ಭಾರತೀಯ ಜೀವ ವಿಮಾ ನಿಗಮವು ಜನಸಾಮಾನ್ಯರಿಗಾಗಿ ಹಲವಾರು ಪಾಲಿಸಿಗಳನ್ನು ಪ್ರಾರಂಭಿಸಿವೆ. ಕೆಲವು ಪಾಲಿಸಿಗಳು ಮೆಚ್ಯೂರಿಟಿ ಬಳಿಕ ಒಟ್ಟು ಮೊತ್ತವನ್ನು ನೀಡುತ್ತವೆ ಹಾಗೂ ಇನ್ನು ಕೆಲವು ಪಾಲಿಸಿಗಳು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕ ಪಿಂಚಣಿಯನ್ನು ನೀಡುತ್ತವೆ. ಎಲ್‌ಐಸಿಯ ಪ್ರಧಾನ ಮಂತ್ರಿ ವಯ ವಂದನಾ ಯೋಜನೆ(ಪಿಎಂವಿವಿವೈ) ಒಂದು ನಿರ್ದಿಷ್ಟ ಅವಧಿಯ ನಂತರ ಪಿಂಚಣಿಯನ್ನು ನೀಡುವ ಯೋಜನೆಯಾಗಿದೆ.
ಎಲ್‌ಐಸಿ ಪ್ರಧಾನ ಮಂತ್ರಿ ವಯ ವಂದನಾ ಯೋಜನೆ(ಪಿಎಂವಿವಿವೈ) ಎಂದರೇನು?: ಭಾರತ ಸರ್ಕಾರವು 2017ರಲ್ಲಿ ಪ್ರಧಾನ ಮಂತ್ರಿ ವಯ ವಂದನಾ ಯೋಜನೆ(ಪಿಎಂವಿವಿವೈ) ಪಿಂಚಣಿ ಕಾರ್ಯಕ್ರಮವನ್ನು ಪರಿಚಯಿಸಿದೆ. ಈ ಯೋಜನೆಯು 60 ವರ್ಷ ವಯಸ್ಸಿನ ಹಿರಿಯ ನಾಗರಿಕರಿಗೆ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಖಾತ್ರಿಪಡಿಸಿದ ಪಿಂಚಣಿಯಾಗಿದೆ. ಈ ಯೋಜನೆಯು ಹಿರಿಯ ನಾಗರಿಕರಿಗೆ ಹಣಕಾಸಿನ ಭದ್ರತೆ ಹಾಗೂ ಅವರ ನಿವೃತ್ತಿ ಬಳಿಕದ ವೆಚ್ಚಗಳನ್ನು ಭರಿಸಲು ನೆರವಾಗುತ್ತದೆ.

ಎಲ್‌ಐಸಿ ಪ್ರಧಾನ ಮಂತ್ರಿ ವಯ ವಂದನಾ ಯೋಜನೆ(ಪಿಎಂವಿವಿವೈ)ಯ ಕೊನೆಯ ದಿನಾಂಕ\ಲಭ್ಯತೆ ಈ ಯೋಜನೆಯು ಈಗ 2023ರ 31ರವರೆಗೆ ಮಾನ್ಯತೆಯನ್ನು ಹೊಂದಿದೆ.
ಪ್ರಧಾನ ಮಂತ್ರಿ ವಯ ವಂದನಾ ಯೋಜನೆ(ಪಿಎಂವಿವಿವೈ) ವೈಶಿಷ್ಟ್ಯಗಳು
ಭಾರತ ಸರ್ಕಾರವು ಡಿಫರೆನ್ಶಿಯಲ್ ರಿಟರ್ನ್ಸ್ ಅಥವಾ ಎಲ್‌ಐಸಿ ಗಳಿಸಿದ ಆದಾಯ ಮತ್ತು ವಾರ್ಷಿಕ ಆದಾಯದ ನಡುವಿನ ವ್ಯತ್ಯಾಸವನ್ನು ವಾರ್ಷಿಕ ಆಧಾರದ ಮೇಲೆ ಸಬ್ಸಿಡಿಯಾಗಿ ಭರಿಸುತ್ತದೆ. ಚಂದಾದಾರರು ಖರೀದಿ ಸಮಯದಲ್ಲಿ ಆಯ್ಕೆ ಮಾಡಿದ ಪ್ರಕಾರ 10 ವರ್ಷದ ಪಾಲಿಸಿಯ ಲೈಫ್‌ನಲ್ಲಿ ಪ್ರತಿ ಅವಧಿಯ ಮುಕ್ತಾಯದಲ್ಲಿ ಪಿಂಚಣಿ ಪಾವತಿಗಳನ್ನು ಮಾಡಲಾಗುತ್ತದೆ. ಅಂದರೆ, ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕವಾಗಿ.
ಹೂಡಿಕೆ ಮಿತಿಯನ್ನು 7.5 ಲಕ್ಷ ರೂ.ನಿಂದ 15 ಲಕ್ಷ ರೂ.ಗೆ ಹೆಚ್ಚಿಸುವ ಕುರಿತು 2018ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಿಂದ ಒಪ್ಪಿಗೆಯನ್ನು ಪಡೆದುಕೊಳ್ಳಲಾಗಿತ್ತು.
ಎಲ್‌ಐಸಿ ಪ್ರಧಾನ ಮಂತ್ರಿ ವಯ ವಂದನಾ ಯೋಜನೆ(ಪಿಎಂವಿವಿವೈ) ರಿಟರ್ನ್ಸ್ ಲೆಕ್ಕಾಚಾರ ಈ ಯೋಜನೆಯಡಿ ತಿಂಗಳಿಗೆ 1000 ರೂ. ಕನಿಷ್ಠ ಪಿಂಚಣಿಯಂತೆ ವಾರ್ಷಿಕ 12,000ರೂ. ಪಿಂಚಣಿ ಹಾಗೂ 1,62,162ರೂ.- ಕನಿಷ್ಠ ಹೂಡಿಕೆಯನ್ನೂ 1,56,658ರೂ.ಗೆ ಹೆಚ್ಚಿಸಲಾಗಿದೆ.
ಪಿಎಂವಿವಿವೈ ಯೋಜನೆಯಡಿ ಹಿರಿಯ ನಾಗರಿಕರು ಒಂದು ದೊಡ್ಡ ಮೊತ್ತವನ್ನು ಹೂಡಿಕೆ ಮಾಡಬಹುದು ಮತ್ತು ಹತ್ತು ವರ್ಷಗಳವರೆಗೆ ಖಾತ್ರಿಪಡಿಸಿದ ಆದಾಯವನ್ನು ಗಳಿಸಬಹುದು. ಪಿಂಚಣಿ ಪಾವತಿಯನ್ನು ಆಯ್ಕೆ ಮಾಡಿರುವುದನ್ನು ಆಧರಿಸಿ (ಮಾಸಿಕ, ತ್ರೈಮಾಸಿಕ ಶೇ.7.45), ಅರ್ಧ ವಾರ್ಷಿಕ(ಶೇ.7.52) ಅಥವಾ ವಾರ್ಷಿಕ) ಸ್ಥಿರ ಪಿಂಚಣಿ ದರವು ವರ್ಷಕ್ಕೆ ಶೇ.7.40ರಿಂದ ಶೇ.7.66ರವರೆಗೆ ಇರುತ್ತದೆ.
ಏಪ್ರಿಲ್‌ಗೂ ಮುನ್ನ ಈ ಕಾರ್ಯಗಳನ್ನು ಮಾಡಿಬಿಡಿ
ಏಪ್ರಿಲ್ ಬರುವುದಕ್ಕೂ ಮುನ್ನ ಅಂದರೆ ಮಾರ್ಚ್ ಅಂತ್ಯಕ್ಕೂ ಮುನ್ನ ನೀವು ಹಲವಾರು ಕಾರ್ಯಗಳನ್ನು ಮಾಡಬೇಕಾಗಿದೆ. ಪರ್ಮನೆಂಟ್ ಅಕೌಂಟ್ ನಂಬರ್ (ಪ್ಯಾನ್) ಅನ್ನು ಆಧಾರ್ ಕಾರ್ಡ್‌ನೊಂದಿಗೆ ಮಾರ್ಚ್ 31ಕ್ಕೂ ಮುನ್ನ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಇನ್ನು ವರ್ಷದ ಮಧ್ಯದಲ್ಲಿ ಯಾವುದೇ ಹೊಸ ಬೇರೆ ಸಂಸ್ಥೆಗೆ ಸೇರ್ಪಡೆಯಾಗಿದ್ದರೆ, ವೇತನ ಪಡೆಯುವ ವ್ಯಕ್ತಿಯು ಫಾರ್ಮ್ 12B ಆದಾಯ ತೆರಿಗೆ ಫಾರ್ಮ್ ಅನ್ನು ನೀಡಬೇಕಾಗುತ್ತದೆ. ಹಣಕಾಸು ವರ್ಷ 2021-22 ಐಟಿಆರ್ ಅನ್ನು ಫೈಲ್ ಮಾಡಲು ಮಾರ್ಚ್ 31, 2023 ಕೊನೆಯ ದಿನಾಂಕವಾಗಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications