ ನೈಸರ್ಗಿಕವಾಗಿಯೇ (ಸೂರ್ಯನ) ಬೆಳಕು ಮನೆ ತುಂಬಾ ಆವರಿಸುವಂತಹ ಪ್ರದೇಶ ಇದಾಗಿದೆ. ಇದರ ದಪ್ಪವಾದ ಗೋಡೆಗಳು ವರ್ಷ ಪೂರ್ತಿ ಈ ಮನೆಯನ್ನು ಕೋಲ್ ಆಗಿ ಇರಿಸಬಲ್ಲದು.
ಸ್ನಾನಗೃಹ (bathroom) ಗ್ರೀಕ್ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಮಲಗುವ ಕೋಣೆ (bedroom) ಹಾಲ್‌ಗಿಂತ ಅತೀ ದೊಡ್ಡದಾಗಿದೆ, ಇದು ನಾವು ಗಮನಿಸಬೇಕಾದ ಮತ್ತೊಂದು ಅಸಾಮಾನ್ಯ ಅಂಶವಾಗಿದೆ. ಇನ್ನು ಬಾಡಿಗೆದಾರರ ಪ್ರಕಾರ ಮನೆಯು ಮುಂಬೈನಲ್ಲಿಯೇ ಅವರಿಗೆ ಗೋವಾದಲ್ಲಿರುವ ಭಾವನೆಯನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ. ಹಾಗೆಯೇ ಅಪಾರ್ಟ್‌ಮೆಂಟ್‌ನ ಮಾಸಿಕ ಬಾಡಿಗೆ 1.2 ಲಕ್ಷ ರೂಪಾಯಿ ಎಂದು ಮಾಹಿತಿ ನೀಡಿದ್ದಾರೆ.
ದೇಶದ ಅತೀ ದುಬಾರಿ ಅಪಾರ್ಟ್‌ಮೆಂಟ್ ಡೀಲ್
ಗರ್ಭನಿರೋಧಕ ತಯಾರಕ ಸಂಸ್ಥೆಯಾದ ಫ್ಯಾಮಿ ಕೇರ್ ಸಂಸ್ಥಾಪಕ ಜೆ ಪಿ ತಪರಿಯಾ ಭಾರತದ ಅತೀ ದುಬಾರಿ ಅಪಾರ್ಟ್‌ಮೆಂಟ್ ಡೀಲ್ ಒಂದನ್ನು ಮಾಡಿಕೊಂಡಿದ್ದಾರೆ. ಜೆ ಪಿ ತಪರಿಯಾ ದಕ್ಷಿಣ ಮುಂಬೈನ ಮಲಬಾರ್ ಬೆಟ್ಟದಲ್ಲಿ (Malabar Hill) ಅಪಾರ್ಟ್‌ಮೆಂಟ್ ಒಂದರಲ್ಲಿ ಮೂರು ಅಂತಸ್ತನ್ನು (triplex) ಖರೀದಿ ಮಾಡಿದ್ದಾರೆ.
ವರದಿ ಪ್ರಕಾರ ಈ ಡೀಲ್ ಲೂದಾ ಗ್ರೂಪ್ ಹಾಗೂ ಫ್ಯಾಮಿ ಕೇರ್ ಸಂಸ್ಥಾಪಕ ಜೆ ಪಿ ತಪರಿಯಾ ನಡುವೆ ಸುಮಾರು 369 ಕೋಟಿ ರೂಪಾಯಿಗೆ ನಡೆದಿದೆ. ವಾಕೇಶ್ವರ ರಸ್ತೆರಲ್ಲಿರುವ ಅತೀ ಹೆಚ್ಚಿನ ಐಷಾರಾಮಿ ವಸತಿ ಅಪಾರ್ಟ್‌ಮೆಂಟ್ ಆದ ಲೂದಾ ಮಲಬಾರ್‌ನ 26, 27 ಹಾಗೂ 28ನೇ ಮಹಡಿಯನ್ನು ಖರೀದಿ ಮಾಡಲಾಗಿದೆ. ಒಟ್ಟು ವಿಸ್ತಾರ 27,160 ಸ್ಕ್ವೇರ್ ಫೀಟ್ ಇದೆ. ಪ್ರತಿ ಸ್ಕ್ವೇರ್‌ಗೆ 1.36 ಲಕ್ಷ ರೂಪಾಯಿ ಆಗಿದ್ದು ಈ ಲೆಕ್ಕಾಚಾರದಲ್ಲಿ ನಡೆದ ಅತೀ ದುಬಾರಿ ಅಪಾರ್ಟ್‌ಮೆಂಟ್ ಡೀಲ್ ಇದಾಗಿದೆ ಎಂದು ವರದಿಯಾಗಿದೆ.


Click it and Unblock the Notifications