ನಾವು ಪ್ರಾಣಿಯನ್ನು ಸಾಕಿದರೆ ಆ ಪ್ರಾಣಿ ಕೂಡಾ ನಮ್ಮ ಕುಟುಂಬದ ಸದಸ್ಯ ಆಗುತ್ತದೆ. ನೀವು ನಿಮ್ಮ ಮಕ್ಕಳನ್ನು ಹೇಗೆ, ಎಷ್ಟು ಪ್ರೀತಿಯಿಂದ ಸಾಕುತ್ತಿರೋ ಹಾಗೆಯೇ ನಿಮ್ಮ ಸಾಕು ಪ್ರಾಣಿಯನ್ನು ಕೂಡಾ ನೀವು ಸಾಕುತ್ತೀರಿ. ಹಾಗಾದರೆ ನಿಮ್ಮ ಸಾಕು ಪ್ರಾಣಿಗೆ ಏಕೆ ವಿಮೆ ರಕ್ಷಣೆ ಮಾಡಬಾರದು?
ನೀವು ನಿಮ್ಮ ಆರೋಗ್ಯದ ತುರ್ತು ಪರಿಸ್ಥಿತಿಗೆ ವಿಮೆಯನ್ನು ಮಾಡಿಸಿಕೊಳ್ಳುತ್ತೀರಿ. ಅದೇ ರೀತಿ ಸಾಕು ಪ್ರಾಣಿಯ ವಿಮೆಯು ಅದರ ಆರೋಗ್ಯ, ನಿರ್ವಹಣೆ, ಇತರೆ ವೆಚ್ಚವನ್ನು ನೋಡಿಕೊಳ್ಳಲು ನೀವು ಬಜೆಟ್ ಅನ್ನು ಮೀಸಲಿಡುವುದು ಆಗಿದೆ.
ಸಾಕು ಪ್ರಾಣಿಗಳ ವಿಮೆಯು ಸಾಕು ಪ್ರಾಣಿಯ ವೆಚ್ಚ, ಆಸ್ಪತ್ರೆ ವೆಚ್ಚ ಇತ್ಯಾದಿಗಳಿಗಾಗಿ ಸಾಕು ಪ್ರಾಣಿಯ ಮಾಲೀಕರಿಗೆ ಒದಗಿಸುವ ಆರ್ಥಿಕ ಭದ್ರತೆಯಾಗಿದೆ. ಆದರೆ ನೀವು ನಿಮ್ಮ ಸಾಕು ಪ್ರಾಣಿಗೆ ಯಾವ ವರ್ಷದಲ್ಲಿ ವಿಮೆ ಮಾಡಿಸಿಕೊಳ್ಳಬೇಕು, ಆ ವಿಮೆ ಏನು ಎಂಬ ಬಗ್ಗೆ ಮಾಹಿತಿ ತಿಳಿಯಲು ಮುಂದೆ ಓದಿ...
ಸರಿಯಾದ ವಿಮೆಯನ್ನು ಆಯ್ಕೆ ಮಾಡಿ
ವಿಮಾ ಕಂಪನಿಗಳು ವಿವಿಧ ವಿಮೆಯನ್ನು ಮಾರಾಟ ಮಾಡುತ್ತದೆ. ಕೆಲವರು ಜೀವಿತಾವಧಿ ಅಥವಾ ಆಕಸ್ಮಿಕ ರಕ್ಷಣೆಯನ್ನು ಒದಗಿಸುತ್ತಾರೆ. ಆದರೆ ಕೆಲವು ಸಂಸ್ಥೆಗಳು ಆಸ್ಪತ್ರೆಗೆ ದಾಖಲು ಅಥವಾ ಚಿಕಿತ್ಸಾ ವೆಚ್ಚವನ್ನು ಭರಿಸುವ ವಿಮೆಯನ್ನು ಮಾರಾಟ ಮಾಡುತ್ತಾರೆ. ಹಾಗೆಯೇ ಈ ವಿಮೆಯು ನಿಮ್ಮ ಸಾಕು ಪ್ರಾಣಿ ಕಳ್ಳತನವಾದಾಗ ಅಥವಾ ದಾರಿ ತಪ್ಪಿ ಹೋದಾಗವೂ ನಿಮಗೆ ಲಭ್ಯವಾಗಲಿದೆ. ಕೆಲವು ಯೋಜನೆಗಳು ಸಾಕು ಪ್ರಾಣಿಯ ಖರ್ಚು ವೆಚ್ಚದ ಹೊರೆಯ ರಕ್ಷಣೆಯನ್ನು ನೀಡುತ್ತದೆ. ವಿಮಾ ಯೋಜನೆಗಳು ಸಾಕುಪ್ರಾಣಿಗಳ ವ್ಯಾಕ್ಸಿನೇಷನ್ ವೆಚ್ಚವನ್ನು ಸಹ ಒಳಗೊಳ್ಳಲಿದೆ. ಆದರೆ ನೀವು ವಿಮೆ ಖರೀದಿ ಮಾಡುವಾಗ ಪ್ರೀಮಿಯಂ ಮೊತ್ತವನ್ನು ಕೂಡಾ ಪರಿಶೀಲಿಸುವುದು ಮುಖ್ಯವಾಗಿದೆ.
ಯಾವಾಗ ವಿಮೆ ಖರೀದಿಸಬೇಕು?
ನೀವು ಸಾಕು ಪ್ರಾಣಿಗೆ ವಿಮೆ ಮಾಡಬೇಕಾದರೆ ಸಾಕುಪ್ರಾಣಿಗೆ ಕನಿಷ್ಠ ಎಂಟು ವಾರಗಳ ವಯಸ್ಸಾಗಿರಬೇಕು. ವಿಮಾ ಕಂಪನಿಯು ಗರಿಷ್ಠ ವಯಸ್ಸನ್ನು ಸಹ ನಿರ್ದಿಷ್ಟಪಡಿಸಬಹುದು. ಉದಾಹರಣೆಗೆ ಸಾಕು ನಾಯಿಯ ಗರಿಷ್ಠ ವಯಸ್ಸು 10 ವರ್ಷ ಎಂದು ವಿಮಾ ಸಂಸ್ಥೆ ಗೊತ್ತುಪಡಿಸಿದೆ.
ಯಾವೆಲ್ಲಾ ಕ್ಲೈಮ್ ಇಲ್ಲ?
ಅನಾರೋಗ್ಯ ಅಥವಾ ಅಪಘಾತದಿಂದ ಉಂಟಾಗುವ ಯಾವುದೇ ಶಸ್ತ್ರಚಿಕಿತ್ಸೆಗಳಿಗೆ ಈ ವಿಮೆಯು ಒಳಗೊಳ್ಳುವುದಿಲ್ಲ. ಹಾಗೆಯೇ ಗರ್ಭ ಸಂಬಂಧಿತ ಶಸ್ತ್ರ ಚಿಕಿತ್ಸೆ, ಸಾಕು ಪ್ರಾಣಿಯ ಉಡುಗೆ ತೊಡುಗೆಗೆ, (ಕೆಲವರು ಸಾಕು ಪ್ರಾಣಿಗೂ ಉಡುಗೆ ತೊಡಿಸುವ ಕಾರಣ) ಸಾಕು ಪ್ರಾಣಿಯ ಹಲ್ಲಿನ ಚಿಕಿತ್ಸೆಗೆ ಈ ವಿಮೆಯು ಕ್ಲೈಮ್ ಆಗದು.
ಈ ಅಂಶ ನೆನಪಿನಲ್ಲಿರಲಿ
* ಅನೇಕ ಸಾಕುಪ್ರಾಣಿ ವಿಮಾ ಯೋಜನೆಗಳು ನಾಯಿಗಳಿಗೆ ಕವರೇಜ್ ನೀಡುತ್ತವೆ. ಆದರೆ ಕೆಲವು ಇತರ ಪ್ರಾಣಿಗಳನ್ನು ಸಾಕುಪ್ರಾಣಿಗಳಾಗಿ ಪರಿಗಣಿಸಲಾಗುವುದಿಲ್ಲ.
* ಸಾಕುಪ್ರಾಣಿ, ಸ್ಥಳೀಯ ಅಥವಾ ವಿದೇಶಿ ತಳಿಯನ್ನು ಅವಲಂಬಿಸಿ ವಿಮಾ ಕಂತುಗಳು ಹೆಚ್ಚಾಗಬಹುದು ಅಥವಾ ಕಡಿಮೆಯಾಗಬಹುದು.


Click it and Unblock the Notifications