ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ ಸರ್ಕಾರದ ವಿವಿಧ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯು ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ ಯೋಜನೆ ಕೂಡಾ ಆಗಿದೆ. ಇದು ಜೂನ್ 2020 ರಲ್ಲಿ ಪ್ರಾರಂಭವಾದ ಕೇಂದ್ರ ವಲಯದ ಯೋಜನೆಯಾಗಿದೆ.
ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ತೊಂದರೆಗೊಳಗಾದ ಬೀದಿ ವ್ಯಾಪಾರಿಗಳಿಗೆ ಮೈಕ್ರೋ-ಕ್ರೆಡಿಟ್ ಸೌಲಭ್ಯಗಳನ್ನು ಒದಗಿಸುವ ಗುರಿಯನ್ನು ಇದು ಹೊಂದಿದೆ. ಈ ಯೋಜನೆಯಲ್ಲಿ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ. ಈ ಯೋಜನೆ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ಯೋಜನೆ ಬಗ್ಗೆ ಪ್ರಮುಖ ಮಾಹಿತಿ
ಪಿಎಂ ಸ್ವನಿಧಿ ಯೋಜನೆ ಪೂರ್ಣ ಹೆಸರು: ಪ್ರಧಾನ ಮಂತ್ರಿ ಬೀದಿ ಬದಿ ಆತ್ಮನಿರ್ಭರ ನಿಧಿ
ಆರಂಭ ದಿನಾಂಕ: 2020 ರ ಜೂನ್ 1
ಯಾವ ಸಚಿವಾಲಯ?: ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ
ಟಾರ್ಗೆಟ್: ನಗರ ಪ್ರದೇಶಗಳಲ್ಲಿ ಬೀದಿ ವ್ಯಾಪಾರಿಗಳು, ಅರೆನಗರ ಪ್ರದೇಶಗಳ ಬೀದಿ ವ್ಯಾಪಾರಿಗಳು, ಗ್ರಾಮೀಣ ಪ್ರದೇಶದ ಬೀದಿ ವ್ಯಾಪಾರಿಗಳು
ಪ್ರಯೋಜನಕ್ಕೆ ಕಡ್ಡಾಯ ದಾಖಲೆಗಳು: ಆಧಾರ್ ಕಾರ್ಡ್, ವೋಟರ್ ಐಡಿ ಕಾರ್ಡ್
ಪಿಎಂ ಸ್ವನಿಧಿ ಯೋಜನೆ ಫೀಚರ್
* ಇದು ಕೇಂದ್ರ ವಲಯದ ಯೋಜನೆಯಾಗಿದೆ
* ಕೋವಿಡ್ ಸಾಂಕ್ರಾಮಿಕದಿಂದ ಪೀಡಿತರಾಗಿರುವ ಬೀದಿ ವ್ಯಾಪಾರಿಗಳಿಗೆ ಇದು ಕೈಗೆಟುಕುವ ಬಡ್ಡಿದರದಲ್ಲಿ ಸಾಲ ನೀಡುತ್ತದೆ.
* ಇದು ಮಾರ್ಚ್ 2022 ರವರೆಗೆ ಜಾರಿಯಲ್ಲಿತ್ತು. ಇಂದಿಗೂ ಜಾರಿಯಲ್ಲಿದೆ.
* ಮಾರಾಟಗಾರರಿಗೆ ಆರಂಭದಲ್ಲಿ 10000 ರೂಪಾಯಿ ನೀಡಲಾಗುತ್ತದೆ.
* ಸಾಲದ ಆರಂಭಿಕ ಅಥವಾ ಸಕಾಲಿಕ ಮರುಪಾವತಿಯಲ್ಲಿ ಬೀದಿ ಬದಿ ವ್ಯಾಪಾರಸ್ಥ ಶೇಕಡ 7 ರಷ್ಟು ಬಡ್ಡಿ ಸಬ್ಸಿಡಿಯನ್ನು ಪಡೆಯಬಹುದು.
* ಡಿಜಿಟಲ್ ಪಾವತಿಗಳ ಮೇಲೆ ಮಾಸಿಕ ಕ್ಯಾಶ್-ಬ್ಯಾಕ್ ಪ್ರೋತ್ಸಾಹದ ನಿಬಂಧನೆ ಇದೆ.
* ಮಾಸಿಕ ಕ್ಯಾಶ್‌ಬ್ಯಾಕ್ 50-100 ರೂಪಾಯಿ ಆಗಿದೆ.
* ಮೊದಲ ಸಾಲವನ್ನು ಸಮಯಕ್ಕೆ ಮರುಪಾವತಿಸಿದರೆ ಹೆಚ್ಚಿನ ಸಾಲಕ್ಕೆ ಅರ್ಹರಾಗಬಹುದು.
* ಸಾಲ ಪಡೆಯಲು ಯಾವುದೇ ಮೇಲಾಧಾರ ಇಡಬೇಕಾಗಿಲ್ಲ.
ಯೋಜನೆಯ ಉದ್ದೇಶಗಳು
* ಬೀದಿಬದಿ ವ್ಯಾಪಾರಿಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವುದು
* ಸಾಲ ಮರುಪಾವತಿ ಆಧಾರದಲ್ಲಿ ಹೆಚ್ಚುವರಿ ಸಾಲ ನೀಡುವುದು
* ಡಿಜಿಟಲ್ ಮರುಪಾವತಿ ಆಯ್ಕೆ ಮಾಡುವವರಿಗೆ ಬಹುಮಾನ ನೀಡುವ ಮೂಲಕ ಡಿಜಿಟಲೀಕರಣಕ್ಕೆ ಉತ್ತೇಜನ
ಪಿಎಂ ಸ್ವನಿಧಿ ಸಾಲ ನೀಡುವ ಸಂಸ್ಥೆಗಳು
ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳು
ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು
ಸಹಕಾರಿ ಬ್ಯಾಂಕುಗಳು
ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು
ಮೈಕ್ರೋ-ಫೈನಾನ್ಸ್ ಸಂಸ್ಥೆಗಳು
ಸ್ವ ಸಹಾಯ ಗುಂಪುಗಳು (SHG) ಬ್ಯಾಂಕುಗಳು
ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಅರ್ಹತೆ
* ಬೀದಿ ವ್ಯಾಪಾರಿಗಳ (ಜೀವನದ ರಕ್ಷಣೆ ಮತ್ತು ಬೀದಿ ವ್ಯಾಪಾರದ ನಿಯಂತ್ರಣ) ಕಾಯಿದೆ, 2014 ರ ಅಡಿಯಲ್ಲಿ ನಿಯಮಗಳು ಮತ್ತು ಯೋಜನೆಯನ್ನು ಸೂಚಿಸಿದ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿದ ಫಲಾನುಭವಿಗಳಿಗೆ ಮಾತ್ರ ಈ ಯೋಜನೆಯು ಲಭ್ಯವಿದೆ.
* ತನ್ನದೇ ಆದ ರಾಜ್ಯ ಬೀದಿ ವ್ಯಾಪಾರಿಗಳ ಕಾಯಿದೆಯನ್ನು ಹೊಂದಿರುವ ಮೇಘಾಲಯದ ಫಲಾನುಭವಿಗಳು ಭಾಗವಹಿಸಬಹುದು.
More From GoodReturns

ICC T20 World Cup: ವಿಶ್ವಕಪ್ ಗೆದ್ದ ಭಾರತಕ್ಕೆ ಬಿಸಿಸಿಐನಿಂದ ಗುಡ್ ನ್ಯೂಸ್; 131 ಕೋಟಿ ಬಹುಮಾನ ಘೋಷಣೆ

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications