ಅರ್ಹ ರೈತರುಗಳು ಪ್ರಸ್ತುತ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ) 14ನೇ ಕಂತಿನ ಮೊತ್ತಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 14ನೇ ಕಂತಿನ ಮೊತ್ತ ಶೀಘ್ರವೇ ಬಿಡುಗಡೆಯಾಗಲಿದೆ. ಮುಂದಿನ ಕೆಲವೇ ವಾರಗಳಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಮೊತ್ತವು ಬಿಡುಗಡೆಯಾಗಲಿದೆ.
ರೈತರಿಗೆ ಆರ್ಥಿಕವಾಗಿ ಸಹಾಯ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಜಾರಿಗೆ ತಂದ ಯೋಜನೆ ಇದಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯಡಿಯಲ್ಲಿ ಅರ್ಹ ರೈತರುಗಳು ವಾರ್ಷಿಕವಾಗಿ 6 ಸಾವಿರ ರೂಪಾಯಿ ಪಡೆಯಲು ಸಾಧ್ಯವಾಗುತ್ತದೆ. ರೈತರು ಮೂರು ಕಂತುಗಳಲ್ಲಿ ಎರಡು ಸಾವಿರ ರೂಪಾಯಿಯಂತೆ ಒಟ್ಟು ಆರು ಸಾವಿರ ರೂಪಾಯಿ ಪಡೆಯಲಿದ್ದಾರೆ.

ಈ ಮೊತ್ತವು ನೇರವಾಗಿ ರೈತರ ಖಾತೆಗೆ ಜಮೆಯಾಗಲಿದೆ. ಫೆಬ್ರವರಿ 2019ರಂದು ಈ ಯೋಜನೆಯನ್ನು ಆರಂಭ ಮಾಡಲಾಗಿದೆ. ಆದರೆ ಡಿಸೆಂಬರ್ 2018ರಿಂದಲೇ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಆದರೆ 14ನೇ ಕಂತಿನಲ್ಲಿ ಕೆಲವರಿಗೆ 2 ಸಾವಿರ ರೂಪಾಯಿಗಿಂತ ಬದಲಾಗಿ 4000 ಸಾವಿರ ರೂಪಾಯಿ ಮೊತ್ತವು ಲಭ್ಯವಾಗಲಿದೆ. ಯಾಕೆ, ಏನು ಅರ್ಹತೆ ಎಂಬ ಬಗ್ಗೆ ತಿಳಿಯೋಣ ಮುಂದೆ ಓದಿ..
ಯಾರಿಗೆ 2 ಸಾವಿರ ರೂಪಾಯಿ ಲಭ್ಯ, ಯಾಕಾಗಿ?
ಈವರೆಗೆ 13 ಕಂತಿನ ಪಿಎಂ ಕಿಸಾನ್ ಯೋಜನೆಯ ಮೊತ್ತವನ್ನು ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದೆ. 13ನೇ ಕಂತಿನ ಮೊತ್ತದಲ್ಲಿ 2000 ರೂಪಾಯಿಯನ್ನು ಜಮೆ ಮಾಡಲಾಗಿದೆ. ಪ್ರತಿ ಕಂತಿನಲ್ಲಿಯೂ ಎರಡು ಸಾವಿರ ರೂಪಾಯಿ ಜಮೆ ಮಾಡಲಾಗುತ್ತದೆ. 14ನೇ ಕಂತಿನಲ್ಲಿ ಕೆಲವು ರೈತರಿಗೆ 2 ಸಾವಿರ ರೂಪಾಯಿ ಜಮೆ ಮಾಡಿದರೆ, ಇನ್ನು ಕೆಲವು ರೈತರಿಗೆ 4000 ಸಾವಿರ ರೂಪಾಯಿ ನೀಡಲಾಗುತ್ತದೆ.
ಮಾಧ್ಯಮಗಳ ವರದಿಯ ಪ್ರಕಾರ ಕೆಲವು ರೈತರುಗಳು 13ನೇ ಕಂತಿನ 2 ಸಾವಿರ ರೂಪಾಯಿ ಮೊತ್ತವನ್ನು ಪಡೆದಿಲ್ಲ. 13ನೇ ಕಂತಿನಲ್ಲಿ ಮೊತ್ತವನ್ನು ಪಡೆಯದ ರೈತರು ಎರಡು ಕಂತಿನ ಮೊತ್ತ ಜೊತೆಯಾಗಿ 4 ಸಾವಿರ ರೂಪಾಯಿ ಪಡೆಯಲಿದ್ದಾರೆ. ಅಂದರೆ ಹೆಚ್ಚುವರಿ ಮೊತ್ತವೇನಲ್ಲ ಬದಲಾಗಿ ಈ ಹಿಂದಿನ ಕಂತಿನಲ್ಲಿ ನೀಡದ ಮೊತ್ತವನ್ನು ಈ ಕಂತಿನಲ್ಲಿ ಜೊತೆಯಾಗಿ ನೀಡಲಾಗುತ್ತದೆ.
ಬಹುತೇಕ ರೈತರುಗಳು ವೆರಿಫೀಕೇಷನ್ ಪ್ರಕ್ರಿಯೆಯನ್ನು ಇನ್ನು ಕೂಡಾ ಪೂರ್ಣಗೊಳಿಸಿಲ್ಲ. ಆದ್ದರಿಂದಾಗಿ ಅವರಿಗೆ 13ನೇ ಕಂತಿನ ಮೊತ್ತವು ಜಮೆಯಾಗಿಲ್ಲ. ಈಗ 14ನೇ ಕಂತಿಗೂ ಮುನ್ನ ವೆರಿಫೀಕೇಷನ್ ಪ್ರಕ್ರಿಯೆ ಪೂರ್ಣಗೊಳಿಸಿದರೆ, ಎರಡು ಕಂತಿನ ಮೊತ್ತ ಜೊತೆಯಾಗಿ ಲಭ್ಯವಾಗಲಿದೆ. ಇನ್ನು 13ನೇ ಕಂತಿನ ಮೊತ್ತ ಲಭ್ಯವಾಗದ ಸಂದರ್ಭದಲ್ಲಿ ಹಲವಾರು ಮಂದಿ ವೆರಿಫಿಕೇಷನ್ ನಡೆಸಿದ್ದಾರೆ.
ಕೆವೈಸಿ ಮಾಡಿಕೊಳ್ಳುವುದು ಹೇಗೆ?
ಹಂತ 1: ಅಧಿಕೃತ ಪಿಎಂ ಕಿಸಾನ್ ವೆಬ್‌ಸೈಟ್ https://pmkisan.gov.in/ ಗೆ ಭೇಟಿ ನೀಡಿ
ಹಂತ 2: ಬಲಭಾಗದಲ್ಲಿ, ಮುಖಪುಟದ ಕೆಳಗೆ, ಇಕೆವೈಸಿ ಕಾಣಲಿದೆ.
ಹಂತ 3: ಫಾರ್ಮರ್ಸ್ ಕಾರ್ನರ್‌ನ ಕೆಳಗೆ ಇಕೆವೈಸಿ ನಮೂದಿಸುವ ಬಾಕ್ಸ್ ಇದೆ
ಹಂತ 4: ಅಲ್ಲಿ ನೀವು e-kyc ಅನ್ನು ಕ್ಲಿಕ್ ಮಾಡಿ, ಆಧಾರ್ Ekyc ಯ ಪುಟ ತೆರೆಯಲಿದೆ
ಹಂತ 5: ಈಗ, ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು
ಹಂತ 6: ನಂತರ ತೋರಿಸಿರುವ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಬೇಕು
ಹಂತ 7: ಬಳಿಕ search ಬಟನ್ ಕ್ಲಿಕ್ ಮಾಡಬೇಕು
ಹಂತ 8: ಅದರ ನಂತರ, ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾದ ನಿಮ್ಮ ಮೊಬೈಲ್ ಸಂಖ್ಯೆಯನ್ನು ನೀವು ನಮೂದಿಸಬೇಕು
ಹಂತ 9: ಬಳಿಕ Get OTP ಅನ್ನು ಕ್ಲಿಕ್ ಮಾಡಿ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ
ಹಂತ 10: ಒಟಿಪಿಯನ್ನು ನಮೂದಿಸಿ, Submit ಮಾಡಿ
ಹಂತ 11: ನೀವು Submit ಬಟನ್ ಕ್ಲಿಕ್ ಮಾಡಿದ ಬಳಿಕ ನಿಮ್ಮ ಪಿಎಂ ಕಿಸಾನ್ ಇ-ಕೆವೈಸಿ ಯಶಸ್ವಿಯಾಗುತ್ತದೆ
ಸ್ಟೇಟಸ್ ಪರಿಶೀಲನೆ ಮಾಡಿ
ಹಂತ 1: ಮೊದಲು PM ಕಿಸಾನ್ ವೆಬ್‌ಸೈಟ್ www.pmkisan.gov.in ಗೆ ಭೇಟಿ ನೀಡಿ
ಹಂತ 2: ಬಳಿಕ Farmers Corner ಮೇಲೆ ಕ್ಲಿಕ್ ಮಾಡಿ
ಹಂತ 3: ನಂತರ Beneficiary Status ಮೇಲೆ ಕ್ಲಿಕ್ ಮಾಡಿ
ಹಂತ 4: ನಂತರದ ಪುಟದಲ್ಲಿ ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ನಮೂದಿಸಿ
ಹಂತ 5: ಬಳಿಕ ಸ್ಟೇಟಸ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯುತ್ತೀರಿ
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications