Padma Awards: ಪದ್ಮ ಶ್ರೀ ಪುರಸ್ಕೃತ ಅರೀಜ್ ಖಂಬಟ್ಟ ಯಾರು?

ಭಾರತ ಸರ್ಕಾರವು ಬುಧವಾರ ದೇಶದ ಅತೀ ಉನ್ನತ ಪ್ರಶಸ್ತಿಯಾದ ಪದ್ಮ ಪ್ರಶಸ್ತಿಯನ್ನು ಘೋಷಣೆ ಮಾಡಿದೆ. ಗಣರಾಜ್ಯೋತ್ಸವಕ್ಕೂ ಮುಂಚಿನ ದಿನ ಈ ಪದ್ಮ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದ್ದು ಒಟ್ಟು ಈ ವರ್ಷ 106 ಮಂದಿ ಪದ್ಮ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪೈಕಿ ವ್ಯಾಪಾರ ವಲಯದಲ್ಲಿ ಭಾರತಕ್ಕೆ ರಸ್ನಾ ಪರಿಚಯಿಸಿದ ಅರೀಜ್ ಖಂಬಟ್ಟ ಪದ್ಮ ಶ್ರೀ ಪ್ರಶಸ್ತಿ ಪಡೆದಿದ್ದಾರೆ.

2023ರಲ್ಲಿ ಒಟ್ಟಾಗಿ ಆರು ಪದ್ಮ ವಿಭೂಷಣ, 9 ಪದ್ಮ ಭೂಷಣ ಹಾಗೂ 91 ಪದ್ಮ ಶ್ರೀ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. 106 ಮಂದಿಯ ಪೈಕಿ 19 ಮಂದಿ ಮಹಿಳೆಯರಾಗಿದ್ದಾರೆ. ಇಬ್ಬರು ವಿದೇಶಿ/ಎನ್‌ಆರ್‌ಐ/ಪಿಐಒ/ಒಸಿಐ ವಿಭಾಗದಲ್ಲಿ ಬರುತ್ತಾರೆ. 7 ಮಂದಿ ಮರಣೋತ್ತರ ಪದ್ಮ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಮರಣೋತ್ತರ ಪದ್ಮ ಪ್ರಶಸ್ತಿಯನ್ನು ಪಡೆದ 7 ಮಂದಿಗಳ ಪೈಕಿ ಅರೀಜ್ ಖಂಬಟ್ಟ ಕೂಡಾ ಒಬ್ಬರು.

ಕಲೆ, ಸಾಮಾಜಿಕ ಕಾರ್ಯ, ವಿಜ್ಞಾನ ಹಾಗೂ ಇಂಜಿನಿಯರಿಂಗ್, ವ್ಯಾಪಾರ ಮತ್ಯು ಉದ್ಯಮ, ಔಷಧಿ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ನಾಗರಿಕ ಸೇವೆ ಮೊದಲಾದ ಕ್ಷೇತ್ರಗಳಿಗೆ ಪದ್ಮ ಪ್ರಶಸ್ತಿಯನ್ನು ನೀಡಲಾಗಿದೆ. ವ್ಯಾಪಾರ ಕ್ಷೇತ್ರದಲ್ಲಿ ಒಟ್ಟಾಗಿ ಮೂವರಿಗೆ ಪದ್ಮ ಪ್ರಶಸ್ತಿ ಲಭಿಸಿದೆ. ಆದಿತ್ಯ ಬಿರ್ಲಾದ ಕುಮಾರ್ ಮಂಗಳಂ ಬಿರ್ಲಾ, ದೇಶದ ಪ್ರಸಿದ್ಧ ಸ್ಟಾಕ್ ಮಾರುಕಟ್ಟೆ ಟ್ರೇಡರ್ ರಾಕೇಶ್ ರಾಧೇಶ್ಯಾಮ್ ಜುಂಜುವಾಲಾ ಹಾಗೂ ರಸ್ನಾ ಸಂಸ್ಥಾಪಕ ಅರೀಜ್ ಖಂಬಟ್ಟ ಈ ಮೂವರು. ಅರೀಜ್ ಖಂಬಟ್ಟ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ.....

 Padma Awards: ಪದ್ಮ ಶ್ರೀ ಪುರಸ್ಕೃತ ಅರೀಜ್ ಖಂಬಟ್ಟ ಯಾರು?

ಅರೀಜ್ ಖಂಬಟ್ಟ ಯಾರು?

ಬುಧವಾರ ಭಾರತ ಸರ್ಕಾರ ಘೋಷಣೆ ಮಾಡಿದ ಪದ್ಮ ಪ್ರಶಸ್ತಿಯಲ್ಲಿ ಪ್ರದ್ಮ ಶ್ರೀ ಪ್ರಶಸ್ತಿಗೆ ಭಾಜನರಾದವರ ಪಟ್ಟಿಯಲ್ಲಿ ನಾವು ಅರೀಜ್ ಫಿರೋಜ್‌ಶಾ ಖಂಬಟ್ಟ ಹೆಸರನ್ನು ಕೂಡಾ ಕಾಣಬಹುದು. ಭಾರತದ ಅತೀ ಪ್ರಸಿದ್ಧ ಪಾನೀಯಗಳಲ್ಲಿ ಒಂದಾಗ ರಸ್ನಾದ ಹಿಂದಿರುವ ಕೈ ಅರೀಜ್ ಖಂಬಟ್ಟರದ್ದು. ಅರೀಜ್ ಖಂಬಟ್ಟ ತನ್ನ 85ನೇ ವಯಸ್ಸಿನಲ್ಲಿ ನವೆಂಬರ್ 21, 2022ರಲ್ಲಿ ಅಹಮದಾಬಾದ್‌ನಲ್ಲಿ ಹೃದಯಾಘಾತವಾಗಿ ನಿಧನರಾಗಿದ್ದಾರೆ.

ಪ್ರಸ್ತುತ ಅರೀಜ್ ಖಂಬಟ್ಟರಿಗೆ ಮರಣೋತ್ತರ ಪದ್ಮ ಶ್ರೀ ಪ್ರಶಸ್ತಿಯು ಲಭ್ಯವಾಗಿದೆ. ಅರೀಜ್ ಖಂಬಟ್ಟ 1937ರ ಸೆಪ್ಟೆಂಬರ್ 22ರಂದು ಬ್ರಿಟಿಷ್ ಆಡಳಿತದಲ್ಲಿ ಪಂಜಾಬ್‌ ಪ್ರಾಂತ್ಯದ ಕರಾಚಿಯಲ್ಲಿ ಜನಿಸಿದ್ದಾರೆ. ತನ್ನ ತಾಯಿಯೊಂದಿಗೆ ಅರೀಜ್ ಖಂಬಟ್ಟ ಕರಾಚಿಯಲ್ಲಿಯೇ ಬಾಲ್ಯವನ್ನು ಕಳೆದಿದ್ದಾರೆ.

ಅರೀಜ್ ಖಂಬಟ್ಟ ವ್ಯಾಪಾರ ಜೀವನ

ಅರೀಜ್ ಖಂಬಟ್ಟ 1940ರಲ್ಲಿ ತನ್ನದೇ ಆದ ಸಂಸ್ಥೆಯನ್ನು ಆರಂಭ ಮಾಡಿದ್ದಾರೆ. ಆರಂಭದಲ್ಲಿ ಪಾನೀಯವನ್ನು ತಯಾರಿಸಲಾಗುವ ರಸ ಅಥವಾ ಉತ್ಪನ್ನವನ್ನು ಮಾರಾಟ ಮಾಡುತ್ತಿದ್ದರು. ವ್ಯಾಪಾರಿಗಳಿಂದ ವ್ಯಾಪಾರಿಗಳಿಗೆ ಈ ವ್ಯಾಪಾರ ನಡೆಯುತ್ತಿತ್ತು. ಅಂದರೆ B2B ಆಗಿತ್ತು. ಆದರೆ ಬಳಿಕ B2C ಅಂದರೆ ವ್ಯಾಪಾರಿಗಳಿಂದ ಗ್ರಾಹಕರ ಮಾರುಕಟ್ಟೆಗೆ ಧುಮುಕಿದರು. ಆರಂಭದಲ್ಲಿ ಜೆಫ್ಪೆ ಎಂಬ ಹೆಸರಲ್ಲಿ ಮಾರಾಟ ಮಾಡಲಾಗುತ್ತಿತ್ತು, ಗುಜರಾತ್‌ನಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿತ್ತು. ಆದರೆ ಬಳಿಕ 1970ರಲ್ಲಿ ಹೆಸರನ್ನು ರಸ್ನಾ ಎಂದು ಬದಲಾವಣೆ ಮಾಡಲಾಗಿದೆ.

ಆ ಬಳಿಕ ರಸ್ನಾ ಬ್ರಾಂಡ್ ಆಗಿ ಬದಲಾವಣೆಯಾಗಿದೆ, ದೇಶದಲ್ಲಿ ಸುಮಾರು 1.8 ಮಿಲಿಯನ್ ರಿಟೇಲ್‌ ಮಾರಾಟವಾಗಿದೆ. ಹಾಗೆಯೇ ರಸ್ನಾ ದೇಶದಲ್ಲೇ ಅತೀ ದೊಡ್ಡ ಮನೆಯಲ್ಲಿಯೇ ಪಾನೀಯ ತಯಾರಿಸಲು ಸಹಾಯಕವಾದ ರಸವನ್ನು ಮಾರಾಟ ಮಾಡುವ ಸಂಸ್ಥೆಯಾಗಿದೆ. ಇನ್ನು ಅರೀಜ್ ಖಂಬಟ್ಟ WAPIZ (World Alliance of Parsi Irani Zarthostis) ನ ಮಾಜಿ ಚೇರ್‌ಮನ್ ಕೂಡಾ ಹೌದು. ಅಹಮದಾಬಾದ್ ಪಾರ್ಸಿ ಪಂಚಾಯತ್‌ನ ಮಾಜಿ ಅಧ್ಯಕ್ಷ, ಪಾರ್ಸಿ ಜೋರೋಸ್ಟ್ರೇನ್ ಅಂಜುಮಾಸ್ ಆಫ್ ಇಂಇಡಯಾದ ಉಪಾಧ್ಯಕ್ಷರು ಆಗಿದ್ದರು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+