ಡಿಜಿಟಲ್ ಪಾವತಿ ಪ್ಲಾಟ್‌ಫಾರ್ಮ್ ಫೋನ್‌ಪೇ ಬುಧವಾರ ಯುಪಿಐ ಲೈಟ್ ಫೀಚರ್ ಅನ್ನು ಆರಂಭ ಮಾಡಿದೆ. ಈ ಯುಪಿಐ ಲೈಟ್ ಫೀಚರ್‌ಗೆ ಪ್ರಮುಖ ಬ್ಯಾಂಕ್‌ಗಳ ಬೆಂಬಲ ಲಭ್ಯವಾಗಿದೆ. ಹಾಗೆಯೇ ಭಾರತದಾದ್ಯಂತ ಎಲ್ಲ ಮರ್ಚಂಟ್ ಮತ್ತು ಕ್ಯೂಆರ್‌ಗಳಲ್ಲಿ ಈ ಯುಪಿಐ ಲೈಟ್ ಫೀಚರ್ ಅನ್ನು ಬಳಕೆ ಮಾಡಲು ಸಾಧ್ಯವಾಗುತ್ತದೆ.
ಈ ಡಿವೈಸ್ on-device ಬ್ಯಾಲೆನ್ಸ್ ಮೂಲಕ ಕಾರ್ಯನಿರ್ವಹಿಸುತ್ತದೆ. ಇದು ಅತೀ ಹೆಚ್ಚು ಜನರು ಇರುವ ಸಂದರ್ಭದಲ್ಲಿಯೂ ಸಹ ಕಡಿಮೆ ಮೌಲ್ಯದ ವಹಿವಾಟುಗಳಿಗೆ ಹೆಚ್ಚು ವೇಗವಾಗಿ ನಡೆಸಲು ಸಹಾಯ ಮಾಡುತ್ತದೆ. ಯುಪಿಐ ಲೈಟ್ ಬಗ್ಗೆ ಅಧಿಕ ಮಾಹಿತಿ ಇಲ್ಲಿದೆ ಮುಂದೆ ಓದಿ...

ಫೋನ್‌ಪೇ ಬಳಕೆದಾರರಿಗೆ ಪ್ರಯೋಜನಗಳು
ಈ ನಡುವೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಯುಪಿಐ ಲೈಟ್ ಫೀಚರ್ ಅನ್ನು ಜಾರಿ ಮಾಡಿದೆ. ಈ ಫೀಚರ್ ಮೂಲಕ ನಾವು ಯುಪಿಐ ಆಪ್‌ನಲ್ಲಿ 200 ರೂಪಾಯಿವರೆಗೆ ಯಾವುದೇ ಯುಪಿಐ ಪಿನ್ ಇಲ್ಲದೆಯೇ ವಹಿವಾಟು ನಡೆಸಲು ಸಾಧ್ಯವಾಗುತ್ತದೆ. ಕಳೆದ ವರ್ಷ ಆರ್‌ಬಿಐ ಈ ಫೀಚರ್ ಅನ್ನು ಘೋಷಣೆ ಮಾಡಿದೆ.
ಆದರೆ ಯಾವುದೇ ಯುಪಿಐ ವಹಿವಾಟು ಆಪ್‌ಗಳಲ್ಲಿ ಈ ಫೀಚರ್ ಅಳವಡಿಕೆ ಮಾಡಲಾಗಿರಲಿಲ್ಲ. ಆದರೆ ಈ ಹಿಂದೆ ಪೇಟಿಎಂ ಈ ಫೀಚರ್ ಅನ್ನು ಆರಂಭಿಸಿದೆ. ಈಗ ಫೋನ್‌ಪೇ ಕೂಡಾ ಈ ಫೀಚರ್ ಅನ್ನು ಆರಂಭಿಸಿದೆ. ಸಾಮಾನ್ಯವಾಗಿ ಯುಪಿಐ ಪಾವತಿ ಅತೀ ಸರಳ ಹಾಗೂ ಶೀಘ್ರವಾಗಿದೆ. ಆದರೆ ಈಗ ಯುಪಿಐ ಲೈಟ್ ಫೋನ್‌ಪೇ ಬಳಕೆದಾರರಿಗೆ ವಹಿವಾಟನ್ನು ಇನ್ನಷ್ಟು ಸರಳ ಹಾಗೂ ಶೀಘ್ರಗೊಳಿಸಲಿದೆ.
ಯುಪಿಐ ಲೈಟ್ ಅನ್ನು ಆಕ್ಟಿವೇಟ್ ಮಾಡಿ
ಫೋನ್‌ಪೇ ಬಳಕೆದಾರರು ತಮ್ಮ ಮೊಬೈಲ್‌ನಲ್ಲಿ ಯುಪಿಐ ಲೈಟ್ ಫೀಚರ್ ಅನ್ನು ಸರಳವಾಗಿ ಆಕ್ಟಿವೇಟ್ ಮಾಡಬಹುದಾಗಿದೆ. ಯಾವುದೇ ಕೆವೈಸಿ ದೃಢೀಕರಣ ಇಲ್ಲದೆ, ಯುಪಿಐ ಲೈಟ್ ಖಾತೆಯನ್ನು ತೆರೆಯಬಹುದಾಗಿದೆ. ಯುಪಿಐ ಲೈಟ್ ಖಾತೆಯನ್ನು ಫೋನ್‌ಪೇ ಬಳಕೆದಾರರು 2000 ರೂಪಾಯಿವರೆಗೆ ಮೊತ್ತವನ್ನು ಜಮೆ ಮಾಡಬಹುದಾಗಿದೆ. ಹಾಗೆಯೇ ಒಂದು ಬಾರಿಗೆ ಗರಿಷ್ಠವಾಗಿ 200 ರೂಪಾಯಿ ಅಥವಾ ಅದಕ್ಕಿಂತ ಕಡಿಮೆ ಮೊತ್ತದ ವಹಿವಾಟು ನಡೆಸಬಹುದಾಗಿದೆ.
ವಹಿವಾಟಿನ ಹಿಸ್ಟರಿಯನ್ನು ಪರಿಶೀಲನೆ ಮಾಡಲು ಬಳಕೆದಾರರು ಪ್ರತಿ ದಿನ ಎಸ್‌ಎಂಎಸ್ ಅನ್ನು ಪಡೆಯಲಿದ್ದಾರೆ. ಒಂದು ದಿನದಲ್ಲಿ ತಮ್ಮ ಯುಪಿಐ ಲೈಟ್ ಖಾತೆ ಮೂಲಕ ಎಷ್ಟು ವಹಿವಾಟು ನಡೆಸಲಾಗಿದೆ ಎಂಬ ಎಸ್‌ಎಂಎಸ್ ಬರಲಿದೆ. ಬ್ಯಾಂಕ್ ಸ್ಟೇಟ್‌ಮೆಂಟ್/ ಬ್ಯಾಂಕ್ ಪಾಸ್‌ಬುಕ್‌ನಲ್ಲಿಯೂ ಈ ವಹಿವಾಟು ಮಾಹಿತಿ ಇರಲಾರದು. ಯುಪಿಐ ಲೈಟ್‌ನಲ್ಲಿ ಮಾತ್ರ ಮಾಹಿತಿ ಇರಲಿದೆ.
ಪೋನ್‌ಪೇನಲ್ಲಿ ಯುಪಿಐ ಲೈಟ್ ಆಕ್ಟಿವೇಟ್ ಮಾಡುವುದು ಹೇಗೆ?
ಹಂತ 1: ಫೋನ್‌ಪೇ ಆಪ್ ಅನ್ನು ತೆರೆಯಿರಿ
ಹಂತ 2: ಆಪ್‌ನ ಹೋಮ್ ಸ್ಕ್ರೀನ್‌ನಲ್ಲಿ ಯುಪಿಐ ಲೈಟ್ ಆಕ್ಟಿವ್ ಮಾಡುವ ಆಯ್ಕೆ ಕಾಣಲಿದೆ.
ಹಂತ 3: ಯುಪಿಐ ಲೈಟ್‌ಗೆ ಜಮೆ ಮಾಡುವ ಮೊತ್ತವನ್ನು ನಮೂದಿಸಿ, ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಿಕೊಳ್ಳಿ
ಹಂತ 4: ಯುಪಿಐ ಪಿನ್ ಅನ್ನು ಹಾಕಿದ ಬಳಿಕ ಯುಪಿಐ ಲೈಟ್ ಅಕೌಂಟ್ ಬಳಸಬಹುದಾಗಿದೆ.
ಪೇಟಿಎಂನಲ್ಲಿ ಯುಪಿಐ ಲೈಟ್ ಫೀಚರ್
ಪೇಟಿಎಂ ಬಳಕೆದಾರರು ಈಗ ಯುಪಿಐ ಲೈಟ್ ಫೀಚರ್‌ನ ಲಾಭವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. "ಯುಪಿಐ ಲೈಟ್ ವ್ಯಾಲೆಟ್ ಭರ್ತಿಯಾದ ಬಳಿಕ ಬಳಕೆದಾರರು ಒಂದು ಬಾರಿಗೆ 200 ರೂಪಾಯಿವರೆಗೆ ವಹಿವಾಟು ನಡೆಸಲು ಸಾಧ್ಯವಾಗುತ್ತದೆ. ಯುಪಿಐ ಪಿನ್ ಇಲ್ಲದೆಯೇ ವಹಿವಾಟು ನಡೆಸಬಹುದಾಗಿದ್ದು, ಇದು ಶೀಘ್ರವಾಗಿ ನಡೆಸಬಹುದಾದ ವಹಿವಾಟಾಗಿದೆ. ಯುಪಿಐ ಲೈಟ್‌ನಲ್ಲಿ ದಿನದಲ್ಲಿ ಎರಡು ಬಾರಿಗೆ 2000 ಸಾವಿರ ರೂಪಾಯಿ ವಹಿವಾಟು ನಡೆಸಲು ಸಾಧ್ಯವಾಗುತ್ತದೆ. ಒಂದು ದಿನದಲ್ಲಿ 4000 ರೂಪಾಯಿ ವಹಿವಾಟು ನಡೆಸಬಹುದಾಗಿದೆ," ಎಂದು ಪೇಟಿಎಂ ಮಾಹಿತಿ ನೀಡಿದೆ.


Click it and Unblock the Notifications