ಕನ್ನಡ ಚಿತ್ರರಂಗದಿಂದ ಈಗ ಬೇರೆ ಬೇರೆ ದಕ್ಷಿಣ ಭಾರತದ ಚಲನಚಿತ್ರಗಳಲ್ಲಿ ಖ್ಯಾತಿಯನ್ನು ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ದಕ್ಷಿಣ ಭಾರತದ ಚಿತ್ರರಂಗದ ಜನಪ್ರಿಯ ನಟಿ ಎಂದರೆ ತಪ್ಪಾಗಲಾರದು. 2016 ರಲ್ಲಿ ಕನ್ನಡ ಚಲನಚಿತ್ರ "ಕಿರಿಕ್ ಪಾರ್ಟಿ" ಯೊಂದಿಗೆ ತಮ್ಮ ನಟನೆ ಆರಂಭಿಸಿದ ರಶ್ಮಿಕಾ ಈಗ ಯಶಸ್ವಿಯಾಗಿದ್ದಾರೆ.
ತನ್ನ ಚಲನಚಿತ್ರದ ಮೂಲಕ ಉತ್ತಮ ಸಂಪಾದನೆಯನ್ನು ಕೂಡಾ ರಶ್ಮಿಕಾ ಮಂದಣ್ಣ ಮಾಡುತ್ತಾ ಬಂದಿದ್ದಾರೆ. ಇಷ್ಟು ಮಾತ್ರವಲ್ಲದೆ ಹಲವಾರು ಆಸ್ತಿಗಳನ್ನು ಕೂಡಾ ರಶ್ಮಿಕಾ ಹೊಂದಿದ್ದಾರೆ. ಹಾಗೆಯೇ ಬ್ರ್ಯಾಂಡ್ ಅಂಬಾಸಿಡರ್ ಕೂಡಾ ಆಗಿದ್ದಾರೆ. ರಶ್ಮಿಕಾ ಬಳಿ ಇರುವ ಕಾರು, ಹೂಡಿಕೆ, ಆದಾಯ ಇತರೆ ವಿವರ ಮುಂದೆ ಓದಿ....

ರಶ್ಮಿಕಾ ಮಂದಣ್ಣ ನಿವ್ವಳ ಮೌಲ್ಯ, ಆದಾಯ, ಸಂಭಾವನೆ
ಕರ್ನಾಟಕದ ವಿರಾಜಪೇಟೆಯಲ್ಲಿ ಜನಿಸಿದ ರಶ್ಮಿಕಾ ಮಂದಣ್ಣ ಪ್ರಸ್ತುತ ಅತ್ಯುತ್ತಮ ನಟಿಯರಲ್ಲಿ ಒಬ್ಬರು. ಮೊದಲು 2016 ರಲ್ಲಿ ಕನ್ನಡ ಚಲನಚಿತ್ರ ಕಿರಿಕ್ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ತೆಲುಗು ಚಲನಚಿತ್ರ ಚಲೋದಲ್ಲಿ 2018 ರಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. ಅವರ ತಮಿಳು ಚೊಚ್ಚಲ ಸಿನಿಮಾ 2020 ರ ಸುಲ್ತಾನ್ ಆಗಿದೆ. 27 ವರ್ಷದ ನಟಿ 5 ಏಪ್ರಿಲ್ 1996 ರಂದು ಜನಿಸಿದ್ದಾರೆ.
ನಿವ್ವಳ ಆದಾಯ: 65 ಕೋಟಿ ರೂಪಾಯಿ
ಮಾಸಿಕ ಆದಾಯ: 60 ಲಕ್ಷ ರೂಪಾಯಿಕ್ಕೂ ಹೆಚ್ಚು
ವಾರ್ಷಿಕ ಆದಾಯ: 8 ಕೋಟಿ ರೂಪಾಯಿಗೂ ಅಧಿಕ
ಸಂಪತ್ತು: ವೇತನವು ಶೇಕಡ 6 ರಿಂದ 8 ರಷ್ಟು ಹೆಚ್ಚಳ
ಸಂಪತ್ತು: ಮುಂಬೈ, ಗೋವಾ, ಕೊಡಗು
ಇತರೆ ಆಸ್ತಿ: ಭಾರತದಲ್ಲಿ ಹಲವಾರು ಮನೆ
ರಶ್ಮಿಕಾ ಮಂದಣ್ಣ ನಿವ್ವಳ ಮೌಲ್ಯ
ರಶ್ಮಿಕಾ ಮಂದಣ್ಣ ನಿವ್ವಳ ಮೌಲ್ಯ ಸುಮಾರು 65 ಕೋಟಿ ರೂಪಾಯಿಗಳಾಗಿದೆ. ನಟಿ ಈಗಾಗಲೇ ನಾಲ್ಕು ಚಲನಚಿತ್ರ ಉದ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ಪ್ರತಿ ಉದ್ಯಮದಲ್ಲಿ ಒಂದೆರಡು ಅಥವಾ ಹೆಚ್ಚಿನ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಪ್ರತಿ ಚಲನಚಿತ್ರಕ್ಕೆ 4 ಕೋಟಿ ರೂಪಾಯಿಗಳನ್ನು ವಿಧಿಸುತ್ತಾರೆ ಎಂದು ವರದಿಯಾಗಿದೆ.
ಇತ್ತೀಚೆಗೆ ಬೃಹತ್ ಹಿಟ್ ಚಲನಚಿತ್ರ ಪುಷ್ಪಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಿಂದ ಉತ್ತಮ ಸಂಭಾವನೆಯನ್ನು ಕೂಡಾ ನಟಿ ಪಡೆದಿದ್ದಾರೆ. ಇದಲ್ಲದೆ ನಟಿ ಕೆಲವು ಬ್ರಾಂಡ್‌ಗಳಿಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಮಾಡೆಲಿಂಗ್ ಕೆಲಸ ಮತ್ತು ಜಾಹೀರಾತುಗಳನ್ನು ಕೂಡಾ ಮಾಡುತ್ತಾ ಬಂದಿದ್ದಾರೆ. ಒಂದು ದಶಕಕ್ಕೂ ಕಡಿಮೆ ಅವಧಿಯಲ್ಲಿ ಉತ್ತಮ ಆದಾಯವನ್ನು ಪಡೆದಿದ್ದಾರೆ.
ರಶ್ಮಿಕಾ ಮಂದಣ್ಣ ಹೊಂದಿರುವ ಮನೆಗಳು
ಅತೀ ಅಧಿಕ ನಿವ್ವಳ ಮೌಲ್ಯವನ್ನು ಹೊಂದಿದ್ದರೂ ಕೂಡಾ ನಟಿಯು ಹಲವಾರು ಮನೆಗಳನ್ನು ಹೊಂದಿದ್ದಾರೆ. ಮುಂಬೈನಲ್ಲಿ ಒಂದು ಮನೆಯನ್ನು ಹೊಂದಿದ್ದಾರೆ ಎಂದು ವರದಿ ಹೇಳಿದೆ. ಇತ್ತೀಚೆಗಷ್ಟೇ ನಟಿ ಬಾಲಿವುಡ್‌ನಲ್ಲಿನ ಆಫರ್ ಲಭ್ಯವಾದ ಬಳಿಕ ತಕ್ಷಣ ಮುಂಬೈನಲ್ಲಿ ಮನೆಯನ್ನು ಖರೀದಿಸಿದರು. ಮುಂಬೈನಲ್ಲಿರುವ ರಶ್ಮಿಕಾ ಮಂದಣ್ಣ ಮನೆಯನ್ನು ಸೆರಿನಿಟಿ ಎಂದು ಕರೆಯಲಾಗುತ್ತದೆ.
ಮುಂಬೈ ಮಾತ್ರವಲ್ಲದೆ ಬೆಂಗಳೂರು, ಗೋವಾ, ಕೊಡಗು, ಹೈದರಾಬಾದ್‌ನಲ್ಲಿಯೂ ರಶ್ಮಿಕಾ ಮನೆಯನ್ನು ಹೊಂದಿದ್ದಾರೆ. ರಶ್ಮಿಕಾ ದೊಡ್ಡ ಪ್ರಕೃತಿ ಪ್ರೇಮಿಯಾಗಿರುವುದರಿಂದ ತನ್ನ ಆಸ್ತಿಗೆ ಸೆರಿನಿಟಿ ಎಂದು ಹೆಸರಿಟ್ಟಿದ್ದಾರೆ. ರಶ್ಮಿಕಾ ತಿಂಗಳಿಗೆ ಅರ್ಧ ಕೋಟಿಗಿಂತ ಹೆಚ್ಚು ಸಂಪಾದಿಸುತ್ತಾರೆ. ಆದ್ದರಿಂದಾಗಿ ಭಾರತದಲ್ಲಿ ಅನೇಕ ಆಸ್ತಿಗಳನ್ನು ಹೊಂದಿದ್ದಾರೆ.
ರಶ್ಮಿಕಾ ಮಂದಣ್ಣ ವಾರ್ಷಿಕ ಆದಾಯ 8 ಕೋಟಿ ರೂಪಾಯಿಯನ್ನು ಮೀರಿದೆ. ಪ್ರತಿ ಚಲನಚಿತ್ರಕ್ಕೆ ಬಹುಕೋಟಿಗಳನ್ನು ವಿಧಿಸುವುದರ ಹೊರತಾಗಿ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿ ಬ್ರ್ಯಾಂಡ್ ಪ್ರೋಮೋಷನ್ ಮೂಲಕ 10 ಲಕ್ಷ ರೂಪಾಯಿಗಳನ್ನು ಗಳಿಸುತ್ತಾರೆ. ಟಿವಿ ಜಾಹೀರಾತುಗಳಿಂದಲೂ ಕೋಟಿ ರೂಪಾಯಿ ಗಳಿಸುತ್ತಾರೆ.
ರಶ್ಮಿಕಾ ಮಂದಣ್ಣ ಪ್ರತಿ ಚಿತ್ರಕ್ಕೆ ಸಂಭಾವನೆ
ಪುಷ್ಪಾ ಸಿನಿಮಾಕ್ಕೂ ಮುನ್ನ ಒಂದು ಚಿತ್ರಕ್ಕೆ ರಶ್ಮಿಕಾ ಮಂದಣ್ಣ 3 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆಯುತ್ತಿದ್ದರು. ಆದರೆ ಈಗ ಪ್ರತಿ ಚಿತ್ರಕ್ಕೆ 4 ಕೋಟಿ ರೂಪಾಯಿಗಳನ್ನು ತೆಗೆದುಕೊಳ್ಳುತ್ತಾರೆ. ನಟಿ ಅನೇಕ ಉದ್ಯಮಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಹಾಗೆಯೇ ಆದಾಯವು ಕೂಡಾ ಹೆಚ್ಚಳವಾಗುತ್ತ ಸಾಗುತ್ತಿದೆ.
ರಶ್ಮಿಕಾ ಬಳಿಯಿರುವ ಕಾರುಗಳು
ನಗರದಲ್ಲಿ ಪ್ರಯಾಣ ಮಾಡಲು ರಶ್ಮಿಕಾ ತನ್ನ ಆಡಿ Q3 ಜರ್ಮನ್ ಎಸ್‌ಯುವಿಯನ್ನು ಬಳಸುತ್ತಾರೆ. ಇದನ್ನು ಹೊರತುಪಡಿಸಿ ನಟಿ ಬ್ರಿಟಿಷ್ ಐಷಾರಾಮಿ ವಾಹನವಾದ ರೇಂಜ್ ರೋವರ್ ಸ್ಪೋರ್ಟ್ ಕಾರು ಇದೆ. ಜೊತೆಗೆ ಮರ್ಸಿಡಿಸ್ ಬೆಂಜ್ ಸಿ-ಕ್ಲಾಸ್, ಟೊಯೊಟಾ ಇನ್ನೋವಾ ಮತ್ತು ಹ್ಯುಂಡೈ ಕ್ರೆಟಾ ಕೂಡಾ ಇದೆ.


Click it and Unblock the Notifications