ರಾಹುಲ್ ಯಾದವ್ ಅವರ ಹೊಸ ಸ್ಟಾರ್ಟಪ್‌ವೊಂದು ಪತನದ ಹಾದಿಯಲ್ಲಿದ್ದು, ಬರೋಬ್ಬರಿ 280 ಕೋಟಿ ರೂಪಾಯಿಯನ್ನು ಕಳೆದುಕೊಂಡಿದ್ದಾರೆ. ಭಾರತೀಯ ಸ್ಟಾರ್ಟಪ್ ಉದ್ಯಮದ ರಾಹುಲ್ ಯಾದವ್ ಅವರು ಆರಂಭದಲ್ಲಿ ತಮ್ಮ ಹೌಸಿಂಗ್ ಡಾಟ್‌ಕಾಮ್‌ನ ಯಶಸ್ಸು ಹಾಗೂ ವೈಫಲ್ಯದಿಂದಾಗಿ ಭಾರೀ ಸುದ್ದಿಯಾಗಿದ್ದಾರೆ. ಆದರೆ ಈಗ ಅವರು ಉದ್ಯೋಗಿಗಳಿಗೆ ಸಂಬಳವನ್ನೂ ನೀಡದೆ ಐಷಾರಾಮಿ ಜೀವನ ನಡೆಸುತ್ತಿದ್ದಾರೆ.
ಯಾದವ್ ಅವರ ಬ್ರೋಕರ್ ನೆಟ್‌ವರ್ಕ್‌ನ್ನು ನಿರ್ವಹಿಸುವ 4B ನೆಟ್‌ವರ್ಕ್ಸ್ ಯಾರು ಊಹಿಸದ ರೀತಿಯ ಅಸಾಧಾರಣ ಕುಸಿತದ ಹಾದಿಯಲ್ಲಿದೆ. ಪ್ರಮುಖ ಹೂಡಿಕೆದಾರ ಇನ್ಫೋ ಎಡ್ಜ್ ಪ್ರಕಾರ, ಕಳೆದ 18 ತಿಂಗಳಲ್ಲಿ ಕಂಪನಿಯು 280 ಕೋಟಿ ರೂಪಾಯಿಯನ್ನು ಕಳೆದುಕೊಂಡಿದೆ. ಈ ನಡುವೆ ಕಂಪನಿಯಲ್ಲಿ ಕೆಲಸ ಮಾಡುವ 150 ಮಂದಿ ಉದ್ಯೋಗಿಗಳಿಗೆ 2022ರ ನವೆಂಬರ್‌ನಿಂದ ವೇತನವನ್ನು ನೀಡುತ್ತಿಲ್ಲ.

ಇನ್ನೊಂದೆಡೆ ಕಂಪನಿ ಸ್ಥಾಪಕರಾದ ರಾಹುಲ್ ಯಾದವ್ ಅವರು ಐಷಾರಾಮಿ ಮರ್ಸಿಡಿಸ್- ಮೇಬ್ಯಾಕ್‌ನಲ್ಲಿ ತಿರುಗಾಡುತ್ತಿದ್ದಾರೆ. ಅಷ್ಟೇಅಲ್ಲ, ಮುಂಬೈ 5-ಸ್ಟಾರ್ ತಾಜ್ ಲ್ಯಾಂಡ್ಸ್ ಎಂಡ್‌ನಲ್ಲಿ ದಿನಕ್ಕೆ 80,000 ರೂಪಾಯಿ ಬೋರ್ಡ್‌ರೂಮ್ ಅನ್ನು ಪಡೆದುಕೊಂಡಿರುವುದಾಗಿ ವರದಿಯಾಗಿದೆ. ಈ ನಡುವೆ, ಸುಧೀರ್ಘ ಅವಧಿಯಿಂದ ಕೆಲಸ ಮಾಡುತ್ತಿದ್ದ ಉದ್ಯೋಗಿಗಳಿಂದ ವೈಯಕ್ತಿಕ ಸಾಲವನ್ನು ಪಡೆದುಕೊಂಡಿರುವ ಆರೋಪ ಎದುರಿಸುತ್ತಿದ್ದಾರೆ.
ಸಹೋದ್ಯೋಗಿಯೊಬ್ಬರಿಂದ 50 ಲಕ್ಷ ರೂಪಾಯಿ ಸಾಲ ಪಡೆದು ಮರುಪಾವತಿಸದೆ ವಂಚಿಸಿದ ಕ್ರಿಮಿನಲ್ ಆರೋಪ ಕೂಡ ಎದುರಿಸುತ್ತಿರುವುದಾಗಿ ವರದಿಯಾಗಿದೆ. ಇನ್ನೊಂದೆಡೆ, ಕೆಲವು ಉದ್ಯೋಗಿಗಳಿಗೆ ಮುಂಗಡ ಸಾಲವನ್ನು ನೀಡಿ ನಂತರ ಅದನ್ನು ಯಾದವ್‌ಗೆ ವರ್ಗಾಯಿಸುವಂತೆ ಸೂಚಿಸಲಾಗಿತ್ತು ಎನ್ನುವ ಗಂಭೀರ ಆರೋಪ ಕೂಡ ಇದೆ.
ಆದರೆ, ಕಂಪನಿಯು ಆರ್ಥಿಕ ಸಂಕಷ್ಟದಲ್ಲಿದ್ದು, ಉದ್ಯೋಗಿಗಳು ವೇತನವಿಲ್ಲದೆ ಸಮಸ್ಯೆ ಎದುರಿಸುತ್ತಿರಬೇಕಾದರೆ ರಾಹುಲ್ ಯಾದವ್ ಮಾತ್ರ ಐಷಾರಾಮಿ ಜೀವನವನ್ನು ನಿರ್ವಹಣೆ ಮಾಡುತ್ತಿರುವುದಾಗಿ ನೌಕರರು ಆರೋಪಿಸಿದ್ದಾರೆ. ಆದರೆ, ತಮ್ಮ ಐಷಾರಾಮಿ ಮೇಬ್ಯಾಕ್ ಅನರಾಕ್‌ನಿಂದ ಬಂದ ಸಂಪಾದನೆಯಿಂದ ಖರೀದಿಸಿರುವುದಾಗಿ ಯಾದವ್ ಹೇಳಿದ್ದಾರೆ.
ಇನ್ನೊಂದೆಡೆ, ಅವರು ಬೆಂಟ್ಲಿಯನ್ನು ಕೂಡ ಖರೀದಿಸಲು ಯೋಜಿಸುತ್ತಿದ್ದಾರೆ ಎಂದು ಉದ್ಯೋಗಿಯೊಬ್ಬರು ಮಾಹಿತಿ ನೀಡಿದ್ದಾರೆ. ಆದರೆ, ಯಾದವ್ ಮಾತ್ರ ಕಂಪನಿಗೆ ಸಂಬಂಧಿಸಿದಂತೆ ತಮ್ಮ ವಿರುದ್ಧದ ಎಲ್ಲ ಅಕ್ರಮ ಆರೋಪಗಳನ್ನು ನಿರಾಕರಿಸಿದ್ದಾರೆ. ನಿರಂತರವಾಗಿ ಕಂಪನಿಗೆ ಸಂಬಂಧಿಸಿದ ಮಾಹಿತಿಯನ್ನು ನೀಡದ ಹಿನ್ನೆಲೆಯಲ್ಲಿ ಪ್ರಮುಖ ಹೂಡಿಕೆದಾರರಾದ ಇನ್ಫೋ ಎಡ್ಜ್ ಇದೀಗ ಫೊರೆನ್ಸಿಕ್ ಆಡಿಟ್ ಅನ್ನು ಪ್ರಾರಂಭಿಸಿದೆ.
ಇನ್ಫೋ ಎಡ್ಜ್, 4B ನೆಟ್‌ವರ್ಕ್ ಕಂಪನಿಯಲ್ಲಿ 276 ಕೋಟಿ ರೂ. ಹೂಡಿಕೆಯನ್ನು ಮಾಡಿದೆ. ಜತೆಗೆ ಸಹ ಸಂಸ್ಥೆಯಾದ Allcheckdeals India Private Limited (AIPL) ಮೂಲಕ 12 ಕೋಟಿ ರೂ. ಸಾಲವನ್ನು ಕೂಡ ನೀಡಿದೆ. ರಾಹುಲ್ ಯಾದವ್ ಅವರು 2020ರಲ್ಲಿ 4B ನೆಟ್‌ವರ್ಕ್ ಅನ್ನು ಸ್ಥಾಪಿಸಿದ್ದರು. ಬಳಿಕ ಅಂದರೆ 2022ರ ಸೆಪ್ಟಂಬರ್‌ನಲ್ಲಿ $185 ಮಿಲಿಯನ್ (ರೂ 1462 ಕೋಟಿ) ಮೌಲ್ಯದಲ್ಲಿ 90 ಕೋಟಿ ರೂ. ಫಂಡ್ ರೈಸ್ ಅನ್ನು ಮಾಡಿದ್ದರು.
ರಾಹುಲ್ ಯಾದವ್ ಐಐಟಿ ಬಾಂಬೆಯ ಡ್ರಾಪ್ ಔಟ್ ಮಾಡಿದವರು ಆಗಿದ್ದಾರೆ. ಔಪಚಾರಿಕ ಶಿಕ್ಷಣದಲ್ಲಿ ಸ್ವಲ್ಪ ಆಸಕ್ತಿಯನ್ನು ಹೊಂದಿದ್ದ ಆದರೆ ಅತ್ಯಂತ ಸಂಕೀರ್ಣವಾದ ವಿಷಯಗಳನ್ನು ಸಹ ಸ್ವತಃ ಕಲಿಸಬಲ್ಲ ಬಾಲ ಪ್ರತಿಭೆ ಎಂದು ಪರಿಗಣಿಸಲ್ಪಟ್ಟರು. ರಾಜಸ್ಥಾನದ ಸಣ್ಣ ಪಟ್ಟಣದ ರಾಹುಲ್ ಯಾದವ್ ತಮ್ಮ ಹಲವಾರು ಬ್ಯಾಚ್‌ಮೇಟ್‌ಗಳೊಂದಿಗೆ ಹಾಸ್ಟೆಲ್ ಕೋಣೆಯಲ್ಲಿ ತಮ್ಮ ಮೊದಲ ಉದ್ಯಮದ ಯೋಜನೆ ರೂಪಿಸಿದರು.


Click it and Unblock the Notifications