ಸಾಮಾನ್ಯವಾಗಿ ಅಧಿಕ ತೂಕವಿದ್ದವರು, ಕೊಂಚ ಡಯೆಟ್ ಮಾಡಬೇಕು, ವ್ಯಾಯಾಮ ಮಾಡಿ, ತೂಕ ಇಳಿಸಿಕೊಳ್ಳಬೇಕು. ತೂಕ ಕಡಿಮೆಯಾದರೆ ಆರೋಗ್ಯವಂತರಾಗಿರಲು ಸಾಧ್ಯ ಎಂದು ಹೇಳಲಾಗುತ್ತದೆ. ಆದರೆ ಇಲ್ಲೊಂದು ರೆಸ್ಟೋರೆಂಟ್‌ನಲ್ಲಿ ಅಧಿಕ ತೂಕ ಇರುವ ಗ್ರಾಹಕರಿಗೆ ವಿಶೇಷ ಆಫರ್‌ಗಳನ್ನು ನೀಡಲಾಗುತ್ತಿದೆ. ಯಾರು 350 ಕೆಜಿ ಅಥವಾ 350 ಪೌಂಡ್‌ಗೂ ಅಧಿಕ ತೂಕ ಇರುತ್ತಾರೋ ಅವರಿಗೆ ಅಧಿಕ ಆಹಾರವನ್ನು ಉಚಿತವಾಗಿ ನೀಡುತ್ತಿದ್ದಾರೆ.
ಅಮೇರಿಕಾದ ಈ ರೆಸ್ಟೋರೆಂಟ್ ಒಂದರಲ್ಲಿ ಅಧಿಕ ತೂಕವಿರುವವರಿಗೆ ಕಾಂಪ್ಲಿಮೆಂಟರಿ ಫುಡ್ ಅನ್ನು ನೀಡುತ್ತಿದ್ದಾರೆ. ಆದರೆ ಇದು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಟಿಕ್‌ಟಾಕ್ ಮತ್ತು ಇತರೆ ಸಾಮಾಜಿಕ ಮಾಧ್ಯಮದಲ್ಲಿ ಅತೀ ತೂಕವಿರುವ ಗ್ರಾಹಕರು ಉಚಿತ ಆಹಾರಕ್ಕಾಗಿ ಅದರಲ್ಲೂ ಮುಖ್ಯವಾಗಿ ಹಾರ್ಟ್ ಅಟ್ಯಾಕ್ ಗ್ರಿಲ್‌ಗಾಗಿ ಸಾಲು ನಿಂತಿರುವ ವಿಡಿಯೋ ವೈರಲ್ ಆದ ಬಳಿಕ ಭಾರೀ ಚರ್ಚೆಯ ವಿಚಾರವಾಗಿದೆ.

ಹಾರ್ಟ್ ಅಕ್ಯಾಟ್ ಗ್ರಿಲ್!
ಈ ವಿಡಿಯೋದಲ್ಲಿ ಗ್ರಾಹಕರು ಲ್ಯಾಸ್ ವೇಗಸ್ ರೆಸ್ಟೋರೆಂಟ್‌ನಲ್ಲಿ ಲಭ್ಯವಾಗುವ ಹಾರ್ಟ್ ಅಟ್ಯಾಕ್ ಗ್ರಿಲ್‌ಗಾಗಿ ಕಾದು ಸಾಲು ನಿಂತಿರುವುದು ಕಂಡು ಬಂದಿದೆ. ತಾವು ಉಚಿತ ಆಹಾರವನ್ನು ಪಡೆಯಲು ಅರ್ಹರೆ, ಅಲ್ಲವೇ ಎಂದು ತಿಳಿಯಲು ಕೂಡಾ ಗ್ರಾಹಕರು ಸಾಲು ನಿಂತಿದ್ದಾರೆ. ಕಳೆದ ಒಂದು ವರ್ಷದಿಂದ ಈ ರೆಸ್ಟೋರೆಂಟ್‌ನಲ್ಲಿ ಹಾರ್ಟ್ ಅಕ್ಯಾಟ್ ಗ್ರಿಲ್ ಫೇಮಸ್ ಆಗಿದೆ. ಈ ರೆಸ್ಟೋರೆಂಟ್‌ನಲ್ಲಿ ಥೀಮ್ ಆಧಾರದಲ್ಲಿ ಸೇವೆಯನ್ನು ನೀಡಲಾಗುತ್ತಿದೆ.
ಈ ರೆಸ್ಟೋರೆಂಟ್‌ನಲ್ಲಿ ಮುಖ್ಯವಾಗಿ ಫಾಸ್ಟ್‌ಫುಡ್ ಅನ್ನು ಮಾರಾಟ ಮಾಡಲಾಗುತ್ತದೆ. ಅದರಲ್ಲೂ ಇಲ್ಲಿನ ಆಹಾರಗಳು ಅಧಿಕವಾಗಿ ಕೊಬ್ಬಿನ ಅಂಶ ಮತ್ತು ಕ್ಯಾಲೋರಿ ಇರುವ ಆಹಾರವನ್ನು ಮಾರಾಟ ಮಾಡುತ್ತಾ ಬಂದಿದೆ. ಈ ರೆಸ್ಟೋರೆಂಟ್‌ನಲ್ಲಿ ಲಭ್ಯವಿರುವ ಆಹಾರಗಳು ಸಿಂಗಲ್ (ಒಂದು ಪ್ಲೇಟ್), ಡಬಲ್ (ದುಪ್ಪಟ್ಟು), ಟ್ರಿಪಲ್ (ಮೂರು ಪಟ್ಟು), ಕ್ವಾಡ್ರಪಲ್ (ನಾಲ್ಕು ಪಟ್ಟು), ಕ್ಯೂನ್‌ಟಪಲ್ (ಐದು ಪಟ್ಟು), ಸೆಕ್ಸ್ಟಪಲ್ (ಆರು ಪಟ್ಟು), ಸೆಪ್ಟಪಲ್ (ಏಳು ಪಟ್ಟು), ಅಕ್ಟೊಪಲ್ (ಎಂಟು ಪಟ್ಟು) ಕೂಡಾ ಲಭ್ಯವಾಗುತ್ತದೆ.
ಡಾಕ್ಟರ್‌ನಂತೆ ವೇಟರ್ಸ್ ಸಜ್ಜು
ಹಲವಾರು ರೆಸ್ಟೋರೆಂಟ್‌ಗಳು ತಮ್ಮ ಗ್ರಾಹಕರಿಗೆ ಫುಡ್ ಆಫರ್‌ಗಳನ್ನು ನೀಡುತ್ತದೆ. ಆದರೆ ಈ ರೆಸ್ಟೋರೆಂಟ್ ವಿಭಿನ್ನವಾದ ಕಾನ್ಸಟ್ ಅನ್ನು ಹೊಂದಿದೆ. ಆಸ್ಪತ್ರೆಗೆ ಸಂಬಂಧಿತ ಹೆಸರನ್ನು ಹೊಂದಿದೆ. ಹಾರ್ಟ್ ಅಟ್ಯಾಕ್ ಗ್ರಿಲ್ ಅನ್ನು ತಮ್ಮ ರೋಗಿಗಳಿಗೆ (ಗ್ರಾಹಕರಿಗೆ) ನೀಡಲಾಗುವುದು ಎಂಬಂತೆ ಪ್ರಚಾರ ಮಾಡುತ್ತಿದೆ. ಈ ರೆಸ್ಟೋರೆಂಟ್‌ನಲ್ಲಿ ವೇಟರ್‌ಗಳು ಡಾಕ್ಟರ್‌ಗಳಂತೆ ಸಿದ್ಧವಾಗಿರುತ್ತಾರೆ. ಮಹಿಳಾ ಸಿಬ್ಬಂದಿಗಳು ನರ್ಸ್‌ಗಳಂತೆ ಇರುತ್ತಾರೆ. ಆರ್ಡರ್ ಮಾಡುವ ಮುನ್ನ ಆಸ್ಪತ್ರೆಯ ಗೌನ್ ಧರಿಸಬೇಕಾಗುತ್ತದೆ.
ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಟ್ವಿಟ್ಟರ್ ಬಳಕೆದಾರರು ಇದ್ದನ್ನು ಟೀಕಿಸಿದ್ದಾರೆ. ಗ್ರಾಹಕರಿಗೆ ಅನಾರೋಗ್ಯಕರ ಆಹಾರವನ್ನು ನೀಡುವುದಕ್ಕೆ ವಿರೋಧ ವ್ಯಕ್ತವಾಗಿದೆ. ಅಧಿಕ ಆಹಾರವನ್ನು ನೀಡುವ ಮೂಲಕ ಅಧಿಕ ತೂಕ ಇರುವವರು ಇನ್ನಷ್ಟು ತೂಕವಾಗುವಂತೆ, ಅನಾರೋಗ್ಯಕ್ಕೆ ಒಳಗಾಗುವಂತೆ ಮಾಡಲಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ. 2005ರಲ್ಲಿ ಈ ರೆಸ್ಟೋರೆಂಟ್ ಆರಂಭವಾಗಿದ್ದು, ಅಂದಿನಿಂದ ಇಂದಿನವರಿಗೂ ವಿವಾದದ ಮೂಲಕವೇ ಸುದ್ದಿಯಾಗಿದೆ.


Click it and Unblock the Notifications