ಭಾರತೀಯ ಉದ್ಯಮಿ, ಸಮಾಜ ಸೇವಕ, ಹಾಗೂ ಟಾಟಾ ಸನ್ಸ್ ಸಮೂಹದ ಮಾಜಿ ಅಧ್ಯಕ್ಷ, ಕಾರ್ಯ ನಿರ್ವಹಿಸಿದ ಉದ್ಯಮ ಪ್ರಪಂಚದ ವಿನಮ್ರ ದೈತ್ಯ ರತನ್ ನವಲ್ ಟಾಟಾ ಬ್ಯುಸಿನೆಸ್ ಪ್ರಪಂಚದಲ್ಲಿ ಹೆಚ್ಚಾಗಿ ಚರ್ಚೆಯಲ್ಲಿರುವ ವ್ಯಕ್ತಿಯಾಗಿದ್ದಾರೆ. ಆದರೆ ಅವರು ತಮ್ಮ ಖಾಸಗಿ ಜೀವನವನ್ನು ಯಾವಾಗಲೂ ಹೆಚ್ಚು ಸಾರ್ವಜನಿಕಗೊಳಿಸಲು ಇಚ್ಚೆಪಡುವುದಿಲ್ಲ.
ನಿವೃತ್ತಿಯ ನಂತರ ರತನ್ ಟಾಟಾ ಹಲವಾರು ವರ್ಷಗಳಿಂದ ಶಾಂತ ಮತ್ತು ಆರಾಮದಾಯಕ ಜೀವನವನ್ನು ಸಾಗಿಸುತ್ತಿದ್ದಾರೆ. ಸಾಧಾರಣ ಜೀವನಶೈಲಿಯನ್ನು ಬಯಸುವ ರತನ್ ಟಾಟಾ ತನ್ನ ನಿವೃತ್ತ ಜೀವನಕ್ಕಾಗಿ ಮುಂಬೈಯ ಕಡಲ ತೀರದಲ್ಲಿ ಮೂರು ಮಹಡಿಯ ವಿಲ್ಲಾವನ್ನೂ ನಿರ್ಮಿಸಿದ್ದಾರೆ. ಹಾಗಿದ್ರೆ ಅವರ ಮನೆಯೊಳಗೆ ಏನಿದೆ ನೋಡೋಣ...

ರತನ್ ಟಾಟಾ ಮನೆಯ ಬಗ್ಗೆ ತಿಳಿಯಿರಿ
ರತನ್ ಟಾಟಾ ಅವರ ಮನೆ ಕೊಲಾಬಾದಲ್ಲಿದ್ದು, ಇದು ಮುಂಬೈನ ಅತ್ಯಂತ ಐಷಾರಾಮಿ ಮತ್ತು ದುಬಾರಿ ಪ್ರದೇಶಗಳಲ್ಲಿ ಒಂದಾಗಿದೆ. ಅವರ ಕೊಲಾಬಾದಲ್ಲಿರುವ ಭವನಕ್ಕೆ "ಕ್ಯಾಬಿನ್ಸ್" ಎಂದು ಹೆಸರಿಸಲಾಗಿದ್ದು, ರತನ್ ಅವರು ಟಾಟಾ ಗ್ರೂಪ್‌ನಿಂದ ನಿವೃತ್ತರಾದ ನಂತರ ಅಲ್ಲಿಯೇ ವಾಸಿಸುತ್ತಿದ್ದಾರೆ. ಸಮುದ್ರಮುಖಿಯಾಗಿರುವ "ಕ್ಯಾಬಿನ್ಸ್" ನಿವಾಸ ಕೊಲಾಬಾದಲ್ಲಿನ ಅತ್ಯಂತ ಸೊಗಸಾದ ಮಹಲುಗಳಲ್ಲಿ ಒಂದಾಗಿದೆ.
2012 ರಲ್ಲಿ ಟಾಟಾ ಸನ್ಸ್‌ನ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಬಳಿಕ ಐಷಾರಾಮಿ ಕೊಲಾಬಾ ಮನೆಗೆ ತೆರಳಿ ನಿವೃತ್ತಿಯ ಜೀವನ ಆನಂದಿಸುತ್ತಿದ್ದಾರೆ. ಬ್ರೋಕರೇಜ್ ಸಂಸ್ಥೆಗಳ ಪ್ರಕಾರ, ಟಾಟಾ ಅವರ ಮನೆಯು 2023 ರಲ್ಲಿ 150 ಕೋಟಿ ರೂಪಾಯಿ ಮೌಲ್ಯದ್ದಾಗಿದೆ. ರತನ್ ಟಾಟಾ ಅವರ ಕ್ಯಾಬಿನ್ಸ್ ಸುಮಾರು 13,000 ಚದರ ಅಡಿ ಪ್ರದೇಶದಲ್ಲಿ ಹರಡಿದ್ದು, ಮೂರು ಮಹಡಿಗಳನ್ನು ಹೊಂದಿದ್ದು ಇದನ್ನು ಏಳು ಹಂತಗಳಾಗಿ ವಿಂಗಡಿಸಲಾಗಿದೆ.
ಬೃಹತ್ ಮಹಲು ನಾಲ್ಕು ಬೆಡ್ ರೂಂ, ಖಾಸಗಿ ಜಿಮ್ನಾಷಿಯಂ, ಮಹಡಿಯ ಮೇಲೆ ಬೃಹತ್ ಈಜುಕೊಳ, ಮೀಟಿಂಗ್ ಏರಿಯಾ ಅದ್ದೂರಿ ಪೂಜಾಗೃಹದಂತಹ ಹಲವಾರು ಸೌಕರ್ಯಗಳನ್ನು ಹೊಂದಿದೆ. ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ, ಈ ಭವ್ಯವಾದ ಮೆಟ್ಟಿಲುಗಳು, ಸಂಕೀರ್ಣ ವಿನ್ಯಾಸದ ಕೊಠಡಿಯೊಳಗೆ ಸ್ವಾಗತಿಸುತ್ತದೆ. ಮೆಟ್ಟಿಲುಗಳ ರೇಲಿಂಗ್‌ಗಳ ಅಲಂಕೃತ ವಿನ್ಯಾಸವು ಈ ಸ್ಥಳಕ್ಕೆ ವಿಶೇಷ ಆಕರ್ಷಣೆಯನ್ನು ನೀಡುತ್ತದೆ.
ಎರಡನೇ ಮಹಡಿಯಲ್ಲಿ ಲಿವೀಂಗ್ ರೂಂ ಮತ್ತು ಮೂರು ಬೆಡ್ ರೂಂ ಹಾಗೂ ಗ್ರಂಥಾಲಯವಿದೆ ಯಾಕೆಂದರೆ ರತನ್ ಟಾಟಾ ಅವರು ಅತ್ಯಾಸಕ್ತಿಯ ಓದುಗರಾಗಿದ್ದಾರೆ. ಮೊದಲ ಮಹಡಿಯಲ್ಲಿ ಸಿನಿಮಾ ಕೊಠಡಿ, ಖಾಸಗಿ ಜಿಮ್ ಹಾಗೂ ಒಂದು ಬೆಡ್ ರೂಂ ಇದೆ.
ರತನ್ ಟಾಟಾ ಅವರ ಮನೆಯ ಸನ್ ಡೆಕ್ ನಲ್ಲಿ ಏಕಕಾಲದಲ್ಲಿ 50 ಜನರ ಇರಬಹುದಾದ ಸ್ಥಳಾವಕಾಶವಿದೆ.
ನೆಲಮಾಳಿಗೆಯ ಕಾರ್ ಪಾರ್ಕಿಂಗ್ ಇದ್ದು ಇಲ್ಲಿ 15 ಕ್ಕೂ ಹೆಚ್ಚು ಕಾರ್ ಪಾರ್ಕ್ ಮಾಡಬಹುದಾಗಿದೆ. ಕೆಳ ಅಂತಸ್ತಿನಲ್ಲಿ ಸಿಬ್ಬಂದಿಗಳ ಕ್ವಾರ್ಟರ್ಸ್ಗಳಿವೆ. ಮನೆಯ ಮೇಲಿನ ಮಹಡಿಯಲ್ಲಿ ಬೃಹತ್ ಸ್ವಿಮ್ಮಿಂಗ್ ಪೂಲ್, ವಿಶಾಲವಾದ ಬಾರ್ ಮತ್ತು ಬಾರ್ಬೆಕ್ಯೂ ವಲಯವಿದೆ. ಕಟ್ಟಡದ ಬಿಳಿ ಸೀಲಿಂಗ್, ಗೋಡೆಗಳು ಮತ್ತು ದೊಡ್ಡ - ದೊಡ್ಡ ಗಾಜಿನ ಕಿಟಕಿಗಳು ಹಾಗೂ ಅದರ ಉದ್ದಕ್ಕೂ ವಸಾಹತುಶಾಹಿ ವಾಸ್ತುಶಿಲ್ಪದ ಗುಣಲಕ್ಷಣಗಳನ್ನು ಹೊಂದಿವೆ.
ಕಟ್ಟಡದ ಬಿಳಿ ಸೀಲಿಂಗ್ ಇರುವ ಗೋಡೆಗಳು ಮತ್ತು ದೊಡ್ಡ - ದೊಡ್ಡ ಗಾಜಿನ ಕಿಟಕಿಗಳು ಹಾಗೂ ಅದರ ಉದ್ದಕ್ಕೂ ವಸಾಹತುಶಾಹಿ ವಾಸ್ತುಶಿಲ್ಪದ ಗುಣಲಕ್ಷಣಗಳನ್ನು ಹೊಂದಿವೆ. ಇದಲ್ಲದೇ ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷರ ಮನೆಯಲ್ಲಿ ಅತ್ಯಾಧುನಿಕ ಮಾಧ್ಯಮ ಕೊಠಡಿ, ಆಧುನಿಕ ಥಿಯೇಟರ್ ಮತ್ತು ಸುಸಜ್ಜಿತ ಜಿಮ್ ಇದೆ.
ನೆಲ ಮಹಡಿಯು ಸುತ್ತಮುತ್ತಲಿನ ಮೇಲ್ಮೈಯಿಂದ ಹಲವಾರು ಅಡಿಗಳಷ್ಟು ಎತ್ತರದಲ್ಲಿದೆ. ಸಾಮಾಜಿಕ ಮಾಧ್ಯಮದಿಂದ ದೂರ ಉಳಿಯಲು ಈ ಮನೆಯನ್ನು ಆಯ್ಜೆ ಮಾಡಿ ಕೊಂಡಿರುವ ರತನ್ ಟಾಟಾ ಹಲವಾರು ವರ್ಷಗಳಿಂದ ಇದೇ ಮನೆಯಲ್ಲಿ ವಾಸಿಸುತ್ತಿದ್ದಾರೆ


Click it and Unblock the Notifications