ಗ್ರಾಹಕರ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ರಿಟೇಲ್ ಹಣದುಬ್ಬರವು ಜೂನ್‌ನಲ್ಲಿ ಶೇಕಡ 7.01 ರಷ್ಟಿದೆ. ಸತತ ಆರನೇ ತಿಂಗಳು ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಅಂದಾಜು ಮಿತಿಯನ್ನು ಹಣದುಬ್ಬರ ಮೀರಿದೆ ಎಂದು ಮಂಗಳವಾರ ಬಹಿರಂಗವಾದ ಸರ್ಕಾರಿ ಅಂಕಿ ಅಂಶಗಳು ಹೇಳಿದೆ. ಮೇ ತಿಂಗಳಲ್ಲಿ ಹಣದುಬ್ಬರ ಪ್ರಮಾಣ ಶೇ.7.04ರಷ್ಟಿತ್ತು.
ರಷ್ಯಾ-ಉಕ್ರೇನ್ ಯುದ್ಧ ಮತ್ತು ಹೆಚ್ಚಿನ ಕಚ್ಚಾ ತೈಲ ಬೆಲೆಗಳಿಂದಾಗಿ ಜಾಗತಿಕ ಸರಕುಗಳ ಬೆಲೆಗಳು ಏರಿಕೆಯಾಗುತ್ತಿದೆ. ಈ ನಡುವೆ ಆರ್‌ಬಿಐ ಹಣದುಬ್ಬರ ಮಿತಿಯನ್ನು ಶೇಕಡ 6ರಷ್ಟು ಇರಿಸಿದೆ. ಆದರೆ ಜೂನ್‌ನಲ್ಲಿ ರಿಟೇಲ್ ಹಣದುಬ್ಬರವು ಶೇಕಡ 7.01 ರಷ್ಟಿದೆ.
ರಾಷ್ಟ್ರೀಯ ಅಂಕಿಅಂಶಗಳ ಕಚೇರಿ (ಎನ್‌ಎಸ್‌ಒ) ಪ್ರಕಾರ ಹಿಂದಿನ ತಿಂಗಳ ಆಹಾರ ಹಣದುಬ್ಬರ ಶೇಕಡ 7.97ಕ್ಕೆ ಹೋಲಿಕೆ ಮಾಡಿದಾಗ ಜೂನ್ 2022 ರಲ್ಲಿ, ಆಹಾರ ಹಣದುಬ್ಬರವು ಶೇಕಡ 7.75 ಆಗಿದೆ.

ಹಣದುಬ್ಬರ ಏರಿಕೆ ಹಿನ್ನೆಲೆ ಆರ್‌ಬಿಐ ರೆಪೋ ದರ ಏರಿಸುತ್ತಾ?
ಆರ್‌ಬಿಐ ಈ ಹಿಂದೆ ಹಣದುಬ್ಬರ ಅಂದಾಜಿಗಿಂತ ಅಧಿಕವಿದ್ದಾಗ ರೆಪೋ ದರವನ್ನು ಏರಿಕೆ ಮಾಡಿದೆ. ಈ ವರ್ಷ ಈವರೆಗೆ ಆರ್‌ಬಿಐ ರೆಪೋ ದರವನ್ನು 90 ಮೂಲಾಂಕ ಏರಿಕೆ ಮಾಡಲಾಗಿದೆ. ರೆಪೋ ದರವು ಶೇಕಡ 4.9 ಕ್ಕೆ ಏರಿಕೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ರೆಪೋ ದರವನ್ನು ಮತ್ತಷ್ಟು ಏರಿಕೆ ಮಾಡುವ ಸಾಧ್ಯತೆ ಇದೆ.
ಭಾರತದ ಕೈಗಾರಿಕಾ ಉತ್ಪಾದನೆಯು ಮೇ 2021 ರಲ್ಲಿ ಶೇಕಡಾ 27.6ಕ್ಕೆ ಏರಿಕೆಯಾಗಿದ್ದರೆ, ಈ ವರ್ಷ ಮೇ ತಿಂಗಳಿನಲ್ಲಿ ಶೇಕಡ 19.6 ರಷ್ಟಿದೆ ಎಂದು ಡೇಟಾ ತೋರಿಸುತ್ತದೆ. ಈ ವರ್ಷದ ಮೇ ತಿಂಗಳಲ್ಲಿ, ಗಣಿಗಾರಿಕೆ ಉತ್ಪಾದನೆಯು ಶೇಕಡಾ 10.9 ರಷ್ಟು ಏರಿತು ಮತ್ತು ವಿದ್ಯುತ್ ಉತ್ಪಾದನೆಯು ಶೇಕಡಾ 23.5 ರಷ್ಟು ಜಿಗಿದಿದೆ.
ಭಾರತದಲ್ಲಿ ಸಗಟು ಹಣದುಬ್ಬರವು ಮೇ ತಿಂಗಳಿನಲ್ಲಿ ದಾಖಲೆ ಮಟ್ಟಕ್ಕೆ ಏರಿಕೆ ಕಂಡಿದೆ. ಸುಮಾರು ಹತ್ತು ವರ್ಷಗಳ ಬಳಿಕ ದೇಶದಲ್ಲಿ ಸಗಟು ಹಣದುಬ್ಬರವು ಶೇಕಡ 15.88ಕ್ಕೆ ಹೆಚ್ಚಳವಾಗಿದೆ. ಪ್ರಮುಖವಾಗಿ ಇಂಧನ, ಕೆಮಿಕಲ್, ಮೆಟಲ್, ಆಹಾರದ ಬೆಲೆ ಏರಿಕೆಯಿಂದಾಗಿ ಸಗಟು ಹಣದುಬ್ಬರ ಹೆಚ್ಚಳವಾಗಿದೆ ಎಂದು ಸರ್ಕಾರದ ಡೇಟಾ ಉಲ್ಲೇಖ ಮಾಡಿದೆ.
More From GoodReturns

ಷೇರು ಮಾರುಕಟ್ಟೆ ಕುಸಿತದ ಭೀತಿ: ಹೂಡಿಕೆದಾರರೇ ಎಚ್ಚರವಿರಲಿ!

ಚಿನ್ನದ ಬೆಲೆ ಏರಿಕೆ: ನಿಮ್ಮ ಹೂಡಿಕೆ ಸುರಕ್ಷಿತವಾಗಿಡಲು ಈ ತಂತ್ರ ಬಳಸಿ

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್‌ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್‌ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್‌ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications