ಪ್ರಧಾನ ಮಂತ್ರಿ ನರೇಂದ್ರ ಮೋದಿ ಜುಲೈ 27ರಂದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 14 ನೇ ಕಂತಿನ ಮೊತ್ತವನ್ನು ಬಿಡುಗಡೆ ಮಾಡಿದ್ದಾರೆ. ಈ ಬಾರಿ ಪಿಎಂ-ಕಿಸಾನ್ ಯೋಜನೆಯಡಿ ಸುಮಾರು 8.5 ಕೋಟಿ ರೈತ ಫಲಾನುಭವಿಗಳಿಗೆ 17,000 ಕೋಟಿ ರೂಪಾಯಿ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ. ಆದರೆ ನೀವು ಸ್ಟೇಟಸ್ ಚೆಕ್ ಮಾಡಿದಾಗ ಇನ್ನು ಕೂಡಾ ನಿಮಗೆ ಕಂತಿನ ಮೊತ್ತ ಬಂದಿಲ್ಲ ಎಂಬುವುದು ಖಚಿತವಾಗಿದೆಯೇ?
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯಡಿಯಲ್ಲಿ ಅರ್ಹ ರೈತರುಗಳು ವಾರ್ಷಿಕವಾಗಿ 6 ಸಾವಿರ ರೂಪಾಯಿ ಪಡೆಯಲು ಸಾಧ್ಯವಾಗುತ್ತದೆ. ರೈತರು ಮೂರು ಕಂತುಗಳಲ್ಲಿ ಎರಡು ಸಾವಿರ ರೂಪಾಯಿಯಂತೆ ಒಟ್ಟು ಆರು ಸಾವಿರ ರೂಪಾಯಿ ಪಡೆಯಲಿದ್ದಾರೆ. ಇದು ನೇರವಾಗಿ ರೈತರ ಖಾತೆಗೆ ಜಮೆಯಾಗಲಿದೆ. ಆದರೆ 14ನೇ ಕಂತಿನ ಮೊತ್ತ ಜಮೆಯಾಗದಿದ್ದರೆ ಏನು ಮಾಡುವುದು, ಹೇಗೆ ದೂರು ನೀಡುವುದು ಎಂಬ ಬಗ್ಗೆ ನಿಮಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

ಹಣ ಬರದಿರಲು ಕಾರಣ ಏನಾಗಿರಬಹುದು?
ಪಿಎಂ-ಕಿಸಾನ್ ಯೋಜನೆಯ ಫಲಾನುಭವಿಗಳು ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ರೈತರು ಕೆವೈಸಿ ಮಾಡಿಸಿಕೊಳ್ಳಲು ಸರ್ಕಾರವು ಹಲವಾರು ಬಾರಿ ಅವಕಾಶವನ್ನು ನೀಡಿದೆ. ಆದರೆ ಈ ಗಡುವು ಈಗಾಗಲೇ ಮುಕ್ತಾಯವಾಗಿದೆ. ಒಂದು ವೇಳೆ ನೀವು ಕೆವೈಸಿ ಮಾಡಿಸಿಲ್ಲದಿದ್ದರೆ ನಿಮಗೆ ಪಿಎಂ ಕಿಸಾನ್ ಮೊತ್ತ ಲಭ್ಯವಾಗುವುದಿಲ್ಲ. ನೀವು ಕೆವೈಸಿ ಮಾಡಿಯೂ ನಿಮಗೆ ಮೊತ್ತ ಲಭ್ಯವಾಗದಿದ್ದರೆ ಈ ಕೆಳಗಿನಂತೆ ದೂರು ನೀಡಿ.
ಹಣ ಬಂದಿಲ್ಲದಿದ್ದರೆ ದೂರು ನೀಡುವುದು ಹೇಗೆ?
ಒಂದು ವೇಳೆ ನಿಮಗೆ ಹನ್ನೊಂದನೇ ಕಂತಿನ ಹಣ ಜಮೆ ಆಗಿಲ್ಲದಿದ್ದರೆ, ನೀವು ಪಿಎಂ ಕಿಸಾನ್ ಸಹಾಯವಾಣಿ ಸಂಖ್ಯೆ - 011-24300606 ಗೆ ಕರೆ ಮಾಡಬಹುದು. ನೀವು ಪಿಎಂ ಕಿಸಾನ್ ಟೋಲ್ ಫ್ರೀ ಸಂಖ್ಯೆ 18001155266 ಕ್ಕೂ ಕೂಡಾ ಕರೆ ಮಾಡಬಹುದು. ಇದಲ್ಲದೇ ಇಮೇಲ್ ಕೂಡಾ ಮಾಡಬಹುದು. [email protected] ಗೆ ಮೇಲ್ ಮಾಡುವ ಮೂಲಕ ಪಿಎಂ ಕಿಸಾನ್ ಯೋಜನೆಯ 13 ನೇ ಕಂತಿಗೆ ಹಣವನ್ನು ಸ್ವೀಕರಿಸದ ಕಾರಣವನ್ನು ನೀವು ಕೇಳಬಹುದು.
ಇಮೇಲ್ ಐಡಿ: [email protected]. ಮತ್ತು [email protected]
ಸಹಾಯವಾಣಿ ಸಂಖ್ಯೆ: 011-24300606,155261
ಟೋಲ್-ಫ್ರೀ ಸಂಖ್ಯೆ: 1800-115-526
ಕೆವೈಸಿ ಮಾಡಿಕೊಳ್ಳುವುದು ಹೇಗೆ?
ಹಂತ 1: ಅಧಿಕೃತ ಪಿಎಂ ಕಿಸಾನ್ ವೆಬ್‌ಸೈಟ್ https://pmkisan.gov.in/ ಗೆ ಭೇಟಿ ನೀಡಿ
ಹಂತ 2: ಬಲಭಾಗದಲ್ಲಿ, ಮುಖಪುಟದ ಕೆಳಗೆ, ಇಕೆವೈಸಿ ಕಾಣಲಿದೆ.
ಹಂತ 3: ಫಾರ್ಮರ್ಸ್ ಕಾರ್ನರ್‌ನ ಕೆಳಗೆ ಇಕೆವೈಸಿ ನಮೂದಿಸುವ ಬಾಕ್ಸ್ ಇದೆ
ಹಂತ 4: ಅಲ್ಲಿ ನೀವು e-kyc ಅನ್ನು ಕ್ಲಿಕ್ ಮಾಡಿ, ಆಧಾರ್ Ekyc ಯ ಪುಟ ತೆರೆಯಲಿದೆ
ಹಂತ 5: ಈಗ, ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು
ಹಂತ 6: ನಂತರ ತೋರಿಸಿರುವ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಬೇಕು
ಹಂತ 7: ಬಳಿಕ search ಬಟನ್ ಕ್ಲಿಕ್ ಮಾಡಬೇಕು
ಹಂತ 8: ಅದರ ನಂತರ, ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾದ ನಿಮ್ಮ ಮೊಬೈಲ್ ಸಂಖ್ಯೆಯನ್ನು ನೀವು ನಮೂದಿಸಬೇಕು
ಹಂತ 9: ಬಳಿಕ Get OTP ಅನ್ನು ಕ್ಲಿಕ್ ಮಾಡಿ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ
ಹಂತ 10: ಒಟಿಪಿಯನ್ನು ನಮೂದಿಸಿ, Submit ಮಾಡಿ
ಹಂತ 11: ನೀವು Submit ಬಟನ್ ಕ್ಲಿಕ್ ಮಾಡಿದ ಬಳಿಕ ನಿಮ್ಮ ಪಿಎಂ ಕಿಸಾನ್ ಇ-ಕೆವೈಸಿ ಯಶಸ್ವಿಯಾಗುತ್ತದೆ


Click it and Unblock the Notifications