ರಿಷಬ್ ಶೆಟ್ಟಿ ನಿಜವಾದ ಹೆಸರು ಪ್ರಶಾಂತ್ ಶೆಟ್ಟಿಯಾಗಿದೆ. ವೃತ್ತಿ ಜೀವನದಲ್ಲಿ ರಿಷಬ್ ಶೆಟ್ಟಿ ಎಂದು ಕರೆಯಲ್ಪಡುತ್ತಾರೆ. ರಿಷಬ್ ಶೆಟ್ಟಿ ಭಾರತೀಯ ನಟ ಮತ್ತು ಚಲನಚಿತ್ರ ನಿರ್ಮಾಪಕ ಆಗಿದ್ದಾರೆ. ಪ್ರಾಥಮಿಕವಾಗಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಬ್ಲಾಕ್‌ಬಾಸ್ಟರ್ ಕಾಂತಾರ ಸಿನಿಮಾಕ್ಕೆ ರಿಷಬ್ ಶೆಟ್ಟಿ ಹೆಸರುವಾಸಿಯಾಗಿದ್ದಾರೆ.
ಪ್ರಾಥಮಿಕ ಶಾಲೆ, ಕಾಸರಗೋಡು, ಕೊಡುಗೆ: ರಾಮಣ್ಣ ರೈ ಸಿನಿಮಾಕ್ಕಾಗಿ 66 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಮಕ್ಕಳ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳಿಗೆ ರಿಷಬ್ ಶೆಟ್ಟಿ ಭಾಜನರಾಗಿದ್ದಾರೆ. ರಿಷಬ್ ಶೆಟ್ಟಿ ನಿವ್ವಳ ಆದಾಯ, ಇತರೆ ವಿವರದ ಬಗ್ಗೆ ನಾವಿಲ್ಲಿ ಮಾಹಿತಿ ನೀಡಿದ್ದೇವೆ ಮುಂದೆ ಓದಿ....

ರಿಷಬ್ ಶೆಟ್ಟಿ ಜೀವನ
ರಿಷಬ್ ಶೆಟ್ಟಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕದ್ರಿ ನೆರೆಹೊರೆಯಲ್ಲಿ 7 ಜುಲೈ 1983 ರಂದು ಜನಿಸಿದರು. ಕರ್ನಾಟಕದ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಮಾಡಿದರು. ನಂತರ ಬಿಕಾಂ ಮಾಡಲು ಬೆಂಗಳೂರಿನ ವಿಜಯಾ ಕಾಲೇಜಿಗೆ ಸೇರಿದರು.
ಕುಂದಾಪುರದಲ್ಲಿ ಯಕ್ಷಗಾನ ನಾಟಕಗಳನ್ನು ಮಾಡುವ ಮೂಲಕ ರಂಗಪಯಣ ಆರಂಭಿಸಿದರು. ಬೆಂಗಳೂರಿನಲ್ಲಿ ಓದುತ್ತಿದ್ದಾಗ ನಾಟಕಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ತನ್ನ ನಟನೆಗೆ ಪ್ರೋತ್ಸಾಹ ದೊರೆಯುತ್ತಿದ್ದಂತೆ ಬಳಿಕ ವೃತ್ತಿಜೀವನದಲ್ಲಿಯೂ ನಟರಾಗಿ ಮುಂದುವರಿದರು.
ಕಾಲೇಜು ಮುಗಿದ ನಂತರ, ನಟನು ತನ್ನ ಚಲನಚಿತ್ರಕ್ಕೆ ಪ್ರಯತ್ನ ಮಾಡುತ್ತಾ ಇರುವಾಗ ನೀರಿನ ಕ್ಯಾನ್‌ಗಳನ್ನು ಮಾರಾಟ ಮಾಡುವುದು, ಹೋಟೆಲ್‌ನಲ್ಲಿ ಕೆಲಸ ಮಾಡುವುದು ಮುಂತಾದ ಹಲವಾರು ಸಣ್ಣ ಪುಟ್ಟ ಕಾರ್ಯಗಳನ್ನು ಮಾಡಿದ್ದಾರೆ. ಈ ಹಿಂದೆ ಸಂದರ್ಶನವೊಂದರಲ್ಲಿ ಈ ಬಗ್ಗೆ ರಿಷಬ್ ಶೆಟ್ಟಿ ಹೇಳಿದ್ದಾರೆ.
"ಪದವಿಯ ಎರಡನೇ ವರ್ಷದ ಬಳಿಕ ನಾನು ಚಲನಚಿತ್ರಗಳನ್ನು ವೀಕ್ಷಿಸಲು ಹಣವಿಲ್ಲದ ಕಾರಣ ಹಲವಾರು ಕಾರ್ಯಗಳನ್ನು ಮಾಡಿದೆ. ಯಾವಾಗಲೂ ತಂದೆಯಿಂದ ಹಣವನ್ನು ಕೇಳಲು ಸಾಧ್ಯವಿಲ್ಲ ಅಲ್ವ?. ನನಗೆ ಏನೇ ಕೆಲಸ ಸಿಕ್ಕರೂ ಅದನ್ನೆಲ್ಲ ಮಾಡಿದ್ದೇನೆ. 2004 ರಲ್ಲಿ ನಟನಾಗಿ ವೃತ್ತಿ ಜೀವನ ಆರಂಭಿಸಿದೆ, 2014 ರಲ್ಲಿ, ನಾನು ನನ್ನ ಮೊದಲ ನಿರ್ದೇಶನವನ್ನು ಪಡೆದುಕೊಂಡೆ. 10 ವರ್ಷ ಕಷ್ಟಪಟ್ಟು ಕೆಲಸ ಮಾಡಿದೆ," ಎಂದು ಹೇಳಿದ್ದಾರೆ.
ನಟನ ಮೊದಲ ಪ್ರಮುಖ ಪಾತ್ರ ತುಘ್‌ಲಕ್ ಚಿತ್ರದಲ್ಲಿ ಆಗಿದೆ. ನಟ 2016 ರಲ್ಲಿ ರಕ್ಷಿತ್ ಶೆಟ್ಟಿ ಅಭಿನಯದ ರಿಕಿ ಅಭಿನಯದಲ್ಲಿ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು. ಇದಕ್ಕೆ ಹೆಚ್ಚು ಉತ್ತಮ ಪ್ರತಿಕ್ರಿಯೆ ಲಭ್ಯವಾಗಿಲ್ಲ. ನಂತರ, ಅದೇ ವರ್ಷದಲ್ಲಿ, ಕಿರಿಕ್ ಪಾರ್ಟಿಯನ್ನು ನಿರ್ದೇಶಿಸಿದರು. ಅದು ಭಾರೀ ಹಿಟ್ ಆಯಿತು.
2021 ರಲ್ಲಿ, ರಿಷಬ್ ಶೆಟ್ಟಿ ಕಾಂತಾರ ಚಿತ್ರವನ್ನು ನಿರ್ದೇಶಿಸಿದರು ಮತ್ತು ನಟಿಸಿದರು. ಇದು ಕನ್ನಡದ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರವಾಗಿದೆ. ಈ ಚಲನಚಿತ್ರವು ರಾಷ್ಟ್ರವ್ಯಾಪಿ ಮೆಚ್ಚುಗೆಯನ್ನು ಗಳಿಸಿತು. ಹಲವಾರು ಚಲನಚಿತ್ರ ವಿಮರ್ಶಕರು ಶೆಟ್ಟಿ ಅಭಿನಯವನ್ನು ಶ್ಲಾಘಿಸಿದರು.
ರಿಷಬ್ ಶೆಟ್ಟಿ ನಿವ್ವಳ ಆದಾಯ
ರಿಷಬ್ ಶೆಟ್ಟಿ 12 ಕೋಟಿ ರೂಪಾಯಿಗಳ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಕನ್ನಡ ಚಲನಚಿತ್ರೋದ್ಯಮದಲ್ಲಿ ಅತ್ಯಂತ ಶ್ರೀಮಂತ ನಟರಲ್ಲಿ ಒಬ್ಬರಾಗಿದ್ದಾರೆ. ಪ್ರತಿ ಚಿತ್ರಕ್ಕೆ 4 ಕೋಟಿ ರೂಪಾಯಿಗಳನ್ನು ವಿಧಿಸುತ್ತಾರೆ ಎಂದು ವರದಿಯಾಗಿದೆ. ನಟ ತನ್ನದೇ ಆದ ಪ್ರೊಡಕ್ಷನ್ ಹೌಸ್ ಮತ್ತು ಅದ್ದೂರಿ ಕಾರುಗಳನ್ನು ಹೊಂದಿದ್ದಾರೆ.
ರಿಷಬ್ ಶೆಟ್ಟಿ ವಾಘಚಿಪಾನಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ನಿರ್ದೇಶಕ ನಟೇಶ್ ಹೆಗ್ಡೆ, ಅವರು 2021 ರ ಪೆಡ್ರೊ ಚಿತ್ರಕ್ಕೆ ಹೆಸರುವಾಸಿಯಾಗಿದ್ದಾರೆ.


Click it and Unblock the Notifications