ಭಾರತದಲ್ಲಿ ಅತೀ ಪ್ರಮುಖವಾದ ದಾಖಲೆಗಳಲ್ಲಿ ಪ್ಯಾನ್ ಕಾರ್ಡ್ ಕೂಡಾ ಒಂದಾಗಿದೆ. ಪ್ಯಾನ್ ಕಾರ್ಡ್ ಇಲ್ಲದೆ ಯಾವುದೇ ಹಣಕಾಸು ವಹಿವಾಟನ್ನು ನಡೆಸಲು ಸಾಧ್ಯವಿಲ್ಲ, ಆದ್ದರಿಂದ ಪ್ಯಾನ್ ಅತೀ ಪ್ರಮುಖ ದಾಖಲೆಯಾಗಿದೆ. ಪರ್ಮನೆಂಟ್ ಅಕೌಂಟ್ ನಂಬರ್ (ಪ್ಯಾನ್) ಹತ್ತು ಡಿಜಿಟ್‌ನ ಅಂಕಿ ಸಂಖ್ಯೆಯಾಗಿದೆ. ಆದಾಯ ತೆರಿಗೆ ಇಲಾಖೆಯು ಪ್ಯಾನ್ ಕಾರ್ಡ್ ಅನ್ನು ಕಡ್ಡಾಯಗೊಳಿಸಿದೆ ಆದರೆ ಅದನ್ನು ಕೂಡಾ ದುರ್ಬಳಕೆ ಮಾಡಲಾಗುತ್ತಿದೆ ಎಂಬುವುದು ನಿಮಗೆ ತಿಳಿದಿದೆಯೇ?
ಎಲ್ಲ ಪ್ರಮುಖ ವಹಿವಾಟಿನಲ್ಲಿ ಪಾವತಿಸಬೇಕಾದ ತೆರಿಗೆಗಳ ಬಗ್ಗೆ ಅಥಾರಿಟಿಗಳು ಲೆಕ್ಕ ಹಾಕಿಕೊಳ್ಳಲು ಆದಾಯ ತೆರಿಗೆ ಇಲಾಖೆಗೆ ಇದು ಸಹಾಯ ಮಾಡುತ್ತದೆ. ಆದರೆ ಪ್ಯಾನ್ ಕಾರ್ಡ್ ಪ್ರಯೋಜನದ ಜೊತೆಗೆ ಕೆಲವೊಂದು ದುರ್ಬಳಕೆಗಳು ಕೂಡಾ ಕಂಡುಬಂದಿದೆ. ಹಲವಾರು ಮಂದಿ ಪ್ಯಾನ್ ಕಾರ್ಡ್‌ನ ವಂಚನೆಗೂ ಕೂಡಾ ಒಳಗಾಗುತ್ತಿದ್ದಾರೆ. ಪ್ಯಾನ್ ಕಾರ್ಡ್‌ನ ನಕಲಿ ಸಾಲ ವಂಚೆನಯಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಈ ಪ್ಯಾನ್ ಕಾರ್ಡ್ ವಂಚನೆ ತಡೆಯುವ ಬಗ್ಗೆ ಇಲ್ಲಿದೆ ಮಾಹಿತಿ...

ಪ್ಯಾನ್ ಕಾರ್ಡ್ ದುರ್ಬಳಕೆ ತಿಳಿಯುವುದು ಹೇಗೆ?
ಹಲವಾರು ಮಂದಿ ಪ್ಯಾನ್ ಕಾರ್ಡ್‌ನ ದುರ್ಬಳಕೆಗೆ ಒಳಗಾಗುತ್ತಿದ್ದಾರೆ. ಪ್ಯಾನ್ ಕಾರ್ಡ್ ಸಂಖ್ಯೆಯನ್ನು ಪಡೆದೆ ವಂಚನೆ ಮಾಡಲು ಹ್ಯಾಕರ್‌ಗಳು, ವಂಚಕರು ಕಾಯುತ್ತಿದ್ದಾರೆ. ಆದರೆ ನೀವು ಪ್ಯಾನ್ ಕಾರ್ಡ್ ವಂಚನೆಗೆ ನಾವು ಒಳಗಾಗುತ್ತಿದ್ದೇವೆ ಎಂಬುವುದನ್ನು ತಿಳಿಯುವುದು ಅತೀ ಮುಖ್ಯವಾಗಿದೆ, ಇದಕ್ಕೆ ನೀವು ಕ್ರೆಡಿಟ್ ಸ್ಕೋರ್ ಚೆಕ್ ಮಾಡಬೇಕಾಗುತ್ತದೆ. ಅದಕ್ಕಾಗಿ ನೀವು ಸಿಬಿಲ್ ಚಂದಾದಾರಿಕೆ ಮಾಡಿ, ಈ ಬಗ್ಗೆ ಅಧಿಕ ಮಾಹಿತಿ ಇಲ್ಲಿದೆ ಮುಂದೆ ಓದಿ...
ಪ್ಯಾನ್ ಕಾರ್ಡ್ ದುರ್ಬಳಕೆ ಹೇಗೆ?
ವಂಚಕರು ನಿಮ್ಮ ಪ್ಯಾನ್ ಕಾರ್ಡ್ ಅನ್ನು ಬಳಸಿಕೊಂಡು ಸಾಲವನ್ನು ಪಡೆಯುತ್ತಿದ್ದಾರೆ. ನಿಮ್ಮ ಪ್ಯಾನ್ ಕಾರ್ಡ್ ಬಳಸಿಕೊಂಡು ಬೇರೆಯವರು ಸಾಲವನ್ನು ಪಡೆದಾಗ, ಅದರ ಹೊರೆಯು ನಿಮ್ಮ ಮೇಲೆ ಬೀಳುತ್ತದೆ. ನೀವು ಸಾಲ ಪಡೆಯದೆಯೇ ಸಾಲ ಮರುಪಾವತಿ ಮಾಡಬೇಕಾಗುತ್ತದೆ. ಇನ್ನು ಅಕ್ರಮ ವಹಿವಾಟಿಗಾಗಿಯೂ ನಿಮ್ಮ ಪ್ಯಾನ್ ಕಾರ್ಡ್ ಅನ್ನು ವಂಚಕರು ಬಳಸಿರುವ ಹಲವಾರು ಪ್ರಕರಣಗಳು ನಮ್ಮ ಮುಂದಿದೆ.
ವಂಚಕರು ನಿಮ್ಮ ಪ್ಯಾನ್ ಕಾರ್ಡ್ ಅನ್ನು ಬಳಸಿಕೊಂಡು ಜ್ಯುವೆಲ್ಲರಿಯನ್ನು ಕೂಡಾ ಖರೀದಿ ಮಾಡಬಹುದು. ನಿಗದಿತ ಮೊತ್ತಕ್ಕಿಂತ ಅಧಿಕ ಮೊತ್ತದ ವಹಿವಾಟಿಗೆ ಪ್ಯಾನ್ ಕಾರ್ಡ್ ಅಗತ್ಯವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ವಂಚಕರು ನಿಮ್ಮ ಪ್ಯಾನ್ ಕಾರ್ಡ್ ಅನ್ನು ಬಳಸಿಕೊಂಡು, ಜ್ಯುವೆಲ್ಲರಿ ಖರೀದಿ ಮಾಡಿದರೆ, ಅದು ನಿಮ್ಮ ಆದಾಯದ ಲೆಕ್ಕಾಚಾರದ ಅಡಿಯಲ್ಲಿ ಬರುತ್ತದೆ. ಬೇರೆ ಕೆಟ್ಟ ಕೆಲಸಗಳಿಗೆ, ಭಯೋತ್ಪಾದನ ಕಾರ್ಯಗಳಿಗೆ, ಹಣಕಾಸು ಅಪರಾಧಗಳಿಗೆ ಪ್ಯಾನ್ ಕಾರ್ಡ್ ಬಳಸುವ ಸಾಧ್ಯತೆಯಿದೆ.
ಅದರಿಂದಾಗಿ ಯಾವುದೇ ಸೈಟ್‌ನಲ್ಲಿ ಪ್ಯಾನ್ ನಂಬರ್ ಮಾಹಿತಿ ನಮೂದಿಸುವ ಮುನ್ನ ಲಿಂಕ್ HTTPS ಇದೆಯೇ ಎಂದು ನೋಡಿ. ಇದರಿಂದಾಗಿ ನಿಮ್ಮ ವಹಿವಾಟು ಸುರಕ್ಷಿತ ಎಂಬುವುದು ತಿಳಿಯುತ್ತದೆ. ಹಾಗೆಯೇ ಪ್ಯಾನ್ ಕಾರ್ಡ್ ಪ್ರತಿಯನ್ನು ನೀಡುವಾಗ, ದಿನಾಂಕ ಮತ್ತು ಸಮಯವನ್ನು ಉಲ್ಲೇಖಿಸಿ. ಅನಧಿಕೃತ ಮೂಲಕ್ಕೆ ನಿಮ್ಮ ಹೆಸರು, ಜನನ ದಿನಾಂಕವನ್ನು ಎಂದಿಗೂ ಕೂಡಾ ನೀಡಬೇಡಿ. ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಚೆಕ್ ಮಾಡುತ್ತಿರಿ.
ಪ್ಯಾನ್ ದುರ್ಬಳಕೆ ತಡೆಯುವುದು ಹೇಗೆ?
ಹಂತ 1: ಪ್ಯಾನ್ ಕಾರ್ಡ್ ದುರ್ಬಳಕೆ ಕಂಡು ಬಂದಾಗ Aaykar Sampark ಸಹಾಯವಾಣಿಗೆ ಲಾಗಿನ್ ಆಗಿ
ಹಂತ 2: ಅಧಿಕೃತ ವೆಬ್‌ಸೈಟ್ TIN NSDLಗೆ ಭೇಟಿ ನೀಡಿ
ಹಂತ 3: ಹೋಮ್ ಪೇಜ್‌ನಲ್ಲಿ'Customer Care' ಅನ್ನು ನೋಡಿ
ಹಂತ 4: 'Customer Care' ಮೇಲೆ ಕ್ಲಿಕ್ ಮಾಡಿ
ಹಂತ 5: 'complaints/queries' ಟ್ಯಾಬ್ ಮೇಲೆ ಕ್ಲಿಕ್ ಮಾಡಿ
ಹಂತ 6: ಅದಾದ ಬಳಿಕ ನಿಮ್ಮ ವೈಯಕ್ತಿಕ ಮಾಹಿತಿ ನಮೂದಿಸಿ, ದೂರಿನ ಮಾಹಿತಿ ಉಲ್ಲೇಖಿಸಿ
ಹಂತ 7: ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ, ಫಾರ್ಮ್ ಅನ್ನು ಸಬ್‌ಮಿಟ್ ಮಾಡಿದರೆ ದೂರು ದಾಖಲಾಗಲಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?



Click it and Unblock the Notifications