ಉದ್ಯಮಿ, ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷರಾಗಿರುವ ಮುಖೇಶ್ ಅಂಬಾನಿ ಅವರ ಪರಿಚಯ ಹೇಳುವ ಅಗತ್ಯವಿಲ್ಲ ಅಷ್ಟು ಚಿರಪರಿಚಿತರಾಗಿದ್ದರೆ. ಭಾರತದ ಅತ್ಯಂತ ಶ್ರೀಮಂತ ಉದ್ಯಮಿಯಾಗಿರುವ ಮುಕೇಶ್ ಅಂಬಾನಿ ನಿವಾಸ ಆಂಟಿಲಿಯಾ ಸುಮಾರು 15,000 ಕೋಟಿ ರೂಪಾಯಿ ಮೌಲ್ಯವುಳ್ಳ ಭಾರತದ ಅತ್ಯಂತ ದುಬಾರಿ ಮನೆಯಾಗಿದೆ. ಬಾಲಿವುಡ್ ನ ಬಾದ್ ಷಾ ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ಅವರು ಈ ಐಷಾರಾಮಿ ಮನೆಯನ್ನು ವಿನ್ಯಾಸಗೊಳಿಸಲು ಸಹಾಯ ಮಾಡಿದ್ದಾರೆಂಬುವುದು ಬಹಳಷ್ಟು ಜನರಿಗೆ ತಿಳಿದಿಲ್ಲ.
ಈ ವಿಚಾರವನ್ನು 2019 ರಲ್ಲಿ ಗೌರಿ ಖಾನ್ ಬಹಿರಂಗಪಡಿಸಿದ್ದು, ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿಯೊಂದಿಗೆ ಪಾಲುದಾರಿಕೆಯಲ್ಲಿ ಆಂಟಿಲಿಯಾ ವಿನ್ಯಾಸಗೊಳಿಸಲಾಗಿತ್ತು. ಶಾರುಖ್ ಖಾನ್ ಮತ್ತು ಅವರ ಕುಟುಂಬ ಅಂಬಾನಿ ಪ್ಯಾಮಿಲಿಯೊಂದಿಗೆ ಬಹಳ ಅಪ್ತ ಸಂಬಂಧ ಹೊಂದಿದ್ದು, ಬಹಳ ಹಿಂದಿನಿಂದಲೇ ಈ ಎರಡು ಕುಟುಂಬಗಳು ನಿಕಟ ಸ್ನೇಹವನ್ನು ಹೊಂದಿದೆ.

ನೀತಾ ಅಂಬಾನಿ ಮತ್ತು ಗೌರಿ ಖಾನ್ ಇವರಿಬ್ಬರೂ ಜೊತೆ ಸೇರಿ ಆಂಟಿಲಿಯಾದ ಐಷಾರಾಮಿ ಬಾರ್ ಲಾಂಜ್ ಅನ್ನು ಮರು ವಿನ್ಯಾಸಗೊಳಿಸಿದ್ದಾರೆ. ಇದೇ ಪ್ರದೇಶದಲ್ಲಿ ಅಲ್ಲಿ ಮುಕೇಶ್ ಅಂಬಾನಿ ಮತ್ತು ಅವರ ಪತ್ನಿ ತಮ್ಮ ಹೈ ಪ್ರೊಫೈಲ್ ಮತ್ತು ಬಾಲಿವುಡ್ ಗಣ್ಯ ಅತಿಥಿಗಳಿಗೆ ಆತಿಥ್ಯ ನೀಡುತ್ತಾರೆ.
ಗೌರಿ ಖಾನ್ ಅವರ ಇಂಟೀರಿಯರ್ ಡಿಸೈನ್ ಕಚೇರಿಯಲ್ಲಿ ನೀತಾ ಅಂಬಾನಿ ಅವರನ್ನು ಭೇಟಿಯಾಗಿ, ಅಲ್ಲಿ ಗೌರಿ ಖಾನ್ ಡಿಸೈನ್ಸ್ - ಮತ್ತು ಅಂಬಾನಿ 15,000 ಕೋಟಿ ರೂಪಾಯಿಯ ಮೌಲ್ಯದ ಮನೆಯ ಅದ್ದೂರಿ ಬಾರ್ ಲಾಂಜ್ ಪ್ರದೇಶವನ್ನು ವಿನ್ಯಾಸಗೊಳಿಸಲು ಶಾರುಕ್ ಪತ್ನಿ ಗೌರಿ ಖಾನ್ ಜೊತೆ ಡೀಲ್ ಫೈನಲ್ ಮಾಡಿದ್ದರು.
ಗೌರಿ ಖಾನ್ ಬಾಲಿವುಡ್ ನ ಯಶಸ್ವಿ ನಿರ್ಮಾಪಕಿಯಾಗಿರುವುದು ಮಾತ್ರವಲ್ಲದೆ, ಗೌರಿ ಖಾನ್ ತನ್ನ ಇಂಟಿರೀಯರ್ ಡಿಸೈನ್ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಈ ಸಂಸ್ಥೆಯ ಮೂಲಕ ಹಲವಾರು ಲಕ್ಷುರಿ ಪ್ರಾಪರ್ಟಿ ಗಳನ್ನು ವಿನ್ಯಾಸಗೊಳಿಸಿದ್ದಾರೆ. ಮುಕೇಶ್ ಅಂಬಾನಿಯವರ ಆಂಟಿಲಿಯಾ ಮಾತ್ರವಲ್ಲದೇ ಗೌರಿ ಖಾನ್ ಬಾಲಿವುಡ್ ತಾರೆಯರಾದ ಸಿದ್ಧಾರ್ಥ್ ಮಲ್ಹೋತ್ರಾ, ಜಾಕ್ವೆಲಿನ್ ಫರ್ನಾಂಡೀಸ್, ಕರಣ್ ಜೋಹರ್, ರಣಬೀರ್ ಕಪೂರ್ ಹೀಗೆ ಹಲವರ ನಿವಾಸ ವಿನ್ಯಾಸಗೊಳಿಸಿದ್ದಾರೆ.
ಮಾಧ್ಯಮಗಳ ವರದಿಗಳ ಪ್ರಕಾರ, ಗೌರಿ ಖಾನ್ ಅವರ ಸಿನಿಮಾ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ಇಂಟೀರಿಯರ್ ಡಿಸೈನ್ ಸಂಸ್ಥೆ ಗೌರಿ ಖಾನ್ ಡಿಸೈನ್ಸ್‌ನಲ್ಲಿ ಅವರ ವೈಯಕ್ತಿಕ ಮೌಲ್ಯ ರೂ.1600 ಕೋಟಿ ಹೊಂದಿದ್ದಾರೆ. ಗೌರಿ ಪತಿ ಮತ್ತು ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ನಿವ್ವಳ ಮೌಲ್ಯ 6000 ಕೋಟಿ ರೂಪಾಯಿ ಆಗಿದೆ.
ಗೌರಿ ಖಾನ್ ಡಿಸೈನ್ಸ್ ನಿವ್ವಳ ಮೌಲ್ಯವು 200 ಕೋಟಿ ರೂಪಾಯಿಗಿಂತ ಹೆಚ್ಚಿದ್ದು, ಇಂಟೀರಿಯರ್ ಡಿಸೈನ್ ಪ್ರಾಜೆಕ್ಟ್‌ಗಳಿಗೆ ಗೌರಿ ಖಾನ್ 6 ಲಕ್ಷ ರೂಪಾಯಿಗಿಂತ ಹೆಚ್ಚು ಚಾರ್ಜ್ ಮಾಡುತ್ತಾರೆ ಎಂದು ಅಂದಾಜಿಸಲಾಗಿದೆ.


Click it and Unblock the Notifications