ಆರ್‌ಬಿಐ 2000 ರೂಪಾಯಿ ನೋಟುಗಳನ್ನು ಮೇ ತಿಂಗಳಿನಲ್ಲಿ ಚಲಾವಣೆಯಿಂದ ಹಿಂದಕ್ಕೆ ಪಡೆದಿದೆ. ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಜಮೆ ಮಾಡಲು ಅಕ್ಟೋಬರ್ 15 ರವರೆಗೆ ಅವಕಾಶವನ್ನು ಕೂಡಾ ಆರ್‌ಬಿಐ ನೀಡಿತ್ತು. ಆದರೆ ಇನ್ನೂ ಕೂಡಾ ನಿಮ್ಮಲ್ಲಿ ಎರಡು ಸಾವಿರ ರೂಪಾಯಿ ನೋಟು ಇದೆಯೇ? ಭಯಪಡಬೇಕಾಗಿಲ್ಲ ನೋಡಿ.
ಇನ್ನೂ ಕೂಡಾ ನಿಮ್ಮ ಬಳಿ 2,000 ರೂಪಾಯಿ ನೋಟುಗಳನ್ನು ಡೆಪಾಸಿಟ್ ಮಾಡಲು ಅಥವಾ ಬದಲಾವಣೆ ಮಾಡಲು ಸಾಧ್ಯವಾಗದಿದ್ದರೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಈಗ ನಿಮಗೆ ಅವಕಾಶವನ್ನು ಆರ್‌ಬಿಐ ನೀಡಿದೆ. ನೀವು ಆರ್‌ಬಿಐನ ಕಚೇರಿಗೆ ಕಳುಹಿಸುವ ಅವಕಾಶ ಈ ಹಿಂದೆ ಇದ್ದರೂ ನೀವು ಕಚೇರಿಗೆ ಭೇಟಿ ನೀಡುವುದು ಕಷ್ಟವಲ್ಲವೇ?

ಅದಕ್ಕಾಗಿ ನಿಮಗೆ ಉತ್ತಮ ಅವಕಾಶವಿದೆ. ನೀವು ಈಗ ನಿಮ್ಮಲ್ಲಿ ಇದ್ದ ನೋಟುಗಳನ್ನು ಕೇಂದ್ರೀಯ ಬ್ಯಾಂಕ್‌ನ ನಿರ್ದಿಷ್ಟ ಪ್ರಾದೇಶಿಕ ಕಚೇರಿಗಳಿಗೆ ಕಳುಹಿಸಬಹುದು ಎಂದು ಹೇಳಿದೆ. ರಿಸರ್ವ್ ಬ್ಯಾಂಕ್‌ನ ಪ್ರಾದೇಶಿಕ ಕಚೇರಿಗಳಿಂದ ದೂರವಿರುವ ಜನರು, ಪೋಸ್ಟ್ ಮಾಡಬಹುದು.
ಆರ್‌ಬಿಐ ಟ್ರಿಪಲ್ ಲಾಲಾಕ್ ರೆಸೆಪ್ಟಾಕಲ್, ಏನಿದು?
ಇನ್ನು ನೀವು ಈ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಮಾಡಲು ಬಯಸಿದರೆ ಅದಕ್ಕೆ ಆರ್‌ಬಿಐ ಪ್ರತ್ಯೇಕವಾದ ಅವಕಾಶವನ್ನು ಕೂಡಾ ನೀಡುತ್ತದೆ. ನೀವು ಟ್ರಿಪಲ್ ಲಾಕ್ ರೆಸೆಪ್ಟಾಕಲ್ ಅಥವಾ ಟಿಎಲ್‌ಆರ್ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ. ಇದರಿಂದಾಗಿ ನಿಮ್ಮ ಖಾತೆಗೆ ಮೊತ್ತ ಜಮೆಯಾಗಲಿದೆ.
"ಗ್ರಾಹಕರು 2,000 ರೂಪಾಯಿ ನೋಟುಗಳನ್ನು ವಿಮೆ ಮಾಡಿದ ಪೋಸ್ಟ್ ಮೂಲಕ ತಮ್ಮ ಖಾತೆಯಲ್ಲಿ ನೇರ ಕ್ರೆಡಿಟ್ ಮಾಡಲು ಅತ್ಯಂತ ತಡೆರಹಿತ ಮತ್ತು ಸುರಕ್ಷಿತ ರೀತಿಯಲ್ಲಿ ಆರ್‌ಬಿಐಗೆ ಕಳುಹಿಸಲು ನಾವು ಪ್ರೋತ್ಸಾಹಿಸುತ್ತೇವೆ. ನಿರ್ದಿಷ್ಟ ಶಾಖೆಗಳಿಗೆ ಪ್ರಯಾಣಿಸುವ ಮತ್ತು ಸರದಿಯಲ್ಲಿ ನಿಲ್ಲುವ ತೊಂದರೆಯಿಂದ ಜನರನ್ನು ದೂರ ಮಾಡುತ್ತದೆ," ಎಂದು ಆರ್‌ಬಿಐ ಪ್ರಾದೇಶಿಕ ನಿರ್ದೇಶಕ ರೋಹಿತ್ ಪಿ ದಾಸ್ ಹೇಳಿದ್ದಾರೆ.
ಟಿಎಲ್‌ಆರ್ ಮತ್ತು ವಿಮೆ ಮಾಡಿದ ಪೋಸ್ಟ್ ಎರಡೂ ಆಯ್ಕೆಗಳು ಹೆಚ್ಚು ಸುರಕ್ಷಿತವಾಗಿದೆ ಎಂದು ಆರ್‌ಬಿಐ ಅಧಿಕಾರಿ ಭರವಸೆ ನೀಡಿದರು. ದೆಹಲಿಯ ಕಚೇರಿಯಲ್ಲಿಯೇ ಸುಮಾರು 700 ಟಿಎಲ್‌ಆರ್ ಫಾರ್ಮ್‌ಗಳನ್ನು ಡೆಪಾಸಿಟ್ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮೇ 19, 2023 ರಿಂದ ರಿಸರ್ವ್ ಬ್ಯಾಂಕ್‌ನ 19 ಆರ್‌ಬಿಐ ಆಫೀಸ್‌ಗಳಲ್ಲಿ 2000 ರೂಪಾಯಿ ಬ್ಯಾಂಕ್‌ನೋಟುಗಳನ್ನು ವಿನಿಮಯ ಮಾಡಿಕೊಳ್ಳುವ ಸೌಲಭ್ಯವನ್ನು ನೀಡಿದೆ. ಆದರೆ ಅಕ್ಟೋಬರ್ 09, 2023 ರಿಂದ ಸಂಸ್ಥೆಗಳು ಮತ್ತು ಘಟಕಗಳು, ಜನರು ನೋಟುಗಳನ್ನು ನೇರವಾಗಿ ಆರ್‌ಬಿಐಗೆ ಜಮೆ ಮಾಡುವ ಅವಕಾಶ ನೀಡಲಾಗಿದೆ.
ಇದಲ್ಲದೆ ಜನರು 2000 ರೂಪಾಯಿ ಬ್ಯಾಂಕ್‌ನೋಟುಗಳನ್ನು ಭಾರತದ ಯಾವುದೇ ಅಂಚೆ ಕಚೇರಿಯಿಂದ ಇಂಡಿಯಾ ಪೋಸ್ಟ್ ಮೂಲಕ ಕಳುಹಿಸಬಹುದು. ಭಾರತದಲ್ಲಿನ ತಮ್ಮ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲು ಯಾವುದೇ ಆರ್‌ಬಿಐ ಇಶ್ಯೂ ಆಫೀಸ್‌ಗಳಿಗೆ ಕಳುಹಿಸಬಹುದು ಎಂದು ಆರ್‌ಬಿಐ ಹೇಳಿಕೆಯಲ್ಲಿ ತಿಳಿಸಿದೆ.
ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಈ ನೋಟು ಚಲಾವಣೆಯಿಂದ ಹಿಂಪಡೆದು ಘೋಷಿಸಿದಾಗ ಮೇ 19 ರಂದು 3.65 ಲಕ್ಷ ಕೋಟಿ ರೂಪಾಯಿ ನೋಟುಗಳು ಚಲಾವಣೆಯಲ್ಲಿತ್ತು. ಅಕ್ಟೋಬರ್ 31, 2023 ರವರೆಗೆ 0.10 ಲಕ್ಷ ಕೋಟಿ ರೂಪಾಯಿ ಮೊತ್ತದ ಶೇಕಡ 97 ರಷ್ಟು ನೋಟುಗಳನ್ನು ವಾಪಾಸ್ ಮಾಡಲಾಗಿದೆ.
ಆರ್‌ಬಿಐ ಪ್ರಾದೇಶಿಕ ಕಚೇರಿಗಳ ಪಟ್ಟಿ
ಅಹಮದಾಬಾದ್, ಬೆಂಗಳೂರು, ಬೇಲಾಪುರ, ಭೋಪಾಲ್, ಭುವನೇಶ್ವರ, ಚಂಡೀಗಢ, ಚೆನ್ನೈ, ಗುವಾಹಟಿ, ಹೈದರಾಬಾದ್, ಜೈಪುರ, ಜಮ್ಮು, ಕಾನ್ಪುರ, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ , ಪಾಟ್ನಾ ಮತ್ತು ತಿರುವನಂತಪುರಂ.


Click it and Unblock the Notifications