ಪರಮ್ ಕ್ಯಾಪಿಟಲ್‌ನ ನಿರ್ದೇಶಕಿ ಆಶಾ ಮುಕುಲ್ ಅಗರ್ವಾಲ್ ಮುಂಬೈನಲ್ಲಿ ಮೂರು ಅಪಾರ್ಟ್‌ಮೆಂಟ್‌ಗಳನ್ನು ಸುಮಾರು 263 ಕೋಟಿ ರೂಪಾಯಿಗೆ ಖರೀದಿ ಮಾಡಿದ್ದಾರೆ ಎಂದು ವರದಿಯಾಗಿದೆ. ಮ್ಯಾಕ್ರೋಟೆಕ್ ಡೆವಲಪರ್ಸ್ ಲಿಮಿಟೆಡ್‌ನಿಂದ ಖರೀದಿಸಲಾದ ಮೂರು ಅಪಾರ್ಟ್‌ಮೆಂಟ್‌ಗಳು ನಗರದ ಲೋಧಾ ಮಲಬಾರ್, ವಾಲ್ಕೇಶ್ವರ ರಸ್ತೆ ಮತ್ತು ಮಲಬಾರ್ ಹಿಲ್‌ನಲ್ಲಿವೆ.
ಪರಮ್ ಕ್ಯಾಪಿಟಲ್‌ನ ಮುಕುಲ್ ಅಗರ್ವಾಲ್ ಸ್ಥಾಪಿಸಿದ ಪ್ರಮುಖ ಬಂಡವಾಳ ಮಾರುಕಟ್ಟೆ ವ್ಯಾಪಾರ ಮತ್ತು ಹೂಡಿಕೆ ಸಂಸ್ಥೆಯಾಗಿದೆ. ಆಶಾ ಮುಕುಲ್ ಅಗರ್ವಾಲ್ 25 ನೇ ಮಹಡಿಯಲ್ಲಿ ಸುಮಾರು 132 ಕೋಟಿ ರೂಪಾಯಿಗಳ ಒಪ್ಪಂದದ ಮೌಲ್ಯಕ್ಕೆ ಎರಡು ಎರಡು ಯುನಿಟ್‌ಗಳನ್ನು ಖರೀದಿಸಿದ್ದಾರೆ.

ಆಶಾ ಮುಕುಲ್ ಅಗರ್ವಾಲ್ 6.63 ಕೋಟಿ ರೂಪಾಯಿಗಳ ಸ್ಟಾಂಪ್ ಡ್ಯೂಟಿಯನ್ನು ಪಾವತಿಸಿದ್ದಾರೆ. ಈ ವಹಿವಾಟನ್ನು ಸೆಪ್ಟೆಂಬರ್ 27 ರಂದು ನೋಂದಾಯಿಸಲಾಗಿದೆ. ಯುನಿಟ್‌ಗಳನ್ನು 9,719 ಸ್ಕ್ವೇರ್ ಫೀಟ್ ಪ್ರದೇಶದಲ್ಲಿ ಹರಡಿಕೊಂಡಿವೆ. ಐದು ಕಾರು ಪಾರ್ಕಿಂಗ್‌ಗಳನ್ನು ಕೂಡಾ ಹೊಂದಿದೆ.
ಸುಮಾರು 130.24 ಕೋಟಿ ರೂಪಾಯಿ ಮೌಲ್ಯದ 24ನೇ ಮಹಡಿಯಲ್ಲಿ ಮೂರನೇ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ. ಇದಕ್ಕಾಗಿ ಸ್ಟ್ಯಾಂಪ್ ಡ್ಯೂಟಿಯಾಗಿಯೇ 6.51 ಕೋಟಿ ರೂಪಾಯಿ ಪಾವತಿ ಮಾಡಿದ್ದಾರೆ. ಅಪಾರ್ಟ್‌ಮೆಂಟ್‌ನ ವಿಸ್ತೀರ್ಣ 9,535 ಚದರ ಅಡಿಯಾಗಿದೆ.
ಜುಲೈನಲ್ಲಿ, ಮತ್ತೊಂದು ಒಪ್ಪಂದದಲ್ಲಿ, ಬಾರ್ವಾಲೆ ಸೀಡ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ರಾಜೇಂದ್ರ ಬರ್ವಾಲೆ ಅವರು ಎರಡು ಕುಟುಂಬ ಸದಸ್ಯರೊಂದಿಗೆ ಮುಂಬೈನ ಮಲಬಾರ್ ಹಿಲ್‌ನಲ್ಲಿ 122 ಕೋಟಿ ರೂಪಾಯಿ ಮೌಲ್ಯದ ಅಪಾರ್ಟ್‌ಮೆಂಟ್ ಖರೀದಿ ಮಾಡಿದ್ದಾರೆ. ಮಲಬಾರ್ ಹಿಲ್ ಅನ್ನು ದೇಶದ ಅತ್ಯಂತ ದುಬಾರಿ ವಸತಿ ಪ್ರದೇಶವೆಂದು ಪರಿಗಣಿಸಲಾಗಿದೆ.
ಬೆಂಗಳೂರಿನ ಅತ್ಯಂತ ದುಬಾರಿ ಮನೆ
ಉದ್ಯಮಿ ಮುಕೇಶ್ ಅಂಬಾನಿಯವರ ಒಡೆತನದ, ಮುಂಬೈನ ಅಲ್ಟಾಮೌಂಟ್ ರಸ್ತೆಯಲ್ಲಿರುವ ಐಷಾರಾಮಿ ಮನೆ ಅಂಟಿಲಿಯಾವನ್ನು ಇಡೀ ದೇಶದಲ್ಲೇ ಅತ್ಯಂತ ದುಬಾರಿಯಾಗಿರುವ ಖಾಸಗಿ ನಿವಾಸ ಎಂದು ಪರಿಗಣಿಸಲಾಗಿದೆ. ಈ ವೈಭವೋಪೇತ ಮನೆಯ ಬೆಲೆ 15,000 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಇವರಂತೆಯೇ ವಾಣಿಜ್ಯೋದ್ಯಮಿಯಾಗಿರುವ ಬಿಲಿಯನೇರ್ ಅಜೀಂ ಪ್ರೇಮ್‌ಜಿ ಅವರು ಕೂಡಾ ಸಿಲಿಕಾನ್ ಬೆಂಗಳೂರಿನಲ್ಲಿ ಅತ್ಯಂತ ದುಬಾರಿ ಮನೆಯ ಒಡೆಯರಾಗಿದ್ದಾರೆ. ಹಲವು ಮಾಧ್ಯಮಗಳಲ್ಲಿ ವರದಿಯಾಗಿರುವ ಪ್ರಕಾರ, ವಿಪ್ರೋ ಅಧ್ಯಕ್ಷ ಮತ್ತು ಭಾರತದ ಅತ್ಯಂತ ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರಾಗಿರುವ ಬಿಲಿಯನೇರ್ ಅಜೀಂ ಪ್ರೇಮ್‌ಜಿ ಅವರು ಕರ್ನಾಟಕದ ಬೆಂಗಳೂರಿನಲ್ಲಿ ಅತ್ಯಂತ ದುಬಾರಿ ಮನೆಯನ್ನು ಹೊಂದಿದ್ದು ಇದರ ಬೆಲೆ 350 ಕೋಟಿ ರೂಪಾಯಿ ಎಂದು ಊಹಿಸಲಾಗಿದೆ.


Click it and Unblock the Notifications