ಭಾರತೀಯ ಚಲನಚಿತ್ರ ನಟ, ತೆಲುಗು ಚಿತ್ರರಂಗದಲ್ಲಿ ಕಾರ್ಯನಿರ್ವಹಿಸುವ ಪ್ರಭಾಸ್ ಮುಖ್ಯವಾಗಿ ಬಾಹುಬಲಿ ಸಿನಿಮಾದ ಮೂಲಕ ದೇಶದಲ್ಲಿ ಜನಪ್ರಿಯರಾಗಿದ್ದಾರೆ. ಪ್ರಭಾಸ್ ರಾಜು ಉಪ್ಪಲಪತಿ ಬಾಹುಬಲಿ ಚಲನಚಿತ್ರದಲ್ಲಿ ನಾಯಕ ನಟ ಪಾತ್ರಕ್ಕಾಗಿ ಅಪಾರ ಜನಪ್ರಿಯತೆ ಮತ್ತು ವಿಶ್ವಾದ್ಯಂತ ಮನ್ನಣೆಯನ್ನು ಗಳಿಸಿದರು.
ಪ್ರಭಾಸ್ ತನ್ನ ಆದಾಯದ ವಿಚಾರಕ್ಕೆ ಬಂದರೂ ಕೂಡಾ ಬಾಹುಬಲಿಯಾಗಿದ್ದಾರೆ. ಭಾರತೀಯ ಚಲನಚಿತ್ರೋದ್ಯಮಕ್ಕೆ ಅಗಾಧವಾದ ಕೊಡುಗೆಯನ್ನು ನೀಡಿರುವ ದೇಶದ ಪ್ರಮುಖ ನಟರಲ್ಲಿ ಪ್ರಭಾಸ್ ಕೂಡಾ ಒಬ್ಬರಾಗಿದ್ದಾರೆ. ದೊಡ್ಡ ಅಭಿಮಾನಿ ಬಳಗ ಮತ್ತು ದೊಡ್ಡ ಬಜೆಟ್ ಸಿನಿಮಾವನ್ನು ಮಾಡುತ್ತಾ ಬಂದಿರುವ ಪ್ರಭಾಸ್ ಸಂಭಾವನೆ, ಆದಾಯ ಭಾರೀ ಅಧಿಕವಾಗಿದೆ. ಪ್ರಭಾಸ್ ನಿವ್ವಳ ಮೌಲ್ಯ, ಸಂಭಾವಣೆ, ಕಾರು ಸಂಗ್ರಹ ಇತರೆ ಮಾಹಿತಿ ಇಲ್ಲಿದೆ ಮುಂದೆ ಓದಿ...

ಪ್ರಭಾಸ್ ಬಗ್ಗೆ ತಿಳಿಯಿರಿ
ಪೂರ್ಣ ಹೆಸರು: ಪ್ರಭಾಸ್ ರಾಜು ಉಪ್ಪಲಪತಿ
ಜನನ ದಿನಾಂಕ: ಅಕ್ಟೋಬರ್ 23 1979
ವಯಸ್ಸು: 44 ವರ್ಷ
ಎತ್ತರ: 1.83 ಮೀಟರ್
ರಾಷ್ಟ್ರೀಯತೆ: ಭಾರತ
ನಿವ್ವಳ ಆದಾಯ: 237 ಕೋಟಿ ರೂಪಾಯಿ
ವೇತನ: ಅಂದಾಜು 40 ಕೋಟಿ ರೂಪಾಯಿ
2023ರಲ್ಲಿ ಪ್ರಭಾವ ನಿವ್ವಳ ಆದಾಯ
ಚಲನಚಿತ್ರ ನಟ ಪ್ರಭಾಸ್ ಒಟ್ಟು ನಿವ್ವಳ ಮೌಲ್ಯ 29 ಮಿಲಿಯನ್ ಡಾಲರ್ ಅಥವಾ 237 ಕೋಟಿ ರೂಪಾಯಿ ಎಂದು ಅಂದಾಜು ಮಾಡಲಾಗಿದೆ. ನಟನ ವೈಯಕ್ತಿಕ ಆಸ್ತಿಗಳು ಮತ್ತು ಬ್ರಾಂಡ್ ಜಾಹೀರಾತು ಆದಾಯದ ಬಹುಪಾಲನ್ನು ಆವರಿಸಿದೆ. ಅಲ್ಲದೆ, ದಕ್ಷಿಣ ಭಾರತದ ವ್ಯವಹಾರಗಳೊಂದಿಗೂ ಪ್ರಭಾಸ್ ಕೆಲವು ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ.
ಬಾಹುಬಲಿ ಚಿತ್ರದ ಪ್ರಥಮ ಪ್ರದರ್ಶನದೊಂದಿಗೆ ಪ್ರಭಾಸ್ ನಿವ್ವಳ ಮೌಲ್ಯವು ಏರಿಕೆಯಾಗಿದೆ. ಹಾಗೆಯೆ ಅವರ ಬ್ರಾಂಡ್ ಮೌಲ್ಯವು ಗಮನಾರ್ಹವಾಗಿ ಹೆಚ್ಚಾಗಿದೆ. ಹಲವಾರು ಶೂ ಮತ್ತು ಕಲೋನ್ ಕಂಪನಿಗಳು ಪ್ರಭಾಸ್‌ಗೆ ಆಫರ್ ಅನ್ನು ನೀಡಿದೆ. ಇದಲ್ಲದೆ, ದೇಣಿಗೆ ಮತ್ತು ದಾನದ ವಿಷಯದಲ್ಲೂ ಪ್ರಭಾಸ್ ಜನಪ್ರಿಯ ವ್ಯಕ್ತಿಯಾಗಿದ್ದಾರೆ.
ಅಂದಾಜು ನಿವ್ವಳ ಮೌಲ್ಯ: 237 ಕೋಟಿ ರೂಪಾಯಿ
ಸರಾಸರಿ ಸಿನಿಮಾ ಸಂಭಾವನೆ: ಅಂದಾಜು 45 ಕೋಟಿ ರೂಪಾಯಿ
ಬ್ರಾಂಡ್ ಜಾಹೀರಾತು ಶುಲ್ಕ: ಅಂದಾಜು 2 ಕೋಟಿ ರೂಪಾಯಿ
ವೈಯಕ್ತಿಕ ಹೂಡಿಕೆ: ಅಂದಾಜು 40 ಕೋಟಿ ರೂಪಾಯಿ
ಐಷಾರಾಮಿ ಕಾರು: ಅಂದಾಜು 3 ಕೋಟಿ ರೂಪಾಯಿ
ರಿಯಲ್ ಎಸ್ಟೇಟ್ ಪ್ರಾಪರ್ಟಿ
ಪ್ರಭಾಸ್ ಸದ್ಯ ಹೈದರಾಬಾದ್‌ನ ಜೂಬಿಲಿ ಹಿಲ್ಸ್‌ನಲ್ಲಿರುವ ಅದ್ದೂರಿ ಮನೆಯಲ್ಲಿ ವಾಸವಾಗಿದ್ದಾರೆ. ಕೆಲವು ಮಾಧ್ಯಮಗಳ ವರದಿಗಳ ಪ್ರಕಾರ, ಪ್ರಭಾಸ್‌ನ ಜೂಬಿಲಿ ಹಿಲ್ಸ್ ಮನೆಯಲ್ಲಿ ಈಜುಕೊಳ, ಸುಸಜ್ಜಿತ ಉದ್ಯಾನವನ ಮತ್ತು 1.5 ಕೋಟಿ ರೂಪಾಯಿ ಮೌಲ್ಯದ ಉಪಕರಣಗಳು, ಪ್ರೀಮಿಯಂ ಜಿಮ್ ಸೇರಿದಂತೆ ಐಷಾರಾಮಿ ಸೌಕರ್ಯಗಳನ್ನು ಹೊಂದಿದೆ. ಈ ಆಸ್ತಿಯು 84 ಎಕರೆಗಳಲ್ಲಿ ಹರಡಿಕೊಂಡಿದ್ದು, 2023 ರಲ್ಲಿ ಸುಮಾರು 60 ಕೋಟಿ ರೂಪಾಯಿ ವೆಚ್ಚವಾಗುತ್ತದೆ.
ಮುಂಬೈನಲ್ಲಿ ವಸತಿ ಆಸ್ತಿಯನ್ನು ಹೊಂದಿದ್ದಾರೆ. ನಗರದ ಹೃದಯಭಾಗದಲ್ಲಿರುವ ಅವರ ಮನೆಯನ್ನು ಹೊರತುಪಡಿಸಿ ಪ್ರಭಾಸ್ ಎರಡು ತೋಟದ ಮನೆಗಳನ್ನು ಹೊಂದಿದ್ದಾರೆ. ಸ್ಥಳದಲ್ಲಿ ಈಜುಕೊಳ, ಆಟದ ಮೈದಾನ ಮತ್ತು ಜಿಮ್ ಇದೆ.
ಪ್ರಭಾಸ್ ಕಾರು ಸಂಗ್ರಹ
ಪ್ರಭಾಸ್ ಗ್ಯಾರೇಜ್‌ನಲ್ಲಿ ಹಲವಾರು ಫ್ಯಾನ್ಸಿ ಕಾರುಗಳನ್ನು ಹೊಂದಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಅವರ ಒಟ್ಟು ಕಾರುಗಳ ಮೌಲ್ಯ 15 ಕೋಟಿ ರೂಪಾಯಿಗಳು ಆಗಿದೆ. ಆಡಿ ಆರ್8, ಜಾಗ್ವಾರ್, ಬಿಎಂಡಬ್ಲ್ಯೂ, ಆಡಿ ಆರ್6, ರೇಜ್ ರೋವರ್, ಮರ್ಸಿಡಿಯಸ್ ಮೊದಲಾದ ಕಾರುಗಳನ್ನು ಹೊಂದಿದ್ದಾರೆ.


Click it and Unblock the Notifications