ದೇಶದಲ್ಲಿ ಪ್ರಧಾನ ಮಂತ್ರಿಗಳ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಿಂದ ಹಲವಾರು ರೈತರು ಪ್ರಯೋಜನ ಪಡೆದಿದ್ದು, ಇದು ಕೃಷಿಯೋಗ್ಯ ಭೂಮಿಯನ್ನು ಹೊಂದಿರುವ ದೇಶದ ಎಲ್ಲ ಭೂಹಿಡುವಳಿ ರೈತ ಕುಟುಂಬಗಳಿಗೆ ಹಣಕಾಸಿನ ನೆರವನ್ನು ನೀಡುತ್ತಿದೆ. ಈ ಯೋಜನೆಯಡಿ ಪ್ರತಿ ಹಣಕಾಸು ವರ್ಷದಲ್ಲಿ ತಲಾ 2000 ರೂ.ನಂತೆ ಮೂರು ಕಂತುಗಳಲ್ಲಿ ಅಂದರೆ ಏಪ್ರಿಲ್-ಜುಲೈ, ಆಗಸ್ಟ್-ನವೆಂಬರ್ ಹಾಗೂ ಡಿಸೆಂಬರ್-ಮಾರ್ಚ್ ಅವಧಿಗೆ ಹಣವನ್ನು ಪಾವತಿಸಲಾಗುತ್ತದೆ.
ಈ ಯೋಜನೆಯಲ್ಲಿ ನೇರ ಲಾಭ ವರ್ಗಾವಣೆ (ಡಿಬಿಟಿ) ವ್ಯವಸ್ಥೆಯಡಿ ದೇಶದೆಲ್ಲೆಡೆಯಿರುವ ಅರ್ಹ ರೈತ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಒಟ್ಟು 6000 ರೂಪಾಯಿಯನ್ನು ವರ್ಗಾಯಿಸಲಾಗುತ್ತದೆ. ಪಿಎಂ ಕಿಸಾನ್ ಫಲಾನುಭವಿಗಳು ತಮ್ಮ ಹೆಸರನ್ನು ಆಧಾರ್‌ನಲ್ಲಿರುವಂತೆ ಪಿಎಂ ಕಿಸಾನ್‌ನಲ್ಲಿ ತಿದ್ದುಪಡಿ ಮಾಡಬಹುದು. ಆಧಾರ್‌ನಂತೆ ಹೆಸರು ಬದಲಿಸುವ ಕುರಿತು ಪಿಎಂ ಕಿಸಾನ್ ಫಲಾನುಭವಿಗಳಿಗೆ ಹಂತ ಹಂತದ ಮಾಹಿತಿ ಇಲ್ಲಿದೆ, ಮುಂದೆ ಓದಿ..

ಆಧಾರ್‌ನಲ್ಲಿರುವಂತೆ ಹೆಸರು ತಿದ್ದುಪಡಿಗೊಳಿಸುವುದು ಹೇಗೆ?
ಹಂತ 1: ಪಿಎಂ ಕಿಸಾನ್ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
ಹಂತ 2: ರೈತರ ಕಾರ್ನರ್ ಆಪ್ಶನ್ ಮೇಲೆ ಕ್ಲಿಕ್ ಮಾಡಿ
ಹಂತ 3: ಆಧಾರ್‌ನಂತೆ ಫಲಾನುಭವಿಗಳ ಹೆಸರು ಬದಲಾವಣೆ ಎಂಬುದರ ಮೇಲೆ ಕ್ಲಿಕ್ ಮಾಡಿ
ಹಂತ 4: ಆಧಾರ್ ಸಂಖ್ಯೆಯನ್ನು ನಮೂದಿಸಿ
ಹಂತ 5: ಇ-ಕೆವೈಸಿ ಲಿಂಕ್ ಮೇಲೆ ಕ್ಲಿಕ್ ಮಾಡಿ
ಹಂತ 6: ನಿಮ್ಮ ಕೆವೈಸಿಯನ್ನು ಪೂರ್ಣಗೊಳಿಸಿ
ಹಂತ 7: ಆಧಾರ್ ಕಾರ್ಡ್‌ನಲ್ಲಿರುವಂತೆ ಹೆಸರನ್ನು ನಮೂದಿಸಿ
ಪಿಎಂ ಕಿಸಾನ್ ಯೋಜನೆ ಎಂದರೇನು?
ಪಿಎಂ ಕಿಸಾನ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿಯವರು 1919ರಲ್ಲಿ ಚಾಲನೆ ನೀಡಿದ್ದು, ದೇಶದೆಲ್ಲೆಡೆ ಕೃಷಿಯೋಗ್ಯ ಭೂಮಿ ಹೊಂದಿರುವ ರೈತ ಕುಟುಂಬಗಳಿಗೆ ಕೆಲವೊಂದು ವಿನಾಯಿತಿಗಳಿಗೆ ಒಳಪಟ್ಟು ಆರ್ಥಿಕ ಬೆಂಬಲವನ್ನು ನೀಡುವುದು ಇದರ ಗುರಿಯಾಗಿದೆ. ಈ ಯೋಜನೆಯಡಿ ಪ್ರತಿ ವರ್ಷವೂ 6000 ರೂ. ವನ್ನು ಮೂರು ಕಂತುಗಳಲ್ಲಿ ತಲಾ 2000 ರೂ. ನಂತೆ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗುತ್ತದೆ.


Click it and Unblock the Notifications