ನೀವು ಈಗ ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ 2000 ರೂಪಾಯಿಯನ್ನು ಡೆಪಾಸಿಟ್ ಮಾಡಲು ಸಾಧ್ಯವಿಲ್ಲ. ಆದರೆ ನಿಮ್ಮ ಖಾತೆಗೆ ಜಮೆ ಮಾಡಲು ನೀವು ಈ ಮೊತ್ತವನ್ನು ಸಂಪೂರ್ಣ ವಿವರದೊಂದಿಗೆ ಆರ್‌ಬಿಐಗೆ ಅಂಚೆ ಕಚೇರಿ ಮೂಲಕ ಕಳುಹಿಸಬಹುದಾಗಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮೇ 19, 2023 ರಂದು, 2000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿದೆ. ಈ ನೋಟುಗಳನ್ನು ದೇಶದ ಎಲ್ಲ ಬ್ಯಾಂಕ್‌ಗಳಲ್ಲಿ ಡೆಪಾಸಿಟ್ ಮಾಡಲು ಅಥವಾ ಬದಲಾವಣೆ ಮಾಡಲು ಸೆಪ್ಟೆಂಬರ್ 30, 2023 ರವರೆಗೆ ಅವಕಾಶವಿತ್ತು.

ಆ ಬಳಿಕ ಈ ಗಡುವನ್ನು ಅಕ್ಟೋಬರ್ 7, 2023 ರವರೆಗೆ ವಿಸ್ತರಿಸಲಾಯಿತು. ಅಂದರೆ ಈಗ ನಿಮ್ಮ ಬಳಿ 2000 ರೂಪಾಯಿ ನೋಟು ಇದ್ದರೆ ನೀವು ಬ್ಯಾಂಕ್‌ಗಳಲ್ಲಿ ಜಮೆ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ನೀವು ಆರ್‌ಬಿಐ ಕಚೇರಿಗೆ ಭೇಟಿ ನೀಡಬೇಕಾಗುತ್ತದೆ.
ಆದರೆ ಎಲ್ಲರೂ ಆರ್‌ಬಿಐ ಕಚೇರಿಗೆ ಭೇಟಿ ನೀಡಿ ಮೊತ್ತವನ್ನು ಜಮೆ ಮಾಡಲು ಸಾಧ್ಯವಿದೆಯೇ?. ಅದಕ್ಕಾಗಿಯೇ ಈಗ ಆರ್‌ಬಿಐ ಜನರಿಗೆ ಉತ್ತಮ ಅವಕಾಶವನ್ನು ನೀಡಿದೆ. ನೀವು ಅಂಚೆ ಮೂಲಕ ಎರಡು ಸಾವಿರ ರೂಪಾಯಿ ನೋಟು ಆರ್‌ಬಿಐಗೆ ಕಳುಹಿಸುವುದು ಹೇಗೆ ಎಂಬ ವಿವರ ಇಲ್ಲಿದೆ ಮುಂದೆ ಓದಿ....
2000 ರೂಪಾಯಿ ನೋಟು ಕಳುಹಿಸುವುದು ಹೇಗೆ?
ಹಂತ 1: ಮೊದಲು ಆರ್‌ಬಿಐ ವೆಬ್‌ಸೈಟ್ ಮೂಲಕ ನೀವು ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಳ್ಳಿ
ಹಂತ 2: ಬ್ಯಾಂಕ್ ಅಕೌಂಟ್ ಮಾಹಿತಿಯನ್ನು ಭರ್ತಿ ಮಾಡಿ. ಖಾತೆದಾರರ ಹೆಸರು, ಖಾತೆಯ ಸಂಖ್ಯೆ, ಅಕೌಂಟ್ ವಿಧ, ಬ್ಯಾಂಕ್ ಹೆಸರು, ಬ್ರ್ಯಾಂಚ್ ಹೆಸರು/ ವಿಳಾಸ, ಐಎಫ್‌ಎಸ್‌ಸಿ ಕೋಡ್ ಭರ್ತಿ ಮಾಡಿ.
ಹಂತ 3: ಅಧಿಕೃತ ದಾಖಲೆಗಳನ್ನು ಬಳಸಿ. ಬ್ಯಾಂಕ್ ಸ್ಟೇಟ್‌ಮೆಂಟ್ (ಬ್ಯಾಂಕ್ ಪಾಸ್‌ಬುಕ್‌ನ ಮೊದಲ ಪುಟದ ಕಾಪಿ), ಅರ್ಜಿಯೊಂದಿಗೆ ಎರಡು ಸಾವಿರ ರೂಪಾಯಿ ನೋಟುಗಳನ್ನು ಲಗತ್ತಿಸಿ.
ಹಂತ 4: ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ, ಪಾಸ್‌ಪೋರ್ಟ್, ಎನ್‌ಆರ್‌ಇಜಿಎ ಕಾರ್ಡ್, ಪ್ಯಾನ್ ಕಾರ್ಡ್, ಐಡಿ ಕಾರ್ಡ್‌ನಂತಹ ದಾಖಲೆಗಳನ್ನು ಗುರುತಿನ ಪುರಾವೆಯಾಗಿ ಲಗತ್ತಿಸಿ.
ಹಂತ 5: ಕೆವೈಸಿ ಕಡ್ಡಾಯವಾಗಿದೆ ತಿಳಿದಿರಿ. ಆರ್‌ಬಿಐಗೆ ನೀವು ಪೋಸ್ಟ್ ಮಾಡಿದ ಬಳಿಕ, ಆರ್‌ಬಿಐ ನಿಮ್ಮ ಬ್ಯಾಂಕ್ ಖಾತೆಗೆ ನೋಟನ್ನು ಜಮೆ ಮಾಡುತ್ತದೆ. ಖಾತೆ ಸಂಪೂರ್ಣವಾಗಿ ಕೆವೈಸಿಗೆ ಒಳಪಟ್ಟಿದರೆ ಮಾತ್ರ ಹಣ ಜಮೆಯಾಗುತ್ತದೆ.
ಆರ್‌ಬಿಐ ಪ್ರಾದೇಶಿಕ ಕಚೇರಿಯಲ್ಲಿ ಬದಲಾಯಿಸಿ
ಅಹಮದಾಬಾದ್, ಬೆಂಗಳೂರು, ಬೇಲಾಪುರ, ಭೋಪಾಲ್, ಭುವನೇಶ್ವರ, ಚಂಡೀಗಢ, ಚೆನ್ನೈ, ಗುವಾಹಟಿ, ಹೈದರಾಬಾದ್, ಜೈಪುರ, ಜಮ್ಮು, ಕಾನ್ಪುರ, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ , ಪಾಟ್ನಾ ಮತ್ತು ತಿರುವನಂತಪುರಂನಲ್ಲಿ ಆರ್‌ಬಿಐನ ಪ್ರಾದೇಶಿಕ ಕಚೇರಿಗಳು ಇದೆ. ಇಲ್ಲಿಯ ವಿಳಾಸ ನಿಮಗೆ ಆರ್‌ಬಿಐ ವೆಬ್‌ಸೈಟ್‌ನಲ್ಲಿ ಲಭ್ಯವಾಗಲಿದೆ. ನೀವು ಇದಕ್ಕೆ ಅಂಚೆ ಮೂಲಕ ಕಳುಹಿಸಬಹುದಾಗಿದೆ.


Click it and Unblock the Notifications