ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ) 14ನೇ ಕಂತಿನ ಮೊತ್ತಕ್ಕಾಗಿ ಅರ್ಹ ರೈತರುಗಳು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ 13ನೇ ಕಂತಿನ ಮೊತ್ತವನ್ನು ಫೆಬ್ರವರಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದಾರೆ. ಕಿಸಾನ್ ನಿಧಿಯ 14ನೇ ಕಂತಿನ ಮೊತ್ತವನ್ನು ಕೇಂದ್ರ ಸರ್ಕಾರವು ಶೀಘ್ರವೇ ಬಿಡುಗಡೆ ಮಾಡಲಿದೆ.
ಈ ಹಿಂದೆ ಮೇ ತಿಂಗಳ ಕೊನೆಯ ವಾರದಲ್ಲಿ ಅಥವಾ ಜುಲೈ ತಿಂಗಳಿನಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮೊತ್ತವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಈ ಯೋಜನೆಯಲ್ಲಿ ಅರ್ಹ ರೈತರು ಒಂದು ವರ್ಷದಲ್ಲಿ ಮೂರು ಕಂತುಗಳಲ್ಲಿ 2 ಸಾವಿರ ರೂಪಾಯಿಯಂತೆ ಒಟ್ಟಾಗಿ 6 ಆರು ಸಾವಿರ ರೂಪಾಯಿ ಪಡೆಯಬಹುದಾಗಿದೆ. ಫೆಬ್ರವರಿ 2019ರಂದು ಈ ಯೋಜನೆಯನ್ನು ಆರಂಭ ಮಾಡಲಾಗಿದೆ. ಆದರೆ ಡಿಸೆಂಬರ್ 2018ರಿಂದಲೇ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಸಾಮಾನ್ಯವಾಗಿ ಈ ಮೂರು ಇನ್‌ಸ್ಟಾಲ್‌ಮೆಂಟ್ ಅನ್ನು ಏಪ್ರಿಲ್-ಜುಲೈ ತಿಂಗಳಿನಲ್ಲಿ, ಆಗಸ್ಟ್- ನವೆಂಬರ್ ತಿಂಗಳಿನಲ್ಲಿ, ಡಿಸೆಂಬರ್- ಮಾರ್ಚ್ ತಿಂಗಳಿನಲ್ಲಿ ಜಮೆ ಮಾಡಲಾಗುತ್ತದೆ. ಈ ಲೆಕ್ಕಾಚಾರದಲ್ಲಿ ನೋಡಿದಾಗ 14ನೇ ಕಂತಿನ ಮೊತ್ತವು ಜುಲೈ ತಿಂಗಳ ಒಳಗಾಗಿ ಬಿಡುಗಡೆ ಮಾಡಲಾಗುತ್ತದೆ. ಈ ಮೊತ್ತವು ನೇರವಾಗಿ ರೈತರ ಖಾತೆ ಜಮೆಯಾಗಲಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ತಿಳಿಯಿರಿ..
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ: ಅರ್ಜಿ ಹೀಗೆ ಸಲ್ಲಿಸಿ
ಹಂತ 1: ಅಧಿಕೃತ ವೆಬ್‌ಸೈಟ್ www.pmkisan.gov.inಗೆ ಭೇಟಿ ನೀಡಿ
ಹಂತ 2: ಹೋಮ್‌ಪೇಜ್‌ನಲ್ಲಿ Farmer's Corner ಗೆ ಹೋಗಿ 'New Farmer Registration' ಮೇಲೆ ಕ್ಲಿಕ್ ಮಾಡಿ
ಹಂತ 3: ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ, ಕ್ಯಾಪ್ಚಾ ಕೋಡ್ ಅನ್ನು ಹಾಕಿ
ಹಂತ 4: click here to continue ಆಯ್ಕೆ ಮೇಲೆ ಕ್ಲಿಕ್ ಮಾಡಿ
ಹಂತ 5: YES ಮೇಲೆ ಕ್ಲಿಕ್ ಮಾಡಿ ಪಿಎಂ ಕಿಸಾನ್ ರಿಜಿಸ್ಟ್ರೇಷನ್ ಫಾರ್ಮ್ 2023 ಅನ್ನು ಭರ್ತಿ ಮಾಡಿ
ಹಂತ 6: ಈ ಅರ್ಜಿಯನ್ನು ಭರ್ತಿ ಮಾಡಿದ ಬಳಿಕ ಅದನ್ನು ಸೇವ್ ಮಾಡಿ, ಪ್ರಿಂಟ್ ಔಟ್ ಅನ್ನು ತೆಗೆಯಿರಿ
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ: ಬೇಕಾದ ದಾಖಲೆಗಳು
* ಆಧಾರ್ ಕಾರ್ಡ್
* ಭೂಮಿ ನಿಮ್ಮ ಹೆಸರಿನಲ್ಲಿ ಇದೆ ಎಂದು ಖಾತರಿಪಡಿಸುವ ಜಾಗದ ಪತ್ರ
* ನಾಗರಿಕ ಪ್ರಮಾಣಪತ್ರ
* ಆದಾಯ ಪ್ರಮಾಣಪತ್ರ
* ಬ್ಯಾಂಕ್ ಖಾತೆಯ ವಿವರ
* ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ
* ಪಾಸ್‌ಪೋರ್ಟ್ ಗಾತ್ರದ ಫೋಟೋ
ಸ್ಟೇಟಸ್ ಪರಿಶೀಲನೆ ಮಾಡಿ
ಹಂತ 1: ಮೊದಲು PM ಕಿಸಾನ್ ವೆಬ್‌ಸೈಟ್ www.pmkisan.gov.in ಗೆ ಭೇಟಿ ನೀಡಿ
ಹಂತ 2: ಬಳಿಕ Farmers Corner ಮೇಲೆ ಕ್ಲಿಕ್ ಮಾಡಿ
ಹಂತ 3: ನಂತರ Beneficiary Status ಮೇಲೆ ಕ್ಲಿಕ್ ಮಾಡಿ
ಹಂತ 4: ನಂತರದ ಪುಟದಲ್ಲಿ ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ನಮೂದಿಸಿ
ಹಂತ 5: ಬಳಿಕ ಸ್ಟೇಟಸ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯುತ್ತೀರಿ


Click it and Unblock the Notifications