For Quick Alerts
ALLOW NOTIFICATIONS  
For Daily Alerts

ಚೆಕ್‌ ವಹಿವಾಟಿನ ವೇಳೆ ಎಚ್ಚರ ತಪ್ಪಿದರೆ ಜೈಲುಪಾಲು, ಜಾಗರೂಕರಾಗಿರಿ

|

ಅಧಿಕ ಮೊತ್ತವಾಗಲಿ ಕೊಂಚ ಮೊತ್ತವಾಗಲಿ ಚೆಕ್ ಅನ್ನು ನೀಡುವುದು ಕೆಲವರಿಗೆ ಅಭ್ಯಾಸವಾಗಿದೆ. ಆದರೆ ನಾವು ಈ ಸಂದರ್ಭದಲ್ಲಿ ಭಾರೀ ಜಾಗರೂಕರಾಗಿರಬೇಕಾಗುತ್ತದೆ. ಚೆಕ್ ಬೌನ್ಸ್ ಆದರೆ ಜೈಲು ಶಿಕ್ಷೆ ಕೂಡಾ ಆಗಬಹುದು.

ಚೆಕ್‌ ಬೌನ್ಸ್ ಆದಲ್ಲಿ ನೀವು ದಂಡವನ್ನು ಪಾವತಿಸಬೇಕಾಗುತ್ತದೆ. ಅದು ಮಾತ್ರವಲ್ಲದೇ ನೀವು ಜೈಲು ಪಾಲಾಗುವ ಸಾಧ್ಯತೆಗಳು ಇದೆ. ಪ್ರಸ್ತುತ ಅದೆಷ್ಟೋ ಮಂದಿ ಚೆಕ್‌ ಬೌನ್ಸ್ ಕೇಸ್‌ನಲ್ಲಿ ಕಾರಾಗೃಹ ಸೇರುತ್ತಿದ್ದಾರೆ. ಚೆಕ್‌ ಬೌನ್ಸ್ ಅನ್ನು ಒಂದು ಅಪರಾಧ ಎಂದೇ ಪರಿಗಣಿಸಲಾಗುತ್ತದೆ. ನೆಗೋಷಬೆಲ್ ಇನ್ಸ್ಟ್ರೂಮೆಂಟ್ ಆಕ್ಟ್ 1881ರ ಅಡಿಯಲ್ಲಿ ದಂಡವನ್ನು ಕೂಡಾ ವಿಧಿಸಲಾಗುತ್ತದೆ.

ಚೆಕ್ ಅನ್ನು ಈ ರೀತಿ ಡೆಪಾಸಿಟ್, ನಗದು ಮಾಡಿಚೆಕ್ ಅನ್ನು ಈ ರೀತಿ ಡೆಪಾಸಿಟ್, ನಗದು ಮಾಡಿ

ನೀವು ಚೆಕ್‌ ಮೂಲಕ ನಡೆಸುವ ಯಾವುದೇ ವಹಿವಾಟನ್ನು ಬ್ಯಾಂಕ್ ತಿರಸ್ಕಾರ ಮಾಡಿದರೆ ಆ ಚೆಕ್ ಬೌನ್ಸ್ ಆಗಿದೆ ಎಂದು ಅರ್ಥವಾಗಿದೆ. ಇದಕ್ಕೆ ಮುಖ್ಯ ಕಾರಣ ಖಾತೆಯಲ್ಲಿ ಸಾಕಷ್ಟು ಮೊತ್ತ ಇಲ್ಲದಿರುವುದು. ಇನ್ನು ಚೆಕ್‌ನಲ್ಲಿನ ಸಹಿಯಲ್ಲಿ ವ್ಯತ್ಯಾಸ ಕಂಡು ಬಂದರೂ ಕೂಡಾ ಬ್ಯಾಂಕ್ ಚೆಕ್ ಅನ್ನು ತಿರಸ್ಕಾರ ಮಾಡುತ್ತದೆ. ಇದರಿಂದಾಗಿ ಹಲವಾರು ಸಮಸ್ಯೆಗಳು ಉಂಟಾಗಬಹುದು. ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....

 ಚೆಕ್ ಬೌನ್ಸ್ ಆಗಲು ತಾಂತ್ರಿಕ ಸಮಸ್ಯೆಗಳು

ಚೆಕ್ ಬೌನ್ಸ್ ಆಗಲು ತಾಂತ್ರಿಕ ಸಮಸ್ಯೆಗಳು

* ಚೆಕ್ ನೀಡಿದವರ ಬ್ಯಾಂಕ್‌ನಲ್ಲಿ ಮೊತ್ತ ಇಲ್ಲದಿರುವುದು
* ಸಹಿಯಲ್ಲಿ ವ್ಯತ್ಯಾಸ ಇರುವುದು
* ಖಾತೆಯ ಸಂಖ್ಯೆ ತಪ್ಪಾಗಿರುವುದು
* ಚೆಕ್‌ನಲ್ಲಿನ ಡೇಟ್‌ನಲ್ಲಿನ ವ್ಯತ್ಯಾಸ
* ಸಂಖ್ಯೆಯಲ್ಲಿ ಬರೆದಿರುವ ಮೊತ್ತ ಹಾಗೂ ಅಕ್ಷರದಲ್ಲಿ ಬರೆದಿರುವ ಮೊತ್ತದಲ್ಲಿನ ವ್ಯತ್ಯಾಸ
* ಬ್ಯಾಂಕ್‌ನಿಂದ ತಿರಸ್ಕೃತವಾದ ಚೆಕ್
* ಓವರ್‌ಡ್ರಾಫ್ಟ್‌ ಮಿತಿಯನ್ನು ಮೀರಿರುವ ಚೆಕ್

 ಚೆಕ್‌ ಬೌನ್ಸ್ ಪ್ರಕ್ರಿಯೆ ಹೇಗೆ ನಡೆಯುತ್ತದೆ?

ಚೆಕ್‌ ಬೌನ್ಸ್ ಪ್ರಕ್ರಿಯೆ ಹೇಗೆ ನಡೆಯುತ್ತದೆ?

ನಿಮ್ಮ ಚೆಕ್ ಬೌನ್ಸ್ ಆದರೆ ಚೆಕ್ ನೀಡಿದ ವ್ಯಕ್ತಿಗೆ ಈ ಬಗ್ಗೆ ಮಾಹಿತಿಯನ್ನು ನೀಡಬೇಕಾಗುತ್ತದೆ. ಇದಾದ ಬಳಿಕ ಒಂದು ತಿಂಗಳಲ್ಲಿ ಚೆಕ್‌ ನೀಡಿದವರು ಹಣವನ್ನು ಪಾವತಿ ಮಾಡಬೇಕಾಗುತ್ತದೆ. ಹಣವನ್ನು ಪಾವತಿಸದಿದ್ದರೆ ಲೀಗಲ್ ನೋಟಿಸ್ ಅನ್ನು ಸೆಂಡ್ ಮಾಡಲಾಗುತ್ತದೆ. 15 ದಿನದಲ್ಲಿ ಯಾವುದೇ ಪ್ರತಿಕ್ರಿಯೆ ಬರದಿದ್ದರೆ, ನೆಗೋಷಬೆಲ್ ಇನ್ಸ್ಟ್ರೂಮೆಂಟ್ ಆಕ್ಟ್ 1881ರ ಅಡಿಯಲ್ಲಿ ಸೆಕ್ಷನ್ 138ರ ಅಡಿಯಲ್ಲಿ ಕೇಸ್ ರಿಜಿಸ್ಟಾರ್ ಮಾಡಲಾಗುತ್ತದೆ. ಚೆಕ್ ಬೌನ್ಸ್ ಕೇಸ್‌ನಲ್ಲಿ ದಂಡವನ್ನು ಪಾವತಿಸಬೇಕಾಗುತ್ತದೆ. ಹಾಗೆಯೇ 2 ವರ್ಷದವರೆಗೆ ಜೈಲು ಶಿಕ್ಷೆಯಾಗಬಹುದು.

 3 ತಿಂಗಳ ಅವಧಿ ನಿಮಗಿದೆ

3 ತಿಂಗಳ ಅವಧಿ ನಿಮಗಿದೆ

ಒಂದು ಚೆಕ್ ಅನ್ನು ಒಬ್ಬರು ವ್ಯಕ್ತಿ ನೀಡಿದ ಬಳಿಕ ಅದನ್ನು ವಿತ್‌ಡ್ರಾ ಮಾಡಿಕೊಳ್ಳಲು 3 ತಿಂಗಳ ಅವಧಿ ನಮಗಿರುತ್ತದೆ. ಚೆಕ್ 3 ತಿಂಗಳಿಗಿಂತ ಹಳೆಯದಾಗಿದ್ದರೆ ಆ ಚೆಕ್ ಅನ್ನು ಬ್ಯಾಂಕ್ ತಿರಸ್ಕಾರ ಮಾಡುತ್ತದೆ. ಇದು ಚೆಕ್ ಅನ್ನು ನೀಡುವವರ ಸುರಕ್ಷೆತೆಗಾಗಿ ನೀಡಲಾಗುತ್ತದೆ. ಚೆಕ್‌ನ ದುರ್ಬಳಕೆ ಆಗಬಾರದು ಎಂಬ ಕಾರಣಕ್ಕೆ ಈ ಅವಧಿ ಇರುತ್ತದೆ.

 ಈ ಸಂದರ್ಭದಲ್ಲಿ ಜಾಗರೂಕರಾಗಿರಿ

ಈ ಸಂದರ್ಭದಲ್ಲಿ ಜಾಗರೂಕರಾಗಿರಿ

* ನೀವು ಯಾರಿಗಾದರೂ ಚೆಕ್ ನೀಡುವ ಸಂದರ್ಭದಲ್ಲಿ ಬ್ಯಾಂಕ್‌ನಲ್ಲಿ ಅಷ್ಟು ಮೊತ್ತವಿದೆಯೇ ಎಂದು ನೋಡಿಕೊಳ್ಳಿ.
* ಚೆಕ್‌ ಅನ್ನು ಪಡೆದಿರುವವರು ಕೂಡಾ ಅದನ್ನು ಮೂರು ತಿಂಗಳ ಒಳಗಾಗಿ ಖಾತೆಗೆ ಜಮೆ ಮಾಡಬೇಕು, ಇಲ್ಲವಾದರೆ ಚೆಕ್ ಅನ್ನು ಬ್ಯಾಂಕ್ ತಿರಸ್ಕಾರ ಮಾಡುತ್ತದೆ.
* ಬೇರೆಯವರಿಗೆ ನೀವು ಚೆಕ್ ನೀಡುವ ಸಂದರ್ಭದಲ್ಲಿ ಹೆಸರು, ಅಂಕಿ, ಅಕ್ಷರದ ನಡುವೆ ಅತೀ ಅಧಿಕ ಸ್ಪೇಸ್ ಅನ್ನು ಹಾಕಬೇಡಿ.
* ಬ್ಯಾಂಕ್‌ನ ಚೆಕ್ ಮೇಲೆ ನೀವು ಸಹಿ ಹಾಕುವಾಗ ಪ್ರತಿ ಬಾರಿ ನೀವು ಬ್ಯಾಂಕ್‌ನ ಚೆಕ್‌ನಲ್ಲಿ ಸಹಿ ಹೇಗೆ ಮಾಡುತ್ತೀರೋ ಹಾಗೆಯೇ ಸಹಿ ಮಾಡಬೇಕು ಎಂಬುವುದು ನೆನಪಿನಲ್ಲಿ ಇರಲಿ. ತಪ್ಪಾಗಿ ಸಹಿ ಮಾಡಿದರೆ ಚೆಕ್ ಬೌನ್ಸ್ ಆಗಲಿದೆ.
* ಬೇರೆಯವರಿಗೆ ಚೆಕ್ ನೀಡುವ ಸಂದರ್ಭದಲ್ಲಿ ಚೆಕ್ ಸಂಖ್ಯೆ, ಚೆಕ್‌ನಲ್ಲಿನ ಹೆಸರು. ಮೊತ್ತ, ದಿನಾಂಕವನ್ನು ಸರಿಯಾಗಿ ಪರಿಶೀಲನೆ ಮಾಡಿಕೊಳ್ಳಿ
* ಯಾರಿಗೆ ಚೆಕ್ ಅನ್ನು ಪೇ ಮಾಡಬೇಕಾಗಿರುತ್ತದೆಯೋ ಅವರ ಹೆಸರನ್ನೇ ಸರಿಯಾಗಿ ಉಲ್ಲೇಖ ಮಾಡಿ
* ಬ್ಯಾಂಕ್‌ನಲ್ಲಿ ರಿಜಿಸ್ಟಾರ್ ಆಗಿರುವ ಸಹಿಯನ್ನೇ ಚೆಕ್‌ನಲ್ಲಿ ಹಾಕಿ

English summary

Pay Attention to these Points while Paying by Cheque, Explained in Kannada

Cheque bounce Being is legally considered a crime in court parlance. Pay Attention to these Points while Paying by Cheque, Explained in Kannada.
Story first published: Tuesday, December 20, 2022, 12:44 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X