ಐಎಎಸ್ ಅಧಿಕಾರಿಗಳಾಗಿ ಅಥವಾ ಉನ್ನತ ಮಟ್ಟದಲ್ಲಿ ಸಿಇಒಗಳಾಗಿ ಯಶಸ್ಸನ್ನು ಗಳಿಸಿರುವ ವ್ಯಕ್ತಿಗಳ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ. ಆದರೆ, ಇವರೆಡನ್ನು ಒಟ್ಟಿಗೆ ಇಟ್ಟುಕೊಂಡು ಸಾಧನೆಯ ಹಾದಿಯಲ್ಲಿ ಮುನ್ನಡೆದವರು ಬಹಳ ಅಪರೂಪ. ಅಂಥವರ ಸಾಲಿನಲ್ಲಿ ರೋಹಿತ್ ಮೋದಿ ಅವರು ಸೇರಿದ್ದು, ಮಾಜಿ ಐಎಎಸ್ ಅಧಿಕಾರಿಯೊಬ್ಬರು ತಮ್ಮ ವೃತ್ತಿ ಬದುಕಿನಲ್ಲಿ ಕಾರ್ಪೊರೇಟ್ ಲೀಡರ್ ಆಗಿ ಗಮನಸೆಳೆದಿದ್ದಾರೆ.
ಐಎಎಸ್ ಅಧಿಕಾರಿಯಾಗಿ ವಿಶ್ವ ಬ್ಯಾಂಕ್ ಹಾಗೂ ಏಷ್ಯನ್ ಅಭಿವೃದ್ಧಿ ಬ್ಯಾಂಕ್‌ನಲ್ಲಿ ಪ್ರಮುಖ ಯೋಜನೆಗಳಲ್ಲಿ ಕೆಲಸ ಮಾಡಿರುವ ಮೋದಿ ಅವರು ಬಳಿಕ ಸುಜ್ಲಾನ್ ಎನರ್ಜಿ, ಎಸ್ಸೆಲ್ ಇನ್‌ಫ್ರಾ ಪ್ರಾಜೆಕ್ಟ್‌ಗಳು, ಗ್ಯಾಮನ್ ಇಂಡಿಯಾ ಮತ್ತು ಎಲ್ & ಟಿ ಐಡಿಪಿಎಲ್ ಸೇರಿದಂತೆ ಪ್ರತಿಷ್ಠಿತ ಕಂಪನಿಗಳಲ್ಲಿ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದಾರೆ.

ರಾಜಸ್ಥಾನ ಮೂಲದ ರೋಹಿತ್ ಮೋದಿ ಅವರು ಜೈಪುರದ ಸೇಂಟ್ ಕ್ಸೇವಿಯರ್‌ನಲ್ಲಿ ಶಾಲಾ ವಿದ್ಯಾಭ್ಯಾಸವನ್ನು ಮಾಡಿದ್ದು, ಬಳಿಕ ದಿಲ್ಲಿ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿಯನ್ನು ಪಡೆದುಕೊಂಡಿದ್ದಾರೆ. ಶ್ರೀ ರಾಮ ಕಾಲೇಜು ಆಫ್ ಕಾಮರ್ಸ್ ಹಾಗೂ ದಿಲ್ಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನ ಹಳೇ ವಿದ್ಯಾರ್ಥಿಯಾಗಿರುವ ಮೋದಿ ಅವರು 1985ರಲ್ಲಿ ಐಎಎಸ್ ಸೇವೆಗೆ ಸೇರಿಕೊಂಡಿದ್ದರು.
ಐಎಎಸ್ ಅಧಿಕಾರಿಯಾಗಿ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಾಗೂ ಮಣಿಪುರ ಸರ್ಕಾರದಲ್ಲಿ 14 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ್ದಾರೆ. ಅಲ್ಲದೆ ಅವರು ನಗರಾಭಿವೃದ್ಧಿ, ಜವಳಿ ಉದ್ಯಮ, ಕೈಗಾರಿಕೆ, ಹಣಕಾಸು, ಕಲ್ಲಿದ್ದಲು, ಮೂಲಸೌಕರ್ಯ ಹಾಗೂ ರಸಗೊಬ್ಬರ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. ರೋಹಿತ್ ಮೋದಿ ಅವರು ಹಣಕಾಸು ಸಚಿವಾಲಯದಲ್ಲಿರುವಾಗ ಮೋದಿ ಅವರು ಐಎಂಎಫ್ ಹಾಗೂ ಐಎಫ್‌ಸಿನಲ್ಲಿ ನೋಡಲ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
1999ರಲ್ಲಿ ಅವರು ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿದ್ದು, ಖಾಸಗಿ ವಲಯದಲ್ಲಿ ಬಿಸಿನೆಸ್ ಲೀಡರ್ ಆಗಿ ವೃತ್ತಿ ಜೀವನ ಮುಂದುವರಿಸಿದ್ದಾರೆ. ಆ ಮೂಲಕ ಐಎಎಸ್ ಅಧಿಕಾರಿಯು ಕಾರ್ಪೊರೇಟ್ ವಲಯದಲ್ಲಿ ಸಿಇಒ ಆಗಿ ಬದಲಾಗಿದ್ದಾರೆ. ಅವರು ತಮ್ಮ ಎರಡು ದಶಕಗಳ ವೃತ್ತಿ ಬದುಕಿನಲ್ಲಿ ಸಿಇಒ ಹಾಗೂ ಎಂಡಿ ಆಗಿ ಸುಜ್ಲಾನ್ ಎನರ್ಜಿ, ಗ್ಯಾಮನ್ ಇಂಡಿಯಾ, ಎಲ್ & ಟಿ ಐಡಿಪಿಎಲ್, ಎಸ್ಸೆಲ್ ಇನ್ಫ್ರಾ ಪ್ರಾಜೆಕ್ಟ್ಸ್ ಮತ್ತು ಸ್ಮಾರ್ಟ್ ಯುಟಿಲಿಟೀಸ್, ತಮಿಳುನಾಡು ರಸ್ತೆ ಅಭಿವೃದ್ಧಿ ಕಂಪನಿ (ಟಿಎನ್‌ಆರ್‌ಡಿಸಿ), ಮಹೀಂದ್ರಾ ಇಂಡಸ್ಟ್ರಿಯಲ್ ಪಾರ್ಕ್ ಮತ್ತು ರೋಡ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಕಂಪನಿ ಸೇರಿದಂತೆ ಪ್ರಮುಖ ನಿಗಮಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
ಯಶಸ್ವಿ ಸಿಇಒಗಳ ಬಗ್ಗೆ ತಿಳಿಯಿರಿ
ಭಾರತದಲ್ಲಿ ಹೀಗೆ ಹಲವಾರು ಯಶಸ್ವಿ ಸಿಇಒಗಳಿದ್ದಾರೆ. ಆ ಪೈಕಿ ರೋಹಿತ್ ಮೋದಿ ಕೂಡಾ ಒಬ್ಬರಾಗಿದ್ದಾರೆ. ಸೆಲೆಬ್ರೆಟಿಯೂ ಆಗಿರದೆ, ಉದ್ಯಮಿಯೂ ಆಗಿರದೆ ತನ್ನ ಸಿಇಒ ಹುದ್ದೆಯಿಂದಲೇ ಸುಮಾರು 6500 ಕೋಟಿ ರೂಪಾಯಿ ಆದಾಯವನ್ನು ಗಳಿಸಿರುವ ಇಗ್ನೇಷಿಯಸ್ ನವಿಲ್ ನೊರೊನ್ಹಾ ಭಾರತದ ಅತ್ಯಂತ ಶ್ರೀಮಂತ ಮ್ಯಾನೇಜರ್ ಮತ್ತು ವೃತ್ತಿಪರ ಸಿಇಒ ಆಗಿದ್ದಾರೆ.
46 ವರ್ಷ ವಯಸ್ಸಿನ ವಸಂತ್ ನರಸಿಂಹನ್ ಅವರು ಜಾಗತಿಕ ಮಟ್ಟದ ಬಿಸಿನೆಸ್ ಲೀಡರ್ ಆಗಿದ್ದು, ಸಿಇಒ ಆಗಿದ್ದಾರೆ. ಅದಕ್ಕೂ ಮುನ್ನ ಸುಮಾರು 20 ವರ್ಷಗಳ ಕಾಲ ವೈದ್ಯರಾಗಿ ಆರೋಗ್ಯ ಕ್ಷೇತ್ರಕ್ಕೆ ಅಭೂತವಾದ ಕೊಡುಗೆಯನ್ನು ನೀಡಿದ್ದಾರೆ. ವಸಂತ್ ನರಸಿಂಹನ್ ಅವರು 2018ರಲ್ಲಿ ಸ್ವಿಸ್ ಎಂಎನ್‌ಸಿ ನೊವಾರ್ಟಿಸ್‌ನಲ್ಲಿ ಅಧಿಕಾರ ವಹಿಸಿಕೊಂಡಿದ್ದು, ಅಂದಿನಿಂದ 185 ಬಿಲಿಯನ್ ಡಾಲರ್ (15,29,000 ಕೋಟಿ ರೂಪಾಯಿ) ಕಂಪೆನಿಯನ್ನು ಮುನ್ನಡೆಸುತ್ತಿದ್ದಾರೆ.
"ಲೀನಾ ನಾಯರ್" ಇವರು ಭಾರತೀಯ ಮೂಲದವರಾಗಿದ್ದು, ಫ್ರೆಂಚ್ ಲಕ್ಸುರಿ ಬ್ರ್ಯಾಂಡ್ "ಶನೆಲ್"ನ ಮೊದಲ ಮಹಿಳಾ ಸಿಇಒ ಆಗುವ ಮೂಲದ ಇತಿಹಾಸ ಬರೆದವರು ಆಗಿದ್ದಾರೆ. 52 ವರ್ಷದ ಇವರು ಈ ಹಿಂದೆ ಪ್ರತಿಷ್ಟಿತ ಸಂಸ್ಥೆ "ಯುನಿಲಿವರ್" ನಲ್ಲಿ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ(CHRO)ಯಾಗಿ ಕಾರ್ಯನಿರ್ವಹಿಸುತ್ತಿದ್ದರು.


Click it and Unblock the Notifications