Rajinikanth's net worth: ತಲೈವಾ ಆದಾಯ, ಕಾರು, ಆಸ್ತಿ ಬಗ್ಗೆ ನಿಮಗೆ ತಿಳಿದಿದೆಯೇ?

ತಲೈವಾ ಎಂದೇ ಹೆಸರುವಾಸಿಯಾದ ಭಾರತದ ಅತೀ ಜನಪ್ರಿಯ ನಟ ರಜನಿಕಾಂತ್ ಹಲವಾರು ದಶಕಗಳಿಂದ ಲಕ್ಷಾಂತರ ಜನರ ಪ್ರೀತಿ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. 1975 ರಲ್ಲಿ ತಮಿಳು ಚಲನಚಿತ್ರ ಅಪೂರ್ವ ರಾಗಂಗಲ್ ಮೂಲಕ ಚಲನಚಿತ್ರಗಳಿಗೆ ಎಂಟ್ರಿ ಕೊಟ್ಟ ರಜನಿಕಾಂತ್ ಈಗ ಹಲವಾರು ಯಶಸ್ವಿ ಚಿತ್ರಗಳನ್ನು ನಮ್ಮ ಮುಂದಿರಿಸಿದ್ದಾರೆ.

ಸಿಂಪಲ್ ಆಗಿ ಇರುವುದರ ಮೂಲಕವೇ ಜನಪ್ರಿಯತೆ ಗಳಿಸಿರುವ ರಜನಿಕಾಂತ್ ಆಗಾಗ ಹಣವನ್ನು ಸಮಾಜ ಸೇವೆಗೆ ಬಳಸುವ ಮೂಲಕ ಸುದ್ದಿಯಾಗುತ್ತಾರೆ. ಜನರಿಗೆ ಇಷ್ಟು ಸಹಾಯ ಮಾಡಿದರೂ ಕೂಡಾ ರಜನಿಕಾಂತ್ ಆದಾಯ ಅಪಾರವಾದುದ್ದು. ತಲೈವಾ ಆದಾಯ, ಕಾರುಗಳು, ಆಸ್ತಿ, ಆದಾಯ ಮೂಲಗಳ ವಿವರವನ್ನು ನಾವಿಲ್ಲಿ ನೀಡಿದ್ದೇವೆ ಮುಂದೆ ಓದಿ...'

ತಲೈವಾ ಆದಾಯ, ಕಾರು, ಆಸ್ತಿ ಬಗ್ಗೆ ನಿಮಗೆ ತಿಳಿದಿದೆಯೇ?

ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ರಜನಿಕಾಂತ್

ಫೋರ್ಬ್ಸ್ ಇಂಡಿಯಾದಿಂದ 2010 ರ ಅತ್ಯಂತ ಪ್ರಭಾವಶಾಲಿ ಭಾರತೀಯ ಎಂದು ರಜನಿಕಾಂತ್ ಹೆಸರನ್ನು ಘೋಷಿಸಲಾಗಿದೆ. ನಟ 2017 ರಲ್ಲಿ ರಾಜಕೀಯಕ್ಕೆ ಪ್ರವೇಶವನ್ನು ಮಾಡಿದ್ದು, 2021 ರಲ್ಲಿ ತಮ್ಮ ಮೈತ್ರಿ ರಜನಿ ಮಕ್ಕಳ್ ಮಂದ್ರಮ್ (ಆರ್‌ಎಂಎಂ) ಅನ್ನು ವಿಸರ್ಜಿಸಿದರು. ಮತ್ತೆ ರಾಜಕೀಯಕ್ಕೆ ಮರಳುವ ಯಾವುದೇ ಚಿಂತನೆಯಿಲ್ಲ ಹೊಂದಿಲ್ಲ ಎಂದು ಪುನರುಚ್ಚರಿಸಿದರು.

ತಲೈವಾ ನಿವ್ವಳ ಆದಾಯ

ಸೂಪರ್‌ಸ್ಟಾರ್‌ ರಜನಿಕಾಂತ್ ನಿವ್ವಳ ಆದಾಯ ಸುಮಾರು 51 ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಅಂದರೆ ಭಾರತೀಯ ರೂಪಾಯಿಯಲ್ಲಿ 430 ಕೋಟಿ ರೂಪಾಯಿ ಆಗಿದೆ. ಒಂದು ಚಿತ್ರಕ್ಕೆ ರಜನಿಕಾಂತ್ ಸುಮಾರು 6 ಮಿಲಿಯನ್ ಡಾಲರ್ ಅಥವಾ 50 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆಯುತ್ತಾರೆ.

ಇನ್ನು ಈ ನಟನ ಮತ್ತೊಂದು ವಿಶೇಷತೆ ಏನೆಂದರೆ, ಸಿನಿಮಾವು ಬಾಕ್ಸ್‌ಆಫೀಸ್‌ನಲ್ಲಿ ಉತ್ತಮವಾಗಿ ಆದಾಯವನ್ನು ಗಳಿಸುವಲ್ಲಿ ವಿಫಲವಾದರೆ ರಜನಿಕಾಂತ್ ತನ್ನ ಆದಾಯವನ್ನು ನಿರ್ಮಾಣ ಕಂಪನಿಗೆ ಹಿಂದಿರುಗಿಸುತ್ತಾರೆ. ಇನ್ನು ರಜನಿಕಾಂತ್ ಬ್ರ್ಯಾಂಡ್ ಅಂಬಾಸಿಡರ್‌ ಆಗಿ ಗಳಿಸುವುದು ಅತೀ ಕಡಿಮೆಯಾಗಿದೆ. ಯಾಕೆಂದರೆ ಹೆಚ್ಚಾಗಿ ಯಾವುದೇ ಬ್ರ್ಯಾಂಡ್‌ಗಳನ್ನು ರಜನಿಕಾಂತ್ ಪ್ರೊಮೋಟ್ ಮಾಡುತ್ತಿಲ್ಲ.

ಕಳೆದ 5 ವರ್ಷದಲ್ಲಿ ರಜನಿಕಾಂತ್ ಗಳಿಕೆ

ರಜನಿಕಾಂತ್ 2022 ರಲ್ಲಿ 5.6 ಮಿಲಿಯನ್ ಡಾಲರ್ ಅಥವಾ 47 ಕೋಟಿ ರೂಪಾಯಿ ಆದಾಯವನ್ನು ಗಳಿಸಿದ್ದಾರೆ. ಇನ್ನು 2021 ಮತ್ತು 2020 ರಲ್ಲಿ ರಜನಿಕಾಂತ್ ಆದಾಯವು ಕ್ರಮವಾಗಿ 3.9 ಮಿಲಿಯನ್ ಡಾಲರ್ (33 ಕೋಟಿ ರೂಪಾಯಿ) ಮತ್ತು 5.4 ಮಿಲಿಯನ್ ಡಾಲರ್ (45 ಕೋಟಿ) ರೂಪಾಯಿ ಆಗಿದೆ.

2019 ರಲ್ಲಿ, 4.2 ಮಿಲಿಯನ್ ಡಾಲರ್ ಅನ್ನು ಗಳಿಸಿದರು. ಅಂದರೆ ಭಾರತೀಯ ರೂಪಾಯಿಯಲ್ಲಿ 35 ಕೋಟಿ ರೂಪಾಯಿ ಆಗಿದೆ. 2018 ರಲ್ಲಿ ರಜನಿಕಾಂತ್ ಆದಾಯ 5.4 ಮಿಲಿಯನ್ ಡಾಲರ್ ಆಗಿದ್ದು, 45 ಕೋಟಿ ರೂಪಾಯಿ ಆಗಿದೆ. ಹಾಗೆಯೇ ಪ್ರಸ್ತುತ ಸುಮಾರು 14 ಮಿಲಿಯನ್ ಡಾಲರ್ ಅಥವಾ 120 ಕೋಟಿ ರೂಪಾಯಿ ಹೂಡಿಕೆ ಹೊಂದಿದ್ದಾರೆ.

ನಟ ಹೊಂದಿರುವ ಆಸ್ತಿಗಳ ವಿವರ

ನಟ ಚೆನ್ನೈನ ಪೋಯಸ್ ಗಾರ್ಡನ್‌ನಲ್ಲಿ ಮನೆಯನ್ನು ಹೊಂದಿದ್ದು ಇದನ್ನು 2002 ರಲ್ಲಿ ರಜನಿಕಾಂತ್ ನಿರ್ಮಿಸಿದ್ದಾರೆ. ಈ ಆಸ್ತಿಯ ಪ್ರಸ್ತುತ ಮಾರುಕಟ್ಟೆ ಬೆಲೆ ಅಂದಾಜು 4.2 ಮಿಲಿಯನ್ ಡಾಲರ್ ಅಥವಾ 35 ಕೋಟಿ ರೂಪಾಯಿ ಆಗಿದೆ. ರಜನಿಕಾಂತ್ ರಾಘವೇಂದ್ರ ಮಂಡಪಂ ಎಂಬ ದುಬಾರಿ ಮದುವೆ ಹಾಲ್ ಅನ್ನು ಹೊಂದಿದ್ದು, ಇದರಲ್ಲಿ 275 ಅತಿಥಿಗಳು ಇರಬಹುದಾಗಿದೆ. 1000 ಕ್ಕೂ ಹೆಚ್ಚು ಜನರು ಅತಿಥಿಗಳಾಗಿ ಆಗಮಿಸುವಷ್ಟು ದೊಡ್ಡದಾಗಿರುವ ಈ ಮದುವೆ ಹಾಲ್ ಅಂದಾಜು 2.4 ಮಿಲಿಯನ್ ಡಾಲರ್ ಅಥವಾ 20 ಕೋಟಿ ರೂಪಾಯಿ ಆಗಿದೆ.

ರೋಬೋಟ್ ನಟನ ಬಳಿ ಇರುವ ಕಾರುಗಳು

ರಜನಿಕಾಂತ್ ಎರಡು ರೋಲ್ಸ್ ರಾಯ್ಸ್ ಮಾಡೆಲ್‌ಗಳು ಸೇರಿದಂತೆ ಹಲವಾರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. 723,802 ಯುಎಸ್ ಡಾಲರ್ ಅಥವಾ 6 ಕೋಟಿ ರೂಪಾಯಿ ಮೌಲ್ಯದ ರೋಲ್ಸ್ ರಾಯ್ಸ್ ಘೋಸ್ಟ್ ಮತ್ತು 1.9 ಮಿಲಿಯನ್ ಡಾಲರ್ ಅಥವಾ 16.5 ಕೋಟಿ ರೂಪಾಯಿ ಮೌಲ್ಯದ ರೋಲ್ಸ್ ರಾಯ್ಸ್ ಫ್ಯಾಂಟಮ್ ಅನ್ನು ರಜನಿಕಾಂತ್ ಹೊಂದಿದ್ದಾರೆ.

ಹಾಗೆಯೇ ಟೊಯೋಟಾ ಇನ್ನೋವಾ, ಹೋಂಡಾ ಸಿವಿಕ್, ಪ್ರೀಮಿಯರ್ ಪದ್ಮಿನಿ ಮತ್ತು ಹಿಂದೂಸ್ತಾನ್ ಮೋಟಾರ್ಸ್ ಅಂಬಾಸಿಡರ್ ಅನ್ನು ಹೊಂದಿದ್ದಾರೆ. ಇದರ ಹೊರತಾಗಿ 1.77 ಕೋಟಿ ರೂಪಾಯಿ ಮೌಲ್ಯದ ಬಿಎಂಡಬ್ಲ್ಯೂ ಎಕ್ಸ್‌5, 2.55 ಕೋಟಿ ರೂಪಾಯಿ ಮೌಲ್ಯದ ಮರ್ಸೆಡಿಸ್ ಬೆನ್ಸ್ ಜಿ ವ್ಯಾಗನ್ ಹೊಂದಿದ್ದಾರೆ.

ಹಾಗೆಯೇ 213,521 ಡಾಲರ್ ಅಥವಾ 3.10 ಕೋಟಿ ರೂಪಾಯಿ ಮೌಲ್ಯದ ಲಂಬೋರ್ಘಿನಿ ಉರಸ್ ಅನ್ನು ಹೊಂದಿದ್ದಾರೆ. 723,802 ಯುಎಸ್‌ ಡಾಲರ್ ಅಥವಾ 6 ಕೋಟಿ ರೂಪಾಯಿ ಮೌಲ್ಯದ ಬೆಂಟ್ಲಿ ಲಿಮೋಸಿನ್ ರಜನಿಕಾಂತ್ ಬಳಿಯಿದೆ. ಆದರೆ ಇದನ್ನು ತನಗೆ ಬೇಕಾದಂತೆ ಬದಲಾವಣೆ ಮಾಡಿಕೊಳ್ಳಲ್ಲೆಂದೆ ನಟ ಹೆಚ್ಚುವರಿ 2.6 ಮಿಲಿಯನ್ ಡಾಲರ್ ಅಥವಾ 22 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+