ಭಾರತ ಪುರುಷರ ಕ್ರಿಕೆಟ್ ತಂಡದ ಹಾಲಿ ಮುಖ್ಯ ಕೋಚ್ ಹಾಗೂ ಮಾಜಿ ನಾಯಕ ರಾಹುಲ್ ದ್ರಾವಿಡ್ ಇಂದು ಜನವರಿ 11ರಂದು ತನ್ನ 51ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥ ಮತ್ತು ಅಂಡರ್-19 ಮತ್ತು ಭಾರತ ಎ ತಂಡಗಳ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ 2021ರ ನವೆಂಬರ್‌ನಲ್ಲಿ ಕೋಚ್ ಹುದ್ದೆ ನಿರ್ವಹಿಸುತ್ತಿದ್ದಾರೆ.
ಇತರೆ ಕ್ರಿಕೆಟಿಗರಂತೆಯೇ ರಾಹುಲ್ ದ್ರಾವಿಡ್ ಕೂಡಾ ಉತ್ತಮ ಜೀವನಶೈಲಿಯನ್ನು ಹೊಂದಿದ್ದಾರೆ. ಸರಿಸುಮಾರು ಐಷಾರಾಮಿ ಜೀವನವನ್ನೇ ನಡೆಸುತ್ತಾ ಸಾಗುತ್ತಿದ್ದಾರೆ. ಇದಕ್ಕೆಲ್ಲ ಮುಖ್ಯ ಕಾರಣ ಅವರ ಆದಾಯವಲ್ಲವೇ?. ಹಾಗಿದ್ದಾಗ ಈ ಲೇಖನದಲ್ಲಿ ರಾಹುಲ್ ದ್ರಾವಿಡ್ ಆದಾಯ, ವೇತನ, ಎಂಡೋರ್ಸ್‌ಮೆಂಟ್, ಐಷಾರಾಮಿ ವಸ್ತುಗಳ ಬಗ್ಗೆ ತಿಳಿಯೋಣ ಮುಂದೆ ಓದಿ.....

ರಾಹುಲ್ ದ್ರಾವಿಡ್ ಸಂಭಾವನೆ/ ವೇತನ
ಸ್ಪೋರ್ಟ್ಸ್‌ಕೀಡಾ ಪ್ರಕಾರ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಡಿಯಲ್ಲಿ ಟೀಮ್ ಇಂಡಿಯಾ ಮುಖ್ಯ ಕೋಚ್ ಆಗಿ ದ್ರಾವಿಡ್ ಅವರು ಪ್ರಸ್ತುತ 12 ಕೋಟಿ ರೂಪಾಯಿಗಳಷ್ಟು ವಾರ್ಷಿಕ ಆದಾಯವನ್ನು ಗಳಿಸುತ್ತಾರೆ. ಅವರ ಕೋಚಿಂಗ್ ವೃತ್ತಿಜೀವನದ ಹೊರತಾಗಿ, ದ್ರಾವಿಡ್ ವಿವಿಧ ಬ್ರ್ಯಾಂಡ್ ಎಂಡೋರ್ಸ್‌ಮೆಂಟ್‌ನಿಂದ ಆದಾಯವನ್ನು ಗಳಿಸುತ್ತಾರೆ.
ರಾಹುಲ್ ದ್ರಾವಿಡ್ ಹೂಡಿಕೆಗಳು ಮತ್ತು ಐಷಾರಾಮಿ ವಸ್ತುಗಳು
ದ್ರಾವಿಡ್ ಹಲವಾರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಅದರ ಮೌಲ್ಯ ಆರು ಕೋಟಿ ರೂಪಾಯಿ ಆಗಿದೆ. ಮರ್ಸಿಡಿಸ್ ಬೆಂಜ್, ಬಿಎಂಡಬ್ಲ್ಯೂ, ಹುಂಡೈ ಕಾರುಗಳನ್ನು ರಾಹುಲ್ ದ್ರಾವಿಡ್ ಹೊಂದಿದ್ದಾರೆ. ಕೆಲವು ಕಾರುಗಳನ್ನು ಅವರು ವೈಯಕ್ತಿಕವಾಗಿ ಖರೀದಿಸಿದರೆ, ಇತರವುಗಳನ್ನು ಅವರ ಪ್ರಾಯೋಜಕರು ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.
ದ್ರಾವಿಡ್ ಕೆಂಪು ಬಣ್ಣದ ಪೋರ್ಷೆ 911 ಕ್ಯಾರೆರಾ ಎಸ್ ಅನ್ನು ಖರೀದಿಸಿದ್ದಾರೆ. ಇದು ಅವರ ಕಾರು ಸಂಗ್ರಹಣೆಯಲ್ಲಿರುವ ಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾಗಿದೆ. ದ್ರಾವಿಡ್ ಕಪ್ಪು ಬಣ್ಣದ ಮರ್ಸೆಡಿಸ್ ಬೆನ್ಸ್ ಜಿಎಲ್‌ಇ ಎಸ್‌ಯುವಿಯನ್ನು ಕೂಡಾ ಖರೀದಿಸಿದ್ದಾರೆ.
ರಾಹುಲ್ ದ್ರಾವಿಡ್ 2010 ರಲ್ಲಿ ಬೆಂಗಳೂರಿನ ಇಂದಿರಾ ನಗರದಲ್ಲಿ ತಮ್ಮ ಐಷಾರಾಮಿ ಡಿಸೈನರ್ ಮನೆಯನ್ನು ಖರೀದಿಸಿದ್ದಾರೆ. ಈ ಮನೆಯ ಪ್ರಸ್ತುತ ಮೌಲ್ಯ ಸುಮಾರು 4.2 ಕೋಟಿ ರೂಪಾಯಿ ಆಗಿದೆ.
ರಾಹುಲ್ ದ್ರಾವಿಡ್ ಎಂಡೋರ್ಸ್‌ಮೆಂಟ್
ರಾಹುಲ್ ದ್ರಾವಿಡ್ ಹಲವಾರು ಬ್ರಾಂಡ್‌ಗಳ ಎಂಡೋರ್ಸ್‌ಮೆಂಟ್‌ಗಳನ್ನು ಮಾಡುತ್ತಾರೆ. ರೀಬಾಕ್, ಪೆಪ್ಸಿ, ಕಿಸ್ಸಾನ್, ಕ್ಯಾಸ್ಟ್ರೋಲ್, ಹಚ್, ಕರ್ನಾಟಕ ಪ್ರವಾಸೋದ್ಯಮ, ಮ್ಯಾಕ್ಸ್ ಲೈಫ್, ಬ್ಯಾಂಕ್ ಆಫ್ ಬರೋಡಾ, ಸಿಟಿಜನ್, ಸ್ಕೈಲೈನ್ ಕನ್ಸ್ಟ್ರಕ್ಷನ್, ಸಾನ್ಸುಯಿ, ಜಿಲೆಟ್ ಮತ್ತು ಸ್ಯಾಮ್‌ಸಂಗ್ ಎಂಡೋರ್ಸ್‌ಮೆಂಟ್ ಮಾಡುತ್ತಾರೆ. ಈ ಬ್ರ್ಯಾಂಡ್‌ಗಳ ಎಂಡೋರ್ಸ್‌ಮೆಂಟ್‌ಗೆ 3.5 ಕೋಟಿ ರೂಪಾಯಿ ಪಡೆಯುತ್ತಾರೆ.
ರಾಹುಲ್ ದ್ರಾವಿಡ್ ಅವರು ಕ್ರಿಕೆಟ್ ಆಡುವ ದಿನಗಳಿಂದ ಆಟಗಾರರಾಗಿ ನಿವೃತ್ತಿಯ ನಂತರ ಹಲವಾರು ಬ್ರಾಂಡ್‌ಗಳ ಅಂಬಾಸಿಡರ್ ಆಗಿದ್ದಾರೆ. ಐಪಿಎಲ್ 2021 ರ ಸಮಯದಲ್ಲಿ, ದ್ರಾವಿಡ್ ಕ್ರೆಡ್ (CRED) ಜಾಹೀರಾತಿನಲ್ಲಿ ಗಮನ ಸೆಳೆದಿದ್ದಾರೆ. ಆ ಜಾಹೀರಾತಿನ ಬಳಿಕ ದ್ರಾವಿಡ್ ಪ್ರಾಕ್ಟೊ, ಪಿರಮಲ್ ರಿಯಾಲ್ಟಿ, ಆರ್ಕಿಡ್‌ಗಳಂತಹ ಇನ್ನೂ ಅನೇಕ ಜಾಹೀರಾತುಗಳೊಂದಿಗೆ ಸಹಿ ಹಾಕಿದರು.
ಟಿಎಎಂ ಸ್ಪೋರ್ಟ್ಸ್‌ನ ವರದಿಯ ಪ್ರಕಾರ, ದ್ರಾವಿಡ್ 2021 ರ ಮೊದಲಾರ್ಧದಲ್ಲಿ ಟಿವಿ ಜಾಹೀರಾತಿನಲ್ಲಿ ಶೇಕಡ 4 ರಷ್ಟು ಪಾಲನ್ನು ಹೊಂದಿದ್ದರು. ಈ ಹಿಂದೆ ದ್ರಾವಿಡ್ ರೀಬಾಕ್, ಪೆಪ್ಸಿ, ಕಿಸ್ಸಾನ್, ಕ್ಯಾಸ್ಟ್ರೋಲ್, ಮ್ಯಾಕ್ಸ್ ಲೈಫ್, ಒಪ್ಪೋ, ಜಿಲೆಟ್ ಮತ್ತು ಇನ್ನೂ ಅನೇಕ ಬ್ರ್ಯಾಂಡ್‌ಗಳ ಅಂಬಾಸಿಡರ್ ಆಗಿದ್ದರು.
ಸಾಮಾಜಿಕ ಕಾರ್ಯಗಳು
ರಾಹುಲ್ ದ್ರಾವಿಡ್ ಹಲವಾರು ಸಾಮಾಜಿಕ ಕಾರ್ಯಗಳನ್ನು ಕೂಡಾ ಮಾಡಿದ್ದಾರೆ, ಮಾಡುತ್ತಿದ್ದಾರೆ. ಚಿಲ್ಡ್ರನ್ಸ್ ಮೂವ್ಮೆಂಟ್ ಫಾರ್ ಸಿವಿಕ್ ಅವೇರ್ನೆಸ್ (ಸಿಎಂಸಿಎ) ಮತ್ತು ಯುಎನ್‌ಐಸಿಇಎಫ್ ಬೆಂಬಲಿಗ ಮತ್ತು ಏಡ್ಸ್ ಜಾಗೃತಿ ಅಭಿಯಾನಕ್ಕೆ ರಾಹುಲ್ ಬೆಂಬಲ ನೀಡಿದ್ದಾರೆ. ಇತ್ತೀಚೆಗೆ, ಸ್ಟೀಲ್ ವ್ಯಾಪಾರಿಗಳಾದ ಜಿಂದಾಲ್ ಸ್ಟೀಲ್ ವರ್ಕ್ಸ್ ಒಡೆತನದ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಕ್ಲಬ್ ಬೆಂಗಳೂರು ಎಫ್‌ಸಿಯ ಬ್ರಾಂಡ್ ಅಂಬಾಸಿಡರ್ ಆಗಿ ದ್ರಾವಿಡ್ ಅವರನ್ನು ಹೆಸರಿಸಲಾಗಿದೆ.


Click it and Unblock the Notifications