ಪ್ರಸ್ತುತ ದೇಶದಲ್ಲಿ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಅತೀ ಪ್ರಮುಖವಾದ ದಾಖಲೆಯಾಗಿದೆ. ಯಾವುದೇ ಹಣಕಾಸು ವಹಿವಾಟಿಗಾಗಲಿ ಅಥವಾ ಯಾವುದೇ ಸರ್ಕಾರಿ ಯೋಜನೆಗಳ ಪ್ರಯೋಜನವನ್ನು ನಾವು ಪಡೆಯುವಾಗ ಆಗಲಿ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಅನ್ನು ಹೊಂದಿರುವುದು ಅತೀ ಮುಖ್ಯವಾಗುತ್ತದೆ. ಪ್ರಸ್ತುತ ಈ ಎರಡು ಪ್ರಮುಖ ದಾಖಲೆಗಳ ಲಿಂಕಿಂಗ್ ಪ್ರಕ್ರಿಯೆಗೆ ಜೂನ್ 30, 2023 ಕೊನೆಯ ದಿನಾಂಕವಾಗಿದೆ.
ಅಷ್ಟಕ್ಕೂ ಇದು ನೀವು ದಂಡ ಪಾವತಿಸಿ ಲಿಂಕ್ ಮಾಡಲು ನೀಡಲಾಗಿರುವ ಗಡುವು ಆಗಿದೆ. ಈ ದಿನಾಂಕಕ್ಕೂ ಮುನ್ನ ನೀವು ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡದಿದ್ದರೆ, ನಿಮ್ಮ ಪ್ಯಾನ್ ಕಾರ್ಡ್ ಜುಲೈ 1, 2023ರಿಂದ ನಿಷ್ಕ್ರೀಯವಾಗಲಿದೆ. ಹಾಗೆಯೇ ಯಾರು ಮಾರ್ಚ್ 31, 2023ಕ್ಕೂ ಮುನ್ನ ಪ್ಯಾನ್ ಆಧಾರ್ ಲಿಂಕ್ ಮಾಡಿಲ್ಲವೋ ಅವರು ಈಗ ಒಂದು ಸಾವಿರ ರೂಪಾಯಿ ಶುಲ್ಕವನ್ನು ಪಾವತಿ ಮಾಡಿ ಎರಡು ದಾಖಲೆಗಳ ಲಿಂಕ್ ಮಾಡಬೇಕಾಗುತ್ತದೆ.

ಆದಾಯ ತೆರಿಗೆ ಇಲಾಖೆಯು ಪ್ರಸ್ತುತ ಮೌಲ್ಯಮಾಪನ ವರ್ಷವನ್ನು ಗುರುತಿಸುವ ಆಯ್ಕೆಯಲ್ಲಿ ಬದಲಾವಣೆಯನ್ನು ಮಾಡಿದೆ. ಒಂದು ಸಾವಿರ ರೂಪಾಯಿ ತಡವಾದ ಶುಲ್ಕ ಪಾವತಿಗೆ ಈಗ ನೀವು AY 24-25 ವರ್ಷವನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಹಾಗೆಯೇ ಪಾವತಿ ವಿಧಾನವನ್ನು Other Receipts (500) ಎಂದು ಆಯ್ಕೆ ಮಾಡಬೇಕಾಗುತ್ತದೆ. ಇದಕ್ಕೂ ಮುನ್ನ ಮಾರ್ಚ್ 31, 2023ರವರೆಗೆ ಶುಲ್ಕ ಪಾವತಿಗೆ AY 23-24 ಆಯ್ಕೆ ಮಾಡಬೇಕಾಗಿತ್ತು.
ದಂಡ ಪಾವತಿ ಮಾಡಿ ಪ್ಯಾನ್ ಆಧಾರ್ ಲಿಂಕ್ ಮಾಡಿ
ಹಂತ 1: ಭಾರತದ ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ (https://www.incometaxindiaefiling.gov.in/)
ಹಂತ 2: ಹೋಮ್ ಪೇಜ್‌ನಲ್ಲಿ 'Quick Links' ನಲ್ಲಿ ಇರುವ Link Aadhaar ಮೇಲೆ ಕ್ಲಿಕ್ ಮಾಡಿ,
ಹಂತ 3: ಹೊಸ ಪೇಜ್ ತೆರೆಯಲಿದೆ, ಇಲ್ಲಿ ನಿಮ್ಮ ಆಧಾರ್ ಸಂಖ್ಯೆ, ಪ್ಯಾನ್ ಸಂಖ್ಯೆ, ಆಧಾರ್‌ನಲ್ಲಿ ಇರುವಂತೆ ನಿಮ್ಮ ಹೆಸರನ್ನು ನಮೂದಿಸಿ, Validate ಮೇಲೆ ಕ್ಲಿಕ್ ಮಾಡಿ
ಹಂತ 4: ನಿಮ್ಮ ಪಾವತಿ ವಿಧಾನ ವೆರಿಫೈ ಆದ ಬಳಿಕ Your payment details are verified ಎಂದು ಬರಲಿದೆ. ಇಲ್ಲಿ Continue ಬಟನ್ ಅನ್ನು ಕ್ಲಿಕ್ ಮಾಡಿ
ಹಂತ 5: ಕೇಳಲಾಗಿರುವ ಮಾಹಿತಿಗಳನ್ನು ಭರ್ತಿ ಮಾಡಿ, Link Aadhaar ಕ್ಲಿಕ್ ಮಾಡಿ
ಹಂತ 6: ಮೊಬೈಲ್‌ಗೆ ಬಂದ ಒಟಿಪಿಯನ್ನು ನಮೂದಿಸಿ
ಹಂತ 7: ಪ್ಯಾನ್ ಆಧಾರ್ ಲಿಂಕ್ ಮಾಡಲು ಮನವಿ ಸಲ್ಲಿಕೆ ಪ್ರಕ್ರಿಯೆ ಇಲ್ಲಿಗೆ ಕೊನೆಯಾಗಲಿದೆ.
ನೀವು ಪ್ಯಾನ್ ಕಾರ್ಡ್ ಕೇಂದ್ರಕ್ಕೆ ಭೇಟಿ ನೀಡಿ ಕೂಡಾ ಆಧಾರ್ ಪ್ಯಾನ್ ಅನ್ನು ಲಿಂಕ್ ಮಾಡಬಹುದು. ಅಲ್ಲಿ ನೀಡಲಾಗುವ ಫಾರ್ಮ್ ಅನ್ನು ಭರ್ತಿ ಮಾಡಿ, ನಿಮ್ಮ ಪ್ಯಾನ್ ಆಧಾರ್ ಕಾರ್ಡ್ ಪ್ರತಿ ನೀಡಿದರೆ, ನಿಮ್ಮ ಪ್ಯಾನ್ ಆಧಾರ್ ಕಾರ್ಡ್ ಲಿಂಕ್ ಮಾಡಲಾಗುತ್ತದೆ.
ಆಧಾರ್ ಪ್ಯಾನ್ ಲಿಂಕ್ ಆಗದಿದ್ದರೆ ಏನಾಗುತ್ತದೆ?
1. ಗಡುವಿಗೂ ಮುನ್ನ ಪ್ಯಾನ್ ಆಧಾರ್ ಲಿಂಕ್ ಮಾಡದಿದ್ದರೆ ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗಲಿದೆ.
2. ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರೀಯವಾದ ಬಳಿಕ ನೀವು ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಲು ಸಾಧ್ಯವಾಗುವುದಿಲ್ಲ.
3. ಬಾಕಿಯುಳಿದ ತೆರಿಗೆ ರಿಟರ್ನ್ ಪ್ರಕ್ರಿಯೆ ಮುಂದುವರಿಸಲು ಸಾಧ್ಯವಾಗುವುದಿಲ್ಲ
4. ಪ್ಯಾನ್ ನಿಷ್ಕ್ರೀಯವಾದರೆ ಬಾಕಿಯುಳಿದ ತೆರಿಗೆ ರಿಫಂಡ್ ಅನ್ನು ಮಾಡಲಾಗುವುದಿಲ್ಲ.
5. ರಿಟರ್ನ್ ಸಲ್ಲಿಸುವಾಗ ಆದ ತಪ್ಪನ್ನು ಸರಿಪಡಿಸಲು ಸಾಧ್ಯವಾಗುವುದಿಲ್ಲ.
6. ಪ್ಯಾನ್ ನಿಷ್ಕ್ರೀಯವಾದರೆ ಅಧಿಕ ತೆರಿಗೆಯನ್ನು ನೀವು ಪಾವತಿಸಬೇಕಾಗುತ್ತದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications