ಪ್ರಸ್ತುತ ಪ್ರಮುಖ ದಾಖಲೆಗಳೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಮುಖ್ಯವಾಗಿದೆ. ಹಾಗೆಯೇ ಪ್ಯಾನ್ (ಪರ್ಮನೆಂಟ್ ಅಕೌಂಟ್ ನಂಬರ್) ಕಾರ್ಡ್‌ನೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದನ್ನು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸಸ್ (ಸಿಬಿಡಿಟಿ) ಕಡ್ಡಾಯಗೊಳಿಸಿದೆ. ಹಲವಾರು ಬಾರಿ ಗಡುವನ್ನು ವಿಸ್ತರಣೆ ಮಾಡುತ್ತಾ ಬಂದ ಸಿಬಿಡಿಟಿ ಈಗ ಮಾರ್ಚ್ 31, 2023 ಅನ್ನು ಪ್ಯಾನ್ ಆಧಾರ್ ಲಿಂಕ್ ಕೊನೆಯ ದಿನಾಂಕವನ್ನಾಗಿ ನಿಗದಿಪಡಿಸಿದೆ. ಆದ್ದರಿಂದಾಗಿ ತೆರಿಗೆ ಪಾವತಿದಾರರು, ಪ್ಯಾನ್ ಹೊಂದಿರುವವರು ಈ ಗಡುವಿಗೂ ಮುನ್ನ ಆಧಾರ್ ಲಿಂಕ್ ಮಾಡಿಕೊಳ್ಳಬೇಕಾಗಿದೆ.
ಗಡುವು ಮುಗಿದರೂ ನೀವು ಪ್ಯಾನ್ ಕಾರ್ಡ್ ಆಧಾರ್ ಲಿಂಕ್ ಮಾಡದಿದ್ದರೆ, ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗಲಿದೆ. ಅಂದರೆ ನೀವು ತೆರಿಗೆಗೆ ಒಳಪಡುವ ಆದಾಯವನ್ನು ಹೊಂದಿದ್ದರೆ ಆದಾಯ ತೆರಿಗೆ ರಿಟರ್ನ್ ಅನ್ನು ಪಾವತಿಸಲು ಸಾಧ್ಯವಾಗುವುದಿಲ್ಲ. ಹಾಗೆಯೇ ಬ್ಯಾಂಕಿಂಗ್ ವಹಿವಾಟು, ಎನ್‌ಎಸ್‌ಸಿ, ಬಿಎಸ್‌ಇ ಟ್ರೇಡಿಂಗ್ ನಡೆಸಲು ಸಾಧ್ಯವಾಗುವುದಿಲ್ಲ. ಸದ್ಯ ನೀವು ಮಾರ್ಚ್ 31ರವರೆಗೆ ಪ್ಯಾನ್ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡಿಕೊಳ್ಳಬಹುದು ಆದರೆ ಅದಕ್ಕೆ 1000 ರೂಪಾಯಿ ದಂಡ ಪಾವತಿಸಬೇಕಾಗುತ್ತದೆ.

ಹೌದು, ಯಾರು ತಮ್ಮ ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಮಾಡಿಲ್ಲವೋ ಅವರು ಮಾರ್ಚ್ 31ಕ್ಕೂ ಮುನ್ನ 1000 ರೂಪಾಯಿ ಪಾವತಿ ಮಾಡಿ ಎರಡು ಪ್ರಮುಖ ದಾಖಲೆಗಳನ್ನು ಲಿಂಕ್ ಮಾಡಿಕೊಳ್ಳಬಹುದು. ಜೂನ್ 30, 2022ರವರೆಗೆ ನೀವು ಯಾವುದೇ ದಂಡ ಪಾವತಿ ಮಾಡದೆ ಪ್ಯಾನ್- ಆಧಾರ್ ಲಿಂಕ್ ಮಾಡುವ ಅವಕಾಶ ನೀಡಲಾಗಿತ್ತು. 1 ಸಾವಿರ ದಂಡ ವಿಧಿಸುವುದಕ್ಕೂ ಮುನ್ನ ಡಿಸೆಂಬರ್ ಕೊನೆಯವರೆಗೆ 500 ರೂಪಾಯಿ ದಂಡವಾಗಿತ್ತು. ನೀವು ಆನ್‌ಲೈನ್, ಆಫ್‌ಲೈನ್‌ನಲ್ಲಿ ಪ್ಯಾನ್ ಕಾರ್ಡ್ ಲಿಂಕ್ ಮಾಡಿಕೊಳ್ಳಬಹುದು. ಪ್ಯಾನ್ ಕಾರ್ಡ್‌ಗೆ ಈಗಾಗಲೇ ಆಧಾರ್ ಲಿಂಕ್ ಆಗಿದೆಯೇ ಎಂದು ಕೂಡಾ ನೀವು ಚೆಕ್ ಮಾಡಬಹುದು. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...
ಹಂತ 1: ಆಧಾಯ ತೆರಿಗೆ ಇಲಾಖೆ ಇ-ಪೋರ್ಟಲ್‌ಗೆ ಭೇಟಿ ನೀಡಿ https://www.incometax.gov.in/iec/foportal/
ಹಂತ 2: ಎಡ ಭಾಗದಲ್ಲಿ ಕಾಣುವ Quick Linksನಲ್ಲಿ Link Aadhaar Status ಮೇಲೆ ಕ್ಲಿಕ್ ಮಾಡಿ
ಹಂತ 3: ನಿಮ್ಮ 10 ಡಿಜಿಟ್‌ನ ಪ್ಯಾನ್ ಸಂಖ್ಯೆಯನ್ನು ನಮೂದಿಸಿ
ಹಂತ 4: ನಿಮ್ಮ 12 ಡಿಜಿಟ್‌ನ ಆಧಾರ್ ಸಂಖ್ಯೆಯನ್ನು ನಮೂದಿಸಿ
ಹಂತ 5: View Link Aadhaar Status ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಪ್ಯಾನ್ ಆಧಾರ್ ಲಿಂಕ್ ಆಗಿದೆಯೇ ಎಂದು ತಿಳಿಯಲಿದೆ.
ನಿಮ್ಮ ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ಈಗಾಗಲೇ ಲಿಂಕ್ ಆಗಿದ್ದರೆ ಸ್ಕ್ರೀನ್‌ನಲ್ಲಿ Your PAN xxxxxxxxxx is already linked to given Aadhaar xxxxxxxxxxxx (ನಿಮ್ಮ ಪ್ಯಾನ್ ಕಾರ್ಡ್ ಸಂಖ್ಯೆಯನ್ನು ಈಗಾಗಲೇ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲಾಗಿದೆ) ಎಂದು ಕಾಣಲಿದೆ. ಒಂದು ವೇಳೆ ಪ್ಯಾನ್‌ಗೆ ಆಧಾರ್ ಲಿಂಕ್ ಆಗದಿದ್ದರೆ ನೀವು ಮುಂದಿನ ಹಂತವನ್ನು ಪಾಲಿಸಿ ಪ್ಯಾನ್ ಲಿಂಕ್ ಮಾಡಬೇಕಾಗುತ್ತದೆ.
ಆಧಾರ್ ಲಿಂಕ್ ಸ್ಟೇಟಸ್ ತಿಳಿಯಲು ಇನ್ನೊಂದು ವಿಧಾನ
ನೀವು ಎಸ್‌ಎಂಎಸ್ ಮೂಲಕವೂ ಪ್ಯಾನ್ ಆಧಾರ್ ಲಿಂಕ್ ಆಗಿದೆಯೇ ಎಂದು ತಿಳಿದುಕೊಳ್ಳಬಹುದು. ಎಸ್‌ಎಂಎಸ್ ಮೂಲಕ ತಿಳಿಯಲು ನೀವು 567678 ಅಥವಾ 56161ಗೆ ಎಸ್‌ಎಂಎಸ್ ಮಾಡಬೇಕಾಗುತ್ತದೆ. UIDPAN ಎಂದು ಟೈಪ್ ಮಾಡಿ ಒಂದು ಸ್ಪೇಸ್ ನೀಡಿ ಬಳಿಕ 12 ಡಿಜಿಟ್‌ನ ಆಧಾರ್ ಸಂಖ್ಯೆಯನ್ನು ಟೈಪ್ ಮಾಡಿ, ಒಂದು ಸ್ಪೇಸ್ ನೀಡಬೇಕು. ಅದಾದ ಬಳಿಕ ಪ್ಯಾನ್ ಸಂಖ್ಯೆಯನ್ನು ನಮೂದಿಸಿ 567678 ಅಥವಾ 56161ಗೆ ಎಸ್‌ಎಂಎಸ್ ಕಳುಹಿಸಬೇಕು.


Click it and Unblock the Notifications