ಮುಕೇಶ್ ಅಂಬಾನಿಯ ರಿಲಯನ್ಸ್ ಗ್ರೂಪ್ ಹಾಗೂ ರತನ್ ಟಾಟಾ ಅವರ ಟಾಟಾ ಗ್ರೂಪ್‌ನಂಥ ಬಹುಕೋಟಿ ಸಾಮ್ರಾಜ್ಯದ ಸಂಪತ್ತು, ವ್ಯವಹಾರ, ಶ್ರೀಮಂತಿಕೆ ಬಗ್ಗೆ ಹಲವಾರು ಆಸಕ್ತದಾಯಕ ವಿಚಾರಗಳನ್ನು ಕೇಳಿರಬಹುದು. ಆದರೆ ಈ ಶ್ರೀಮಂತ ಉದ್ಯಮಿಗಳು ಪ್ರಾರಂಭಿಸಿರುವ ಹಲವಾರು ಉತ್ಪನ್ನ ಅಥವಾ ಬ್ರಾಂಡ್‌ಗಳು ನಮ್ಮ ದೈನಂದಿನ ಬದುಕಿನಲ್ಲಿ ಎಷ್ಟು ಪ್ರಭಾವ ಬೀರುತ್ತವೆ ಎನ್ನುವುದು ಗೊತ್ತಿರುವುದಿಲ್ಲ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಭಾರತೀಯ ಬಹುರಾಷ್ಟ್ರೀಯ ಕಂಪನಿಯಾಗಿದ್ದು, ಮುಂಬೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ರಿಲಯನ್ಸ್ ಕಮರ್ಷಿಯಲ್ ಕಾರ್ಪೊರೇಷನ್ ಅನ್ನು ಧೀರೂಬಾಯಿ ಅಂಬಾನಿ ಅವರು 1958ರಲ್ಲಿ ಸ್ಥಾಪಿಸಿದ್ದರು. ಪ್ರಸ್ತುತ ಮುಕೇಶ್ ಅಂಬಾನಿ ಅವರು ರಿಲಯನ್ಸ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

ಅವರ ಮಕ್ಕಳಾದ ಆಕಾಶ್ ಅಂಬಾನಿ, ಇಶಾ ಅಂಬಾನಿ ಹಾಗೂ ಅನಂತ್ ಅಂಬಾನಿ ಅವರು ಕೂಡ ತಮ್ಮ ಕುಟುಂಬದ ರಿಲಯನ್ಸ್ ಬಿಸಿನೆಸ್‌ನಲ್ಲಿ ಪ್ರಮುಖ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದಾರೆ. ಹಾಗಾದರೆ, ರಿಲಯನ್ಸ್ ರಿಟೇಲ್‌ನಲ್ಲಿ ಮುಕೇಶ್ ಅಂಬಾನಿ ಹಾಗೂ ಇಶಾ ಅಂಬಾನಿ ಅವರು ಪರಿಚಯಿಸಿರುವ ಪ್ರಮುಖ ಬ್ರಾಂಡ್‌ಗಳು ಯಾವುದು ಎಂಬುದನ್ನು ತಿಳಿಯೋಣ.
GAP Inc: ರಿಲಯನ್ಸ್ ರಿಟೇಲ್ ಅಮೆರಿಕದ ದೊಡ್ಡ ಫ್ಯಾಶನ್ ಬ್ರಾಂಡ್ GAP Inc ಜತೆ ಒಪ್ಪಂದ ಮಾಡಿಕೊಂಡಿದೆ. ಈ ಪಾಲುದಾರಿಕೆಯ ಬಳಿಕ GAP Inc ಉತ್ಪನ್ನಗಳು ರಿಲಯನ್ಸ್ ರಿಟೇಲ್ ಸ್ಟೋರ್‌ಗಳಲ್ಲಿ ಲಭ್ಯವಾಗುತ್ತದೆ. ದೇಶದೆಲ್ಲೆಡೆ GAP Inc ಬ್ರಾಂಡ್‌ಗಳನ್ನು ಮಾರಾಟ ಮಾಡುವ ಅಧಿಕೃತ ಏಕೈಕ ಕಂಪನಿ ರಿಲಯನ್ಸ್ ರಿಟೇಲ್ ಆಗಿದೆ. 2022ರಲ್ಲಿ ಈ ಸಂಬಂಧ ರಿಲಯನ್ಸ್‌ನ ಇಶಾ ಅಂಬಾನಿ ಅವರು GAP Inc ಕಂಪನಿ ಜತೆಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಆ ಮೂಲಕ ರಿಲಯನ್ಸ್ ತಮ್ಮ ಸ್ಟೋರ್‌ಗಳು, ಡಿಪಾರ್ಟ್‌ಮೆಂಟ್ ಸ್ಟೋರ್ ಚೈನ್ ಹಾಗೂ ಆನ್‌ಲೈನ್ ಮೂಲಕ ಮಾರಾಟ ಮಾಡುತ್ತಿದೆ.
ಹ್ಯಾಮ್ಲಿಸ್: ರಿಲಯನ್ಸ್ 2019ರಲ್ಲಿ ಬ್ರಿಟೀಷ್‌ನ ಬಹುರಾಷ್ಟ್ರೀಯ ಆಟಿಕೆ ಸ್ಟೋರ್ ಆಗಿರುವ ಹ್ಯಾಮ್ಲಿಸ್ ನಗದು ರೂಪದಲ್ಲಿ ಖರೀದಿ ಮಾಡಿದೆ.
ನೆಟ್‌ಮೆಡ್ಸ್: ನೆಟ್‌ಮೆಡ್ಸ್‌ನಲ್ಲಿ 620 ಕೋಟಿ ರೂ. ಬಂಡವಾಳ ಹೂಡುವ ಮೂಲಕ ಅದರಲ್ಲಿಹೆಚ್ಚಿನ ಪಾಲುದಾರಿಕೆಯನ್ನು ಹೊಂದಿದೆ.
ಮಾರ್ಕ್ಸ್ ಅಂಡ್ ಸ್ಪೆನ್ಸರ್: ಮಾರ್ಕ್ಸ್ ಅಂಡ್ ಸ್ಪೆನ್ಸರ್ 2001ರಲ್ಲಿ ಭಾರತಕ್ಕೆ ಪ್ರವೇಶ ಪಡೆದಿತ್ತು. 2008ರ ಏಪ್ರಿಲ್‌ನಲ್ಲಿ 51% ಷೇರು ಹೊಂದುವ ಮೂಲಕ ಮರ್ಕ್ಸ್ ಅಂಡ್ ಸ್ಪೆನ್ಸರ್ ಕಂಪನಿಯು ರಿಲಯನ್ಸ್ ಜತೆ ಜಂಟಿ ಪಾಲುದಾರಿಕೆಯಲ್ಲಿ ಉದ್ಯಮವನ್ನು ಮುನ್ನಡೆಸುತ್ತಿದೆ.
ಮುಕೇಶ್ ಅಂಬಾನಿ ಅವರು ನೀತಾ ಅಂಬಾನಿ ಅವರನ್ನು ವಿವಾಹವಾಗಿದ್ದಾರೆ. ಅವರಿಗೆ ಆಕಾಶ್ ಅಂಬಾನಿ, ಅನಂತ್ ಅಂಬಾನಿ ಹಾಗೂ ಇಶಾ ಅಂಬಾನಿ ಎಂಬ ಮೂವರು ಮಕ್ಕಳು ಇದ್ದಾರೆ. ಮುಕೇಶ್ ಅಂಬಾನಿ ಅವರು ಆಂಟಿಲಿಯಾ ಎಂಬ ವಿಶ್ವದ ಎರಡನೇಯ ಅತ್ಯಂತ ದುಬಾರಿ ಮನೆಯನ್ನು ಹೊಂದಿದ್ದಾರೆ.


Click it and Unblock the Notifications