ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (ಪಿಎಂ ಕಿಸಾನ್ ಯೋಜನೆ) 14 ನೇ ಕಂತಿನ ಮೊತ್ತವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುಂದಿನ ವಾರದಲ್ಲೇ ಬಿಡುಗಡೆ ಮಾಡಲಿದ್ದಾರೆ. ಜುಲೈ 27, 2023 ರಂದು ಪ್ರಧಾನಿ ಮೋದಿ 8.5 ಕೋಟಿ ರೈತರಿಗೆ ಕಿಸಾನ್ ಯೋಜನೆಯ ಮೊತ್ತವನ್ನು ಬಿಡುಗಡೆ ಮಾಡಲಿದ್ದಾರೆ. ಹಾಗೆಯೇ ರಾಜಸ್ಥಾನದ ಸಿಕಾರ್‌ನಲ್ಲಿ ರೈತರೊಂದಿಗೆ ಸಂವಾದ ಕೂಡಾ ನಡೆಸಲಿದ್ದಾರೆ.
ಈ ಯೋಜನೆಯಲ್ಲಿ ಅರ್ಹ ರೈತರು ಒಂದು ವರ್ಷದಲ್ಲಿ ಮೂರು ಕಂತುಗಳಲ್ಲಿ 2 ಸಾವಿರ ರೂಪಾಯಿಯಂತೆ ಒಟ್ಟಾಗಿ ಒಂದು ವರ್ಷದಲ್ಲಿ 6 ಆರು ಸಾವಿರ ರೂಪಾಯಿ ಪಡೆಯಬಹುದಾಗಿದೆ. ಫೆಬ್ರವರಿ 2019ರಂದು ಈ ಯೋಜನೆಯನ್ನು ಆರಂಭ ಮಾಡಲಾಗಿದೆ. ಆದರೆ ಡಿಸೆಂಬರ್ 2018ರಿಂದಲೇ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದು ಆರಂಭಿಕವಾಗಿ 2 ಹೆಕ್ಟರ್‌ಗಳ ಭೂಮಿಯನ್ನು ಹೊಂದಿರುವವರಿಗೆ ಮಾತ್ರ ಅನ್ವಯವಾಗಿತ್ತು. ಆದರೆ ಬಳಿಕ ಯೋಜನೆಯ ಲಾಭವನ್ನು ಎಲ್ಲ ವಿಸ್ತರಣೆ ಮಾಡಲಾಗಿದೆ. ಆದರೆ ಕೆಲವು ಮಾನದಂಡಗಳು ಇದೆ. ಇನ್ನು ಮೊತ್ತ ಬಂದಿದೆಯೆ ಎಂದು ನೀವು ಚೆಕ್ ಮಾಡಿಕೊಳ್ಳಬಹುದಾಗಿದೆ.

ಸ್ಟೇಟಸ್ ಪರಿಶೀಲನೆ ಮಾಡುವುದು ಹೇಗೆ?
ಹಂತ 1: ಮೊದಲು PM ಕಿಸಾನ್ ವೆಬ್‌ಸೈಟ್ www.pmkisan.gov.in ಗೆ ಭೇಟಿ ನೀಡಿ
ಹಂತ 2: ಬಳಿಕ Farmers Corner ಮೇಲೆ ಕ್ಲಿಕ್ ಮಾಡಿ
ಹಂತ 3: ನಂತರ Beneficiary Status ಮೇಲೆ ಕ್ಲಿಕ್ ಮಾಡಿ
ಹಂತ 4: ನಂತರದ ಪುಟದಲ್ಲಿ ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ನಮೂದಿಸಿ
ಹಂತ 5: ಬಳಿಕ ಸ್ಟೇಟಸ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯುತ್ತೀರಿ
ಕೆವೈಸಿ ಮಾಡಿಕೊಳ್ಳಿ, ಇಲ್ಲವಾದರೆ ಹಣ ಬರದು!
ಹಂತ 1: ಅಧಿಕೃತ ಪಿಎಂ ಕಿಸಾನ್ ವೆಬ್‌ಸೈಟ್ https://pmkisan.gov.in/ ಗೆ ಭೇಟಿ ನೀಡಿ
ಹಂತ 2: ಬಲಭಾಗದಲ್ಲಿ, ಮುಖಪುಟದ ಕೆಳಗೆ, ಇಕೆವೈಸಿ ಕಾಣಲಿದೆ.
ಹಂತ 3: ಫಾರ್ಮರ್ಸ್ ಕಾರ್ನರ್‌ನ ಕೆಳಗೆ ಇಕೆವೈಸಿ ನಮೂದಿಸುವ ಬಾಕ್ಸ್ ಇದೆ
ಹಂತ 4: ಅಲ್ಲಿ ನೀವು e-kyc ಅನ್ನು ಕ್ಲಿಕ್ ಮಾಡಿ, ಆಧಾರ್ Ekyc ಯ ಪುಟ ತೆರೆಯಲಿದೆ
ಹಂತ 5: ಈಗ, ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು
ಹಂತ 6: ನಂತರ ತೋರಿಸಿರುವ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಬೇಕು
ಹಂತ 7: ಬಳಿಕ search ಬಟನ್ ಕ್ಲಿಕ್ ಮಾಡಬೇಕು
ಹಂತ 8: ಅದರ ನಂತರ, ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾದ ನಿಮ್ಮ ಮೊಬೈಲ್ ಸಂಖ್ಯೆಯನ್ನು ನೀವು ನಮೂದಿಸಬೇಕು
ಹಂತ 9: ಬಳಿಕ Get OTP ಅನ್ನು ಕ್ಲಿಕ್ ಮಾಡಿ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ
ಹಂತ 10: ಒಟಿಪಿಯನ್ನು ನಮೂದಿಸಿ, Submit ಮಾಡಿ
ಹಂತ 11: ನೀವು Submit ಬಟನ್ ಕ್ಲಿಕ್ ಮಾಡಿದ ಬಳಿಕ ನಿಮ್ಮ ಪಿಎಂ ಕಿಸಾನ್ ಇ-ಕೆವೈಸಿ ಯಶಸ್ವಿಯಾಗುತ್ತದೆ
ಹಣ ಬಂದಿಲ್ಲದಿದ್ದರೆ ದೂರು ನೀಡುವುದು ಹೇಗೆ?
ಒಂದು ವೇಳೆ ನಿಮಗೆ ಹನ್ನೊಂದನೇ ಕಂತಿನ ಹಣ ಜಮೆ ಆಗಿಲ್ಲದಿದ್ದರೆ, ನೀವು ಪಿಎಂ ಕಿಸಾನ್ ಸಹಾಯವಾಣಿ ಸಂಖ್ಯೆ - 011-24300606 ಗೆ ಕರೆ ಮಾಡಬಹುದು. ನೀವು ಪಿಎಂ ಕಿಸಾನ್ ಟೋಲ್ ಫ್ರೀ ಸಂಖ್ಯೆ 18001155266 ಕ್ಕೂ ಕೂಡಾ ಕರೆ ಮಾಡಬಹುದು. ಇದಲ್ಲದೇ ಇಮೇಲ್ ಕೂಡಾ ಮಾಡಬಹುದು. [email protected] ಗೆ ಮೇಲ್ ಮಾಡುವ ಮೂಲಕ ಪಿಎಂ ಕಿಸಾನ್ ಯೋಜನೆಯ 13 ನೇ ಕಂತಿಗೆ ಹಣವನ್ನು ಸ್ವೀಕರಿಸದ ಕಾರಣವನ್ನು ನೀವು ಕೇಳಬಹುದು.
ಇಮೇಲ್ ಐಡಿ: [email protected]. ಮತ್ತು [email protected]
ಸಹಾಯವಾಣಿ ಸಂಖ್ಯೆ: 011-24300606,155261
ಟೋಲ್-ಫ್ರೀ ಸಂಖ್ಯೆ: 1800-115-526


Click it and Unblock the Notifications